ಸಿನಿಮಾ, ಸೀರಿಯಲ್‌ಗಳಲ್ಲಿ ನಟನೆ, ಡಬ್ಬಿಂಗ್, ಟ್ರ್ಯಾಕ್ ಸಿಂಗಿಂಗ್, ಮಾಡೆಲಿಂಗ್, ಪ್ರಿನ್ಸೆಸ್ ಕರ್ನಾಟಕ ಬ್ಯೂಟಿ ಪೇಜೆಂಟ್ ಹೀಗೆ ವಿಭಿನ್ನ ಕೆಲಸಗಳ ಮೂಲಕ ಗುರುತಿಸಿಕೊಂಡಿರುವ ಕಲಾವಿದೆ ಅಮೂಲ್ಯ. ಈಕೆ ಸದ್ಯಕ್ಕೀಗ ‘ನನ್ನರಸಿ ರಾಧೆ’ ಧಾರಾವಾಹಿಯ ಅಶ್ವಿನಿಯಾಗಿ ಮನೆಮಾತಾಗಿದ್ದಾರೆ. ಈ ಸ್ಟ್ರೈಟ್ ಫಾರ್ವಡ್ ಹುಡುಗಿಯ ನೇರ ಮಾತುಗಳು ಇಲ್ಲಿವೆ.
ನಿತ್ತಿಲೆ
ಸಿನಿಮಾ, ಸೀರಿಯಲ್‌ಗಳಲ್ಲಿ ನಟನೆ, ಡಬ್ಬಿಂಗ್, ಟ್ರ್ಯಾಕ್ ಸಿಂಗಿಂಗ್, ಮಾಡೆಲಿಂಗ್, ಪ್ರಿನ್ಸೆಸ್ ಕರ್ನಾಟಕ ಬ್ಯೂಟಿ ಪೇಜೆಂಟ್ ಹೀಗೆ ವಿಭಿನ್ನ ಕೆಲಸಗಳ ಮೂಲಕ ಗುರುತಿಸಿಕೊಂಡಿರುವ ಕಲಾವಿದೆ ಅಮೂಲ್ಯ. ಈಕೆ ಸದ್ಯಕ್ಕೀಗ ‘ನನ್ನರಸಿ ರಾಧೆ’ ಧಾರಾವಾಹಿಯ ಅಶ್ವಿನಿಯಾಗಿ ಮನೆಮಾತಾಗಿದ್ದಾರೆ. ಈ ಸ್ಟ್ರೈಟ್ ಫಾರ್ವಡ್ ಹುಡುಗಿಯ ನೇರ ಮಾತುಗಳು ಇಲ್ಲಿವೆ.
* ಊರು, ಓದು?
ಮೈಸೂರು. ಓದಿದ್ದು ಎಲ್‌ಎಲ್‌ಬಿ. ಇನ್ನೂ ಕಂಪ್ಲೀಟ್ ಆಗಿಲ್ಲ.
* ಮನರಂಜನಾ ಕ್ಷೇತ್ರಕ್ಕೆ ಹೇಗೆ ಬಂದ್ರಿ?
ಆಕಸ್ಮಿಕವಾಗಿ. ಚೆನ್ನಾಗಿ ಓದಿ ಒಳ್ಳೆಯ ಲಾಯರ್ ಆಗ್ಬೇಕು ಅಂದುಕೊಂಡಿದ್ದೆ. ನನ್ನ ಕಸಿನ್ ಅಶ್ವತ್ಥ ನೀನಾಸಂ ಮೂಲಕ ಬಣ್ಣದ ಜಗತ್ತಿನ ಪರಿಚಯ ಆಗಿತ್ತು. ಈ ಫೀಲ್ಡಿಗೆ ನನ್ನ ಕರೆತಂದವರು ವಿ ಮನೋಹರ್. ಅವರೇ ನನ್ನ ಗಾಡ್ ಫಾದರ್. ಸಿನಿಮಾದಲ್ಲಿ ಚಿಕ್ಕ ಪುಟ್ಟ ಪಾತ್ರಗಳಲ್ಲಿ ನಟಿಸುತ್ತಿದ್ದೆ. ‘ಅಗ್ನಿಸಾಕ್ಷಿ’ ಸೀರಿಯಲ್‌ನಲ್ಲಿ ರೋಶ್ನಿ ಅನ್ನೋ ಪಾತ್ರ ಮಾಡಿದೆ. ‘ಅಪರಂಜಿ’ ಸೀರಿಯಲ್‌ನಲ್ಲಿ ಸೆಕೆಂಡ್ ಹೀರೋಯಿನ್ ಆಗಿದ್ದೆ. ಈಗ ‘ನನ್ನರಸಿ ರಾಧೆ’ಯಲ್ಲಿ ನಟಿಸುತ್ತಿರುವೆ.
ಪಂತುಲು ಬಳಿ ನಿಜ ವಯಸ್ಸು ಬಚ್ಚಿಟ್ಟಿದ್ದೆ: ಎಂ.ಎಸ್.ಉಮೇಶ್
* ಅಶ್ವಿನಿ ಪಾತ್ರಕ್ಕೆ ಜನ ಸಿಕ್ಕ ಸಿಕ್ಕಲ್ಲಿ ಕ್ಲಾಸ್ ತಗೊಳ್ತಾರಂತೆ?
ಆ ಪಾತ್ರವೇ ಹಾಗಿದೆಯಲ್ಲಾ. ತನ್ನನ್ನ ಸಾಕಿದವರ ಮಾತಿಗೆ ಕಟ್ಟುಬಿದ್ದು ಅರಿವಿಲ್ಲದೇ ತನ್ನ ಮನೆಗೇ ಬೆಂಕಿ ಇಡುವಂಥಾ ಪಾತ್ರವದು. ಇದರಲ್ಲಿ ಅಶ್ವಿನಿ ಆಕೆಯನ್ನು ಸಾಕಿದವರ ದಾಳವಾಗಿರ್ತಾಳೆ. ಈ ಪಾತ್ರ ನೋಡಿ ಜನ, ಯಾಕೆ ಅಷ್ಟೊಂದು ತೊಂದ್ರೆ ಮಾಡ್ತೀಯಾ, ನಿನ್ನ ಬಗ್ಗೆ ಸತ್ಯ ಯಾವಾಗ ಗೊತ್ತಾಗುತ್ತೆ ಅಂತೆಲ್ಲ ಪ್ರಶ್ನೆ ಕೇಳ್ತಾರೆ. ಈ ಪಾತ್ರವೂ ಚಾಲೆಂಜಿಂಗೇ. ಅವಳು ವಿಲನ್ ಅಂತ ಗೊತ್ತಿದ್ದವರ ಹತ್ರ ಅವಳು ವಿಲನ್ ಥರ ಇರ್ಬೇಕು, ಅವಳನ್ನು ಮಗಳು ಅಂದುಕೊಂಡವರ ಹತ್ರ ಮಗಳ ಹಾಗೆ ಪಾಸಿಟಿವ್ ಆಗಿ ಬಿಹೇವ್ ಮಾಡ್ಬೇಕು.
* ಕನಸು?
ಆ್ಯಕ್ಟಿಂಗ್‌ನಲ್ಲಿ ಒಳ್ಳೆ ಹೆಸರು ಮಾಡ್ಬೇಕು. ಮಾಡೆಲಿಂಗ್‌ನಲ್ಲೂ ಮಿಂಚಬೇಕು. ಅದಾಗಿ ಪ್ರೊಡಕ್ಷನ್ ಹೌಸ್ ಶುರು ಮಾಡಿ ಸಿನಿಮಾ, ಸೀರಿಯಲ್ ತೆಗೀಬೇಕು. ಹೊಸ ಹೊಸ ಪ್ರತಿಭೆಗಳಿಗೆ ಅವಕಾಶ ಕೊಡಬೇಕು ಹೀಗೆಲ್ಲ ಕನಸಿದೆ.
ಅಪ್ಪು ಮಾಮನನ್ನು ಫಾಲೋ ಮಾಡುತ್ತೇನೆ: ಧನ್ಯಾ ರಾಮ್‌ಕುಮಾರ್
* ಯಾವ ಥರದ ಹುಡುಗಿ ನೀವು?
ಸ್ಟ್ರೈಟ್ ಫಾರ್ವರ್ಡ್. ಯಾರೇ ಆದ್ರೂ ನೇರ ಮಾತು. ಎಲ್ಲರನ್ನೂ ಮಾತನಾಡಿಸೋ ಚಟ ಪಟ ಪಟಾಕಿ. ಲೈಟ್‌ಬಾಯ್‌ನಿಂದ ಡೈರೆಕ್ಟರ್‌ವರೆಗೆ ಎಲ್ಲರೂ ಫ್ರೆಂಡ್ಸೇ.