ಆಪ್ತಮಿತ್ರದ ಸೌಂದರ್ಯ ಪಾತ್ರವನ್ನು ಸಿನಿಮಾ ನೋಡೋಕೂ ಮೊದಲೇ ಹೇಳಿದರೆ ಮಜಾ ಇರುತ್ತಾ?: ರಂಜನಿ ರಾಘವನ್‌

By Kannadaprabha News  |  First Published May 3, 2024, 10:04 AM IST

ಕಾಂಗರೂ ಸಿನಿಮಾ ಇಂದು ರಿಲೀಸ್‌. ಸಿನಿಮಾ ಬಗ್ಗೆ, ತಮ್ಮ ಸಿನಿಮಾ ಲೈಫಿನ ಕಷ್ಟ ಸುಖಗಳ ಬಗ್ಗೆ ನಟಿ ರಂಜನಿ ರಾಘವನ್‌ ಇಂಟರೆಸ್ಟಿಂಗ್‌ ಅಂಶ ಹಂಚಿಕೊಂಡಿದ್ದಾರೆ.
 


ಪ್ರಿಯಾ ಕೆರ್ವಾಶೆ

* ಕಾಂಗರೂ ಸಿನಿಮಾದ ಯಾಕೆ ವಿಶಿಷ್ಟ?
ನಾನು ಈವರೆಗೆ ಮಾಡಿರುವ ಸಿನಿಮಾಗಳಲ್ಲೇ ಬಹಳ ಸ್ಟ್ರಾಂಗ್‌ ರೋಲ್‌ ಇದು. ಹೆಸರು ಮೇಘನಾ, ಸೈಕಾಲಜಿಸ್ಟ್. ಗರ್ಭಿಣಿಯಾಗಿರ್ತಾಳೆ. ಇನ್ವೆಸ್ಟಿಗೇಟಿವ್‌ ಆಫೀಸರ್‌ ಪೃಥ್ವಿಯ ಪತ್ನಿ. ಇಷ್ಟನ್ನಷ್ಟೇ ಹೇಳಬಲ್ಲೆ. ಸಿನಿಮಾ ನೋಡಿದವರು ನನ್ನ ಪಾತ್ರವನ್ನು ಬಹಳ ಇಷ್ಟಪಟ್ಟಿದ್ದಾರೆ. ಹಾಗೆಂದು ಈ ಪಾತ್ರದ ಸೂಕ್ಷ್ಮಗಳನ್ನು ಹೇಳಿದ್ರೆ ಸಿನಿಮಾದ ಸೀಕ್ರೇಟ್‌ ರಿವೀಲ್‌ ಆಗಿಬಿಡುತ್ತೆ. ಆಪ್ತಮಿತ್ರದ ಸೌಂದರ್ಯ ಪಾತ್ರವನ್ನು ಸಿನಿಮಾ ನೋಡೋಕೂ ಮೊದಲೇ ಹೇಳಿದರೆ ಹೇಗೆ ಮಜಾ ಇರಲ್ವೋ ಇದೂ ಹಾಗಾಗುತ್ತೆ.

Latest Videos

undefined

* ಈ ಪಾತ್ರದ ಮ್ಯಾನರಿಸಂಗೆ ಏನೆಲ್ಲ ವರ್ಕೌಟ್‌ ಮಾಡಿದ್ರಿ?
ಒಂದಿಷ್ಟು ಜನ ಸೈಕಿಯಾಟ್ರಿಸ್ಟ್ ಜೊತೆ ಮಾತನಾಡಿದೆ. ಅವರ ಮನಸ್ಥಿತಿ ಅಭ್ಯಾಸ ಮಾಡಿದೆ. ಗರ್ಭಿಣಿಯ ಸೂಕ್ಷ್ಮ ಮ್ಯಾನರಿಸಂಗಳು ಅರಿಯಬೇಕಿತ್ತು. ಆ ಹೊತ್ತಿಗೆ ನನ್ನ ಸ್ನೇಹಿತೆ ಗರ್ಭಿಣಿಯಾಗಿದ್ದಳು. ಸಿನಿಮಾ ವಿಚಾರ ಹೇಳದೇ ಅವಳ ಜೊತೆಗಿದ್ದು ಅವಳ ನಡಿಗೆ, ಚಲನವಲನ, ಮುಖದ ಭಾವ ಇತ್ಯಾದಿಗಳನ್ನು ಗಮನಿಸಿದೆ. ಇವೆಲ್ಲ ಪಾತ್ರಕ್ಕೆ ಸಹಾಯಕವಾಯಿತು.

ಆಪ್ತಮಿತ್ರದಂತಹ ಗಟ್ಟಿಯಾದ ಕತೆ 'ಸತ್ಯಂ'ನಲ್ಲಿದೆ: ರಂಜನಿ ರಾಘವನ್

* ಕ್ರೈಮ್‌ ಥ್ರಿಲ್ಲರ್‌ಗಳಲ್ಲಿ ನಟಿಸುವ ಇಂಟೆನ್ಸಿಟಿಯೇ ಬೇರೆ ಎನ್ನುತ್ತಾರೆ, ನಿಮಗಿದು ಅನುಭವಕ್ಕೆ ಬಂತಾ?
ಹೌದು. ಕ್ಷಣ ಕ್ಷಣಕ್ಕೂ ಕುತೂಹಲ ಹೆಚ್ಚಿಸುವ, ಪ್ರೇಕ್ಷಕರನ್ನು ಕುರ್ಚಿ ತುದಿಯಲ್ಲಿ ಕೂರಿಸುವ ಕಥಾಹಂದರವಿರುವ ಕಾರಣ ನಾವೂ ಒಂದು ತೀವ್ರತೆಯಲ್ಲಿ ಅಭಿನಯಿಸಬೇಕಿರುತ್ತದೆ. ಈ ಸಿನಿಮಾದಲ್ಲೇ ಫಸ್ಟ್‌ ಟೈಮ್‌ ಅಂಥದ್ದೊಂದು ಅನುಭವಕ್ಕೆ ಪಕ್ಕಾಗಿದ್ದು ಒಂದೊಳ್ಳೆ ಅನುಭವ.

* ನೀವು ಯಾವ ಬಗೆಯ ಪಾತ್ರಗಳ ಹುಡುಕಾಟದಲ್ಲಿದ್ದೀರಿ?
ನನ್ನಲ್ಲಿರುವ ಟ್ಯಾಲೆಂಟ್‌ ನನ್ನ ಅರಿವಿಗೇ ಬರದ ಹಾಗೆ ಹೊರಬಂದು ನನ್ನನ್ನೇ ಚಕಿತಗೊಳಿಸುವಂಥಾ ಪಾತ್ರಗಳು ನನಗೆ ಬರಬೇಕು. ಅದು ನನ್ನ ಕನಸು. ಅಂಥಾ ನಿರ್ದೇಶಕರೂ ಸಿಗಬೇಕು. ಉಳಿದಂತೆ ನಮ್ಮ ಸಿನಿಮಾದಲ್ಲಿ ನಟಿಸಿ ಅಂತ ಕೇಳುವ ಅನೇಕರ ಬಳಿ ಪಾತ್ರದ ಬಗ್ಗೆ ವಿಚಾರಿಸಿದರೆ, ಒಳ್ಳೆ ಹುಡುಗಿ ಪಾತ್ರ ಮೇಡಂ, ಪಕ್ಕದ್ಮನೆ ಹುಡುಗಿ ಥರದ ರೋಲ್‌, ನೀವಿದ್ರಲ್ಲಿ ಹಳ್ಳಿ ಹುಡುಗಿ ಆಗಿರ್ತೀರಿ ಅಂತೆಲ್ಲ ಹೇಳಿ ನಿರಾಸೆ ಮಾಡ್ತಾರೆ.

* ಒಂದಿಷ್ಟು ಸಮಯದಿಂದ ಸಿನಿಮಾರಂಗದಲ್ಲಿ ಪ್ರತಿಭಾವಂತರೆಂದು ಗುರುತಿಸಿಕೊಂಡಿದ್ದೀರಿ. ನಿಮ್ಮ ಸ್ಟ್ರಗಲ್‌ಗಳು?
ನಾನು ಅಂತಲ್ಲ, ನನ್ನಂಥಾ ಸಿನಿಮಾ ಕಲಾವಿದರ ಸ್ಟ್ರಗಲ್‌ಗಳು ಅನ್ನಬಹುದೇನೋ. ಸ್ಟಾರ್‌ ಸಿನಿಮಾಗಳಲ್ಲಿ ಅವಕಾಶ ಸಿಕ್ಕರೆ ಅದೃಷ್ಟ ಎನ್ನುವ ಮನಸ್ಥಿತಿ ಇದೆ. ಆದರೆ ಅಲ್ಲಿ ನಾಯಕಿಯ ಪಾತ್ರ ಪರ್ಫಾಮರ್ಸ್‌ ಅಂತ ಗುರುತಿಸಿಕೊಂಡವರಿಗೆ ಸಿಗುವುದು ಕಷ್ಟ. ಕೆಲವೊಬ್ಬರು ಸಣ್ಣ ಬಜೆಟ್‌ನಲ್ಲೇ ಒಳ್ಳೆ ಸಿನಿಮಾ ಮಾಡ್ತಿದ್ದಾರೆ. ಆದರೆ ಅವರು ತಮ್ಮ ಸ್ನೇಹ ಬಳಗದವರನ್ನೇ ಮುಖ್ಯಪಾತ್ರಕ್ಕೆ ತೆಗೆದುಕೊಳ್ತಾರೆ. ಹೀಗಾಗಿ ಅಲ್ಲಿ ಅವಕಾಶ ಇರೋದಿಲ್ಲ. ಮತ್ತೊಂದಿಷ್ಟು ತಂಡಗಳಲ್ಲಿ ಅವಕಾಶ ಸಿಕ್ಕರೂ ಅದರಲ್ಲಿ ನಟನೆಯ ತೃಪ್ತಿಯಾಗಲಿ, ಜನಕ್ಕೆ ತಲುಪುವ ಭರವಸೆಯಾಗಲಿ ಸಿಗುವುದಿಲ್ಲ.

ಹೊಸ ಕ್ರೈಮ್‌ ಥ್ರಿಲ್ಲರ್‌ನಲ್ಲಿ ಸೈಕಾಲಜಿಸ್ಟ್‌ ಪಾತ್ರ: ರಂಜನಿ ರಾಘವನ್‌

* ನೀವೇ ಸಿನಿಮಾ ಮಾಡ್ತಿದ್ದೀರಂತೆ?
ಹೌದು. ಅದಿನ್ನೂ ಸ್ಕ್ರಿಪ್ಟ್‌ವರ್ಕ್‌ ಹಂತದಲ್ಲಿದೆ.

click me!