ದ್ವೀಪ ದೇಶಕ್ಕೆ ಹೆಚ್ಚುತ್ತಿರುವ ಚೀನಾ ಸಾಲ: ಮಾಲ್ಡೀವ್ಸ್‌ಗೆ ಐಎಂಎಫ್‌ ಎಚ್ಚರಿಕೆ

By Kannadaprabha News  |  First Published May 15, 2024, 11:12 AM IST

ಭಾರತದೊಂದಿಗೆ ಸಂಘರ್ಷದ ಬಳಿಕ ಚೀನಾದೊಂದಿಗೆ ಅನಿಯಮಿತವಾಗಿ ಆರ್ಥಿಕ ಸಹಾಯ ಪಡೆಯುತ್ತಿರುವ ದ್ವೀಪರಾಷ್ಟ್ರ ಮಾಲ್ಡೀವ್ಸ್‌ಗೆ ಅಂತಾರಾಷ್ಟ್ರೀಯ ಹಣಕಾಸು ನಿಧಿ ತೀಕ್ಷ್ಣ ಎಚ್ಚರಿಕೆ ನೀಡಿದೆ.


ಮಾಲ್ಡೀವ್ಸ್‌: ಭಾರತದೊಂದಿಗೆ ಸಂಘರ್ಷದ ಬಳಿಕ ಚೀನಾದೊಂದಿಗೆ ಅನಿಯಮಿತವಾಗಿ ಆರ್ಥಿಕ ಸಹಾಯ ಪಡೆಯುತ್ತಿರುವ ದ್ವೀಪರಾಷ್ಟ್ರ ಮಾಲ್ಡೀವ್ಸ್‌ಗೆ ಅಂತಾರಾಷ್ಟ್ರೀಯ ಹಣಕಾಸು ನಿಧಿ ತೀಕ್ಷ್ಣ ಎಚ್ಚರಿಕೆ ನೀಡಿದೆ.

ಈ ಕುರಿತು ಹೊರಡಿಸಿರುವ ಪ್ರಕಟಣೆಯಲ್ಲಿ, ‘ಮಾಲ್ಡೀವ್ಸ್‌ ಅನಿಯಮಿತವಾಗಿ ಸಾಲಬಾಧೆಯಲ್ಲಿ ಸಿಲುಕಿರುವ ಕಾರಣ ಆರ್ಥಿಕ ಅಧಃಪತನಕ್ಕೆ ಕುಸಿಯುವ ಲಕ್ಷಣಗಳು ಕಾಣಿಸಿವೆ. ಸಾಲದ ಜೊತೆಗೆ ಆದಾಯ ವೃದ್ಧಿಸುವ ಯಾವುದೇ ಯೋಜನೆಗಳನ್ನು ಸರ್ಕಾರ ಕೈಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ರಾಷ್ಟ್ರದ ಪ್ರಮುಖ ಆದಾಯ ಮೂಲವಾಗಿರುವ ಪ್ರವಾಸೋದ್ಯಮವನ್ನು ವೃದ್ಧಿಸಲು ಪೂರಕವಾಗುವಂತಹ ನೀತಿಗಳನ್ನು ರೂಪಿಸುವ ಜೊತೆಗೆ ಕಂದಾಯ ಹೆಚ್ಚಳ ಮಾಡುವ ಜೊತೆಗೆ ವೆಚ್ಚ ಕಡಿತ ಮಾಡಿ ಹೊರದೇಶಗಳಿಂದ ಆರ್ಥಿಕ ಸಹಾಯ ಪಡೆಯುವಿಕೆಯನ್ನು ಕಡಿಮೆ ಮಾಡಿಕೊಳ್ಳಬೇಕು’ ಎಂದು ಸೂಚಿಸಿದೆ.

Tap to resize

Latest Videos

undefined

ಕಳೆದ ವರ್ಷ ಅಂತ್ಯಕ್ಕೆ ಮಾಲ್ಡೀವ್ಸ್‌ ಹೊರದೇಶಗಳಿಂದ ಬರೋಬ್ಬರಿ 33.5 ಸಾವಿರ ಕೋಟಿ ರು. ಸಾಲ ಪಡೆದಿದ್ದು, ಅದರಲ್ಲಿ ಶೇ.25ರಷ್ಟು ಪಾಲನ್ನು ಚೀನಾದಿಂದಲೇ ಪಡೆದಿದೆ. ಇದು ಮಾಲ್ಡೀವ್ಸ್‌ನ ಜಿಡಿಪಿಗಿಂತ ಶೇ.118ರಷ್ಟು ಹೆಚ್ಚಿದೆ.

ಸಂಘರ್ಷವಿದ್ದರೂ ಮಾಲ್ಡೀವ್ಸ್‌ಗೆ ಭಾರತದಿಂದ 420 ಕೋಟಿ ನೆರವು
 

ಮಾಲ್ಡೀವ್ಸ್ ತೊರೆದ ಭಾರತೀಯ ಯೋಧರು: ಅಸಮರ್ಥ ಮಾಲ್ಡೀವ್ಸ್ ಸೇನೆಯ ಕೈಯಲ್ಲಿ ಭಾರತ ನೀಡಿದ ವಿಮಾನಗಳು

click me!