ಅಪ್ಪ, ಅತ್ತೆಯ ಶಿಫಾರಸ್ಸಿಲ್ಲದೇ ಚಿತ್ರರಂಗಕ್ಕೆ ಕಾಲಿಟ್ಟ ವಿನಯಾ ಪ್ರಸಾದ್ ಸೊಸೆ!

By Web Desk  |  First Published Oct 16, 2019, 3:51 PM IST

ಸ್ಟಾರ್‌ ಮಕ್ಕಳೂ ಸಿನಿಮಾ ಜಗತ್ತಿಗೆ ಎಂಟ್ರಿ ಆಗುತ್ತಿರುವವರ ಸಾಲಿಗೆ ಈಗ ನಟ ರವಿಭಟ್‌ ಪುತ್ರಿ ಕೃಷ್ಣಾ ಸೇರಿದ್ದಾರೆ. ಹೆಸರಾಂತ ಸಂಗೀತ ನಿರ್ದೇಶಕ ಮನೋಮೂರ್ತಿ ನಿರ್ಮಾಣದ ‘ಸವರ್ಣದೀರ್ಘ ಸಂಧಿ’ ಹೆಸರಿನ ಚಿತ್ರದೊಂದಿಗೆ ನಾಯಕಿ ಆಗಿ ಕಷ್ಣಾ ಸಿನಿ ಪಯಣ ಶುರುವಾಗುತ್ತಿದೆ. ಈಗಾಗಲೇ ಮಾಡೆಲಿಂಗ್‌ ಜಗತ್ತಿನಲ್ಲಿ ಗುರುತಿಸಿಕೊಂಡ ಚೆಲುವೆ. ಅವರ ಜತೆ ಮಾತುಕತೆ.


ಪೋಷಕ ನಟ ರವಿಭಟ್‌ ಪುತ್ರಿ ಕೃಷ್ಣಾ ಮೊದಲ ಬಾರಿಗೆ ನಾಯಕಿಯಾಗಿ ನಟಿಸಿರುವ ‘ಸವರ್ಣದೀರ್ಘ ಸಂಧಿ’ ಸಿನಿಮಾ ತೆರೆಗೆ ಬರುತ್ತಿದೆ. ಇದೇ ಶುಕ್ರವಾರ (ಅ.18) ತಮ್ಮ ನಟನೆಯ ಸಿನಿಮಾ ತೆರೆ ಮೇಲೆ ಮೂಡುತ್ತಿರುವ ಹೊತ್ತಿನಲ್ಲಿ ಕೃಷ್ಣಾ ಮಾತುಗಳು ಇಲ್ಲಿವೆ.

ನೀವು ಚಿತ್ರರಂಗಕ್ಕೆ ಬರಲು ಕುಟುಂಬದ ಹಿನ್ನೆಲೆ ಕಾರಣವಾ?

Latest Videos

undefined

ನಮ್ಮ ತಂದೆ ರವಿ ಭಟ್‌ ಹಾಗೂ ಅತ್ತೆ ವಿನಯಾ ಪ್ರಸಾದ್‌ ಅವರು ಚಿತ್ರರಂಗದಲ್ಲಿದ್ದವರಾದರೂ ಎಂದೂ ಅವರನ್ನು ನೋಡಿ ನಾನೂ ನಟಿಯಾಗಬೇಕು ಅನಿಸಿರಲಿಲ್ಲ. ಹಾಗೆ ನೋಡಿದರೆ ನನಗೆ ಸ್ಪೋರ್ಟ್‌್ಸ ಮೇಲೆ ಆಸಕ್ತಿ ಇತ್ತು. ಶಾಲೆಯಲ್ಲಿ ನಾನು ಬಾಸ್ಕೆಟ್‌ ಬಾಲ್‌ ಆಡುತ್ತಿದ್ದೆ.

ನಿರಾಭರಣ ಸುಂದರಿಯಾಗಿ ಪ್ರಿಯಾ ವಾರಿಯರ್ ಹೊಸ ಲುಕ್ ಸೂಪರ್!

ಚಿತ್ರರಂಗಕ್ಕೆ ಬಂದಿದ್ದು ಹೇಗೆ?

ಕಾಲೇಜಿಗೆ ಸೇರಿಕೊಂಡ ಮೇಲೆ ನನ್ನ ಅತ್ತೆ (ವಿನಯಾ ಪ್ರಸಾದ್‌) ಮಾಡೆಲಿಂಗ್‌ಗೆ ಸೇರಿಕೊಳ್ಳುವಂತೆ ಹೇಳಿದರು. ಮಾಡೆಲಿಂಗ್‌ ಮಾಡುತ್ತಲೇ ಡಿಗ್ರಿಗೆ ಬಂದಾಗ ಸಿನಿಮಾಗಳಲ್ಲಿ ಅವಕಾಶ ಬರಲು ಶುರುವಾಯಿತು. ಮಾಡೆಲಿಂಗ್‌ ಲೋಕದಿಂದ ನನ್ನ ನಿರ್ಧಾರದಂತೆ ನಾನೇ ಚಿತ್ರರಂಗಕ್ಕೆ ಬಂದೆ.

ಸವರ್ಣದೀರ್ಘ ಸಂಧಿ ಚಿತ್ರಕ್ಕೆ ನಾಯಕಿ ಆಗಿದ್ದು ಹೇಗೆ?

ಉಷಾ ಭಂಡಾರಿ ಅವರ ಇನ್‌ಸ್ಟಿಟ್ಯೂಟ್‌ನಲ್ಲಿ ಅಭಿನಯ ತರಬೇತಿ ಮಾಡುತ್ತಿದ್ದಾಗ ‘ಸವರ್ಣದೀರ್ಘ ಸಂಧಿ’ ಚಿತ್ರಕ್ಕೆ ನಾಯಕಿ ಬೇಕೆಂದು ಗೊತ್ತಾಗಿ ಹೋಗಿ ಆಡಿಷನ್‌ ಕೊಟ್ಟೆ. ನಾಯಕಿಯಾಗಿ ಆಯ್ಕೆ ಆದೆ.

ಈ ಚಿತ್ರದಲ್ಲಿ ನಿಮ್ಮ ಪಾತ್ರ ಹೇಗಿದೆ?

ನನ್ನ ಪಾತ್ರದ ಹೆಸರು ಅಮೃತ ವರ್ಷಿಣಿ. ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡು ವೃತ್ತಿಪರ ಗಾಯಕಿ ಆಗಿರುತ್ತೇನೆ. ಈ ನಡುವೆ ಅವಿದ್ಯಾವಂತ ರೌಡಿಯೊಬ್ಬನ ಜತೆ ಪ್ರೀತಿ ಆಗುತ್ತದೆ

ಮೊದಲ ಚಿತ್ರದ ಬಿಡುಗಡೆಯ ಸಂಭ್ರಮ ಹೇಗಿದೆ?

ತುಂಬಾ ಎಕ್ಸೈಟ್‌ ಆಗಿದ್ದೇನೆ. ಚಿತ್ರದ ನಾಯಕ ಹಾಗೂ ನಿರ್ದೇಶಕ ವೀರೇಂದ್ರ ಶೆಟ್ಟಿಅವರು ಈಗಾಗಲೇ ತುಳು ಚಿತ್ರರಂಗದಲ್ಲಿ ‘ಚಾಲಿ ಪೋಲಿಲು’ ಚಿತ್ರದ ಮೂಲಕ ದೊಡ್ಡ ಮಟ್ಟದಲ್ಲಿ ಗೆದ್ದವರು. ಮನೋಮೂರ್ತಿ ಸಂಗೀತದ ಜತೆಗೆ ನಿರ್ಮಾಣದಲ್ಲೂ ತೊಡಗಿಸಿಕೊಂಡಿದ್ದಾರೆ. ಟ್ರೇಲರ್‌ಗೆ ತುಂಬಾ ಒಳ್ಳೆಯ ಪ್ರತಿಕ್ರಿಯೆಗಳು ಸಿಗುತ್ತಿವೆ.

ನಟಿ ಆಗದಿದ್ದರೆ ಏನಾಗುತ್ತಿದ್ರಿ?

ಕ್ರೀಡಾ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುತ್ತಿದ್ದೆ. ಇಲ್ಲದಿದ್ದರೆ ಹೋಟೆಲ್‌ ಉದ್ಯಮದಲ್ಲಿ ಇರುತ್ತಿದ್ದೆ. ಯಾಕೆಂದರೆ ನಾನು ಓದಿದ್ದು ಹೋಟೆಲ್‌ ಮ್ಯಾನೇಜ್‌ಮೆಂಟ್‌. ರೆಸ್ಟೋರೆಂಟ್‌ ಆರಂಭಿಸುವ ಕನಸು ಇತ್ತು.

- ಆರ್‌. ಕೇಶವಮೂರ್ತಿ

click me!