Old Monk ಚಿತ್ರವನ್ನು ಥಿಯೇಟರ್‌ನಲ್ಲೇ ಗೆಲ್ಲಿಸಿ: ಶ್ರೀನಿ

By Kannadaprabha News  |  First Published Feb 25, 2022, 3:50 AM IST

ಶ್ರೀನಿ ನಿರ್ದೇಶಿಸಿ ನಟಿಸಿರುವ ‘ಓಲ್ಡ್‌ಮಾಂಕ್‌’ ಸಿನಿಮಾ ಇಂದು ತೆರೆ ಕಾಣುತ್ತಿದೆ. ಅದಿತಿ ಪ್ರಭುದೇವ ಚಿತ್ರದ ನಾಯಕಿ. ಸಿನಿಮಾ ಬಿಡುಗಡೆಯ ಆತಂಕ, ಸಂಭ್ರಮವನ್ನು ಶ್ರೀನಿ ಇಲ್ಲಿ ಹಂಚಿಕೊಂಡಿದ್ದಾರೆ.


ಪ್ರಿಯಾ ಕೆರ್ವಾಶೆ

ಶ್ರೀನಿ (Srini) ನಿರ್ದೇಶಿಸಿ ನಟಿಸಿರುವ ‘ಓಲ್ಡ್‌ಮಾಂಕ್‌’ (Old Monk) ಸಿನಿಮಾ ಇಂದು ತೆರೆ ಕಾಣುತ್ತಿದೆ. ಅದಿತಿ ಪ್ರಭುದೇವ (Aditi Prabhudeva) ಚಿತ್ರದ ನಾಯಕಿ. ಸಿನಿಮಾ ಬಿಡುಗಡೆಯ ಆತಂಕ, ಸಂಭ್ರಮವನ್ನು ಶ್ರೀನಿ ಇಲ್ಲಿ ಹಂಚಿಕೊಂಡಿದ್ದಾರೆ.

Latest Videos

undefined

* ಓಲ್ಡ್‌ಮಾಂಕ್‌ ಬಿಡುಗಡೆಯ ದಿನ ಹಂಚಿಕೊಳ್ಳಲೇಬೇಕು ಅನಿಸಿರುವ ಸಂಗತಿಗಳು?
ಚಿತ್ರದ್ದು ಫೆಂಟಾಸ್ಟಿಕ್‌ ಜರ್ನಿ. ನನಗಿಲ್ಲಿ ಹಂಚಿಕೊಳ್ಳಬೇಕು ಅನಿಸುವ ಸಂಗತಿ ಅಪ್ಪು ಅವರದು. ಅವರಿಂದಲೇ ಈ ಚಿತ್ರದ ಟ್ರೈಲರ್‌ ಲಾಂಚ್‌ ಆಯ್ತು. ಅದಕ್ಕೂ ಮೊದಲು ಈ ಚಿತ್ರದ ತುಣುಕುಗಳನ್ನು ನೋಡಿ ಸಿನಿಮಾ ಟ್ರೈಲರ್‌ ನಾನೇ ಲಾಂಚ್‌ ಮಾಡ್ಬೇಕು ಅಂದಿದ್ದರು. ಅವರ ಆಫೀಸ್‌ನಲ್ಲೇ ಸಿನಿಮಾ ಎಡಿಟಿಂಗ್‌ ನಡೆಯುತ್ತಿದ್ದ ಕಾರಣ ವಾರಕ್ಕೆರಡು ಬಾರಿ ಸಿಗುತ್ತಿದ್ದರು. ಆಮೇಲೆ ಅವರ ಹಳೇ ಆಫೀಸೇ ನಮ್‌ ಆಫೀಸ್‌ ಆಯ್ತು. ಇನ್ನೊಂದು ಖುಷಿ ಅಂದರೆ ಈ ಸಿನಿಮಾ ಹೀರೋ ಪಾತ್ರದ ಹೆಸರು ಅಪ್ಪಣ್ಣ. ಆತನನ್ನು ಅಪ್ಪು ಅಂತಲೇ ಕರೆಯೋದು. ಅದನ್ನು ಅವರ ಬಳಿ ಹೇಳಿದಾಗ ಎಂದಿನ ಆಪ್ತ ನಗೆಯಲ್ಲಿ ‘ಹೌದಾ..’ ಅಂದಿದ್ರು. ಕಲಾತಪಸ್ವಿ ರಾಜೇಶ್‌ ಅವರಿಗೆ ಆ್ಯಕ್ಷನ್‌ ಕಟ್‌ ಹೇಳಿದ್ದು ಮತ್ತೊಂದು ಸ್ಮರಣೀಯ ಅನುಭವ. ಅವರ ಸಿನಿಮಾ ಡೈಲಾಗನ್ನೇ ಅವರಿಗೆ ಹೇಳಿ ರೇಗಿಸ್ತಿದ್ದೆ. ಬಹಳ ಆಪ್ತವಾಗಿದ್ದರು. ಮನಃಪೂರ್ವಕವಾಗಿ ಆಶೀರ್ವಾದ ಮಾಡಿದ ಅವರದ್ದು ದೊಡ್ಡ ಮನಸ್ಸು.

* ಚಿತ್ರವನ್ನು ಗೆಲ್ಲಿಸುವ ಅಂಶಗಳು?
ಭರಪೂರ ಮನರಂಜನೆ. ಎಲ್ಲವನ್ನೂ ಮರೆತು ಪ್ರೇಕ್ಷಕ ಸಿನಿಮಾ ನೋಡ್ತಾನೆ. ಅದರಲ್ಲೇ ಮುಳುಗಿಹೋಗ್ತಾನೆ. ಆ ಲೆವೆಲ್‌ನಲ್ಲಿ ಸಿನಿಮಾ ಕನೆಕ್ಟ್ ಆಗುತ್ತೆ. ಮಜಾ ಕೊಡುತ್ತೆ. ನನ್ನ ಸಿನಿಮಾ ಅಂತಲ್ಲ, ಯಾವುದೇ ಸಿನಿಮಾವನ್ನೂ ಗೆಲ್ಲಿಸೋದು ಈ ಅಂಶವೇ.

Old Monk ಅಂದ್ರೆ ನಮಗಿಷ್ಟ: ಫೆ.25ರಂದು ಶ್ರೀನಿ-ಅದಿತಿ ಸಿನಿಮಾ ತೆರೆಗೆ

* ಈ ಸಿನಿಮಾ ಯಾವ ವರ್ಗಕ್ಕಾಗಿ?
ನಮ್ಮ ಅಪ್ಪ ಅಮ್ಮ ಅಥವಾ ಅವರ ಜನರೇಶನ್‌ನವರು ಅಣ್ಣಾವ್ರ, ವಿಷ್ಣು ಅವರ ಅಭಿಮಾನಿಗಳಾಗಿದ್ದವರು. ಅವರು ಈಗ ಥಿಯೇಟರ್‌ಗೆ ಬಂದು ವರ್ಷಕ್ಕೊಂದು ಸಿನಿಮಾ ನೋಡಿದರೆ ದೊಡ್ಡದು. ಅಂಥವರನ್ನೂ ಥಿಯೇಟರ್‌ಗೆ ಕರೆತರುವ ಚಿತ್ರ ಓಲ್ಡ್‌ಮಾಂಕ್‌. ಜೊತೆಗೆ ಯುವಕರಿಗೂ ಕತೆ ಕನೆಕ್ಟ್ ಆಗುತ್ತೆ. ಮಕ್ಕಳೂ ಚಿತ್ರ ನೋಡಿ ಮಜಾ ಪಡ್ತಾರೆ. ಎಲ್ಲರಿಗೂ ಕಂಟೆಂಟ್‌ ಇಷ್ಟವಾಗುವ ಭರವಸೆ ಇದೆ.

* ಚಿತ್ರದ ಸೋಲು, ಗೆಲುವಿನ ಭಯ ಇಲ್ವಾ?
ಕಂಟೆಂಟ್‌ ಬಗ್ಗೆ ಖಂಡಿತಾ ಭಯ ಇಲ್ಲ. ಆದರೆ ಹೆಚ್ಚೆಚ್ಚು ಚಿತ್ರಗಳು ರಿಲೀಸ್‌ ಆಗುತ್ತಿರುವ ಕಾರಣ ಥಿಯೇಟರ್‌ ಸಮಸ್ಯೆ ಇತ್ಯಾದಿಗಳ ಬಗ್ಗೆ ಆತಂಕ ಇದೆ. ನನ್ನ ‘ಶ್ರೀನಿವಾಸ ಕಲ್ಯಾಣ’ ಚಿತ್ರ ಟಿವಿಯಲ್ಲಿ ಭರ್ಜರಿ ಟಿಆರ್‌ಪಿ ಪಡೆಯಿತು. ‘ಬೀರಬಲ್‌’ ಓಟಿಟಿಯಲ್ಲಿ ಸಖತ್ತಾಗಿ ಓಡಿತು. ಆದರೆ ‘ಓಲ್ಡ್‌ಮಾಂಕ್‌’ ಬಹಳ ವಿಭಿನ್ನವಾದ ಚಿತ್ರ. ಇದನ್ನು ಥಿಯೇಟರ್‌ನಲ್ಲೇ ಗೆಲ್ಲಿಸಿ ಅಂತ ಅಂತ ನನ್ನ ಕೋರಿಕೆ.

* ಚಿತ್ರದಲ್ಲಿ ನಿಮ್ಮ ವೆರೈಟಿ ಲುಕ್‌ ಇದೆಯಂತೆ?
ನಾರದನ ಪಾತ್ರ ಅದಲ್ಲೊಂದು ಅಂತ ಮಾತ್ರ ಹೇಳಬಲ್ಲೆ.

ನಿರ್ದೇಶಕ S Narayanಗೆ ಅವಮಾನ, ವಿಡಿಯೋದಲ್ಲಿ ದುಃಖ ತೋಡಿಕೊಂಡ ನಟ!

* ಸಿನಿಮಾ ಬಗ್ಗೆ ಈವರೆಗೆ ಹೇಳದ ಒಂದು ವಿವರ?
ಈ ಚಿತ್ರವನ್ನು ಕಾಮಿಡಿ ಅಂತಷ್ಟೇ ಈವರೆಗೆ ತೋರಿಸಿಕೊಂಡು ಬಂದಿದ್ವಿ. ಆದರೆ ಕಾಮಿಡಿ ಅನ್ನೋದು ಚಿತ್ರದಲ್ಲಿ ಊಟದಲ್ಲಿ ಉಪ್ಪಿನಕಾಯಿ ಇರೋ ಥರ ಬರುತ್ತೆ. ಇಡೀ ಚಿತ್ರ ಕಮರ್ಷಿಯಲ್‌ ಎಂಟರ್‌ಟೇನರ್‌. ಇಲ್ಲಿ ಎಮೋಶನ್‌, ಲವ್‌, ಸೆಂಟಿಮೆಂಟ್‌ ಎಲ್ಲವೂ ಇವೆ. ಎಲ್ಲ ಭಾವಗಳ ಸಮಪಾಕ ನಮ್ಮ ‘ಓಲ್ಡ್‌ಮಾಂಕ್‌’.

click me!