ರೈತ ಪ್ರತಿ​ಭ​ಟನೆ ಆಂತ​ರಿಕ ವಿಚಾ​ರ: ಚರ್ಚೆಗೂ ಮುನ್ನ ಬ್ರಿಟನ್‌ ಸರ್ಕಾ​ರ ಸೈಲೆಂಟ್!

By Suvarna News  |  First Published Mar 6, 2021, 4:12 PM IST

ಕೃಷಿ ಕಾಯ್ದೆ​ ವಿರೋಧಿಸಿ ರೈತ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆ|  ಪ್ರತಿಭಟನೆ ಕುರಿತು ಬ್ರಿಟನ್‌ ಸಂಸತ್‌ನಲ್ಲಿ ಸೋಮವಾರ ಚರ್ಚೆ| ಚರ್ಚೆಗೂ ಮುನ್ನ ಬ್ರಿಟನ್‌ ಸರ್ಕಾ​ರ ಸೈಲೆಂಟ್!


ನವ​ದೆ​ಹ​ಲಿ(ಮಾ.06): ಕೃಷಿ ಕಾಯ್ದೆ​ ವಿರೋಧಿಸಿ ರೈತ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆ ಕುರಿತು ಬ್ರಿಟನ್‌ ಸಂಸತ್‌ನಲ್ಲಿ ಸೋಮವಾರ ಚರ್ಚೆ ನಿಗದಿಯಾಗಿರುವ ಬೆನ್ನಲ್ಲೇ, ಈ ವಿಷಯ ರಾಜತಾಂತ್ರಿಕ ಬಿಕ್ಕಟ್ಟಿಗೆ ಕಾರಣವಾಗದಂತೆ ನೋಡಿಕೊಳ್ಳಲು ಬ್ರಿಟನ್‌ ಸರ್ಕಾರ ಮುಂದಾಗಿದೆ.

ಈ ಕುರಿತು ಹೇಳಿಕೆಯೊಂದನ್ನು ನೀಡಿರುವ ಬ್ರಿಟನ ಸರ್ಕಾರ, ‘ಭಾರ​ತ​ದಲ್ಲಿನ ರೈತರ ಪ್ರತಿ​ಭ​ಟ​ನೆ ಆ ದೇಶದ ಆಂತ​ರಿಕ ವಿಚಾ​ರ​. ಅದನ್ನು ಅವರೇ ಸರ​ಪ​ಡಿ​ಸಿ​ಕೊ​ಳ್ಳು​ತ್ತಾರೆ’ ಎಂದು ಹೇಳಿದೆ. ಆದಾಗ್ಯೂ, ಬ್ರಿಟ​ನ್‌​ನಲ್ಲೂ ಭಾರ​ತೀಯ ಸಂಜಾ​ತರು ಇರುವ ಕಾರಣ ಭಾರ​ತದ ರೈತರ ಪ್ರತಿ​ಭ​ಟ​ನೆಯು ಬ್ರಿಟ​ನ್‌​ನಲ್ಲೂ ಪ್ರತಿ​ಧ್ವ​ನಿ​ಸು​ತ್ತಿದೆ.

Latest Videos

ಈ ಹಿನ್ನೆ​ಲೆ​ಯಲ್ಲಿ ಈ ಬಗ್ಗೆ ಚರ್ಚೆ ಕೈಗೆ​ತ್ತಿ​ಕೊ​ಳ್ಳ​ಲಾ​ಗು​ತ್ತದೆ ಎಂದು ಬ್ರಿಟನ್‌ ಸರ್ಕಾರ ತಿಳಿ​ಸಿದೆ. ಭಾರ​ತ​ದಲ್ಲಿ ಪತ್ರಿಕಾ ಸ್ವಾತಂತ್ರ್ಯ ಮತ್ತು ಪ್ರತಿ​ಭ​ಟ​ನಾ​ಕಾ​ರರ ಸುರ​ಕ್ಷತೆ ಕುರಿ​ತಾಗಿ ಚರ್ಚೆ ನಡೆ​ಸ​ಬೇಕೆಂಬ ಇ-ಅರ್ಜಿ​ಗಳು 1 ಲಕ್ಷ ಪೂರೈ​ಸಿದ್ದು, ಈ ಬಗ್ಗೆ ಸೋಮ​ವಾರ ಚರ್ಚೆ ನಡೆ​ಯ​ಲಿದೆ

click me!