ನಟಿ ಹಿತಾ ಚಂದ್ರಶೇಖರ್ ಈಗ ಮುಂಬೈ ಬೆಡಗಿ. ಕಿರಣ್ ಶ್ರೀನಿವಾಸ್ ಅವರ ಕೈ ಹಿಡಿದ ಮೇಲೆ ಸ್ಯಾಂಡಲ್‌ವುಡ್ ಟು ಬಾಲಿವುಡ್ ನಡುವೆ ಪ್ರಯಾಣಿಸುತ್ತಿರುವ ಹಿತಾ, ಸದ್ಯ ಮುಂಬೈನಲ್ಲಿ ವಾಸ್ತವ್ಯ ಹೂಡಿದ್ದಾರೆ. ವಾಣಿಜ್ಯ ನಗರಿ, ಹಿಂದಿ ಚಿತ್ರರಂಗದ ಹೆಬ್ಬಾಗಿಲಿನ ಊರಲ್ಲಿ ಏನು ಮಾಡುತ್ತಿದ್ದಾರೆ ಎಂಬುದರ ಕುರಿತ ಮಾತುಕತೆ.
ಆರ್ ಕೇಶವಮೂರ್ತಿ
ನಟಿ ಹಿತಾ ಚಂದ್ರಶೇಖರ್ ಈಗ ಮುಂಬೈ ಬೆಡಗಿ. ಕಿರಣ್ ಶ್ರೀನಿವಾಸ್ ಅವರ ಕೈ ಹಿಡಿದ ಮೇಲೆ ಸ್ಯಾಂಡಲ್‌ವುಡ್ ಟು ಬಾಲಿವುಡ್ ನಡುವೆ ಪ್ರಯಾಣಿಸುತ್ತಿರುವ ಹಿತಾ, ಸದ್ಯ ಮುಂಬೈನಲ್ಲಿ ವಾಸ್ತವ್ಯ ಹೂಡಿದ್ದಾರೆ. ವಾಣಿಜ್ಯ ನಗರಿ, ಹಿಂದಿ ಚಿತ್ರರಂಗದ ಹೆಬ್ಬಾಗಿಲಿನ ಊರಲ್ಲಿ ಏನು ಮಾಡುತ್ತಿದ್ದಾರೆ ಎಂಬುದರ ಕುರಿತ ಮಾತುಕತೆ.
undefined
ಸ್ಯಾಂಡಲ್‌ವುಡ್ ಅಂಗಳಕ್ಕೆ ತುಂಬಾ ಅಪರೂಪ ಆಗಿದ್ದೀರಲ್ಲ?
ಈಗ ನಾನು ಬಾಂಬೆಯಲ್ಲಿದ್ದೇನೆ. ಹಾಗಂತ ಕನ್ನಡದಿಂದ ದೂರ ಆಗಿಲ್ಲ. ಆದರೆ, ಈಗಿನ ಪರಿಸ್ಥಿತಿ ಗೊತ್ತಿದೆಯಲ್ಲ. ಹೀಗಾಗಿ ಯಾವುದೇ ಹೊಸ ಪ್ರಾಜೆಕ್‌ಟ್ಗಳು ಚಾಲ್ತಿಗೆ ಬರುತ್ತಿಲ್ಲ.
ಬಾತ್‌ರೂಮ್‌ನಲ್ಲಿ ಹುಡುಗಿ ಫೋಟೋ; ಕಿರಣ್ ಮೊದಲ ಬಾರಿ ಹಿತಾ ನೋಡಿದ ಕ್ಷಣ!
ಬಾಂಬೆಯಲ್ಲಿ ಸೆಟಲ್ ಆಗಿದ್ದೀರಾ? ಹಿಂದಿ ಚಿತ್ರರಂಗದಲ್ಲಿ ತೊಡಗಿಸಿಕೊಳ್ಳುತ್ತಿದ್ದೀರಾ?
ಹೆಚ್ಚಿನ ಸಮಯ ಇಲ್ಲೇ ಇರುತ್ತೇನೆ. ಇಲ್ಲಿ ನಾನು ಓಟಿಟಿಗಳಿಗೆ ತಯಾರಾಗುವ ವೆಬ್ ಸರಣಿ ಹಾಗೂ ಸಿನಿಮಾಗಳಿಗೆ ಆಡಿಷನ್ ಕೊಡುತ್ತಿದ್ದೇನೆ. ಜತೆಗೆ ಜಾಹೀರಾತುಗಳಲ್ಲಿ ನಟಿಸುವ ಮೂಲಕ ಇಲ್ಲಿನ ಚಿತ್ರರಂಗದಲ್ಲಿ ಆ್ಯಕ್ಟಿವ್ ಆಗಿ ತೊಡಗಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇನೆ.
ಆಡಿಷನ್, ಬಾಂಬೆ ಲೈಫು ಹೇಗಿದೆ?
ಇಲ್ಲಿ ಸಿನಿಮಾ, ಧಾರಾವಾಹಿ, ವೆಬ್ ಸರಣಿಗೆ ಯಾರನ್ನಾದರೂ ತೆಗೆದುಕೊಳ್ಳಬೇಕು ಅಂದರೂ ಆಡಿಷನ್ ಮಾಡೇ ಮಾಡುತ್ತಾರೆ. ಅದರಲ್ಲೂ ಹೊಸ ಕಲಾವಿದರಿಗಂತೂ ಇದು ಕಡ್ಡಾಯ. ದೊಡ್ಡ ದೊಡ್ಡ ಕಲಾವಿದರೇ ಆಡಿಷನ್ ಕೊಡುತ್ತಾರೆ. ಪ್ರತಿಭೆ ಇದ್ದವರಿಗೆ ಬಾಂಬೆ ಒಳ್ಳೆಯ ವೇದಿಕೆ. ಇನ್ನೂ ಬಾಂಬೆ ಸುತ್ತಾಡುವುದಕ್ಕೆ ಆಗುತ್ತಿಲ್ಲ. ಮೇ 9ಕ್ಕೆ ಇಲ್ಲಿಗೆ ಬಂದೆ. ಅಂದಿನಿಂದಲೂ ಇಲ್ಲಿಯವರೆಗೂ ನಾನು ಮನೆ ಬಿಟ್ಟು ಆಚೆಯೇ ಹೋಗಿಲ್ಲ.
ಇಲ್ಲಿಯವರೆಗಿನ ನಿಮ್ಮ ಪ್ರಯತ್ನಗಳ ಫಲಿತಾಂಶ ಏನು?
ಮನೋಜ್ ಬಾಜ್‌ಪೇಯಿ ಜತೆ ನಟಿಸಿದ್ದ ‘ಸೈಲೆನ್‌ಸ್.. ಕ್ಯಾನ್ ಯೂ ಹಿಯರ್ ಇಟ್’’ ಚಿತ್ರ ಬಿಡುಗಡೆ ಆಗಿದೆ. ಒಂದು ಓಟಿಟಿ ಹಾಗೂ ವೆಬ್ ಸರಣಿ ಪ್ರಾಜೆಕ್‌ಟ್ಗೆ ಮಾತುಕತೆ ಆಗುತ್ತಿದೆ. ತುಂಬಾ ಜಾಹೀರಾತುಗಳಲ್ಲಿ ನಟಿಸುತ್ತಿದ್ದೇನೆ. ನಾನು ಈಗ ಇಲ್ಲಿ ಏನೂ ಅಲ್ಲ. ಜೀರೋದಿಂದ ಜೀವನ ಶುರು ಮಾಡಬೇಕು. ಹೊಸ ಜರ್ನಿ ಶುರು ಮಾಡಿದ್ದೇನೆ. ಒಂಥರಾ ಇದು ಬೇಬಿ ಸ್ಟೆಪ್‌ಸ್. ಮುಂದೆ ಒಳ್ಳೆಯ ಸಿನಿಮಾಗಳು ಸಿಗಬಹುದು ಎನ್ನುವ ಭರವಸೆಯಂತೂ ಇದೆ.
ಕನ್ನಡದಲ್ಲಿ ಯಾವ ಚಿತ್ರವನ್ನೂ ಒಪ್ಪಿಕೊಂಡಿಲ್ಲವೇ?
ಹೊಸ ಚಿತ್ರಗಳನ್ನು ಒಪ್ಪಿಲ್ಲ, ಆದರೆ, ಕನ್ನಡದಲ್ಲಿ ನಾನು ನಟಿಸಿರುವ ‘ಶುಭಮಂಗಳ’’ ಹಾಗೂ ‘ತುರ್ತು ನಿರ್ಗಮನ’’ ಚಿತ್ರಗಳು ಬಿಡುಗಡೆಗೆ ಸಜ್ಜಾಗಿವೆ.
ಲಾಕ್‌ಡೌನ್‌ನಲ್ಲಿ ಸಿಹಿ-ಕಹಿ ಚಂದ್ರು ಪುತ್ರಿ ಹಿತಾ ಇಷ್ಟೊಂದು ಸಣ್ಣ ಆಗೋದ್ರಾ?
ಮದುವೆ ನಂತರದ ಜೀವನ ಹೇಗಿದೆ?
ತುಂಬಾ ಚೆನ್ನಾಗಿದೆ. ಇಬ್ಬರದ್ದು ಒಂದೇ ಕ್ಷೇತ್ರ. ಅಪ್ಪ- ಅಮ್ಮ ಕೂಡ ಕಿರುತೆರೆ, ಚಿತ್ರರಂಗದಲ್ಲಿ ಇದ್ದವರು. ಈಗ ನಾನು ಕೈ ಹಿಡಿದಿರುವ ಕಿರಣ್ ಶ್ರೀನಿವಾಸ್ ಕೂಡ ಚಿತ್ರರಂಗದಲ್ಲಿ ಇದ್ದಾರೆ. ಕಿರಣ್ ಅವರಿಂದ ತುಂಬಾ ವಿಷಯಗಳನ್ನು ತಿಳಿದುಕೊಳ್ಳುತ್ತಿದ್ದೇನೆ. ಅವರು ನಟರಾಗಿ ಎಷ್ಟು ಇಷ್ಟವೋ ಅವರ ವಿಚಾರಗಳು ನನಗೆ ಅಷ್ಟೇ ಇಷ್ಟ. ತುಂಬಾ ಓದುತ್ತಾರೆ. ಅವರ ಪ್ರತಿ ವಿಚಾರ ಮಾನವೀಯತೆಯ ನೆಲೆಯಲ್ಲಿರುತ್ತದೆ. ಏನೇ ಹೇಳಿದರೂ ನನ್ನ ಅಭಿಪ್ರಾಯ ಮಾತ್ರ. ಒಪ್ಪುವುದು ಬಿಡುವ ಸ್ವಾತಂತ್ರ್ಯ ನಿಮಗೇ ಇದೆ ಎನ್ನುವ ವ್ಯಕ್ತಿತ್ವ ಅವರದ್ದು. ನಟನೆ ಜತೆಗೆ ಸಾಮಾಜಿಕ ವಿಚಾರಗಳಿಗೆ ತೆರೆದುಕೊಳ್ಳುತ್ತಿದ್ದೇನೆ ಎಂದರೆ ಅದಕ್ಕೆ ಕಾರಣ ಕಿರಣ್. ನಮ್ಮದು ಬ್ಯೂಟಿಫುಲ್ ಲೈಫು.