ನಟಿ ಧನ್ಯಾ ರಾಮ್ ಈಗ ತುಂಬಾ ಚಿತ್ರಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಮೂರು ಚಿತ್ರಗಳ ನಾಯಕಿ. ವರಲಕ್ಷ್ಮೀ ಹಬ್ಬದ ಸಂಭ್ರಮದಲ್ಲಿ ಈ ನವತಾರೆಯ ಜತೆಗೆ ಮಾತುಕತೆ.
ಆರ್. ಕೇಶವಮೂರ್ತಿ
ನಟಿ ಧನ್ಯಾ ರಾಮ್ ಈಗ ತುಂಬಾ ಚಿತ್ರಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಮೂರು ಚಿತ್ರಗಳ ನಾಯಕಿ. ವರಲಕ್ಷ್ಮೀ ಹಬ್ಬದ ಸಂಭ್ರಮದಲ್ಲಿ ಈ ನವತಾರೆಯ ಜತೆಗೆ ಮಾತುಕತೆ.
undefined
* ಕಾಲಾಪತ್ಥರ್?
ಚಿತ್ರೀಕರಣ ಬಹುತೇಕ ಮುಗಿದಿದೆ. ಆಗಸ್ಟ್ 16ರಿಂದ ಹಾಡುಗಳ ಚಿತ್ರೀಕರಣ. ನನ್ನ ಪಾತ್ರದ ಡಬ್ಬಿಂಗ್ ಕೆಲಸ ಶುರುವಾಗಬೇಕಿದೆ.
* ಈ ಚಿತ್ರದಲ್ಲಿ ನಿಮ್ಮ ಪಾತ್ರ?
ಹಳ್ಳಿ ಶಾಲೆಯಲ್ಲಿ ಪಾಠ ಮಾಡುವ ಶಿಕ್ಷಕಿ.
* ಪ್ರಬುದ್ಧ ಪಾತ್ರವೇ?
ಹೌದು. ಎರಡನೇ ಚಿತ್ರಕ್ಕೇ ಇಂಥ ಪಾತ್ರ ನನಗೇ ಸಿಕ್ಕಿರುವುದು ಖುಷಿ ಇದೆ. ಈ ಕಾರಣಕ್ಕೆ ನನಗೆ ಕಾಲಾಪತ್ಥರ್ ವಿಶೇಷ ಸಿನಿಮಾ. ಇದೇ ರೀತಿ ಚಿತ್ರದಿಂದ ಚಿತ್ರಕ್ಕೆ ಬೇರೆ ಬೇರೆ ರೀತಿಯ ಪಾತ್ರಗಳಲ್ಲಿ ನಟಿಸುತ್ತಾ ಹೋಗಬೇಕು ಎಂಬುದು ನನ್ನ ಕನಸು.
* ಬೇರೆ ಚಿತ್ರಗಳನ್ನು ಒಪ್ಪಿಕೊಂಡಿದ್ದೀರಾ?
ನಿನ್ನ ಸನಿಹಕೆ ಚಿತ್ರದ ನಂತರ ಮೂರು ಚಿತ್ರ ಒಪ್ಪಿಕೊಂಡಿದ್ದೇನೆ. ಮೂರನೇ ಚಿತ್ರಕ್ಕೆ ಮೊದಲ ಹಂತದ ಚಿತ್ರೀಕರಣ ಆಗಿದೆ. ನಾಲ್ಕನೇ ಚಿತ್ರದ್ದು ಈಗಷ್ಟೆಕತೆ ಕೇಳಿದ್ದೇನೆ.
ಸೀತೆ ಪಾತ್ರಕ್ಕೆ 12 ಕೋಟಿ, ಕರೀನಾ ಏನು ಹೇಳಿದ್ದಾರೆ ನೋಡಿ!
* ನೀವೇ ಕತೆಗಳನ್ನು ಆಯ್ಕೆ ಮಾಡಿಕೊಳ್ಳುತ್ತೀರಾ?
ಇಲ್ಲ. ನನ್ನ ಜತೆಗೆ ನನ್ನ ತಾಯಿ (ಪೂರ್ಣಿಮಾ) ಕೂಡ ಕತೆ ಕೇಳುತ್ತಾರೆ. ನಮ್ಮ ಇಬ್ಬರಿಗೂ ಇಷ್ಟಆದ ಮೇಲೆ ಅಪ್ಪ (ರಾಮ್‌ಕುಮಾರ್) ಹಾಗೂ ಕುಟುಂಬದಲ್ಲಿ ಬೇರೆಯವರ ಸಲಹೆಗಳನ್ನು ತೆಗೆದುಕೊಂಡು ಆ ನಂತರ ಆಯ್ಕೆ ಮಾಡಿಕೊಳ್ಳುತ್ತೇನೆ.
* ನೀವು ಕತೆ ಕೇಳುವ ರೀತಿ ಹೇಗಿರುತ್ತದೆ?
ನಾನು ಸಿನಿಮಾ ಲವರ್. ಕತೆ ನನಗೇ ಅರ್ಥ ಆಗಬೇಕು. ಮೊದಲು ಪ್ರೇಕ್ಷಕಳಾಗಿ ಕತೆ ಕೇಳುತ್ತೇನೆ.
* ದೊಡ್ಮನೆ ಕುಟುಂಬದಿಂದ ಬಂದಿರುವೆ ಎನ್ನುವ ಒತ್ತಡ ಇದೆಯಾ?
ಒತ್ತಡ ಎನ್ನುವುದಕ್ಕಿಂತ ಜವಾಬ್ದಾರಿ ಇದೆ. ಒಳ್ಳೆಯ ಸಿನಿಮಾ, ಒಳ್ಳೆಯ ಪಾತ್ರ, ಒಳ್ಳೆಯ ಕಲಾವಿದೆಯಾಗಿ ಬೆಳೆಯುವ ಮೂಲಕ ಆ ಜವಾಬ್ದಾರಿ ನಿಭಾಯಿಸಬೇಕಿದೆ. ಕುಟುಂಬ ಹೆಮ್ಮೆ ಪಡುವಂಥ ಕೆಲಸ ಮಾಡಬೇಕು. ಅದೇ ನನ್ನ ಆಸೆ.
* ನಿಮ್ಮ ಕುಟುಂಬದಲ್ಲಿ ನೀವು ಯಾರನ್ನ ಹೆಚ್ಚು ಫಾಲೋ ಮಾಡುತ್ತೀರಿ?
ಡಾ ರಾಜ್‌ಕುಮಾರ್ ಕುಟುಂಬ ಎಂದರೆ ಸಿನಿಮಾ ಲೈಬ್ರರಿ ಇದ್ದಂತೆ. ಎಲ್ಲರಿಂದಲೂ ಕಲಿಯುವುದು ಇದ್ದೇ ಇರುತ್ತದೆ. ಹಾರ್ಡ್ ವರ್ಕ್ ಮೇಲೆ ನಮ್ಮ ಯಶಸ್ಸು ನಿಂತಿರುತ್ತದೆ, ಸುಮ್ಮನೆ ಕೂತಿರಬಾರದು. ಯಾವಾಗಲೂ ಕೆಲಸ ಮಾಡುತ್ತಿರಬೇಕು ಎಂದು ಹೇಳುತ್ತಿದ್ದ ಅಪ್ಪು (ಪುನೀತ್‌ರಾಜ್‌ಕುಮಾರ್) ಮಾಮ ಅವರನ್ನು ಫಾಲೋ ಮಾಡುತ್ತೇನೆ.
* ಮನೆಯಲ್ಲಿ ಸಿನಿಮಾಗಳ ಮುಕ್ತವಾಗಿ ಮಾತನಾಡುವುದು ಯಾರ ಜತೆ?
ಧೀರನ್ ಹಾಗೂ ವಿನಯ್ ಜತೆ ಹೆಚ್ಚು ಮಾತನಾಡುತ್ತೇನೆ. ಯಾವುದೇ ಸಿನಿಮಾ ನೋಡಿದರೂ ಆ ಚಿತ್ರದ ಬಗ್ಗೆ ಚರ್ಚೆ ಮಾಡುವುದು, ನಾನು ಯಾವುದಾದರೂ ಕತೆ ಕೇಳಿದರೆ ಆ ಬಗ್ಗೆ ಅಭಿಪ್ರಾಯಗಳನ್ನು ಧೀರನ್ ಜತೆ ಹಂಚಿಕೊಳ್ಳುತ್ತೇನೆ. ಅವನು ನನಗೆ ಒಳ್ಳೆಯ ಗೈಡ್ ಮಾಡುವ ಜತೆಗೆ ನೆರವು ನೀಡುತ್ತಾನೆ. ವಿನಯ್ ಸೂಕ್ಷ್ಮವಾಗಿ ಮಾರ್ಗದರ್ಶನ ಮಾಡುತ್ತಾರೆ. ಸಿನಿಮಾ ಮಾತ್ರವಲ್ಲ, ವೈಯಕ್ತಿಕ ಜೀವನದಲ್ಲೂ ನನಗೆ ಸಲಹೆಗಳನ್ನು ಕೊಡುವ ಬೆಸ್ಟ್ ಫ್ರೆಂಡ್ ವಿನಯ್ ಅವರೇ.
* ಶಿವಣ್ಣ, ಪುನೀತ್, ರಾಘಣ್ಣ ಅವರ ನಟನೆಯ ಚಿತ್ರಗಳನ್ನು ಮತ್ತೆ ಹೊಸದಾಗಿ ಮಾಡಿದರೆ ನಿಮ್ಮ ಆಯ್ಕೆ ಚಿತ್ರ ಯಾವುದು?
ಅಯ್ಯೋ... ಅವರ ಸಿನಿಮಾಗಳನ್ನು ಆಯ್ಕೆ ಮಾಡಿಕೊಂಡು ನಟಿಸುವಷ್ಟುದೊಡ್ಡ ನಟಿ ನಾನಲ್ಲ. ನಾನು ಅವರ ಸಿನಿಮಾಗಳ ಅಭಿಮಾನಿ ಅಂತ ಹೇಳಬಹುದು. ಈಗಂತೂ ಅಂಥ ಸಾಹಸ ಮಾಡೋ ಧೈರ್ಯ ಇಲ್ಲ. ಮುಂದೆ ಗೊತ್ತಿಲ್ಲ.
ಶ್ರೀನಿಧಿ ಶೆಟ್ಟಿ ಹೊಟ್ಟೆಗೆ ಏನು ತಿಂತಾರಂತೆ? ಫಿಟ್ನೆಸ್ ಸೀಕ್ರೇಟ್ಸ್ ಏನು?
* ಸರಿ, ಅವರ ಯಾವ ಚಿತ್ರಗಳು ನಿಮಗೆ ತುಂಬಾ ಇಷ್ಟ?
ನಂಜುಂಡಿ ಕಲ್ಯಾಣ, ಜೋಗಿ, ಪೃಥ್ವಿ, ರಾಜಕುಮಾರ ಹಾಗೂ ನಮ್ಮ ತಾತ ಅವರು ನಟಿಸಿದ ಕಸ್ತೂರಿ ನಿವಾಸ, ನಮ್ಮ ತಂದೆ ನಟನೆಯ ಹಬ್ಬ ಹಾಗೂ ಸ್ನೇಹಲೋಕ ಚಿತ್ರಗಳು ನನ್ನ ಅಚ್ಚುಮೆಚ್ಚು.