ವೆಬ್ ಸೀರೀಸ್ ಈ ಕಾಲದ ಅದ್ಭುತ ಮಾಧ್ಯಮ : ರಮೇಶ್ ಅರವಿಂದ್

By Kannadaprabha News  |  First Published May 31, 2021, 9:03 AM IST
  • ಇಂದಿನ ಯುವಕರ ಯೋಚನೆಗಳೇನು ಅನ್ನೋದನ್ನ ನನ್ನ ಮಕ್ಕಳಿಂದ ತಿಳ್ಕೊಳ್ತೀನಿ!
  • ನಿರ್ದೇಶಕನ ಕೈ ಕಟ್ಟಿ ಹಾಕೋದು ಬಜೆಟ್. ನಮ್ಮ ವೆಬ್ ಸೀರೀಸ್‌ಗೆ ಬಜೆಟ್ ಚೆನ್ನಾಗಿರುತ್ತೆ ಅಂದುಕೊಂಡಿದ್ದೀನಿ. 
  • ನಾನು ಈಗ ಓದುತ್ತಿರುವ ಪುಸ್ತಕ ‘ಥೌಸಂಡ್ ಬುಕ್‌ಸ್ ಯೂ ಮಸ್‌ಟ್ ರೀಡ್ ಬಿಫೋರ್ ಯೂ ಡೈ’

ಪ್ರಿಯಾ ಕೆರ್ವಾಶೆ

ವೆಬ್ ಸೀರೀಸ್ ನಿರ್ಮಾಣ ಮಾಡುತ್ತಿರುವ ಕನ್ನಡದ ಮೊದಲ ಸ್ಟಾರ್ ನಟ ನೀವು. ಯಾಕೆ ವೆಬ್ ಸೀರೀಸ್ ಮಾಡಬೇಕು ಅನಿಸ್ತು?ಜಗತ್ತು ಹೇಗೆ ಬದಲಾಗುತ್ತೋ, ಅದಕ್ಕೆ ಹೊಂದಿಕೊಂಡು ಹೋಗಬೇಕು ಅನ್ನೋದು ನನ್ನ ಥಿಯರಿ.

Latest Videos

undefined

ಕ್ರಿಯೇಟಿವ್ ಆಗಿ ನಮ್ಮನ್ನು ನಾವು ಎಕ್‌ಸ್ಪ್ರೆಸ್ ಮಾಡಿಕೊಳ್ಳಲು ನಮಗೊಂದು ಔಟ್‌ಲೆಟ್ ಬೇಕು. ವೆಬ್ ಸೀರೀಸ್ ತುಂಬ ಅದ್ಭುತ ಔಟ್‌ಲೆಟ್. ಸಿನಿಮಾದಲ್ಲಿ ಹೇಳಲಾಗದ ಕತೆಗಳನ್ನು ಹೇಳಬಹುದು. 8 ರಿಂದ 10 ಗಂಟೆಗಳಷ್ಟು ಸಮಯ ಸಿಗುತ್ತೆ. ಸಿನಿಮಾದ ಕ್ವಾಲಿಟಿಯನ್ನೇ ನಿರೀಕ್ಷೆ ಮಾಡಬಹುದು. ವೆಬ್ ಸೀರೀಸ್ ಜಗತ್ತಿಗೆ ಕುತೂಹಲದ ಕಣ್ಣುಗಳೊಂದಿಗೆ ಎಂಟ್ರಿ ಕೊಡುತ್ತಿದ್ದೇನೆ.

ಯಾವ ಕಥೆ, ಎಲ್ಲಿ ಪ್ರಸಾರ ಆಗುತ್ತೆ?

ಕನ್ನಡದ ಜನಪ್ರಿಯ ಸಾಹಿತಿಯೊಬ್ಬರ ಐತಿಹಾಸಿಕ ಕೃತಿ. ಇದರ ಸ್ಕ್ರಿಪ್‌ಟ್ ವರ್ಕ್ ನಾನೇ ಮಾಡಿದ್ದೇವೆ. ಕಂಪ್ಲೀಟ್ ಆಗಿದೆ. ಪ್ರಾದೇಶಿಕ ಹಿನ್ನೆಲೆಯ ಕತೆ. ಕನ್ನಡದಲ್ಲೇ ನಡೆಯುವ ಕಥೆಯನ್ನು, ಕನ್ನಡ ನಾಡಿನ ಪರಿಸರದಲ್ಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧೆ ನೀಡುವಷ್ಟು ಚೆನ್ನಾಗಿ ನಿರೂಪಿಸುತ್ತೇವೆ. ವೆಬ್ ಸೀರೀಸ್‌ಅನ್ನು ಕನ್ನಡದ ಓಟಿಟಿಯೊಂದಕ್ಕೆ ನೀಡುವ ಯೋಚನೆ ಇದೆ. ಆ ನಿಟ್ಟಿನಲ್ಲಿ ಒಂದೆರಡು ಓಟಿಟಿಗಳ ಜೊತೆಗೆ ಮಾತುಕತೆಯೂ ನಡೆಯುತ್ತಿದೆ.

ಎಲ್ಲರೂ ಲಸಿಕೆ ಹಾಕಿಸಿಕೊಳ್ಳಿ.. ರಮೇಶ್ ಅವರಿಂದ್ ಮನವಿ 

ಜನ ಸ್ಕ್ರೀನ್ ರಿಚ್‌ನೆಸ್‌ನ ಕಾರಣಕ್ಕೆ ಇಂಗ್ಲೀಷ್ ವೆಬ್ ಸೀರೀಸ್ ನೋಡುತ್ತಾರೆ. ಇಂಥಾ ವೀಕ್ಷಕರನ್ನು ನಿಮ್ಮ ಕಡೆ ಹೇಗೆ ಸೆಳೆಯುತ್ತೀರಿ?

ಭಾಷೆಯ ಪ್ರಾಬ್ಲಮ್ಮೇ ಅಲ್ಲ ಅದು. ನಿರ್ದೇಶಕನ ಕೈ ಕಟ್ಟಿ ಹಾಕೋದು ಬಜೆಟ್. ನಮ್ಮ ವೆಬ್ ಸೀರೀಸ್‌ಗೆ ಬಜೆಟ್ ಚೆನ್ನಾಗಿರುತ್ತೆ ಅಂದುಕೊಂಡಿದ್ದೀನಿ. ಇದು ಅದ್ದೂರಿ ಬಜೆಟ್ ಬೇಡುವ ಕತೆ. ಹೀಗಾಗಿ ಅದ್ದೂರಿಯಾಗಿಯೇ ನಿರ್ಮಿಸುವ ಯೋಚನೆ ಇದೆ. ಉತ್ತಮಗುಣಮಟ್ಟ, ರಿಚ್‌ನೆಸ್ ಇಲ್ಲೂ ಇರುತ್ತೆ.

ನೀವು ಅದರಲ್ಲಿ ನಟಿಸುತ್ತೀರಾ?

ಇನ್ನೂ ಅದನ್ನು ನಿರ್ಧರಿಸಿಲ್ಲ.

ಲಾಕ್‌ಡೌನ್ ಮುಗಿದ ಮೇಲೆ ಇದರ ಶೂಟಿಂಗ್ ಶುರುನಾ?

ಇಲ್ಲ. ಲಾಕ್‌ಡೌನ್ ನಂತರ ಸಿನಿಮಾ ಶೂಟಿಂಗ್‌ಗೆ ಹೋಗ್ತೀನಿ. ಈಗಾಗಲೇ ಮೂರು ಸ್ಕ್ರಿಪ್‌ಟ್ ಓಕೆ ಮಾಡಿದ್ದೀನಿ. ಆ್ಯಕ್ಟರ್ ಆಗಿ ಎರಡು ಚಿತ್ರ, ಡೈರೆಕ್ಟರ್ ಆಗಿ ಒಂದು ಚಿತ್ರ. ಮುಂಬೈಯ ತಂಡವೊಂದು ಒಳ್ಳೆಯ ಕತೆ ಹೇಳಿದೆ. ಅದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದೀನಿ. ನಿರ್ದೇಶನ, ತಾಂತ್ರಿಕ ತಂಡ ಎಲ್ಲ ಇಲ್ಲಿಯದ್ದೇ.

ಕಮೆಂಟ್ ಮಾಡುವವರ ಎದುರು ಥಂಬ್ ತೋರಿಸಿ.. ಮಗಳ ಮದುವೆ ನಂತರ ರಮೇಶ್  ಮಾತು! 

100 ಚಿತ್ರ ಓಟಿಟಿಯಲ್ಲೇನಾದ್ರೂ ರಿಲೀಸ್ ಮಾಡ್ತೀರಾ?

ಸದ್ಯಕ್ಕೆ ಆ ಯೋಚನೆ ಇಲ್ಲ. 100 ತೆಲುಗು ವರ್ಶನ್ ಸಹ ರಿಲೀಸ್‌ಗೆ ಸಿದ್ಧವಿದೆ. ಥಿಯೇಟರ್ ರಿಲೀಸ್‌ಗೆ ಕಾಯ್ತಿದ್ದೀವಿ. ಸಿನಿಮಾ ಒಂದು ಬ್ಯುಸಿನೆಸ್. ನಾನು ಹಾಕಿದ ದುಡ್ಡು ವಾಪಾಸ್ ಬರಲೇಬೇಕು. ಕೆಲವು ನಿರ್ಮಾಪಕರು ಬಂಡವಾಳ ವಾಪಾಸ್ ಬರುತ್ತೆ ಅಂತಾದ್ರೆ ಓಟಿಟಿನಾದ್ರೂ ಸರಿ, ನಿಮ್ ಮೊಬೈಲ್‌ಗೆ ಹಾಕಿ ಅಂದ್ರೂ ಹಾಕ್ತೀವಿ ಅಂತಾರೆ. ಕೊನೆಗೂ ನಮ್ಮ ಇಗೋ, ಪರ್ಸನಲ್ ಹಠಗಳನ್ನೆಲ್ಲ ಮೀರಿ ಬ್ಯುಸಿನೆಸ್ ಚೆನ್ನಾಗಿ ನಡೀಬೇಕು ಅನ್ನೋದೇ ಫೈನಲ್ ಆಗೋದು.

ಸಿನಿಮಾ ಇರಲಿ, ವೆಬ್ ಸೀರೀಸ್ ಇರಲಿ. ಒಬ್ಬ ನಟನಿಗೆ ಇಗೋವನ್ನು ಮೀರಿದ ಅಡಾಪ್ಟೆಬಿಲಿಟಿ ಮುಖ್ಯ ಆಗುತ್ತಲ್ವಾ?

ಖಂಡಿತಾ. ಹೊಸ ಪ್ರಪಂಚಕ್ಕೆ ಹೊಂದಿಕೊಳ್ಳದ್ದಕ್ಕೆ ದೈತ್ಯ ಡೈನೋಸರ್‌ಗಳೇ ಮಾಯ ಆಗೋದ್ವು. ಬದಲಾಗ್ತಿರುವ ಎಲ್ಲದಕ್ಕೂ ನಾವೂ ಹೊಂದಿಕೊಳ್ಳಬೇಕಾಗುತ್ತೆ, ಓಟಿಟಿ, ವೆಬ್ ಸೀರೀಸ್ ಎಲ್ಲವಕ್ಕೂ.

ಮಗಳನ್ನು ಮಿಸ್ ಮಾಡ್ತಿದ್ದೀರಾ?

ಹಾಗೆಲ್ಲ ಏನಿಲ್ಲ. ಅವಳು ಇಷ್ಟದ ಹುಡುಗನ್ನ ಮದುವೆ ಆಗಿ ಖುಷಿಯಾಗಿದ್ದಾಳೆ. ಆದ್ರೆ ನನ್ನ ಕಂಪ್ಯೂಟರ್ ಕೆಟ್ಹೋಯ್ತು, ಫೋಟೋ ಫಾರ್ಮ್ಯಾಟ್ ಚೇಂಜ್ ಮಾಡ್ಬೇಕು ಅಂದಾಗ ಮಗಳು ಟಪ್ಪಕ್ಕಂತ ಮಾಡ್ಕೊಳ್ತಿದ್ಲು. ನಾನು ಈಗಿನ ಯುವಕರ ಯೋಚನೆಗಳೇನು ಅನ್ನೋದನ್ನು ಮಕ್ಕಳ ಮೂಲಕ ಗ್ರಹಿಸುತ್ತೀನಿ. ಮಕ್ಕಳ ಮಾತುಕತೆಯಲ್ಲಿ ಬರುವ ಹೊಸ ಶಬ್ದವನ್ನು ಕೇಳಿದ ತಕ್ಷಣ ಅದರ ಬಗ್ಗೆ ತಿಳ್ಕೊಳ್ತೀನಿ. ಯಂಗ್ ಜನರೇಶನ್ ತಲೆಯಲ್ಲೇನಿದೆ ಅನ್ನೋದು ಗೊತ್ತಾಗೋದೇ ನನ್ನ ಇಬ್ಬರು ಮಕ್ಕಳ ಮೂಲಕ. ಅವರಿಗೆ ಎಗ್ಸೈಟ್ ಆಗೋದೇನು, ಯಾವುದನ್ನು ಇಷ್ಟ ಪಡ್ತಾರೆ ಅನ್ನೋದೆಲ್ಲ ಸೂಕ್ಷ್ಮವಾಗಿ ಗಮನಿಸ್ತೀನಿ. ಅವರ ಎಷ್ಟೋ ಪ್ರತಿಕ್ರಿಯೆಗಳು ನಾನೆಷ್ಟು ಹಿಂದಿದ್ದೀನಿ ಅನ್ನೋದನ್ನು ಹೇಳುತ್ತೆ. ಅವರ ಪೇಸ್‌ನಲ್ಲಿ ನಾವಿರೋದೇ ಬಿಗ್ಗರ್ ಚಾಲೆಂಜ್. ಅವರು ಯಾವುದೋ ಸಿನಿಮಾ ನೋಡುವಾಗ ‘ಯಾಕೆ ಇವ್ರು ಹಿಂಗಾಡ್ತಾರೆ’ ಅಂದ್ರೆ ಅದು ನಂಗೆ ವಾರ್ನಿಂಗ್!

ರಮೇಶ್ ಓದು, ದಿನಚರಿ ಇತ್ಯಾದಿ

- ಹಿಂದೆಲ್ಲ ಬೆಳಗ್ಗೆ ಸಿನಿಮಾ ಶೂಟ್, ಮಧ್ಯಾಹ್ನ ವೀಕೆಂಡ್ ಪೊ್ರೀಗ್ರಾಂ, ಸಂಜೆ ಡೈರೆಕ್ಷನ್ ಅಂತ ಓಡಾಡ್ತಿದ್ದವನು. ಸುಮ್ಮನೆ ಕೂತೇ ಗೊತ್ತಿಲ್ಲ. ಆದರೆ ಈಗಿನ ಖಾಲಿ ಟೈಮ್‌ನಲ್ಲಿ ಎಲ್ಲದರ ಬಗೆಗಿನ ಕುತೂಹಲ ನನ್ನನ್ನು ಕಾಪಾಡುತ್ತಿದೆ. ಕತೆ, ಸ್ಕ್ರಿಪ್‌ಟ್ ರೆಡಿ ಮಾಡ್ತೀನಿ. ನಾಳೇನೇ ಈ ಸ್ಕ್ರಿಪ್‌ಟ್ ಶೂಟ್‌ಗೆ ಹೋಗ್ಬೇಕು ಅನ್ನುವಷ್ಟು ತೀವ್ರವಾಗಿ ಬರೀತೀನಿ.

- ನಾನು ಈಗ ಓದುತ್ತಿರುವ ಪುಸ್ತಕ ‘ಥೌಸಂಡ್ ಬುಕ್‌ಸ್ ಯೂ ಮಸ್‌ಟ್ ರೀಡ್ ಬಿಫೋರ್ ಯೂ ಡೈ’. ಪ್ರಪಂಚದ ಶ್ರೇಷ್ಠ ಸಾವಿರ ಪುಸ್ತಕಗಳ ಸಾರಾಂಶ ಇದರಲ್ಲಿದೆ. ಈ ಪುಸ್ತಕವನ್ನ ಕೆಳಗಿಡೋದಕ್ಕೇ ಆಗ್ತಿಲ್ಲ. ಒಂದೊಂದು ಅಧ್ಯಾಯವನ್ನೂ ನೋಟ್ ಮಾಡ್ತಾ ಇರ್ತೀನಿ.

click me!