ವಯಸ್ಸಿನ್ನೂ 24, ನಟಿಯರ ಫೇವರೆಟ್‌ ಫ್ಯಾಷನ್ ಡಿಸೈನರ್, ನಿಧಿ ಗೌಡ ಸಕ್ಸಸ್ ಸ್ಟೋರಿ!

By Vaishnavi Chandrashekar  |  First Published Mar 7, 2022, 5:51 PM IST

ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿರುವ ಸೆಲೆಬ್ರಿಟಿ ಫ್ಯಾಷನ್ ಡಿಸೈನರ್ ನಿಧಿ ಗೌಡ. 110ಕ್ಕೂ ಹೆಚ್ಚು ಮಹಿಳೆಯರಿಗೆ ತಮ್ಮ ಸ್ಟುಡಿಯೋದಲ್ಲಿ ಕಡಿಮೆ ಅವಧಿಯಲ್ಲಿ ವೃತ್ತಿ ಜೀವನ ರೂಪಿಸಿಕೊಳ್ಳಲು ನೆರವು ನೀಡಿದ್ದಾರೆ. ಮಹಿಳಾ ದಿನಾಚರಣೆಯ ಈ ಸಂದರ್ಭದಲ್ಲಿ ಇವರೊಂದಿಗೆ ಸುವರ್ಣ್ಯನ್ಯೂಸ್.ಕಾಮ್ ಮಾತುಕತೆ ನಡೆಸಿದಾಗ...
 


ವೈಷ್ಣವಿ ಚಂದ್ರಶೇಖರ್

ಬಾಲ್ಯದಿಂದಲೂ ಸಿನಿ ಜಗತ್ತಿನ ಬಗ್ಗೆ ಒಲವು ಹೊಂದಿದ್ದ ನಿಧಿ ಸೆಲೆಬ್ರಿಟಿಗಳ ನೆಚ್ಚಿನ ಡಿಸೈನರ್ ಆಗಿದ್ದು ಹೇಗೆ? ತಮ್ಮ ಸಂಸ್ಥೆಯ ಮೂಲಕ ಕಡಿಮೆ ಅವಧಿಯಲ್ಲಿಯೇ ಡಿಸೈನರ್ ಕೋರ್ಸ್ ಮಾಡಲು ನಿರ್ಧರಿಸಿದ್ದು ಯಾಕೆ? ಬಿಗ್ ಬಾಸ್ ಸೀಸೆನ್ 8 ರಿಯಾಲಿಟಿ ಶೋ ನಿಧಿ ಜೀವನಕ್ಕೆ ದಾರಿ ಆಗಿದ್ದು ಹೇಗೆಂದು ಏಷ್ಯಾನೆಸ್ ಸುವರ್ಣ ನ್ಯೂಸ್. ಕಾಮ್‌ ಜೊತೆ ಮಾತನಾಡಿದ್ದಾರೆ. 

Tap to resize

Latest Videos

ನಿಮ್ಮ ಕಿರುತೆರೆ ಮತ್ತು ಸಿನಿಮಾ ಜರ್ನಿ ಶುರುವಾಗಿದ್ದು ಹೇಗೆ? 
ಬಾಲ್ಯದಿಂದಲೂ ನಟನೆ ಬಗ್ಗೆ ತುಂಬಾನೇ ಪ್ಯಾಶನ್‌ ಹೊಂದಿದ್ದೆ. ಆದರೆ ಸದಾ ಆನ್‌ಸ್ಕ್ರೀನ್‌ನಲ್ಲಿ ಇರಬೇಕು ಅಂತ ಇಷ್ಟ ಆಗ್ತಿತ್ತು. ಛದ್ಮವೇಶ, ಪ್ರತಿಭಾ ಕಾರಂಜಿ ಎಲ್ಲಾದರಲ್ಲಿಯೂ ಮೋನೋ ಆ್ಯಕ್ಟಿಂಗ್ ಆಯ್ಕೆ ಮಾಡಿಕೊಳ್ಳುತ್ತಿದ್ದೆ. ಸೂಕ್ತ ಮಾರ್ಗದರ್ಶನ ಇಲ್ಲದ ಕಾರಣ ರಂಗಭೂಮಿ ಪ್ರವೇಶ ಮಾಡಲು ಸಾಧ್ಯವಾಗಲಿಲ್ಲ. ಶಾಲಾ- ಕಾಲೇಜ್‌ ಮಟ್ಟಕ್ಕೆ ನಡೆಯುತ್ತಿದ್ದ ಡ್ಯಾನ್ಸ್‌ ಮತ್ತು ನಟನಾ ಕಾರ್ಯಕ್ರಮಗಳಲ್ಲಿ ಸ್ಪರ್ಧಿಸುತ್ತಿದ್ದೆ. ಭರತನಾಟ್ಯ ಕಲಿತಿದ್ದೇನೆ. ಎಂಟರ್ಟೈಮೆಂಟ್ ಫೀಲ್‌ ನನಗೆ ತುಂಬಾನೇ ಇಷ್ಟ, ಇಲ್ಲಿ ಇರಬೇಕು ಅಂತ ಅಸೆ ಇತ್ತು. ಟಿಕ್‌ಟಾಕ್‌ ನಮಗೆ ಪ್ರತಿಭೆ ಪ್ರದರ್ಶನ ಮಾಡಲು ಒಳ್ಳೆಯ ವೇದಿಕೆ ಆಯಿತು. ಇನ್‌ಸ್ಟಾಗ್ರಾಂ ನೋಡಿ ಅನೇಕರು ಸಂಪರ್ಕ ಮಾಡಿ ಅವಕಾಶ ನೀಡುತ್ತಿದ್ದರು. ಟಿಕ್‌ಟಾಕ್‌, ರೀಲ್ಸ್‌ ಮತ್ತು ಇನ್‌ಸ್ಟಾಗ್ರಾಂನಲ್ಲಿ ಮಾಡುತ್ತಿದ್ದ ಶಾರ್ಟ್‌ ವಿಡಿಯೋ ನೋಡಿ ಅವಕಾಶ ಬಂದು, ಅಲ್ಲಿಂದ ಒಂದೊಂದೇ ಲಿಂಕ್ ಬೆಳೆಯಿತು. 

ಫ್ಯಾಮಿಲಿ ಪ್ಯಾಕ್ ಸಿನಿಮಾದಲ್ಲಿ ನಟಿಸಿದ ಅನುಭವ?
ಫ್ಯಾಮಿಲಿ ಪ್ಯಾಕ್ ಸಿನಿಮಾದಲ್ಲಿ ಸಣ್ಣ ಪಾತ್ರ ಮಾಡಿರುವುದು. ಇದಕ್ಕೆ ಕಾರಣ ನಿರ್ದೇಶಕರು ಅರ್ಜುನ್ ಸರ್ ಕರೆದಿದ್ದು. ಆಗ ನಾನು ನಟನೆಯಲ್ಲಿ ತುಂಬಾ ಆಸಕ್ತಿ ಹೊಂದಿದ್ದೆ. ಬಂದ ಆಫರ್‌ನ ಒಪ್ಪಿಕೊಂಡು ಮಾಡಿದ ಸಿನಿಮಾ. ಸಣ್ಣ ಪಾತ್ರ ಮಾಡುತ್ತಾ ಬಂದರೆ, ಮುಂದೊಂದು ದಿನ ದೊಡ್ಡ ಪಾತ್ರ ಮಾಡಬಹುದು ಎನ್ನುವ ನಂಬಿಕೆ ನಂಗಿದೆ.

ಸೋಷಿಯಲ್ ಮೀಡಿಯಾ (Social Media) ನಿಮ್ಮ ಜೀವನ ರೂಪಿಸಿಕೊಳ್ಳುವುದಕ್ಕೆ ಎಷ್ಟು ಸಹಾಯ ಮಾಡಿತ್ತು? 
ನನ್ನ ನಟನೆ ಮತ್ತು ಫ್ಯಾಷನ್‌ ನಡುವೆ ಮತ್ತೊಂದು ಲಿಂಕ್ ಇದೆ. 2020 ಮತ್ತು 2021 ಸಮಯದಲ್ಲಿ ಬಿಡುಗಡೆಯಾದ ಸಿನಿಮಾಗಳನ್ನು ಟಿಕ್‌ಟಾಕ್‌ ಪಾರ್ಟನರ್‌ ಆಗಿ ಆನ್‌ಲೈನ್‌ ಮಾರ್ಕೇಟಿಂಗ್ ಮಾಡುತ್ತಿದ್ದೆ. ನಾನು 50-100 ಮಂದಿ influenceಗಳ ಜೊತೆ ಕೆಲಸ ಮಾಡಿದ್ದೇನೆ. ಇದರ ಮೂಲಕ ಅನೇಕರ ಸಂಪರ್ಕ ಸಿಕ್ಕಿತು. ನಾನು ಕಲಾವಿದೆ ಎನ್ನುವುದಕ್ಕಿಂತಲೂ ಎಲ್ಲರಿಗೂ ನಾನು ಸಿನಿಮಾ ಮಾರ್ಕೆಟಿಂಗ್ ಮೂಲಕವೇ ಪರಿಚಯವಾಯಿತು.

ನಿಮ್ಮ ವಿದ್ಯಾಭ್ಯಾಸ ಮತ್ತು ಫ್ಯಾಮಿಲಿ?
ನಾನು ಹುಟ್ಟಿದ್ದು ಹಾಸನದಲ್ಲಿ. ತಂದೆ ಸರ್ಕಾರಿ ಕೆಲಸದಲ್ಲಿದ್ದ ಕಾರಣ ಬೆಂಗಳೂರಿಗೆ ಟ್ರಾನ್ಸಫರ್ ಆಯ್ತು, ತಾಯಿ ಎನ್‌ಜಿಒ ನಡೆಸುತ್ತಿದ್ದಾರೆ ಹಾಗೇ ನಮ್ಮದೊಂದು ಆಸ್ಪತ್ರೆ ನೋಡಿಕೊಳ್ಳುತ್ತಿದ್ದಾರೆ. ಬೆಳೆದದ್ದು ಬೆಂಗಳೂರಿನಲ್ಲಿ. ಮೆಡಿಕಲ್ ಕ್ಷೇತ್ರಕ್ಕೆ ನಾನು ಹೋಗಬೇಕಿತ್ತು. ಆದರೆ ಫ್ಯಾಷನ್‌ ತುಂಬಾನೇ ಇಷ್ಟ. ಅದಕ್ಕೆ ವೋಗ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿನಲ್ಲಿ ಬಿಎಸ್ಸಿ ಮಾಡಿದ್ದೀನಿ. ಒಂದು ತಿಂಗಳು ಪ್ಯಾರಿಸ್ ಸ್ಕೂಲ್ ಆಫ್ ಫ್ಯಾಷನ್‌ನಲ್ಲಿ ಆನ್‌ಲೈನ್‌ ಕೋರ್ಸ್‌ ಮಾಡಿದ್ದೀನಿ. ಕೆಲವು ದಿನಗಳ ಹಿಂದೆ I turned 24. 

ಕೆಲಸ ಹೋಗಿತ್ತು, ಎದೆಗುಂದಲಿಲ್ಲ ಬ್ಯುಸಿನೆಸ್ ಆರಂಭಿಸಿ ಯಶಸ್ವಿಯಾದ Love Mocktail 2 ನಟಿ ಸುಶ್ಮಿತಾ ಗೌಡ!

ಕೊರೋನಾ ಟೈಮಲ್ಲಿ ನಿಮ್ಮ ಆಂತರಿಯಾ ಶುರು ಮಾಡಿದ್ದು, ಇದರ ಹಿಂದಿರುವ ಶ್ರಮ?
ನಾನು ಪೋಷಕರಿಂದ ಒಂದು ರೂಪಾಯಿ ಪಡೆಯದೇ ಕಟ್ಟಿರುವ ಸಂಸ್ಥೆ ಇದು. ಆನ್‌ಲೈನ್‌ ಸಿನಿಮಾ ಮಾರ್ಕೆಟಿಂಗ್ ಮತ್ತು ಮಾಡಲಿಂಗ್‌ನಿಂದ ಸಂಪಾದಿಸುತ್ತಿದ್ದ ಹಣದಿಂದ ಈ ಸಂಸ್ಥೆ ಕಟ್ಟಿದೆ. ಕೊನೆಯಲ್ಲಿ ನನ್ನ ಬಳಿ 2 ಲಕ್ಷ ರೂ. ಹಣವಿತ್ತು. ಆಗಷ್ಟೇ ನಾನು ಪದವಿ ಪಡೆದಿದ್ದೆ, ಒಂದು ನಿಮಿಷವನ್ನೂ ವೇಸ್ಟ್ ಮಾಡದೇ, ನಾನು ಆನ್‌ಲೈನ್‌ನಲ್ಲಿ ಬ್ಯುಸಿನೆಸ್‌ ಶುರು ಮಾಡಿದೆ. ಆಗ ನನ್ನ ಬಳಿ ಒಂದಿಷ್ಟು ಕಲೆಕ್ಷನ್ ಇರಬೇಕಿತ್ತು, ಕೆಲವೊಂದು ವಸ್ತುಗಳನ್ನು ಖರೀದಿಸಬೇಕಿತ್ತು. ನನ್ನ ಸೇವಿಂಗ್ಸ್ ಹಣವನ್ನೇ ಬಳಸಿದೆ. ಆನ್‌ಲೈನ್‌ ವ್ಯಾಪಾರ ಚೆನ್ನಾಗಿ ಆಯಿತು. ನನ್ನ ಫಾಲೋವರ್ಸ್‌ ಅನ್ನೇ ಕ್ಲೈಂಟ್‌ ಮಾಡಿಕೊಂಡೆ, ಮಾರ್ಕೆಟಿಂಗ್ ವಿಚಾರದಲ್ಲಿ ಕಷ್ಟ ಆಗಲಿಲ್ಲ. ನಾನು ಒಂದು ಕೋ-ವರ್ಕಿಂಗ್ ಸ್ಪೇಸ್ ತೆಗೆದುಕೊಂಡು ಅವರಿಗೆ ತಿಂಗಳಿಗೆ 10 ಸಾವಿರ ಬಾಡಿಗೆ ಹಣ ನೀಡಬೇಕಿತ್ತು. ಅಲ್ಲಿಂದ ಸೇವಿಂಗ್ಸ್ ಮಾಡಿ ಶುರು ಮಾಡಿದ ಸಂಸ್ಥೆ ಇದು.

ನಿಮ್ಮ ಸಂಸ್ಥೆಯಲ್ಲಿ ಎಷ್ಟು ಮಂದಿಗೆ ಶಿಕ್ಷಣ ನೀಡಿದ್ದೀರಿ? ಅವರು ನಿಮ್ಮ ವೃತ್ತಿ ಗ್ರಾಫ್ ಹೇಗಿದೆ?
ನಾನು 2 PUC ಇದ್ದಾಗಿನಿಂದಲೂ ನನ್ನದೇ ಆದ ಒಂದು ಅಕಾಡೆಮಿ ಶುರು ಮಾಡಬೇಕೆಂಬ ಆಸೆ ಇತ್ತು. ಹಾಗೆಯೇ ಸರಳವಾಗಿರುವ syllubus ಮಾಡಬೇಕು ಎಂಬ ಕನಸು ಇತ್ತು. ಕಾಲೇಜ್‌ನಲ್ಲಿ ಥಿಯರಿ ಹೇಳಿಕೊಡುತ್ತಾರೆ, ಬೋಟಿಕ್ ಮಾಡಬೇಕು, ಉದ್ಯಮಿ ಆಗಬೇಕು ಅಂದ್ರೆ ಅಷ್ಟು ಎಕ್ಸಪೋಷರ್ ಕೊಡುವುದಿಲ್ಲ. ನಮ್ಮ ಬೆಂಗಳೂರಿನಲ್ಲಿ ಅಷ್ಟು ಚೆನ್ನಾಗಿ ಬೊಟಿಕ್‌ ತೆಗೆಯಲು ಹೇಳಿಕೊಡುವವರು ಯಾರೂ ಇಲ್ಲ. ಅದಕ್ಕೆ ನಾನೇ ಶುರು ಮಾಡಿದೆ. ಮೊದಲು ಇಬ್ಬರು ಬರಬಹುದು ಅಂದುಕೊಂಡೆ. ಆದರೆ ಮೊದಲ ಬ್ಯಾಚ್‌ಗೇ 25 ವಿದ್ಯಾರ್ಥಿನಿಯರು ಬಂದರು. ಇದಕ್ಕೆ ಅಂತಾನೇ ಒಂದು ಜಾಗ ತೆಗೆದುಕೊಂಡು, ಅವರಿಗೆ ಹೇಳಿ ಕೊಡುವುದಕ್ಕೆ ಶುರು ಮಾಡಿದೆ. ನಾವು 110ಕ್ಕೂ ಹೆಚ್ಚು ಜನರಿಗೆ ಶಿಕ್ಷಣ ನೀಡಿದ್ದೀವಿ. ಮುಂಬರುವ ದಿನಗಳ ಬಗ್ಗೆ ಚಿಂತೆ ಮಾಡಿದರೆ ಭಯ ಆಗುತ್ತದೆ. ಹೇಗೆ ಏನೋ ಅಂತ. ಆದರೆ ಆರಂಭದಲ್ಲಿ ಶ್ರಮಿಸಿದ್ದೇನೆ. ಹಾಕಿದ ಬಂಡವಾಳಕ್ಕಿಂತಲೂ ಡಬ್ಬಲ್ ಮಾಡೋ ಆಸೆಯೂ, ಗುರಿ ಇದೆ.

ನಿಮ್ಮ ಫ್ಯಾಷನ್ ಲೇಬಲ್ ದೊಡ್ಡ ಹೆಸರು ಮಾಡುವುದಕ್ಕೆ ಸೆಲೆಬ್ರಿಟಿಗಳು ಹೇಗೆ ಸಾಥ್ ಕೊಟ್ಟರು?
ಇದೊಂದು ರೂಲರ್ ಕೋಸ್ಟರ್ ರೈಡ್ ಅಗಿತ್ತು. ಕೆಲವರು ತುಂಬಾನೇ ಸ್ವೀಟ್ ಆಗಿದ್ದು, ಕೆಲವರಿಂದ ಸ್ವಲ್ಪ ಕಷ್ಟ ಆಗಿತ್ತು. ನನ್ನ ಕ್ಲೋಸ್‌ ಫ್ರೆಂಡ್ಸ್ ಅನೇಕರು ಸೆಲೆಬ್ರಿಟಿಗಳು. ಅವರೇ ನನಗೆ ಸಪೋರ್ಟ್ ಮಾಡಲಿಲ್ಲ, ಅಪರಿಚಿತರು ನನಗೆ ಸಾಥ್ ಕೊಟ್ಟಿದ್ದು. ಅಮೃತಾ ಅಯ್ಯರ್ ಅವರು ತುಂಬಾ ಸಪೋರ್ಟ್ ಮಾಡಿದ್ದಾರೆ. ಏನೇ ಕಾರ್ಯಕ್ರಮವಿದ್ದರೂ, ನನಗೆ ಕಾಲ್ ಮಾಡಿ ಹೇಳುತ್ತಾರೆ. ನನಗೆ ಒಳ್ಳೆಯ ಅವಕಾಶ ನೀಡುತ್ತಿದ್ದಾರೆ. ನಿವೇದಿತಾ ಗೌಡ ಅವರೂ ಸಪೊರ್ಟ್ ಮಾಡಿದ್ದರು. ಒಂದು ಶೂಟ್‌ಗೆ ಡ್ರೆಸ್‌ ಕೊಟ್ಟು ಕಳುಹಿಸಿದ್ದೆ. ಅದರೆ ಅವರು ಅದನ್ನು ಧರಿಸೋಕೆ ಆಗಲಿಲ್ಲ. ಅವರೇ ಕಾಲ್ ಮಾಡಿ ನಾನೇ ಫೋಟೋಶೂಟ್ ಮಾಡಿಸಿ, ಕೊಡುತ್ತೀನಿ ಅಂತ ಹೇಳಿ ಫೋಟೋ ಕಳುಹಿಸಿದ್ದರು. ಇಷ್ಟೊಂದು ಪ್ರೀತಿ ಕೊಡುವವರು ಕೂಡ ಇದ್ದಾರೆ. ನನಗೆ Men celebrityಗೆ ಡಿಸೈನ್ ಮಾಡಲು ತುಂಬಾನೇ ಇಷ್ಟ. ಬಿಗ್ ಬಾಸ್‌ನಲ್ಲಿ ಶಮಂತ್ ಮತ್ತು ರಘು ಗೌಡ ಅವರಿಗೆ ಡಿಸೈನ್ ಮಾಡಿದ್ವಿ. ಅದರಿಂದ ನಮಗೆ ತುಂಬಾನೇ ಸಹಾಯ ಆಯ್ತು. ಅವರು ಈಗಲೂ ನಮ್ಮ ಸಂಸ್ಥೆಗೆ ಸಾಥ್ ಕೊಡುತ್ತಾರೆ. ನಾನು ಈ ಸಣ್ಣ ಅವಧಿಯಲ್ಲಿಯೇ ಡಿಸೈನರ್ ಕೋರ್ಸ್ ಶುರು ಮಾಡಿದ್ದು. ಆ ನಂತರ ಅನೇಕರು ಪ್ರೇರಣೆಗೊಂಡು ತಮ್ಮನ್ನು ಫಾಲೋ ಮಾಡುತ್ತಿದ್ದಾರೆ. ಅದಕ್ಕೆ ತುಂಬಾನೇ ಖುಷಿ ಇದೆ.

ಎಲ್ಲಿ ನೋಡಿದರೂ ಅವಳಿ ಮಕ್ಕಳ ತಾಯಿ, ಮಮ್ಮಿ ಬ್ಲಾಗರ್ ರಶ್ಮಿ ಗೌಡ ವಿಡಿಯೋ ಟ್ರೆಂಡ್!

ನಿಮ್ಮ ಕೂದಲನ್ನು ಕ್ಯಾನ್ಸರ್ ರೋಗಿಗಳಿಗೆ ದಾನ ಮಾಡಿದ ಬಗ್ಗೆ ಹೇಳಿ..
ನನ್ನ ಕೂದಲು ಅಂದ್ರೆ ನನಗೆ ತುಂಬಾನೇ ಇಷ್ಟ. ಆದರೆ ಆರೋಗ್ಯ ಸಮಸ್ಯೆಯಿಂದ ತುಂಬಾನೇ ಕೂದಲು ಉದುರಿತ್ತು. ಆಗ ನಾನು ಇಡೀ ಲೈಫ್‌ಸ್ಟೈಲ್ ಬದಲಾಯಿಸಿಕೊಂಡೆ. ಅಲ್ಲಿಂದ ನನ್ನ ಮೆಚ್ಯುರಿಟಿ ಲೆವೆಲ್ ಬದಲಾಯಿತು. ನಾನು ಈಗಲೂ ಬ್ಯೂಟಿ ಕಾನ್ಶಿಯಷ್ ಆಗಿಲ್ಲ, ಬ್ಯೂಟಿ ಸ್ಟ್ಯಾಂಡರ್ಡ್‌ ಮೀಟ್ ಮಾಡುವುದಕ್ಕೆ ಒತ್ತಡ ತೆಗೆದುಕೊಳ್ಳಬೇಡಿ ಅಂತ ನನ್ನ ವಿದ್ಯಾರ್ಥಿನಿಯರಿಗೆ ಹೇಳುತ್ತಲೇ ಇರುತ್ತೇನೆ. ಒಳ್ಳೆಯ ಕೆಲಸ ಮಾಡಬೇಕು ಅಂತ ಆಸೆ ಇತ್ತು. ಕೂದಲು ಇಲ್ಲೇ ಎಷ್ಟು ನೋವು ಆಗುತ್ತದೆ ಅಂತ ಗೊತ್ತಿತ್ತು. ಅದಕ್ಕೆ ಹೇಗಿದ್ದರೂ ಕಟ್ ಮಾಡಿಸುವಾಗ ಒಳ್ಳೆಯ ಉದ್ದೇಶ ಇರಲಿ ಅಂತ ಕ್ಯಾನ್ಸರ್ ರೋಗಿಗಳಿಗೆ ಕೂದಲನ್ನು ದಾನ ಮಾಡಲು ನಿರ್ಧರಿಸಿದೆ. ಈ ಮೂಲಕ ಕೂದಲು ಇರಲಿ, ಇಲ್ಲದೇ ಇರಲಿ ನಾವು ಸದಾ ಬ್ಯೂಟಿಫುಲ್ ಎಂದು ಮೆಸೇಜ್ ಕೊಡಬೇಕಿತ್ತು.

ತುಂಬಾನೇ ಡಿಫರೆಂಟ್ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತೀರಾ, ಸೆಲೆಕ್ಷನ್ ಆ್ಯಂಡ್ ಕಲೆಕ್ಷನ್ ಹೇಗಿದೆ?
ಫ್ಯಾಷನ್ ಡಿಸೈನರ್ ಆಗಿ ಎಕ್ಸ್‌ಪರಿಮೆಂಟ್ ಮಾಡೋದು ನಂಗಿಷ್ಟ. ಕೆಲವೊಮ್ಮೆ inferiority complex ಕಾಡುತ್ತೆ. ಸ್ವಲ್ಪ ದಪ್ಪ ಆದ್ರೆ ಹೇಗೆ ಎಕ್ಸಪರಿಮೆಂಟ್ ಮಾಡೋದು ಅನ್ನೋ ಯೊಚನೆಯೂ ಕಾಡುತ್ತೆ. ಎಲ್ಲಿ ಹೇಗೆ ಡ್ರೆಸ್ ಹಾಕಬೇಕು ಅನ್ನೋದು ಮುಖ್ಯ. ನಾನು ಸಂಸ್ಥೆಯಲ್ಲಿರುವಾಗ ಫಾರ್ಮಲ್ ಕ್ಯಾಶ್ಯುಯಲ್ ಹಾಕ್ತೀನಿ. ಆರ್ಡರ್ ಕೊಡಲು ಕಸ್ಟಮರ್ ಬಂದಾಗ ಫೆಮಿನೈನ್ ಆಗಿ ರೆಡಿಯಾಗುವೆ, ಟ್ರಿಪ್‌ ಅಥವಾ ಸ್ನೇಹಿತರ ಜೊತೆ ಹೊರ ಹೋಗುವಾದ ಟಾಮ್‌ಬಾಯ್‌ ರೀತಿ ಡ್ರೆಸ್ ಹಾಕ್ತೀನಿ. ಸಂದರ್ಭಕ್ಕೆ ತಕ್ಕಂತೆ ರೆಡಿಯಾದರೆ ಎಲ್ಲರಿಗೂ ಪ್ರೇರಣೆ ಅಗುತ್ತೀವಿ. 

24 ಚಿಕ್ಕ ವಯಸ್ಸು, ಸ್ಟುಡಿಯೋ ತೆರೆದಾಗ ಏನಾದರೂ ಟೀಕೆ ಎದುರಾಗಿತ್ತಾ?
ತುಂಬಾನೇ ಕ್ರಿಟಿಕ್‌ಗಳು ಎದುರಾಗಿತ್ತು. ಏಕೆಂದರೆ ನಾನು ಪದವಿ ಪಡೆದು 6 ತಿಂಗಳಿಗೇ ಉದ್ಯಮ ಶುರು ಮಾಡುತ್ತಿದ್ದೀನಿ ಅಂದಾಗ, ನಿನಗೆ ಏನು ಸಾಮರ್ಥ್ಯವಿದೆ ಎಂದು ಪ್ರಶ್ನಿಸಿದ್ದರು. ನಾನು ಮನೆಯಲ್ಲಿ ಈ ವಿಚಾರ ಹೇಳಿದೆ. ಆಗ ಅವರು, 12ನೇ ತರಗತಿ ಓದಿರುವವರು ಮನೆಯಲ್ಲಿ ಅನೇಕರಿಗೆ ಪಾಠ ಹೇಳಿ ಕೊಡುತ್ತಾರೆ. ಇವರೇ ಮಾಡಬೇಕು, ಅವರೇ ಮಾಡಬೇಕು ಅಂತೇನೂ ಇಲ್ಲವೆಂದು ಧೈರ್ಯ ತುಂಬಿದರು. ಅದಕ್ಕೆ ಶುರು ಮಾಡಿದೆ. ಮೊದಲ ಬ್ಯಾಚ್ ನಂತರವೂ ಅನೇಕರಿಗೆ ನನ್ನ ಕೆಲಸದ ಮೇಲೆ ಅನುಮಾವಿತ್ತು. ಟಿಕ್‌ಟಾಕ್‌ನಲ್ಲಿ ನನ್ನ ನೋಡಿ ಬಂದು ಸಂಸ್ಥೆ ಸೇರಿಕೊಂಡರು. ಈಗ ನನ್ನ ಬಗ್ಗೆ ಇರುವ ಇಮೇಜ್ ಬದಲಾಗಿದೆ. ನನ್ನನ್ನು ಮೆಂಟರ್ ಮತ್ತು ಡಿಸೈನರ್ ಎಂದು ಕರೆಯುತ್ತಾರೆ.ಈ ಬಗ್ಗೆ ಹೆಮ್ಮೆ ಇದೆ ನಂಗೆ.

click me!