ಚಂದನವನಕ್ಕೆ ಎಂಟ್ರಿಯಾದ ನವ ನಟಿಯರ ಪೈಕಿ ಶ್ರೀಲೀಲಾ ಲಕ್ಕಿ ಚೆಲುವೆ. ಇದೀಗ ರೋರಿಂಗ್ ಸ್ಟಾರ್ ಶ್ರೀ ಮುರುಳಿ ಜೋಡಿಯಾಗಿ ‘ಭರಾಟೆ’ ಚಿತ್ರದ ಮೂಲಕ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳಲು ರೆಡಿ ಆಗಿದ್ದಾರೆ. ಇದೇ ಶುಕ್ರವಾರ ಈ ಚಿತ್ರ ತೆರೆಗೆ ಬರುತ್ತಿದೆ.
ದೇಶಾದ್ರಿ ಹೊಸ್ಮನೆ
ನೋಡ್ಲಿಕ್ಕೆ ಮಾಡರ್ನ್ ಆಗಿದ್ದೀರಿ, ಆದ್ರೂ ಶ್ರೀಲೀಲಾ ಎನ್ನುವ ಓಲ್ಡ್ ಹೆಸರು ಯಾಕೆ?
undefined
ನಿರ್ದಿಷ್ಟಕಾರಣ ಗೊತ್ತಿಲ್ಲ. ಆದ್ರೆ‘ಶ್ರೀ’ಎನ್ನುವ ಅಕ್ಷರದ ಮೇಲೆ ಅಪ್ಪ-ಅಮ್ಮನಿಗೆ ಸಾಕಷ್ಟುನಂಬಿಕೆ. ಅದು ದೇವರ ನಾಮ ಎನ್ನುವುದು ಅದಕ್ಕೆ ಕಾರಣ. ಹಾಗಾಗಿಯೇ ಇಬ್ಬರು ಅಣ್ಣಂದಿರು ಮತ್ತು ನನ್ನ ಹೆಸರು ಕೂಡ ಶ್ರೀ ಎನ್ನುವ ಅಕ್ಷರದಿಂದಲೇ ಶುರುವಾಗುತ್ತೆ. ಒಬ್ಬ ಶ್ರೀಕರ್, ಮತ್ತೊಬ್ಬ ಶ್ರೀನಿಧಿ. ನಾನು ಶ್ರೀಲೀಲಾ.
‘ಕಿಸ್’ ಮಾಡೋಕೆ ರೆಡಿಯಾದ ‘ಭರಾಟೆ’ ಬೆಡಗಿ ಶ್ರೀಲಿಲಾ!
‘ಭರಾಟೆ’ಯಲ್ಲಿನ ನಿಮ್ಮ ಪಾತ್ರದ ಬಗ್ಗೆ ಹೇಳಿ?
ಇಲ್ಲಿ ನನ್ನ ಪಾತ್ರದ ಹೆಸರು ರಾಧಾ. ರಾಯಲ್ ಫೀಲ್ ಇರುವಂತಹ ಪಾತ್ರ. ಆ ಪಾತ್ರಕ್ಕೆ ಮೂರ್ನಾಲ್ಕು ಶೇಡ್ಸ್ ಗಳಿವೆ. ಹಾಗೆಯೇ ‘ಕಿಸ್’ಚಿತ್ರದಲ್ಲಿ ಪ್ರೇಕ್ಷಕರು ನೋಡಿದ ನಂದಿನಿಗೂ, ‘ಭರಾಟೆ’ಯ ರಾಧಾಗೂ ಸಾಕಷ್ಟುಭಿನ್ನತೆಗಳಿವೆ. ಈ ಪಾತ್ರಕ್ಕೆ ತುಂಬಾ ಪ್ರಬುದ್ಧತೆಯಿದೆ. ಅಂತಹ ಹುಡುಗಿಯ ಬದುಕಲ್ಲಿ ಪ್ರೀತಿ, ಪ್ರೇಮ ಎನ್ನುವುದು ಹೇಗೆಲ್ಲ ಬದಲಾವಣೆ ತರುತ್ತದೆ, ಆ ಬದಲಾವಣೆಯನ್ನು ಆಕೆ ಹೇಗೆ ಎದುರಿಸುತ್ತಾಳೆ ಎನ್ನುವುದೇ ಚಿತ್ರದಲ್ಲಿನ ನನ್ನ ಪಾತ್ರ.
ಅಲೆಲೆ ಶ್ರೀಲೀಲಾ.. ಅಂದದ ಹುಡುಗಿಯ ಚಂದದ ಫೋಟೋಗಳಿವು
ಭರಾಟೆಗೆ ನೀವು ನಾಯಕಿಯಾಗಿ ಬಂದಿದ್ದು ಹೇಗೆ?
ಅದಕ್ಕೆ ಕಾರಣವಾಗಿದ್ದು ‘ಕಿಸ್’ ಚಿತ್ರದ ಟ್ರೇಲರ್. ನಿರ್ದೇಶಕರಾದ ಚೇತನ್ ಸರ್, ನನ್ನನ್ನು ಭೇಟಿ ಮಾಡಿ ಸಿನಿಮಾದ ಬಗ್ಗೆ ಮಾತನಾಡುವಾಗ ಆ ವಿಷಯ ತಿಳಿಸಿದರು. ಚಿತ್ರದ ಕತೆ ಮತ್ತು ಪಾತ್ರದ ಬಗ್ಗೆ ಹೇಳಿದರು. ಇಷ್ಟವಾಗಿ ಒಪ್ಪಿಕೊಂಡೆ.
ಶ್ರೀಮುರುಳಿ ಅವರ ಜತೆಗೆ ಅಭಿನಯಿಸುತ್ತಿದ್ದೀರಿ ಅಂದಾಗ ಹೇಗನಿಸಿತು?
ನಿಜಕ್ಕೂ ಶಾಕ್‌ಆದೆ. ಅಷ್ಟುಅನುಭವಿ ನಟನ ಮುಂದೆ ನನ್ನಂತಹ ಹೊಸಬಳಿಗೆ ನಟಿಸುವುದಕ್ಕೆ ಕಷ್ಟವಾಗಬಹುದು ಅಂತ ಗಾಬರಿಪಟ್ಟೆ. ಅದನ್ನು ನಿರ್ದೇಶಕರಾದ ಚೇತನ್ ಅವರಿಗೂ ಹೇಳಿದೆ. ಹಾಗೆಲ್ಲ ಭಯ ಪಟ್ಟುಕೊಂಡ್ರೆ ನಟಿ ಆಗಲು ಆಗುತ್ತಾ? ಸೆಟ್‌ಗೆ ಹೋಗುವ ಮುನ್ನ ಒಂದಷ್ಟುಸಿದ್ಧತೆ ಇರುತ್ತೆ, ನೀವೇನು ಭಯ ಪಟ್ಟುಕೊಳ್ಳುವ ಅಗತ್ಯವಿಲ್ಲ ಅಂತ ಚೇತನ್ ಧೈರ್ಯ ಹೇಳಿದ್ರು. ಆಮೇಲೆ ಸಿನಿಮಾ ಕೆಲಸಗಳು ಶುರುವಾದಾಗ ಶ್ರೀ ಮುರುಳಿ ಅವರ ತಾಳ್ಮೆ, ಹೊಸಬರಿಗೆ ನೀಡುವ ಸಹಕಾರ ಕಂಡು ಖುಷಿ ಪಟ್ಟೆ.
ಹುಟ್ಟುಹಬ್ಬದಂದು ಏಜ್ ರಿವೀಲ್ ಮಾಡಿದ ಭರಾಟೆ ನಟಿ!
ಶ್ರೀಮುರುಳಿ ಅವರ ಬಗ್ಗೆ ಏನ್ ಹೇಳ್ತೀರಾ?
ಅಷ್ಟುಅನುಭವಿ ನಟರ ಬಗ್ಗೆ ಮಾತನಾಡುವಷ್ಟುನಾನಿನ್ನು ಬೆಳೆದಿಲ್ಲ. ಈಗಷ್ಟೇ ಇಲ್ಲಿಗೆ ಬಂದವಳು. ಆದರೆ ಅವರಲ್ಲಿ ನನಗೆ ತುಂಬಾ ಇಷ್ಟವಾದ ಗುಣ ಅಂದ್ರೆ ತಾಳ್ಮೆ. ಅವರಿಗೆ ತುಂಬಾ ತಾಳ್ಮೆಯಿದೆ. ಪ್ರತಿ ಸೀನ್ ಹೀಗೆಯೇ ಬರಬೇಕೆಂದು ನಿರ್ದೇಶಕರು ಇಷ್ಟಪಟ್ಟರೆ, ಅದು ಎಷ್ಟೇ ಸಮಯವಾದರೂ ಸರಿ, ಅದನ್ನು ನಿರ್ದೇಶಕರಿಗೆ ಇಷ್ಟವಾಗುವ ಹಾಗೆ ಅಭಿನಯಿಸುವ ಚಾತುರ್ಯ ಅವರಲ್ಲಿದೆ. ಹಾಗೆಯೇ ಕ್ಯಾಮರಾ ಮುಂದೆ ನಿಂತಾಗ ತುಂಬಾ ಶ್ರದ್ಧೆ ಮತ್ತು ಶಿಸ್ತು ಅವರಲ್ಲಿರುತ್ತದೆ. ಅವೆಲ್ಲ ನಮ್ಮಂತವರಿಗೆ ನೋಡಿ ಕಲಿಯುವ ವಿಷಯಗಳು.