ಮಾತೃಶ್ರೀ ಸೇವೆಯಲ್ಲಿ ಧನ್ಯನೆನ್ನುವ ಶ್ರೀಧರ್..!

By Suvarna News  |  First Published Aug 22, 2020, 4:13 PM IST

ಸುಂದರ ಪುರುಷ. ಉತ್ತಮ ಕಲಾವಿದ. ಬಹುಶಃ ಡಾ.ರಾಜ್ ಬಳಿಕ ಇಷ್ಟೊಂದು ಸ್ಪಷ್ಟವಾಗಿ ಕನ್ನಡದ ಪದಗಳನ್ನು ಉಚ್ಚರಿಸುವ ಮತ್ತೋರ್ವ ನಟ ಡಾ.ಶ್ರೀಧರ್ ಎಂದರೆ ವಿಶೇಷ ಏನೂ ಇಲ್ಲ. ಅಂಥ ಶ್ರೀಧರ್ ತಮ್ಮ ತಾಯಿಗೆ ಸೇವೆ ಮಾಡಲು ದೊರಕಿದ ಅನುಭವವನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.
 


ಮಾತೃಶ್ರೀ ಸೇವೆಯಲ್ಲಿ ಧನ್ಯನೆನ್ನುವ ಶ್ರೀಧರ್..!

ಶ್ರೀಧರ್ ಅವರು ಸಿನಿಮಾಗಳಲ್ಲಿ ನಟಿಸುವುದು ಕಡಿಮೆ. ಆದರೆ ಅವರು ಎಂಥ ನಟ ಎನ್ನುವುದನ್ನು ಪುಟ್ಟಣ್ಣ ಕಣಗಾಲ್ ಅವರ ಕಾಲದಲ್ಲೇ ಸಾಬೀತು ಮಾಡಿದವರು. ನಟ ಮಾತ್ರವಲ್ಲ, ಅದ್ಭುತವಾದ ನೃತ್ಯಪಟು ಎನ್ನುವುದು ಎಲ್ಲರಿಗೂ ಗೊತ್ತು. ಆದರೆ ಆ ಬಗ್ಗೆ ಕೂಡ ಹೆಚ್ಚು ಅಭಿಮಾನ ಹೊಂದಿದವರು ಕೇರಳದವರು ಎಂದರೆ ತಪ್ಪಾಗಲಾರದು. ಇವರದೊಂದು ನೃತ್ಯ ಕಾರ್ಯಕ್ರಮ ಇದೆ ಎಂದರೆ ಟಿಕೆಟ್ಸ್‌ ಬಲುಬೇಗನೆ ಮಾರಾಟವಾಗುತ್ತವೆ. ಆಪ್ತಮಿತ್ರದ ಮೂಲ ಮಲಯಾಳಂ ಸಿನಿಮಾದಲ್ಲಿ ನೃತ್ಯಗಾರನ ಪಾತ್ರ ನಿರ್ವಹಿಸಿದ ಇವರ ಬಗ್ಗೆ ಅವರಲ್ಲಿ ವಿಶೇಷ ಒಲವು. ಅದೇ ವೇಳೆ ಕನ್ನಡದಲ್ಲಿ ಕೂಡ ಇವರು ಮಾಡಿದ ಭಕ್ತಿ ಪ್ರಧಾನ ಪಾತ್ರಗಳು ಕಿರುತೆರೆಯಲ್ಲಿ ಇಂದಿಗೂ ಮರು ಪ್ರಸಾರ ಕಾಣುವಷ್ಟು ಡಿಮ್ಯಾಂಡ್ ಪಡೆದುಕೊಂಡಿವೆ. ಇವೆಲ್ಲದರ ನಡುವೆ ನೃತ್ಯವನ್ನೇ ಬದುಕೆನ್ನುವ ರೀತಿ ಗೌರವದಿಂದ ಕಾಣುವ ಶ್ರೀಧರ್ ಅವರು ಪ್ರಸ್ತುತ ಏನು ಮಾಡುತ್ತಿದ್ದಾರೆ. ಯಾವ ಕೆಲಸದಲ್ಲಿ ನಿರತರಾಗಿದ್ದಾರೆ ಎನ್ನುವ ಬಗ್ಗೆ ಅವರನ್ನೇ ವಿಚಾರಿಸಿದಾಗ ಸುವರ್ಣ.ಕಾಮ್‌ಗೆ ಅವರು ನೀಡಿರುವ ಉತ್ತರಗಳು ಇಲ್ಲಿವೆ.

Latest Videos

undefined

ಶಶಿಕರ ಪಾತೂರು

ನಿರ್ದೇಶನದ ಕನಸಿನಲ್ಲಿ ಪ್ರಮೋದ್

ಕೊರೊನಾದಿಂದಾಗಿ ತಮ್ಮ ವೃತ್ತಿ ಬದುಕಿನ ರೀತಿಯಲ್ಲಿ ಬದಲಾವಣೆಯಾಗಿದೆ?

ಖಂಡಿತವಾಗಿ ಬದಲಾವಣೆ ಆಗಿದೆ. ನಾನು ನಡೆಸಿಕೊಡಬೇಕಿದ್ದ ಹಲವಾರು ನೃತ್ಯ ಕಾರ್ಯಕ್ರಮಗಳು ಕ್ಯಾನ್ಸಲ್ ಆದವು. ನಟಿಸಿರುವ ಸಿನಿಮಾವೊಂದು ಅದೃಷ್ಟವಶಾತ್ ಲಾಕ್ಡೌನ್‌ಗೆ ಮೊದಲೇ ಚಿತ್ರೀಕರಣ ಪೂರ್ತಿಯಾಗಿತ್ತು. `ಲಸ್ಯಾನ ಸಿದ್ದಲಿಂಗೇಶ್ವರರು' ಎನ್ನುವ ಆ ಚಿತ್ರದಲ್ಲಿ ನಾನೇ ಪ್ರಧಾನ ಪಾತ್ರ ಮಾಡಿದ್ದೇನೆ. ಅದರ ಬಳಿಕ ಲಾಕ್ಡೌನ್ ಸಂದರ್ಭದಲ್ಲಿ ನಾನು ಜೆ.ಪಿ ನಗರದ ಮನೆಯಲ್ಲೇ ಇದ್ದೆ. ಲಾಕ್ಡೌನ್ ಸಂದರ್ಭದಲ್ಲಿ ನಮ್ಮ ಎರಡೂ ಕಡೆಯ ರಸ್ತೆಗಳು ಸೀಲ್ಡೌನ್ ಮಾಡಿದ ಕಾರಣ, ನಾವು ದಿಗ್ಬಂಧನಕ್ಕೆ ಒಳಗಾದಂತೆ ಆಗಿತ್ತು. ಆದರೆ ನಾವು ಮನೆಯಲ್ಲಿ ನಡೆಸುತ್ತಿದ್ದ ಡ್ಯಾನ್ಸ್ ಕ್ಲಾಸ್ ಆನ್ಲೈನ್ ಮೂಲಕ ಮುಂದುವರಿಸಿದೆವು.

ಭಾಷೆ ಕಲಿಯುತ್ತಿರುವ ರಶ್ಮಿಕಾ ಮಂದಣ್ಣ!

ನೀವು ಪತ್ನಿಯ ಜತೆ ಸೇರಿ ನೃತ್ಯ ತರಬೇತಿ ನೀಡುತ್ತಿದ್ದಿರಾ?

ನಾನು, ನನ್ನ ಪತ್ನಿ ಅನುರಾಧ ಮತ್ತು ಮಗಳು ಸೇರಿಕೊಂಡು ಬೇರೆ ಬೇರೆ ನೃತ್ಯ ತರಗತಿಗಳನ್ನು ನೀಡುತ್ತಿದ್ದೆವು.  ಪ್ರತಿದಿನ ಸಂಜೆ ನಡೆಸುತ್ತೇವೆ. 5 ಗಂಟೆಯಿಂದ 8 ಗಂಟೆಯವರೆಗೆ ಸುಮಾರು ಮೂರು ಬ್ಯಾಚ್ ಗಳಿಗೆ ಕಲಿಸುತ್ತಿದ್ದೆವು. ನನ್ನ ಮಗಳು ಬಿಎ ಮುಗಿಸಿ ಎಂ.ಎ ಮಾಡ್ತಿದ್ದಾಳೆ. ಅದರ ನಡುವೆ ನೃತ್ಯವನ್ನೇ ಜೀವನವಾಗಿಸಿದ್ದಾಳೆ.ಲಾಕ್ಡೌನ್ ಸಂದರ್ಭದಲ್ಲಿ  ಸಾಕಷ್ಟು ಕಲಿಕೆಗೆ ಅವಕಾಶ ದೊರೆಯಿತು. ಮುಖ್ಯವಾಗಿ ನಾನು ಆಧ್ಯಾತ್ಮದ ಅಧ್ಯಯನ ಮಾಡಿದೆ. ನಾನು ಮಹಾಭಾರತದ 32 ವ್ಯಾಲ್ಯೂಮ್ಸ್ ಕೂಡ ಓದಿದ್ದೇನೆ. ಪುಟ ಲೆಕ್ಕಹಾಕಿ ನೋಡಿದರೆ ಒಂದೊಂದು ವಾಲ್ಯೂಮ್ ಕೂಡ 300 ಪುಟಗಳಷ್ಟಿವೆ. ಜೀವನಕ್ಕೆ ಸಂಬಂಧ ಪಟ್ಟದ್ದು ಎಲ್ಲಾ ಇದೆ ಅದರಲ್ಲಿ. ಯಾವುದಾದರು ಒಂದು ವಿಷಯ ತಿಳ್ಕೋಬೇಕು ಎನ್ನುವಾಗ ಮಹಾಭಾರತ ತೆಗೆದು ಓದುತ್ತೇನೆ. ವ್ಯಾಪಾರ, ವೃತ್ತಿ, ಆಡಳಿತ, ಕಾರ್ಯನಿರ್ವಹಣೆ ಹೀಗೆ  ಎಲ್ಲಾನೂ ಮಹಾಭಾರತದಲ್ಲಿದೆ.

ಕಾಮಿಡಿ ಪಾತ್ರದ ನಿರೀಕ್ಷೆಯಲ್ಲಿ ದಿಶಾ ಮದನ್

ಮಹಾಭಾರತದ ತತ್ವಗಳು ಇಂದು  ಎಷ್ಟು ಪ್ರಾಯೋಗಿಕ? 

 ನಮಗೆ ಜೀವನದಲ್ಲಿ ವೃತ್ತಿ ನಿರ್ವಹಣೆ ಎನ್ನುವುದು ಇಂದಿಗೂ ಮುಖ್ಯ. ಯಶಸ್ಸು ಗಳಿಸಬೇಕು. ನಮ್ಮ‌ಅಟಿಡ್ಯೂಟ್ ಹೇಗಿರಬೇಕು ಇವೆಲ್ಲವೂ ನಮ್ಮನ್ನು ನಿಯಂತ್ರಿಸುವ ವಿಷಯಗಳು. ಭಗವದ್ಗೀತೆ ಮೊದಲ ಅಧ್ಯಾಯವೇ ನಿನ್ನ ಕರ್ತವ್ಯವನ್ನು ನೀನು ಹೇಗೆ ಮಾಡುತ್ತೀಯಾ ಎನ್ನುವುದರ ಬಗ್ಗೆ. ಜೀವನದಲ್ಲಿ ಯಶಸ್ಸು ಗಳಿಸುವುದೇ ಮುಖ್ಯ ಎನ್ನುವುದನ್ನು ಭಗವದ್ಗೀತೆ ಹೇಳುತ್ತದೆ. ನೀವು ಮಾಡುವ ಕೆಲಸ ಪ್ರತಿಯೊಂದು ಕೆಲಸವೂ ಪ್ರವೃತ್ತಿ. ನಿವೃತ್ತಿ ವೈರಾಗ್ಯ ದ ಮೂಲ. ನಿವೃತ್ತಿ ಸ್ಟೇಟ್ ಆಫ್ ಮೈಂಡ್ ಅಷ್ಟೇ ಎನ್ನುವುದನ್ನು ಮಹಾಭಾರತ ಅಂದೇ ಹೇಳಿದೆ. ಇದಲ್ಲವೇ ಬದುಕಿಗೆ ಬೇಕಾಗಿರುವ ಪ್ರಮುಖ ಅಂಶ? ನಮ್ಮ ವೈಯಕ್ತಿಕ ಬದುಕಿನಲ್ಲಿ ಮತ್ತು ವೃತ್ತಿಯಲ್ಲಿ ಭಾವನೆಗಳಿಗೆ ನೀಡಬೇಕಾದ ಪ್ರಾಮುಖ್ಯತೆ ಎಷ್ಟು ಎನ್ನುವುದನ್ನು ಕೂಡ ಹೇಳಿದೆ. ಪ್ರತಿಯೊಬ್ಬರಲ್ಲಿಯೂ ಅದ್ಭುತವಾದ ಆತ್ಮಶಕ್ತಿ ಇದೆ ಅದನ್ನು ಹೇಗೆ ಬಳಸಿಕೊಳ್ಳಬಹುದು ಎನ್ನುವುದನ್ನು ಹೇಳುತ್ತದೆ

ಒಂದು ರೀತಿ ಬದಲಾವಣೆ ನಿಮ್ಮನ್ನು ಹೆಚ್ಚು ಕಾಡಿಲ್ಲ ಎನ್ನಬಹುದಲ್ಲವೇ?

ಕೊರೊನಾ ತಂದ ಬದಲಾವಣೆಯಲ್ಲಿ ಲಾಕ್ಡೌನ್ ಪ್ರಮುಖವಾಗಿರುವಂಥದ್ದು. ಅದು ಅಗತ್ಯ ಇತ್ತಾದರೂ ದಿನಗೂಲಿ ಕಾರ್ಮಿಕರು ಎದುರಿಸಿದ ಕಷ್ಟ ಮತ್ತು ಕಂಡ ಬದಲಾವಣೆ ನಮಗೆ ಯಾರಿಗೂ ಇರಲಿಲ್ಲ. ಆದರೆ ನನಗೆ ಅಮ್ಮನ ವಿಚಾರದಲ್ಲಿ ಒಂದು ಪುಣ್ಯದ ಅನುಭವ ಆಯಿತು. ಅವರಿಗೆ ಈಗ 80ವರ್ಷ ವಯಸ್ಸು. ಅಮ್ಮನನ್ನು 24 ಗಂಟೆಯೂ ನೋಡಿಕೊಳ್ಳಲು  ಒಬ್ಬರು ಬೇಕಾಗಿದ್ದರು.. ಹಾಗಾಗಿ ಒಬ್ಬರು ನರ್ಸನ್ನು ಇರಿಸಿಕೊಂಡಿದ್ದೆವು. ಆದರೆ ಲಾಕ್ಡೌನ್ ಸಮಯಕ್ಕಿಂತ ಸ್ವಲ್ಪ ಮೊದಲು ತಮ್ಮದೇನೋ ಕೌಟುಂಬಿಕ ಕಾರಣ ಹೇಳಿ ಅವರು ಹೋಗಿದ್ದರು. ಏಜೆನ್ಸಿಯವರು ಮತ್ತೊಬ್ಬರನ್ನು ಕರೆಸುವ ಮೊದಲು ಲಾಕ್ಡೌನ್ ಆಯಿತು. ಆದರೆ ಕಳೆದ ಅಷ್ಟು ತಿಂಗಳಿನಿಂದ ತಾಯಿಯ ಸ್ನಾನದಿಂದ ಹಿಡಿದು ಶಯನದ ತನಕ ಎಲ್ಲವನ್ನು ಗಮನಿಸುವ ಕೆಲಸ ಖುದ್ದಾಗಿ ನಾನೇ ಮಾಡಿದ್ದೇನೆ. ಒಟ್ಟಿನಲ್ಲಿ ತಾಯಿಯ ಸೇವೆ ಮಾಡುವ ಭಾಗ್ಯ ನನಗೆ ಸಿಕ್ಕಿದೆ ಎಂದು ಹೇಳಬಹುದು.
 

click me!