ಪ್ರಿಯಾಂಕಾ ತಿಮ್ಮೇಶ್ ಭೀಮಸೇನ ನಳಮಹಾರಾಜ, ಅರ್ಜುನ್ ಗೌಡ ಇತ್ಯಾದಿ ಚಿತ್ರಗಳ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಮಿಂಚುತ್ತಿರುವ ನಟಿ. ಮೊನ್ನೆ ಮೊನ್ನೆ ಬಿಗ್‌ಬಾಸ್‌ಗೂ ಹೋಗಿ ಬಂದರು. ಅವರು ತಮ್ಮ ಕಷ್ಟ ಸುಖಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ.
ನಿತ್ತಿಲೆ
- ಬಿಗ್‌ಬಾಸ್ ಮನೆಯಲ್ಲಿದ್ದಾಗ ಡಯಟ್ ಮಾಡೋದು ಕಷ್ಟ ಇತ್ತು. ಅಲ್ಲಿ ಹೆಚ್ಚಾಗಿ ಸಿಗುತ್ತಿದ್ದದ್ದೇ ಅನ್ನದ ಐಟಂಗಳು. ಚೆನ್ನಾಗಿ ತಿನ್ನದಿದ್ರೆ ಟಾಸ್‌ಕ್ಗೆ ಬೇಕಾದ ಚೈತನ್ಯ ಸಿಕ್ಕುತ್ತಿರಲಿಲ್ಲ. ಜೊತೆಗೆ ಆಮೇಲೆ ಹಸಿವಾಗಿ ಒಂದು ತುತ್ತು ಕೇಳಿದ್ರೂ ದೊಡ್ಡ ಜಗಳ ಆಗೋದು. ಅದಕ್ಕೇ ಅಲ್ಲಿ ಡಯಟ್ ಮಾಡಿಲ್ಲ.
undefined
- ದೊಡ್ಡ ಮನೆಯಿಂದ ಬಂದ ಮೇಲೆ 3 ಕೆಜಿ ತೂಕ ಇಳಿಸಿಕೊಂಡಿದ್ದೀನಿ. ಅನ್ನ ತಿನ್ನಲ್ಲ. ತರಕಾರಿ, ಮೊಟ್ಟೆ, ಕೊಬ್ಬಿನಂಶ ಕಡಿಮೆ ಇರುವ ಆಹಾರ ತಿನ್ನುತ್ತೀನಿ. ಜೊತೆಗೆ ಲಿಕ್ವಿಡ್ ಡಯೆಟ್ ಮಾಡ್ತೀನಿ. ಚೀಟ್ ಅಂತೂ ಮಾಡೋದೇ ಇಲ್ಲ. ಫ್ರೆಂಡ್‌ಸ್ ಮನೆಗೆ ಹೋದಾಗ ಮಾತ್ರ ಮಧ್ಯಾಹ್ನದ ಹೊತ್ತು ಊಟ ಮಾಡ್ತೀನಿ.
ವೈಲ್ಡ್ ಕಾರ್ಡ್ ಸ್ಪರ್ಧಿ ಆದ್ರೆ ಏನು ಪ್ರಾಬ್ಲಂ ಅಂತ ಪ್ರಿಯಾಂಕಾ ತಿಮ್ಮೇಶ್ ಹೇಳಿದ್ದಾರೆ
- ವರ್ಕೌಟ್ ವಿಚಾರಕ್ಕೆ ಬಂದರೆ ನಾನು ಮೊದಲಿಂದಲೂ ಮನೆಯಲ್ಲೇ ವರ್ಕೌಟ್ ಮಾಡೋದು. ಜಿಮ್‌ಗೆ ಹೋಗಲ್ಲ. ದಿನಾ ಜಿಮ್ ಮಾಡ್ತಿದ್ದು, ಮಧ್ಯೆ ಕೆಲವು ದಿನ ಬಿಟ್ರೆ ಮತ್ತೆ ದಪ್ಪ ಆಗಿಬಿಡ್ತೀವಿ. ಅದನ್ನು ಕರಗಿಸೋದು ಕಷ್ಟ. ಮನೆಯಲ್ಲಿ ಡಂಬಲ್‌ಸ್ ಇದೆ. ವರ್ಕೌಟ್‌ಗೆ ಬೇಕಾದ ಮೆಟೀರಿಯಲ್‌ಗಳಿವೆ. ಜೊತೆಗೆ ದಿನಾ ಯೋಗ ಮಾಡ್ತೀನಿ.
- ಕಳೆದ ವರ್ಷ ಡಯೆಟ್, ವರ್ಕೌಟ್ ಮಾಡಿಯೇ 15 ಕೆಜಿ ತೂಕ ಇಳಿಸಿಕೊಂಡಿದ್ದೆ. ಆ ನಟಿಸಿದ್ದ ಚಿತ್ರಗಳಲ್ಲಿ ದಪ್ಪಗಿದ್ದ ನನ್ನ ಫೋಟೋ ಈಗ ನೋಡಿದ್ರೆ ಒಂಥರಾ ಅನಿಸುತ್ತೆ.
- ಡಯೆಟ್‌ನಲ್ಲಿ ಯಾವತ್ತೂ ಚೀಟ್ ಮಾಡಲ್ಲ. ಫ್ರೆಂಡ್‌ಸ್ ಮನೆಗೆ ಹೋದ್ರೆ ಮಧ್ಯಾಹ್ನದ ಊಟ ಚೀಟ್ ಮಾಡ್ತೀನಿ ಅಷ್ಟೇ.
- ಚಂದ್ರಚೂಡ ಸರ್ ಜೊತೆಗೆ ಬಿಗ್‌ಬಾಸ್ ಮನೆಯಲ್ಲಿ ಫೈಟಿಂಗ್ ಆಗ್ತನೇ ಇತ್ತು. ಆದರೆ ಹೊರಬಂದಮೇಲೆ ಅವರೇ ನನಗೆ ಫೋನ್ ಮಾಡಿ ವ್ಯಾಕ್ಸಿನ್ ಕೊಡಿಸಿದ್ರು. ಈ ನಮ್ಮ ಭೇಟಿ ಚೆನ್ನಾಗಿಯೇ ಇತ್ತು. ಕೋಪ, ಶೀತಲ ಸಮರ ಇತ್ಯಾದಿ ಇರಲಿಲ್ಲ.
- ನಾನೇ ಎಲ್ಲ ಸ್ಪರ್ಧಿಗಳಿಗೂ ಮೆಸೇಜ್ ಮಾಡಿ ನನ್ನ ಫೋನ್ ನಂಬರ್ ಕಳಿಸಿದ್ದೆ. ಆದರೆ ಯಾರೊಬ್ರೂ ರಿಪ್ಲೈ ಮಾಡಲಿಲ್ಲ.
ಬಿಗ್‌ಬಾಸ್ ಮನೆಯಿಂದ ಹೊರಬಂದ ಮೇಲೆ ಶಾಕ್ ಆಯ್ತು!
ಬಿಗ್‌ಬಾಸ್ ಮನೆಯಲ್ಲಿರುವಾಗ, ನಾನು ಅಲ್ಲಿಂದ ಹೊರಗೆ ಬಂದ ಮೇಲೆ ಎಲ್ಲರೂ ಕಾಲ್ ಮಾಡ್ತಾರೆ. ನನ್ನ ಪರ್ಫಾರ್ಮೆನ್‌ಸ್ ಬಗ್ಗೆ ಮಾತಾಡ್ತಾರೆ ಅಂತೆಲ್ಲ ಅಂದುಕೊಂಡಿದ್ದೆ. ಆದರೆ ಸೀನ್ ಕಂಪ್ಲೀಟ್ ಉಲ್ಟಾ ಆಗಿತ್ತು. ನಾನು ಮನೆಯಿಂದಾಚೆ ಬಂದಮೇಲೆ ನನಗೆ ಬಂದ ಕರೆಗಳೆಲ್ಲ ಅವರಿಗೆ ಕೋವಿಡ್ ಬಂತು, ಇವ್ರು ತೀರ್ಕೊಂಡ್ರು ಅನ್ನೋದೇ ಆಗಿತ್ತು. ಏನು ಮಾಡಲೂ ತೋಚದ ಸ್ಥಿತಿ ನನ್ನದು. ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ಅರ್ಜುನ್ ಗೌಡ ಸಿನಿಮಾದ ನಿರ್ಮಾಪಕ ರಾಮು ಸಾರ್ ತೀರಿಹೋದ ಸುದ್ದಿ ಬಹಳ ಶಾಕಿಂಗ್ ಆಗಿತ್ತು.
'ಭೀಮಸೇನ ನಳಮಹಾರಾಜ' ನಟಿ ಪ್ರಿಯಾಂಕಾ ತಿಮ್ಮೇಶ್ ಕೈಯಲ್ಲಿ ಕನ್ನಡ ಮಾತ್ರವಲ್ಲ ತಮಿಳಿಂದ ಆಫರ್?
ಬಿಗ್‌ಬಾಸ್ ಮನೆಯಲ್ಲಿ ಎಲ್ಲರೂ ಸ್ವಾರ್ಥಿಗಳಾಗಿದ್ರು!
ಬಿಟ್‌ಬಾಸ್ ಮನೆಯಲ್ಲಿ ಯಾರೂ ನನಗೆ ಫ್ರೆಂಡ್ ಆಗಲಿಲ್ಲ. ಎಲ್ಲರೂ ನಾನು ವೈಲ್‌ಡ್ ಕಾರ್ಡ್ ಎಂಟ್ರಿ ಮೂಲಕ ಬಂದವಳು, ಗೆಸ್‌ಟ್ ಥರ ಅಂತಲೇ ನೋಡುತ್ತಿದ್ದರು. ನಾನೂ ಮೈಮೇಲೆ ಬಿದ್ದು ಫ್ರೆಂಡ್‌ಶಿಪ್ ಮಾಡಲಿಕ್ಕೆ ಹೋಗಲಿಲ್ಲ. ನಾನು ಯಾರ ಜೊತೆಗಾದ್ರೂ ಬಹಳ ಕ್ಲೋಸ್ ಆಗಿ ಆಮೇಲೆ ಅವರು ಹಿಂದಿಂದ ನನ್ನ ಬಗ್ಗೆ ಕೆಟ್ಟದಾಗಿ ಮಾತಾಡಿದ್ರೆ ನಂಗೆ ತಡ್ಕೊಳಕ್ಕಾಗಲ್ಲ. ಹೀಗಾಗಿ ಯಾರ ಜೊತೆಗೂ ಕ್ಲೋಸ್ ಆಗಿಲ್ಲ. ಅಲ್ಲಿ ಎಲ್ಲರೂ ಅವರ ಕಂಫರ್ಟ್‌ಗೆ ತಕ್ಕಂತೆ ಇಬ್ಬಿಬ್ರು ಫ್ರೆಂಡ್‌ಶಿಪ್ ಮಾಡ್ತಿದ್ರು. ಅವರವರೇ ಮಾತಾಡ್ಕೊಳ್ತಿದ್ರು. ಆದರೆ ನಂಗೆ ಮಾತ್ರ ಇವಳು ಯಾರ ಜೊತೆಗೂ ಬೆರೆಯೋದಿಲ್ಲ ಅನ್ನೋ ಹಣೆಪಟ್ಟಿ ಬಂತು. ಯಾಕಂದ್ರೆ ಅವರಿಗೆ ನನ್ನ ನಾಮಿನೇಟ್ ಮಾಡೋದಕ್ಕೆ ಒಂದು ಕಾರಣ ಬೇಕಿತ್ತು. ಬೇರೇನೂ ಸಿಗುತ್ತಿರಲಿಲ್ಲ. ಹೀಗಾಗಿ ಈ ಮಾತು ಹೇಳ್ತಿದ್ರು.