Exclusive: ಕರಾವಳಿಯ ಮಹಾಬಲ ಪಾತ್ರ ನನಗೆ ಬಲ ತುಂಬಿದೆ: ನಟ ಮಿತ್ರ ಸಂದರ್ಶನ

Published : Aug 16, 2026, 11:34 PM IST
Actor Mithra

ಸಾರಾಂಶ

‘ರಾಗ’ ಮತ್ತು ‘ಪರಸಂಗ’ ಸಿನಿಮಾಗಳಿಂದ. ಯಾಕೆಂದರೆ ‘ರಾಗ’ ಸಿನಿಮಾ ನಂತರ ನನ್ನ ಎಲ್ಲರು ನಿರ್ಮಾಪಕ, ಹೀರೋ ಅಂದುಕೊಂಡರು. ಹೀಗಾಗಿ ನನಗೆ ಪಾತ್ರಗಳು ಬರಲೇ ಇಲ್ಲ ಎಂದು ಸಂದರ್ಶನದಲ್ಲಿ ನಟ ಮಿತ್ರ ಹೇಳಿದರು.

* ಈಗ ಮತ್ತೆ ಬೇಡಿಕೆಯ ನಟರಾಗುತ್ತಿದ್ದೀರಿ?

ಅದಕ್ಕೆ ಕಾರಣ ‘ಕರಾವಳಿ’ ಸಿನಿಮಾ. ಈ ಚಿತ್ರದಲ್ಲಿ ನಾನು ಮಾಡಿದ ಮಹಾಬಲ ಪಾತ್ರ ನನ್ನ ಜೀವನಕ್ಕೆ ಮತ್ತೆ ಬಲ ತುಂಬಿದೆ. ಈ ಚಿತ್ರಕ್ಕೆ ನಾನು ಎರಡು ವರ್ಷ ಮೀಸಲಿಟ್ಟಿದ್ದೆ. ಸಿನಿಮಾ ನೋಡಿದ ಎಲ್ಲರಿಗೂ ಮಹಾಬಲನ ಪಾತ್ರ ಇಷ್ಟವಾಗಿದೆ.

* ಬೇಡಿಕೆಯಲ್ಲಿದ್ದ ನಟ ನೀವು, ಯಾಕೆ ಅವಕಾಶಗಳಿಲ್ಲದೆ ಹೋಗಿದ್ದು?

‘ರಾಗ’ ಮತ್ತು ‘ಪರಸಂಗ’ ಸಿನಿಮಾಗಳಿಂದ. ಯಾಕೆಂದರೆ ‘ರಾಗ’ ಸಿನಿಮಾ ನಂತರ ನನ್ನ ಎಲ್ಲರು ನಿರ್ಮಾಪಕ, ಹೀರೋ ಅಂದುಕೊಂಡರು. ಹೀಗಾಗಿ ನನಗೆ ಪಾತ್ರಗಳು ಬರಲೇ ಇಲ್ಲ. ಎಂಟು ವರ್ಷ ಖಾಲಿ ಕೂರಬೇಕಾಯಿತು.

* ನಿಮ್ಮ ಈ ಅಜ್ಞಾತ ವಾಸವನ್ನು ಮುಕ್ತ ಮಾಡಿದ್ದು ಕರಾವಳಿ ಚಿತ್ರನಾ?

‘ಕರಾವಳಿ’ಗೂ ಮುನ್ನ ಬಂದಿದ್ದು ಸಂತೋಷ್ ಆನಂದ್ ರಾಮ್ ನಿರ್ದೇಶನದ, ಜಗ್ಗೇಶ್‌ ನಟನೆಯ ‘ರಾಘವೇಂದ್ರ ಸ್ಟೋರ್ಸ್‌’ ಸಿನಿಮಾ. ಈ ಚಿತ್ರದಲ್ಲಿ ನಾನು ಮಾಡಿದ ಕೋಕಿಲ ಪಾತ್ರ ತುಂಬಾ ಚೆನ್ನಾಗಿತ್ತು. ಆದರೆ, ಸಿನಿಮಾ ಕಮರ್ಷಿಯಲ್ಲಾಗಿ ವರ್ಕ್‌ ಆಗಲಿಲ್ಲ. ಹೀಗಾಗಿ ನನ್ನ ಪಾತ್ರವೂ ಯಾರಿಗೂ ಗೊತ್ತಾಗಲಿಲ್ಲ.

* ಕರಾವಳಿ ಚಿತ್ರದ ನಂತರ ಬಂದ ಚಿತ್ರಗಳೆಷ್ಟು?

ಈ ಸಿನಿಮಾ ಲುಕ್ಕಿನ ನಂತರ ಲ್ಯಾಂಡ್‌ ಲಾರ್ಡ್‌, ಮಿ.ಜಾಕ್‌, ಲಕ್ಷ್ಮೀಪುತ್ರ, ಕರಳೆ ಹಾಗೂ ಮಹಾನ್‌ ಚಿತ್ರಗಳು. ಈ ಚಿತ್ರಗಳಲ್ಲಿ ಶಿವಯ್ಯ, ಮಂಡೇಲ ಹೀಗೆ ಬೇರೆ ಬೇರೆ ಪಾತ್ರಗಳಲ್ಲಿ ನಟಿಸಿದ್ದೇನೆ.

* ಮುಂದಿನ ಸಿನಿಮಾಗಳು?

ಆಗಲೇ ಹೇಳಿದಂತೆ ‘ಮಿ.ಜಾಕ್‌’, ‘ಲಕ್ಷ್ಮೀಪುತ್ರ’, ‘ಕರಳೆ’ ಚಿತ್ರಗಳ ಶೂಟಿಂಗ್‌ ಮುಗಿಸಿದ್ದೇನೆ. ಬೇರೆ ಹೊಸ ಸಿನಿಮಾಗಳಿಗೆ ಕಾಯುತ್ತಿದ್ದೇನೆ. ಯಾವುದೇ ರೀತಿಯ ಪಾತ್ರಗಳು ಬಂದರೆ ಮಾಡುತ್ತೇನೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Exclusive: ಸುಂದರ್‌ ರಾಜ್‌ 75ಕ್ಕೆ 250: ನೂರಾರು ಪಾತ್ರಗಳಿಗೆ ಜೀವ ನೀಡಿದ ಮಹಾ ಕಲಾವಿದ
ಟ್ರೇಲರ್ ಇಲ್ಲ, ಆದರೆ ಸರ್ಪ್ರೈಸ್‌ಗೆ ಬರವಿಲ್ಲ: ‘ಅಯೋಗ್ಯ 2’ ಬಗ್ಗೆ ಸತೀಶ್ ನೀನಾಸಂ ಮಾತು!