`ಪ್ರಾಣಿ' ಪ್ರಿಯೆ, ಪ್ರೀತಿಯ ಅಮ್ಮ ಪದ್ಮಜಾ ರಾವ್ ಪ್ರಾರ್ಥನೆ..!

By Suvarna NewsFirst Published Aug 24, 2020, 3:56 PM IST
Highlights

ನಟಿಯರು ಬೆಕ್ಕು, ನಾಯಿಗಳೆಂದರೆ ವಿಪರೀತ ಇಷ್ಟ ಪಡುವುದನ್ನು ಕಂಡಿದ್ದೇವೆ. ಆದರೆ ಜನಪ್ರಿಯ ನಟಿ ಪದ್ಮಜಾ ರಾವ್ ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಪ್ರಾಣಿ ಸಂಗ್ರಹಾಲಯವನ್ನೇ ಮೆಚ್ಚಿದ್ದಾರೆ. ಅದಕ್ಕೆ ಪ್ರಮುಖ ಕಾರಣ ಅದು ತಮ್ಮ ಮಗನೇ ನಡೆಸುತ್ತಿರುವಂಥ `ಪ್ರಾಣಿ' ಎನ್ನುವ ಸಾಕು ಪ್ರಾಣಿ ಸಂಗ್ರಹಾಲಯ.
 

ಪದ್ಮಜಾ ರಾವ್ ಎಂದೊಡನೆ ಇಂದಿಗೂ ಮುಂಗಾರು ಮಳೆಯ ಗಣೇಶನ ತಾಯಿ ಎಂದೇ ನೆನಪಿಸುವವರಿಗೆ ಕೊರತೆ ಇಲ್ಲ. ಆದರೆ ನಿಜವಾಗಿ ಅವರ ಪುತ್ರನ ಹೆಸರು ಸಂಜೀವ ಪಡ್ನೇಕರ್. ಸಿನಿಮಾದಲ್ಲಿ ಗಣೇಶ ದೇವದಾಸ ಎನ್ನುವ ಮೊಲಕ್ಕೆ ದಾಸನಾಗಿದ್ದರೆ ಇವರ ಪುತ್ರ ಸಂಜೀವ ಮೊಲಗಳಷ್ಟೇ ಅಲ್ಲ,  ಗಿಳಿ, ಬಾತುಕೋಳಿ, ಆಡು, ಕತ್ತೆ, ಕುದುರೆ ಸೇರಿದಂತೆ ಸುಮಾರು ಐವತ್ತರಷ್ಟು ವಿಧದ ಪ್ರಾಣಿಗಳನ್ನು ಕಳೆದ ಹನ್ನೆರಡು ವರ್ಷಗಳಿಂದ ಸಾಕುತ್ತಿರುವ ಸಂಜೀವ್ ಭಾರತದ ಮೊದಲ ಎನಿಮಲ್ ಸೆಂಟ್ರಿಕ್ ಎಕ್ಸ್ಟೆಂಡೆಡ್ ಕ್ಲಾಸ್‌ ರೂಮ್ ನಡೆಸುವ ಸಂಜೀವ್ ಇದೀಗ ಕೊರೊನಾ, ಲಾಕ್ಡೌನ್ ಕಾರಣದಿಂದ ತೊಂದರೆಗೆ ಒಳಗಾಗಿದ್ದಾರೆ. ಈ ಸಂಕಷ್ಟವನ್ನು ಮೀರಿ ಯಶಸ್ವಿಯಾಗಿ ಮುನ್ನುfಗ್ಉವ ವಿಚಾರದಲ್ಲಿ ನಟಿ ಪದ್ಮಜಾ ರಾವ್ ಅವರು ಸುವರ್ಣ ನ್ಯೂಸ್.ಕಾಮ್ ಜತೆಗೆ ಹಂಚಿಕೊಂಡಿರುವ ಒಂದಷ್ಟು ಪ್ರಮುಖ ವಿಚಾರಗಳು ಇಲ್ಲಿವೆ.

- ಶಶಿಕರ ಪಾತೂರು

ಮಾತೃ ಸೇವೆಯಲ್ಲಿ ಧನ್ಯನೆನ್ನುವ ಶ್ರೀಧರ್

ನಿಮ್ಮ ಮಗನಿಗೆ ಪ್ರಾಣಿಗಳ ಕುರಿತಾದ ಆಸಕ್ತಿ ಬಂದಿದ್ದು ಹೇಗೆ?
ಅವನಿಗೆ ಬಾಲ್ಯದಿಂದಲೂ ಪ್ರಾಣಿಗಳೆಂದರೆ ಇಷ್ಟ. ನಾನು ನಟಿಯಾಗಿ ಹೆಸರು ಮಾಡಿದರೂ ಕೂಡ ಆತನಿಗೆ ಚಿತ್ರರಂಗ, ಬಣ್ಣದ ಲೋಕ ಎಂದರೆ ಒಂದು ಪರ್ಸೆಂಟ್ ಕೂಡ ಆಸಕ್ತಿ ಇಲ್ಲ. ಹಾಗಾಗಿ ಆತನ ಪ್ರಾಣಿ, ಪಕ್ಷಿಗಳ ಆಸಕ್ತಿಗೆ ತಕ್ಕಂತೆ ಹಾವು, ಹಲ್ಲಿ, ಆಮೆ, ಮೊಸಳೆಗಳ ಕುರಿತಾಗಿ ಅಧ್ಯಯನ ಮಾಡುವಂಥ ಹರ್ಪೆಟಾಲಜಿ ಕೋರ್ಸ್ ಮಾಡಿದ್ದಾನೆ. ಕಳೆದ ಹನ್ನೆರಡು ವರ್ಷಗಳಿಂದ ಕನಕಪುರ ರಸ್ತೆ ಸಮೀಪ ಎರಡು ಎಕ್ರೆ ಪ್ರದೇಶದಲ್ಲಿ ಈ ಪ್ರಾಣಿಗಳನ್ನು ಸಾಕಲೆಂದೇ ಪ್ರಾಣಿ ಅಭಯಕೇಂದ್ರವನ್ನು ಸ್ಥಾಪಿಸಿದ್ದಾನೆ.

ನನಗೆ ರಾಜಕೀಯವೂ ಬೇಡ ಪ್ರಜಾಕೀಯವೂ ಬೇಡ: ಚೇತನ್

`ಪ್ರಾಣಿ'ಯಲ್ಲಿ ಎಷ್ಟು ವೈವಿಧ್ಯತೆಗಳಿವೆ? ಅದರ ಸಾಕಾಣಿಕೆ ಹೇಗೆ?
ಕತ್ತೆ, ಕುದುರೆ, ಆಡು,ಕುರಿ,ಎಮು, ಬಾತುಕೋಳಿ, ಗಿಳಿ, ಮೊಲ ಸೇರಿದಂತೆ ಐವತ್ತರಷ್ಟು ವೈವಿಧ್ಯಮಯ ಜೀವಿಗಳು 700ರಷ್ಟು ಸಂಖ್ಯೆಯಲ್ಲಿ ತುಂಬಿಕೊಂಡಿವೆ. ಇದುವರೆಗೆ ಸುಮಾರು ಹತ್ತು ಸಾವಿರದಷ್ಟು ವಿದ್ಯಾರ್ಥಿಗಳು ಇಲ್ಲಿಗೆ ಭೇಟಿಕೊಟ್ಟಿದ್ದಾರೆ. ಅವರು ಈ ಪ್ರಾಣಿಗಳನ್ನು ನೋಡುವುದು ಮಾತ್ರವಲ್ಲ, ಆತ್ಮೀಯವಾಗಿ ಕಳೆಯುವಂಥ ಸಂದರ್ಭವನ್ನು ಕೂಡ ಸೃಷ್ಟಿಸಿಕೊಡಲಾಗುತ್ತದೆ. ಮಕ್ಕಳಿಗೆ ಇಂಥದೊಂದು ಅವಕಾಶ ನೀಡುವಂಥ ಸಾಕು ಪ್ರಾಣಿ ಅಭಯ ಕೇಂದ್ರ ಭಾರತದಲ್ಲಿ ಇದೇ ಮೊದಲು. ಹಾಗಾಗಿ ಬರುವ ವಿದ್ಯಾರ್ಥಿಗಳಿಗೆಲ್ಲ ಟಿಕೆಟ್ ಇರಿಸಿ, ಆ ಹಣದಿಂದಲೇ ಪ್ರಾಣಿಸಾಕಾಣೆಗೆ ಬೇಕಾದ ಖರ್ಚುವೆಚ್ಚಗಳನ್ನು ಭರಿಸಲಾಗುತ್ತಿತ್ತು. ಆದರೆ ಕಳೆದ ನಾಲ್ಕು ತಿಂಗಳಿನಿಂದ ಕೋವಿಡ್ ಮತ್ತು ಲಾಕ್ಡೌನ್ ಕಾರಣದಿಂದಾಗಿ ಯಾವುದೇ ಒಂದು ಕುಟುಂಬವಾಗಲೀ, ಶಾಲೆಯ ಮಕ್ಕಳಾಗಲೀ ಅಲ್ಲಿಗೆ ಭೇಟಿ ನೀಡದ ಕಾರಣ ಸಂಸ್ಥೆ ಸಾಕಷ್ಟು ಕಷ್ಟದಲ್ಲಿದೆ.

ದರ್ಶನ್ ಅಭಿಮಾನಿಗೆ ನಿರ್ದೇಶನದ ಆಸೆ..!

ಮುಂದೆ ಏನು ಮಾಡಬೇಕು ಎನ್ನುವ ನಿರ್ಧಾರ ನಿಮ್ಮದು?
ಈ ಪ್ರಾಣಿಗಳನ್ನೆಲ್ಲ ಸಾಕುವುದರೊಂದಿಗೆ ಸಂಸ್ಥೆ ನಡೆಸುವುದಕ್ಕೆ ತಿಂಗಳಿಗೆ ಏಳೂವರೆ ಲಕ್ಷದಷ್ಟು ಖರ್ಚು ಇದೆ. ಅಲ್ಲಿ ಪಶು ವೈದ್ಯಕೀಯ, ಅಡುಗೆ, ಕ್ಲೀನಿಂಗ್ ಸೇರಿದಂತೆ ಒಟ್ಟು ಕೆಲಸಗಾರರ ಸಂಖ್ಯೆಯೂ 23ರಷ್ಟು ಇದೆ. ನನ್ನ ಪತಿ ಪ್ರಕಾಶ್ ಪಡ್ನೇಕರ್ ಕೂಡ ಅಲ್ಲೇ ವೃತ್ತಿಯಲ್ಲಿದ್ದಾರೆ. ಇದುವರೆಗೆ ಪ್ರಾಣಿಗಳಿಗೆ ಒಂದು ಹೊತ್ತಿನ ತುತ್ತಿಗೂ ಕಷ್ಟವಾಗದ ಹಾಗೆ ನೋಡಿಕೊಳ್ಳಲಾಗಿದೆ. ಆದರೆ ಮುಂದಿನ ದಿನಗಳು ಕಷ್ಟ ಇವೆ. ಹಾಗಾಗಿ ನನ್ನ ಮಗ ಈಗ `ಪ್ರಾಣಿ'ಗಾಗಿ ಸಹಾಯಹಸ್ತ ಬಯಸಿದ್ದಾನೆ. prani.co.in ಎಂದು ಗೂಗಲ್ ಮಾಡಿದರೆ ನಮಗೆ ಹೇಗೆ ಸಹಾಯ ಮಾಡಬಹುದು ಎನ್ನುವ ವಿವರ ಇದೆ. ಉಳಿದಂತೆ ಲಾಕ್ಡೌನ್ ಸಂದರ್ಭದಲ್ಲಿ ಸಿನಿಮಾರಂಗದ ಚಟುವಟಿಕೆ ಕೂಡ ನಿಂತು ಹೋಗಿದ್ದ ಕಾರಣ ನನಗೂ ಕೆಲಸ ಇರಲಿಲ್ಲ. ಆದರೆ ನಾನು `ಒಂದು ಗಿಫ್ಟಿನ ಕತೆ' ಎನ್ನುವ 30 ನಿಮಿಷದ ಕಿರುಚಿತ್ರ ಮಾಡಿದ್ದೇನೆ. `ಗಾಳಿ ಪಟ 2' ಚಿತ್ರದಲ್ಲಿ ನಟಿಸುತ್ತಿದ್ದೇನೆ. ಲಾಕ್ಡೌನ್ ಬಳಿಕ ಮತ್ತೆ ಚಿತ್ರೀಕರಣ ಶುರುವಾಗಬೇಕಿದೆ.

click me!