ಟ್ರೆಂಡ್‌ಗೆ ತಕ್ಕಂಥಾ ಸಿನಿಮಾ ಮಾಡೋ ಜಾಯಮಾನ ನಂದಲ್ಲ : ಹೇಮಂತ್‌ ರಾವ್

Published : Aug 31, 2023, 10:30 AM IST
ಟ್ರೆಂಡ್‌ಗೆ ತಕ್ಕಂಥಾ ಸಿನಿಮಾ ಮಾಡೋ ಜಾಯಮಾನ ನಂದಲ್ಲ : ಹೇಮಂತ್‌ ರಾವ್

ಸಾರಾಂಶ

‘ಕವಲು ದಾರಿ’ ಬಳಿಕ ಹೇಮಂತ್ ರಾವ್ ಆ್ಯಕ್ಷನ್ ಕಟ್ ಹೇಳಿರೋ ಚಿತ್ರ ರಕ್ಷಿತ್ ಶೆಟ್ಟಿ, ರುಕ್ಮಿಣಿ ವಸಂತ್ ನಟನೆಯ ‘ಸಪ್ತಸಾಗರದಾಚೆ ಎಲ್ಲೋ’. ರಕ್ಷಿತ್‌ ಶೆಟ್ಟಿ ಪರವಃ ಸ್ಟುಡಿಯೊ ಮೂಲಕ ಈ ಸಿನಿಮಾ ನಿರ್ಮಿಸಿದ್ದಾರೆ. ಸಿನಿಮಾ ಬಗ್ಗೆ ಹೇಮಂತ್ ಹೀಗನ್ನುತ್ತಾರೆ.

ಪ್ರಿಯಾ ಕೆರ್ವಾಶೆ

ನಾಲ್ಕು ವರ್ಷದ ನಂತರ ಪ್ರೇಕ್ಷಕರ ಎದುರು ಬರುತ್ತಿದ್ದೀರಿ..

ಹೌದು. ‘ಸಪ್ತಸಾಗರದಾಚೆ ಎಲ್ಲೋ’ ಇದು ನಾನು ಮೊದಲ ಸಿನಿಮಾಕ್ಕೆ ಅಂತ ಬರೆದ ಸ್ಕ್ರಿಪ್ಟ್. ಆಗ ಮಾಡೋದಕ್ಕೆ ಆಗದಿದ್ದದ್ದು ಒಳ್ಳೆಯದೇ ಆಯ್ತು. ಅವತ್ತಾಗಿದ್ದರೆ ಇಂಥಾ ಕಲಾವಿದರು, ತಾಂತ್ರಿಕತೆ, ಮೇಕಿಂಗ್ ಸಾಧ್ಯವಾಗುತ್ತಿರಲಿಲ್ಲ. ಇವತ್ತಿನ ಮೆಚ್ಯೂರಿಟಿನೂ ಇರಲಿಲ್ಲ. ಸಿನಿಮಾ ಬಗ್ಗೆ ಎಷ್ಟೇ ಆತ್ಮವಿಶ್ವಾಸ ಇದ್ದರೂ ಎಕ್ಸಾಂ ಹಿಂದಿನ ದಿನದ ಭಯ ಇದ್ದೇ ಇದೆ.

ಬೆಂಗಳೂರಿನ ಎಂ ಜಿ ರೋಡ್‌ನಲ್ಲಿ ಅಡ್ಡಾಡುವಾಗ ಸಮುದ್ರದಂಥಾ ಹುಡುಗ, ನದಿಯಂಥಾ ಹುಡುಗಿ ಸಿಕ್ಕಿದ್ದು ಹೇಗೆ?

ಕಥೆಗೆ, ಕಲ್ಪನೆಗೆ ಇರುವ ಶಕ್ತಿ ಅದು. ಸಮುದ್ರತೆ ವಿಶಾಲತೆ, ಅಲೆಗಳು, ದಡದ ಮೇಲೆ ಹಾಯುವ ಗಾಳಿ ಇವೆಲ್ಲ ಪ್ರೀತಿಯನ್ನು ಗಾಢವಾಗಿ ನಿರೂಪಿಸಬಲ್ಲವು ಅನಿಸಿತು. ನಾನು ಮೊದಲ ಸಲ ಸಮುದ್ರ ನೋಡಿದಾಗ ನನ್ನೊಳಗೆ ಹುಟ್ಟಿದ ಭಾವವನ್ನು ಇಲ್ಲಿ ಹೇಳಿದ್ದೇನೆ.

ರಕ್ಷಿತ್‌ ಶೆಟ್ಟಿಯಂತ ಹುಡುಗ ಸಿಕ್ಕಿದ್ರೆ, ಮದುವೆಯಾಗ್ತೀನಿ ಎಂದ ನಟಿ !

ಪ್ರಿಯಾ ಮನುವನ್ನು ಕತ್ತೆ ಅಂತ ಕರೆಯೋದು ಕ್ಯೂಟ್‌ ಎಕ್ಸ್‌ಪ್ರೆಶನ್. ಬಹಳ ಮಂದಿ ಇಷ್ಟಪಟ್ಟಿದ್ದಾರೆ

ಪ್ರೀತಿಸುವ ಹುಡುಗ ಹುಡುಗಿ ಮಧ್ಯೆ ಒಂದಿಷ್ಟು ಗುಟ್ಟುಗಳಿರುತ್ತವೆ. ನನಗೆ ಆ ಪ್ರೈವೆಸಿಯನ್ನು ಎಕ್ಸ್‌ಪ್ಲೋರ್‌ ಮಾಡಬೇಕಿತ್ತು. ಆ ಹುಡುಕಾಟದಲ್ಲಿ ಸಿಕ್ಕಿದ್ದೇ ಮನುವಿನ ಪುಟ್ಟಿ, ಪ್ರಿಯಾಳ ಕತ್ತೆ!

ಈ ಪಾತ್ರಗಳ ವ್ಯಕ್ತಿತ್ವದ ಬಗ್ಗೆ ಹೇಳೋದಾದ್ರೆ?

ಅತ್ತ ಬಡವರೂ ಅಲ್ಲದ ಇತ್ತ ಮಧ್ಯಮ ವರ್ಗವೂ ಅಲ್ಲದ ಒಂದು ವರ್ಗದೊಳಗೆ ಬರುವವರು ಈ ಪ್ರಿಯಾ ಮತ್ತು ಮನು. ಮನುವಿಗೆ ಲೈಫ್‌ನಲ್ಲಿ ನನ್ನದು ಅಂತ ಸಿಕ್ಕಿದ್ದು ಪ್ರಿಯಾ. ಪ್ರಿಯಾಗೆ ಕಂಪ್ಲೀಟ್ ಪ್ರೀತಿ ಅಂತ ಸಿಕ್ಕಿದ್ದು ಮನು. ಅವನು ಸಮುದ್ರ, ಅವಳು ನದಿ.

ಸೈಡ್‌ ಎ ಶೂಟ್‌ ಮಾಡ್ತಾ ಸೈಡ್‌ ಬಿ ಮಾಡೋ ಪ್ಲಾನ್ ಬಂತಾ? ಸಿನಿಮಾ ಸ್ಲೋ ಇದೆ ಅನ್ನೋರಿಗೆ?

ಇಲ್ಲ. ಸ್ಕ್ರಿಪ್ಟಿಂಗ್ ಕೆಲಸ ಶುರುವಾದ 10 ದಿನಕ್ಕೇ ಈ ಪ್ಲಾನ್ ಬಂತು. ಹಿಂದೆ ಕ್ಯಾಸೆಟ್‌ ಇದ್ದಾಗ ಸೈಡ್‌ ಎ ಯಲ್ಲಿ ನಾಲ್ಕು ಹಾಡು, ಸೈಡ್ ಬಿಯಲ್ಲಿ ನಾಲ್ಕು ಹಾಡುಗಳಿರುತ್ತಿದ್ದವು. ಸೈಡ್‌ ಎ ಹಾಡುಗಳಷ್ಟರಲ್ಲೇ ಒಂದು ಕಂಪ್ಲೀಟ್ ನೆಸ್ ಇರುತ್ತಿತ್ತು. ಅಂಥದ್ದು ಈ ಸಿನಿಮಾದಲ್ಲಾಗಿದೆ. ಆದರೆ ಪಾತ್ರಗಳಿಗೆ ಕನೆಕ್ಷನ್ ಇದ್ದೇ ಇದೆ. ಸಿನಿಮಾನೇ ರಿಲೀಸ್ ಆಗಿಲ್ಲ, ಬರೀ ಟ್ರೇಲರ್ ನೋಡಿ ಸಿನಿಮಾ ಸ್ಲೋ ಅಂದುಕೊಂಡ್ರೆ ಹೇಗೆ?

ನದಿಯೇ ನಿನಗಾಗಿ ನಾ ಕಾಯುವೆ ಎಂದ ರಕ್ಷಿತ್ ಶೆಟ್ಟಿ!

ಸ್ಟ್ರಾಂಗ್ ಕಂಟೆಂಟ್, ಆ್ಯಕ್ಷನ್ ಕಾಲದಲ್ಲಿ ಲವ್‌ಸ್ಟೋರಿ ಹಿಡಿದು ಬಂದಿದ್ದೀರಿ..

ನಾನು ಯಾವತ್ತೂ ಟ್ರೆಂಡ್‌ಗೆ ತಕ್ಕಂಥಾ ಸಿನಿಮಾ ಮಾಡಿದವನಲ್ಲ. ಸಿನಿಮಾ ನನ್ನ ಪ್ರೀತಿ. ನನಗೆ ಹತ್ತಿರವಾದದ್ದನ್ನು ನಾನಿಲ್ಲಿ ಹೇಳ್ತೀನಿ. ಒಂದೇ ರೀತಿಯ ಕತೆ ಹೇಳೋದಕ್ಕಿಂತ ಹೊಸತನ, ಕ್ರಿಯೇಟಿವ್‌ ಆಗಿ ಕಥೆ ಹೇಳಬೇಕು. ರಕ್ಷಿತ್ ಶೆಟ್ಟಿ ಅವರು ಸಹ ಹೀಗೇ ಯೋಚಿಸ್ತಾರೆ. ಅವರು ಹಾಗೂ ರುಕ್ಮಿಣಿಗಾಗಿ ನಾನು ನೂರು ಸಿನಿಮಾ ಮಾಡೋಕೂ ರೆಡಿ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಜಿಮ್‌, Crash Diet ಇಲ್ಲದೆ 14kg ಸಣ್ಣಗಾದ 'ಚಿ ಸೌ ಸಾವಿತ್ರಿ', Bhagyalakshmi Serial ನಟಿ ಗೌತಮಿ ಗೌಡ!
ನಾಲ್ಕೇ ನಾಲ್ಕು ಕೆಜಿ ತೂಕ ಹೆಚ್ಚಾಗಿದ್ದಕ್ಕೆ ಕೈಬಿಟ್ಟು ಹೋಯ್ತು ಸಿನಿಮಾ - ನೋವು ತೋಡಿಕೊಂಡ ರಾಧಿಕಾ ಆಪ್ಟೆ