ಎಕ್ಸೈಟ್ ಆ್ಯಂಡ್ ನರ್ವಸ್ ಆಗಿದ್ದೀನಿ, ನಾನು ಡೈರೆಕ್ಟರ್ಸ್ ನಟಿ: Dear Sathya ನಟಿ ಅರ್ಚನಾ

By Vaishnavi Chandrashekar  |  First Published Mar 9, 2022, 9:33 PM IST

ಮಾರ್ಚ್ 10 ರಂದು ಬೆಳ್ಳಿ ತೆರೆಮೇಲೆ ಆರ್ಭಟ ಶುರು ಮಾಡಲು ಡಿಯರ್ ಸತ್ಯ ಆ್ಯಂಡ್ ಟೀಂ ಬರ್ತಿದೆ. ಚಿತ್ರದ ನಾಯಕಿ ಎಷ್ಟು ಎಕ್ಸೈಟ್ ಆಗಿದ್ದಾರೆ? 


ವೈಷ್ಣವಿ ಚಂದ್ರಶೇಖರ್

ಡಿಯರ್ ಸತ್ಯ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿರುವ ನಟಿ ಅರ್ಚನಾ ಕೊಟ್ಟಿಗೆ, ಇಂಡಸ್ಟ್ರಿಯ ಪ್ರಾಮಿಸಿಂಗ್ ಫೇಸ್ ಎನ್ನುವ ಬಿರುದು ಆಗಲೇ ಪಡೆದುಕೊಂಡಿದ್ದಾರೆ. ಮೂರು ವರ್ಷಗಳ ಶ್ರಮ ತೆರೆಯ ಮೇಲೆ ಕಾಣಲು ಸಿದ್ಧರಾಗಿದ್ದು, ಪ್ರೀರಿಲೀಸ್ ಆನುಭದ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್. ಕಾಮ್ ಜೊತೆ ಮಾತನಾಡಿದ್ದಾರೆ.   

Tap to resize

Latest Videos

undefined

ಮೊದಲ ಸಿನಿಮಾ ರಿಲೀಸ್‌ಗೆ ಎಷ್ಟು ಎಕ್ಸೈಟ್ ಆಗಿದ್ದೀರಾ?
ನನ್ನ ಸಿನಿಮಾ ಕೊನೆಗೂ ರಿಲೀಸ್ ಆಗುತ್ತಿದೆ ಅಂತ ತುಂಬಾನೇ ಎಕ್ಸೈಟ್ ಆಗ್ತಿದ್ದೀನಿ. ಚಿತ್ರೀಕರಣ ಮುಗಿಸಿ ಎರಡೂವರೆ ವರ್ಷವಾಗಿತ್ತು. ಪ್ರೀ ಕೋವಿಡ್ ರಿಲೀಸ್ ಆಗಬೇಕಿತ್ತು. ನಾವು ಮಾಡಿರುವ ಕೆಲಸ ಹೊರಗಡೆ ಬರುತ್ತಿದೆ, ಆರ್ಟಿಸ್ಟ್‌ಗಳಿಗೆ ಅದೇ ಮುಖ್ಯ ಅಲ್ವಾ? ನಮ್ಮ ಕೆಲಸವನ್ನು ನಾಲ್ಕು ಜನರು ನೋಡಬೇಕು. ಅದರಿಂದ ಕೆಲಸ ಸಿಗ್ಬೇಕು ಅಂತ. ಖುಷಿ ಆಗುತ್ತಿದೆ, ಡಿಯರ್ ಸತ್ಯ ಜರ್ನಿ ಶುರು ಆಗಿದ್ದಕ್ಕೆ, Hopefully ಈ ವರ್ಷ ನನಗೆ ಕೆಲವು ರಿಲೀಸ್ ಇರುತ್ತೆ. ತುಂಬಾ ನರ್ವಸ್ ಆಗಿದ್ದೀನಿ ಅಷ್ಟೇ ಎಕ್ಸೈಟ್ ಕೂಡ ಆಗಿದ್ದೀನಿ.

ಸಿನಿಮಾ ಬಿಡುಗಡೆಗೂ ಮುನ್ನವೇ ಜನರು ನಿಮ್ಮನ್ನು ಒಪ್ಪಿಕೊಂಡಿದ್ದಾರೆ, ಟ್ರೈಲರ್ ರೆಸ್ಪಾನ್ಸ್ ಹೇಗಿದೆ? 
ಎಲ್ಲರೂ ತುಂಬಾ ಚೆನ್ನಾಗಿ ಮಾಡಿದ್ಯಾ ಅಂತಿದ್ದಾರೆ. ಮೂರು ವರ್ಷಗಳಿಂದ ನಾನು ಇನ್ನರ್ ಸರ್ಕಲ್‌ನಲ್ಲಿ ಕಾಮೆಂಟ್ಸ್ ಮತ್ತು ಅಭಿಪ್ರಾಯ ಕೇಳ್ತಿರೋದು. ಆದರೆ ಆಡಿಯನ್ಸ್‌ ರಿವ್ಯೂ ಫೈನಲ್ ರಿವ್ಯೂ ಅಲ್ವಾ. ನಾನು ಆಗಲೇ ಸ್ವಲ್ಪ ಸಿನಿಮಾ ಕೆಲಸಗಳು ಶುರು ಮಾಡಿದ್ದೀನಿ. ಆದರೆ ಅದನ್ನು ಹೇಗೆ ಪರ್ಸೀವ್ ಮಾಡಿದ್ದಾರೆ? ನಾನು ಸರಿ ಮಾಡ್ತಿದ್ದೀನಾ? ಏನು ತಪ್ಪಿದೆ? ಏನು ಸರಿ ಇದೆ? ಅಂತ ಯಾರೂ ಸತ್ಯ ಹೇಳಿಲ್ಲ. ಆ ನಿಜ ನನಗೆ ಈ ಸಿನಿಮಾ ಮೂಲಕ ಗೊತ್ತಾಗಬೇಕಿದೆ. ಯಾವ ಯೋಚನೆಯೂ ಇಲ್ಲದೇ ನಾನು ಶ್ರಮ ಹಾಕಿ ಕೆಲಸ ಮಾಡ್ತಿದ್ದೀನಿ. ಈಗ ಅದರ ರಿಸಲ್ಟ್‌ ಇದೆ ಅಂದ್ರೆ ನರ್ವಸ್‌ ಏನು 20 ಬರುತ್ತಾ ಅಥವಾ 60 ಅಂಕಗಳು ಬರುತ್ತಾ ಅಂತ. 

ಮೊದಲ ಬಾರಿ ಪ್ರಮೋಷನ್‌ನಲ್ಲಿ ಭಾಗಿಯಾಗುತ್ತಿದ್ದೀರಾ, ಹೇಗಿದೆ ಫೀಲ್? 
ತುಂಬಾ ಫನ್ ಇದೆ. ನನಗೆ ರೀಲ್ಸ್‌ ಎಲ್ಲಾ ಇಷ್ಟೇ ಆಗೋಲ್ಲ. ಆದರೆ ಪ್ರಮೋಟ್ ಮಾಡಬೇಕು ಅಂತ ಮಾಡಿದ್ದೀನಿ. ಕಾಲೇಜ್‌ಗಳಿಗೆ ಭೇಟಿ ನೀಡುತ್ತಿದ್ದೀನಿ, ಒಂದಷ್ಟು ಫೋಸ್ಟರ್‌ಗಳನ್ನು ರೋಡ್‌ ರೋಡ್‌ಗೆ ಹೋಗಿ ಕೊಟ್ಟಿದ್ದೀವಿ, ವಿವಿ ಪುರಂ ಫುಡ್‌ ಸ್ಟ್ರೀಟ್‌ನಲ್ಲಿ ಒಂದಷ್ಟು ಹೊತ್ತು ಜನರ ಜೊತೆ ಮಾತನಾಡಿದ್ದೀವಿ. ದೊಡ್ಡ ಕ್ರೌಡ್‌ ಜೊತೆ ಡ್ಯಾನ್ಸ್ ಮಾಡಿದ್ದೀನಿ. ಸಿನಿಮಾ ಮಾಡೋದು ಸುಲಭ. ಆದರೆ ಪ್ರಚಾರ ತುಂಬಾನೇ ಹೆಕ್ಟಿಕ್. ಇದು ಹಾರ್ಡ್‌ ವರ್ಕೌಟ್. ಇದೇ ಮೊದಲು ನಾನು 10 ದಿನಗಳಿಂದ ಪ್ರಚಾರದಲ್ಲಿ ಭಾಗಿಯಾಗಿದ್ದೀನಿ. ಫೀಲ್ ಚೆನ್ನಾಗಿದೆ. 

'ಡಿಯರ್ ಸತ್ಯ' ಚಿತ್ರದ ನಟಿ ಅರ್ಚನಾ ಕೊಟ್ಟಿಗೆ ಜೊತೆ ಮಾತುಕತೆ!

ಡೆಬ್ಯೂ ಸಿನಿಮಾಗೆ ಸೆಲೆಬ್ರಿಟಿಗಳು ಸಾಥ್ ಕೊಟ್ಟಿದ್ದಾರಾ?
ಪ್ರತಿಯೊಬ್ಬರೂ ನನಗೆ ತುಂಬಾನೇ ಕೈಂಡ್ ಆಗಿದ್ದಾರೆ. ಸಖತ್ ಸಪೋರ್ಟ್‌ ಮಾಡ್ತಿದ್ದಾರೆ. ಉದಾಹರಣೆಗೆ ಹೇಳ್ಬೇಕು ಅಂದ್ರೆ ಒಂದು ಪ್ರಾಜೆಕ್ಟ್‌ ಇದೆ, ಒಂದು ಹುಡುಗಿ ಬೇಕು ಅಂತ ಹೇಳಿದಾಗ ಫಸ್ಟ್ ಸರ್ಕಲ್‌ನಲ್ಲಿ ಇರೋರು ಅಥವಾ ಅವರ ಜೊತೆ ಕೆಲಸ ಮಾಡಿರುತ್ತೀವಿ. ಅವರು ರೆಫರ್ ಮಾಡ್ತಿದ್ದಾರೆ. ನನಗೆ ಇಷ್ಟು ಸಿನಿಮಾಗಳು ಸಿಕ್ಕಿರುವುದು ರೆಫರ್ ಆಗಿ, ಆಡಿಷನ್ ಮಾಡಿ ಸೆಲೆಕ್ಟ್ ಮಾಡಿರೋದು. ನನಗೆ ತುಂಬಾ ಜನರು ರೆಫರ್ ಮಾಡ್ತಿದ್ದಾರೆ, ಸಪೋರ್ಟ್ ಮಾಡುತ್ತಿದ್ದಾರೆ ಅಂತ ಹೇಳುವುದಕ್ಕಿಂತ ಈ ರೀತಿ ಮಾಡುವುದು ನಿಜವಾದ ಸಪೋರ್ಟ್‌. ಇದರಿಂದ ನಮ್ಮ ಕಾನ್ಫಿಡೆನ್ಸ್‌ ಲೆವೆಲ್ ಹೆಚ್ಚಾಗುತ್ತೆ. ಈ ರೀತಿ ಸಪೋರ್ಟ್‌ ಇರುವುದಕ್ಕೆ ನಾನು ತುಂಬಾನೇ ಲಕ್ಕಿ. 

Dear Sathya ಟ್ರೈಲರ್ ನೋಡಿ ಮೆಚ್ಚುಗೆ ವ್ಯಕ್ತ ಪಡಿಸಿದ ಸ್ಟಾರ್ ನಿರ್ದೇಶಕ ರಾಮ್‌ ಗೋಪಾಲ್ ವರ್ಮಾ!

ಫಸ್ಟ್‌ ಸಿನಿಮಾ ರಿಲೀಸ್‌ಗೂ ಮುನ್ನವೇ ಎಷ್ಟು ಪ್ರಾಜೆಕ್ಟ್‌ ಕೈಯಲ್ಲಿದೆ?
17 ಪ್ರಾಜೆಕ್ಟ್‌ಗಳು ಕೈಯಲ್ಲಿವೆ. 15ರ ಕೆಲಸಗಳು ಮುಗಿದಿವೆ. ಇನ್ನೂ ಮೂರರದ್ದು ನಡೆಯುತ್ತಿದೆ. ಒಂದು ಅಲಂಕಾರ್ ವಿದ್ಯಾರ್ಥಿ, ಎಲ್ಲರ ಕಾಲ್ ಎಳೆಯುತ್ತೆ ಕಾಲ ಮತ್ತು ಶಬರಿ. ಬೇರೆ ಎಲ್ಲಾ ಮುಗಿಸಿದ್ದಿನಿ.

ನಿಮ್ಮ ನೆಕ್ಸ್ಟ್ ಪ್ಲ್ಯಾನ್?
ಕೆಲಸ ಸ್ವಲ್ಪ ಸ್ಲೋ ಮಾಡಬೇಕು. ಆರಂಭದಲ್ಲಿ ಇದ್ದ aggression ಈಗ ಇಲ್ಲ. ಆಗ ನನ್ನ ಮೈಂಡ್ ಸೆಟ್ ಹೇಗಿತ್ತು. ಅಂದ್ರೆ ಯಾವುದೋ ಒಂದು ವರ್ಕ್‌ ಅಗಿ ಏನೋ ಒಂದರಲ್ಲಿ ರೆಕಗ್ನಿಷನ್ ಸಿಗ್ಲಿ. ಒಂದು ಹೋಯಿತು ಅಂದ್ರೆ, ಇನ್ನೊಂದು ಆಗ್ಲಿ ಅಂತ ಇತ್ತು. ಮೂರು ದಿನ ಮನೆಯಲ್ಲಿ ಕೂತುಕೊಂಡರೆ ಎನ್ ಮಾಡ್ತಿದ್ದಿನಿ ಅಂತ ಯೋಚನೆ ಇತ್ತು. ಈಗ ಮೈಂಡ್ ಬದಲಾಗಿದೆ. ಒಳ್ಳೆ ಕೆಲಸಗಳ ಮೇಲೆ ಫೋಕಸ್ ಮಾಡಬೇಕು ಅಂದುಕೊಂಡಿದ್ದೀನಿ. ಆರಂಭದಿಂದ ನನಗೆ ನಂದೇ ರಿಸ್ಟ್ರಿಕ್ಷನ್ ಇದೆ. ನನ್ನ ಲೈಫ್‌ ಲೈನ್‌ ಅನ್ನು ಕ್ರಾಸ್‌ ಮಾಡಿಲ್ಲ. ಇನ್ ಮುಂದೆ ಸ್ವಲ್ಪ ವೇಟ್ ಮಾಡಿ, ಜನರಿಂದ ರೆಸ್ಪಾನ್ಸ್‌ ಹೇಗಿದೆ ನೋಡಿ ಆಮೇಲೆ ಅದಕ್ಕೆ ತಕ್ಕಂತೆ ಕೆಲಸ ಮಾಡೋಣ ಅಂದುಕೊಂಡಿದ್ದೀನಿ. ಯಾವ ರೀತಿ ಮಾಡಬೇಕು, ಯಾವುದಕ್ಕೆ ಸೂಟ್ ಆಗ್ತೀನಿ ಅಥವಾ ನಿರ್ದೇಶಕರು ಇಲ್ಲ ನೀವು ಈ ಕ್ಯಾರೆಕ್ಟರ್ ಮಾಡಲೇ ಬೇಕು, ಇದು ಸೂಟ್ ಆಗುತ್ತೆ ಅನ್ನೋ ಕಾನ್ಫಿಡೆನ್ಸ್ ಅವರಿಗಿದ್ದರೆ ನಾನು ಒಪ್ಪಿಕೊಳ್ಳುವೆ. I am directors actor. ಈ ವರ್ಷ ಪಾತ್ರಗಳನ್ನು experiment ಮಾಡಬೇಕು ಅಂದು ಕೊಂಡಿರುವೆ.

click me!