ಕಲರ್ಸ್ ಕನ್ನಡದ ಖ್ಯಾತ ಧಾರಾವಾಹಿ 'ಕನ್ನಡತಿ'ಯ ತಾಪಸಿ ಈ ದೀಪಶ್ರೀ..!

By Suvarna News  |  First Published Mar 20, 2021, 10:50 AM IST

'ಕನ್ನಡತಿ' ಧಾರಾವಾಹಿ ನೋಡುವವರಿಗೆ 'ತಾಪಸಿ' ಎಂದರೆ ಚೆನ್ನಾಗಿಯೇ ಪರಿಚಯ ಇರುತ್ತೆ. ಆದರೆ ಆ ಪಾತ್ರವನ್ನು ನಿಭಾಯಿಸುವ ಕಲಾವಿದೆ ದೀಪಶ್ರೀ ಪಾತ್ರವಾಗಿ ಮತ್ತು ನಟಿಯಾಗಿ ತಮ್ಮ ಬದುಕಿನ ಕೆಲವೊಂದು ಪ್ರಮುಖ ವಿಚಾರಗಳನ್ನು ಇಲ್ಲಿ ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.
 


ಕಿರುತೆರೆಯ ಮೂಲಕ ಕನ್ನಡಿಗರನ್ನೆಲ್ಲ ಒಂದಾಗಿಸುತ್ತಿರುವ ಕೊಡುಗೆ ನೀಡುತ್ತಿರುವುದು ಸದ್ಯದ ಮಟ್ಟಿಗೆ `ಕನ್ನಡತಿ' ಧಾರಾವಾಹಿ ಎಂದೇ ಹೇಳಬೇಕು! ಇದು ಪ್ರೇಕ್ಷಕರಲ್ಲಿ ಕನ್ನಡ ಪ್ರೇಮವನ್ನು ಜಾಗೃತಿಗೊಳಿಸುತ್ತಿರುವುದು ಮಾತ್ರವಲ್ಲ; ಅದರಲ್ಲಿ ಪಾಲ್ಗೊಂಡಿರುವ ಕಲಾವಿದರನ್ನು ಕೂಡ ಕನ್ನಡ ಅಭಿಮಾನದ ಪ್ರತೀಕಗಳಾಗುವಂತೆ ಮಾಡಿವೆ. ಅದಕ್ಕೊಂದು ಉದಾಹರಣೆ ಧಾರಾವಾಹಿಯಲ್ಲಿ ತಾಪಸಿ ಎನ್ನುವ ಪಾತ್ರ ನಿರ್ವಹಿಸುತ್ತಿರುವ ದೀಪ ಶ್ರೀ. ನಿಜ ಹೇಳುವುದಾದರೆ ಅವರು ನಮ್ಮ ರಾಜ್ಯದವರೇ ಆದರೂ ಅವರ ಮಾತೃಭಾಷೆ ತೆಲುಗು. ವಿಶೇಷ ಏನೆಂದರೆ ಇಂದು ಅವರಾಡುವ ಕನ್ನಡ ಸಂಭಾಷಣೆಯ ಶೈಲಿ ಮೆಚ್ಚಿಕೊಂಡೇ ಅಭಿಮಾನಿಗಳಾದವರಿದ್ದಾರೆ. 

ನ್ನ ಹೀರೋಗೆ ಪ್ರಪೋಸ್ ಮಾಡ್ತಾಳಾ ವರೂಧಿನಿ?

Latest Videos

undefined

- ಶಶಿಕರ ಪಾತೂರು

'ಕನ್ನಡತಿ' ತಂಡಕ್ಕೆ ನಿಮ್ಮ ಪ್ರವೇಶವಾಗಿದ್ದು ಹೇಗೆ? 
ಕನ್ನಡತಿ ನನ್ನ ಎರಡನೆಯ ಧಾರಾವಾಹಿ. ಅದಕ್ಕೂ ಮೊದಲು ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಪೌರಾಣಿಕ ಧಾರಾವಾಹಿ `ಜೈ ಹನುಮಾನ್'ನಲ್ಲಿ' 'ದೇವಿ ಸಂಧ್ಯಾ' ಎನ್ನುವ ಪಾತ್ರ ಮಾಡಿದ್ದೆ. ಅದು ಮುಗಿಯುತ್ತಿದ್ದಂತೆ ನನಗೆ ಕನ್ನಡತಿ ತಂಡದಿಂದ ಆಫರ್ ಬಂತು. ಅದಾಗಲೇ ನಾನು ರಂಗಭೂಮಿಗೆ ಬೇಕಾದ ನಟನೆಯಲ್ಲಿ ಪರಿಣತಿ ಪಡೆದಿದ್ದೆ. ಆದರೆ ಇಲ್ಲಿ ಕಿರುತೆರೆಗೆ ಬೇಕಾದ ಹಾಗೆ ಹೇಗೆ ವಾಯ್ಸ್ ಕಂಟ್ರೋಲ್ ಮಾಡಿಕೊಳ್ಳಬೇಕು ಎಂದು ನಿರ್ದೇಶಕರೇ ಹೇಳಿಕೊಟ್ಟರು. ಆರಂಭದಲ್ಲಿ ನನಗೆ ಸಂದೇಹ ಇದ್ದಾಗ ನಾನೇ ಅವರಲ್ಲಿ "ಹೀಗೆ ಮಾಡಿದ್ರೆ ಸರೀನಾ..?" ಎಂದು ಕೇಳಿ ತಿಳಿದುಕೊಳ್ಳುತ್ತಿದ್ದೆ. ನನಗೆ ಸಿಕ್ಕ ಮೊದಲ ಸೋಶಿಯಲ್ ಡ್ರಾಮ ಎಂದರೆ `ಕನ್ನಡತಿ' ಎಂದೇ ಹೇಳಬೇಕು. ಅದರಲ್ಲಿ ಯಶವಂತ್ ಪಾಂಡು ಅವರಂಥ ನಿರ್ದೇಶಕರು ದೊರಕಿರುವುದಕ್ಕೆ ನಿಜಕ್ಕೂ ನಾನು ಅದೃಷ್ಟವಂತೆ ಎಂದೇ ಹೇಳಬಹುದು.

ನಟನೆಯ ಕಡೆಗಿನ ನಿಮ್ಮ ಆಸಕ್ತಿ ಶುರುವಾಗಿದ್ದು ಎಲ್ಲಿಂದ?
ನನ್ನ ಕುಟುಂಬದಿಂದ ಕಲಾರಂಗಕ್ಕೆ ಬಂದವರು ಯಾರೂ ಇಲ್ಲ. ಅದರಲ್ಲಿಯೂ ತಂದೆ ಕಡೆಯ ಸಂಬಂಧಿಕರೆಲ್ಲ ಇಂಜಿನಿಯರ್ಸ್, ಡಾಕ್ಟರ್ಸ್‌ ವೃತ್ತಿಯಲ್ಲಿರುವವರೇ. ನಮ್ಮಪ್ಪ ಕೂಡ ಇರಿಗೇಶನ್ ಡಿಪಾರ್ಟ್ಮೆಂಟ್‌ ನಲ್ಲಿ ಇಂಜಿನಿಯರ್ ವೃತ್ತಿಯಲ್ಲಿದ್ದರು. ಅವರಿಗೆ ವರ್ಗಾವಣೆಯಾಗುತ್ತಿದ್ದ ಹಾಗೆ ನಾನು ಕೂಡ ರಾಜ್ಯದ ವಿವಿಧ ಭಾಗಗಳಲ್ಲಿ ವಿದ್ಯಾಭ್ಯಾಸ ಪಡೆಯಲು ಸಾಧ್ಯವಾಯಿತು. ಅದರಲ್ಲಿಯೂ ಬೆಳಗಾವಿಯಲ್ಲಿದ್ದಾಗ ಸಾಂಸ್ಕೃತಿಕ ವಿಭಾಗದಲ್ಲಿ ಹೆಚ್ಚು ತೊಡಗಿಸಿಕೊಳ್ಳಲು ಅವಕಾಶ ಇತ್ತು. ಅಲ್ಲಿಂದ ಬೆಂಗಳೂರಿಗೆ ಮರಳಿದಾಗ ಬಿ ಎಂ ಎಸ್ ಕಾಲೇಜ್‌ ನ ಫ್ಯಾಷನ್ ಶೋಗಳಲ್ಲಿ ಪಾಲ್ಗೊಂಡೆ. ಕಾಲೇಜ್‌ನಲ್ಲಿ ಎಂಟಿವಿಯವರು ಟೈಮ್ಸ್ ಆಫ್ ಇಂಡಿಯಾ ಫ್ಯಾಷನ್ ಶೋ ನಡೆಸಿದಾಗ ಅದರಲ್ಲಿಯೂ ಭಾಗಿಯಾಗಿದ್ದೆ. ಹಾಗಾಗಿಯೇ ಇಂಜಿನಿಯರಿಂಗ್‌ನಲ್ಲಿ ಡಿಸ್ಟಿಂಕ್ಷನಲ್ಲಿ ಪಾಸಾಗಿ ಖಾಸಗಿ ಸಂಸ್ಥೆಯಲ್ಲಿ ಒಂದು ಒಳ್ಳೆಯ  ಕೆಲಸ ಪಡೆದರೂ ನನಗೆ ಬಣ್ಣದ ಲೋಕದಲ್ಲಿ ಗುರುತಿಸಿಕೊಳ್ಳುವ ಆಕಾಂಕ್ಷೆ ದೂರಾಗಲಿಲ್ಲ. ಅದಕ್ಕೆ ತಕ್ಕಂತೆ ಥಿಯೇಟರ್ ಹಿನ್ನೆಲೆ ಇರದಿದ್ದರೂ ನನಗೆ ಮೊದಲ ಅವಕಾಶವೇ `ರಂಗಶಂಕರ'ದ ಮೂಲಕ ದೊರೆಯಿತು.

ಕನ್ನಡತಿಯ ಜನಮೆಚ್ಚಿದ ಹೀರೋ ಕಿರಣ್ ರಾಜ್

ಕನ್ನಡತಿಯಲ್ಲಿನ ನಿಮ್ಮ ನಟನೆಗೆ ಸಿಗುತ್ತಿರುವ ಪ್ರತಿಕ್ರಿಯೆ ಹೇಗಿದೆ?
ಕನ್ನಡತಿ ಎಂದಾಗ ಭುವಿ, ವರುಧಿನಿ, ಅಮ್ಮಮ್ಮ ಮೊದಲಾದ ಮಹಿಳಾ ಪಾತ್ರಗಳೇ ಹೆಚ್ಚು ಜನಪ್ರಿಯವಾದವು ಎನ್ನುವುದು ನನಗೂ ಗೊತ್ತು. ನನ್ನನ್ನು ಹೆಚ್ಚೆಂದರೆ ಸಂಚಿಕೆಯಲ್ಲಿ ಒಂದೆರಡು ದೃಶ್ಯಗಳಲ್ಲಷ್ಟೇ ಕಾಣಲು ಸಾಧ್ಯ.  ನೆಗೆಟಿವ್ ಪಟ್ಟಿಯಲ್ಲಿ ಸಾನಿಯಾ ಪಾತ್ರವೂ ಇದೆ. ಹೀಗಿರುವಾಗ ತಾಪಸಿಯನ್ನು ನೆಗೆಟಿವ್ ಎಂದು ಹೇಳುವ ಹಾಗೆಯೂ ಇಲ್ಲ. ಇಂಥ ಸಂದರ್ಭದಲ್ಲಿ `ನನ್ನ ಪಾತ್ರ ಪೂರ್ತಿಯಾಗಿ ಹೇಗೆ' ಎನ್ನುವುದು ಅರ್ಥವಾಗದೇ ಇದ್ದರೂ ಪ್ರೇಕ್ಷಕರು ಇಷ್ಟಪಟ್ಟು ಮೆಸೇಜ್ ಮಾಡುತ್ತಾರಲ್ಲ? ಅದನ್ನು ನೋಡಿ ಖುಷಿಯಾಗಿದೆ. ಆರಂಭದಿಂದಲೂ ತಾಪಸಿ ಬಗ್ಗೆ ಮೆಚ್ಚಿ ಮಾತನಾಡಿದ ಅಭಿಮಾನಿಗಳಿದ್ದಾರೆ. "ನೀವು ಕನ್ನಡ ಮಾತನಾಡುವ ಶೈಲಿ ಚೆನ್ನಾಗಿದೆ" ಅಂತಾರೆ. ನನ್ನ ಮಾತೃಭಾಷೆ ತೆಲುಗು. ಬಹುಶಃ ಅದೇ ನನ್ನ ಮಾತಿನ ರೀತಿ ವಿಭಿನ್ನವಾಗಿರುವುದಕ್ಕೆ ಪ್ರಧಾನ ಕಾರಣ ಇರಬಹುದು. ಇನ್ನು ಧ್ವನಿಯ ವಿಚಾರಕ್ಕೆ ಬಂದರೆ ಸ್ವಲ್ಪ ನೇಸಲ್ ವಾಯ್ಸ್ ನನ್ನದು. ಆದರೆ ಇಲ್ಲಿ ನಿರ್ದೇಶಕರ ಸಲಹೆಯಂತೆ  ಸ್ವಲ್ಪ ಬೇಸ್ ವಾಯ್ಸ್ ಇರಿಸಿಕೊಂಡು ಮಾತನಾಡುತ್ತೇನೆ. ನನ್ನ, ದೇವ್ ಕಾಂಬಿನೇಶನ್ ಬಗ್ಗೆಯೂ ಜನ ಮೆಚ್ಚಿ ಮಾತನಾಡಿದ್ದಾರೆ. 

ಓಬಿರಾಯನ ಕಾಲದ್ದು ಅಂತೀವಲ್ಲ, ಅದರರ್ಥ ಇಲ್ಲಿದೆ ನೋಡಿ

click me!