ಆ್ಯಂಕರ್ ಅನುಶ್ರೀಗೆ ಡ್ರೆಸ್‌ ಡಿಸೈನ್ ಮಾಡ್ತಾರೆ ಅಂಜಲಿ ರಾಜ್‌!

By Vaishnavi Chandrashekar  |  First Published Mar 8, 2022, 5:24 PM IST

ಪ್ರತಿ ವಾರವೂ ಟಿವಿಯಲ್ಲಿ ಸೆಲೆಬ್ರಿಟಿಗಳನ್ನು ವಿಭಿನ್ನವಾಗಿ ತೋರಿಸುವ ಸೆಲೆಬ್ರಿಟಿ ಡಿಸೈನರ್ ಅಂಜಲಿ ರಾಜ್‌ ಮಹಿಳಾ ದಿನಾಚರಣೆ ಪ್ರಯುಕ್ತ ತಮ್ಮ ವೃತ್ತಿ ಜೀವನದ ಬಗ್ಗೆ ಮಾತನಾಡಿದ್ದಾರೆ.


ವೈಷ್ಣವಿ ಚಂದ್ರಶೇಖರ್

ಕನ್ನಡ ಚಿತ್ರರಂಗ ಮತ್ತು ಕಿರುತೆರೆಯ ಬಹುತೇಕ ಸೆಲೆಬ್ರಿಟಿಗಳು ಡಿಫರೆಂಟ್ ಆ್ಯಂಡ್ ಯುನೀಕ್ ಔಟ್‌ಫಿಟ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಅಂದ್ರೆ ಅದಕ್ಕೆ ಸ್ಟೈಲಿಸ್ಟ್‌ ಅಂಜಲಿ ರಾಜ್‌ ಕಾರಣ. ಲೈಫ್ ಸೂಪರ್ ಗುರು ರಿಯಾಲಿಟಿ ಶೋನಿಂದ ತಮ್ಮ ಡಿಸೈನಿಂಗ್ ಜರ್ನಿ ಆರಂಭಿಸಿದ ಅಂಜಲಿ, ಜೀವದಲ್ಲಿ ದೊಡ್ಡ ಯಶಸ್ಸು ನೋಡಿದ್ದು ಹೇಗೆ? ಮುಂಬರುವ ಯುವಕರು ನೆನಪಿಟ್ಟುಕೊಳ್ಳಬೇಕಾದ ಒಂದು ವಿಚಾರ ಏನೆಂದು ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಮ್‌ಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

Latest Videos

undefined

ಕಾಸ್ಟ್ಯೂಮ್ ಡಿಸೈನರ್ ಆಗಿ ಜರ್ನಿ ಶುರುವಾಗಿದ್ದು ಹೇಗೆ?
ನನ್ನ ವಿದ್ಯಾಭ್ಯಾಸ ಮುಗಿದು, ಮದ್ವೆಯಾಗಿ ಮಗು ಆದ ಮೇಲೆ ನಾನು ಸಣ್ಣದಾಗಿಯೇ ಈ ವೃತ್ತಿ ಆರಂಭಿಸಿದೆ. ಚಿತ್ತಾರ ಮ್ಯಾಗಜಿನ್‌ ಮತ್ತು ಜಾಹೀರಾತಿಗೆ ನನ್ನ ಫ್ರೀ ಸಮಯದಲ್ಲಿ ಕೆಲಸ ಮಾಡುತ್ತಿದ್ದೆ. ನನ್ನ ಕೆಲಸ ನೋಡಿ ಸಿನಿಮಾ ಕ್ಷೇತ್ರದಿಂದ ಆಫರ್ಸ್ ಬಂದವು. 6 ವರ್ಷಗಳ ಹಿಂದೆ ಲೂಸ್ ಮಾದ ಯೋಗಿ ಅವರ 'ಲೈಫ್‌ ಸೂಪರ್ ಗುರು' ಶೋ ಮತ್ತು ಖಾಸ್ ಬಾತ್ ವಿತ್ ಭಾವನಾ ಬೆಳಗೆರೆ ಮಾಡಿದ ನಂತರ ಜೀ ಕನ್ನಡದ ಡ್ರಾಮಾ ಜ್ಯೂನಿಯರ್ಸ್‌ಗೆ ಕಾಸ್ಟೂಮ್ ಡಿಸೈನ್ ಮಾಡಲು ಶುರು ಮಾಡಿದೆ. 

ನಿಮ್ಮ ಎಜುಕೇಷನ್ ಮತ್ತು ಬ್ಯಾಗ್ರೌಂಡ್?
ನಾನು ಹುಟ್ಟಿದ್ದು ಎಲ್ಲಾ ಯಲಹಂಕದಲ್ಲಿ. ನನ್ನ ಸಂಪೂರ್ಣ ವಿದ್ಯಾಭ್ಯಾಸ ಮಲ್ಲೇಶ್ವರಂ ಶೇಶಾದ್ರಿಪುರಂ ಕಾಲೇಜ್‌ನಲ್ಲಿ ಆಯಿತು. ಮದುವೆಯಾಗಿ ನನ್ನ ಮಗಳು ಹುಟ್ಟಿದ ಮೇಲೆ ನಾನು ಪ್ರೋಫೆಷನಲ್ ಆಗಿ ಕೆಲಸ ಶುರು ಮಾಡಿದೆ. 6-7 ವರ್ಷ ದೊಡ್ಡ ಗ್ಯಾಪ್ ಆಗಿತ್ತು. ನನ್ನ ಅತ್ತೆ ಮಾವ ತುಂಬಾನೇ ಸಪೋರ್ಟಿವ್. ನಾನು, ನನ್ನ ಪತಿ ರಾಜ್‌ಕುಮಾರ್ ಸೇರಿಕೊಂಡು ಕೆಲಸ ಮಾಡುತ್ತಿದ್ದೇವೆ. ಅವರು ತಮ್ಮ ಬ್ಯುಸಿನೆಸ್ ಬಿಟ್ಟು ನನಗೆ ಸಪೋರ್ಟ್ ಮಾಡುತ್ತಿದ್ದಾರೆ. ನಾವು ಸುಮಾರು 6 ವರ್ಷಗಳಿಂದ ಒಟ್ಟಿಗೇ ಕೆಲಸ ಮಾಡುತ್ತಿದ್ದೀವಿ.

ಸೆಲೆಬ್ರಿಟಿಗಳಿಗೆ ಡಿಸೈನ್ ಮಾಡಬೇಕು ಅನಿಸಿದ್ದು, ಕಾಂಟ್ಯಾಕ್ಟ್‌ ಬೆಳೆದಿದ್ದು ಹೇಗೆ?
ನಾನು ಕೆಲಸ ಶುರು ಮಾಡಿದ್ದು ಕ್ಯಾಲೆಂಡರ್‌ ಶೂಟ್ ಮೂಲಕ. ಆಗ ಸೆಲೆಬ್ರಿಟಿಯಾಗಿ ಸೋನು ಗೌಡ, ದೀಪಿಕಾ ದಾಸ್ ಇದ್ರು. ನನ್ನ ಕೆಲಸ ನೋಡಿದ ಮೇಲೆ ನನಗೆ ಸಿನಿಮಾ ಆಫರ್ಸ್ ಹೆಚ್ಚಾಯಿತು. ಯೋಗರಾಜ್‌ ಭಟ್ ಮತ್ತು ಸೋನು ಗೌಡ ಅವರ 'ದ್ಯಾವ್ರೇ' ಸಿನಿಮಾಗೆ ನಾನು ಮೊದಲು ಡಿಸೈನ್ ಮಾಡಿದೆ. ಕಿರುತೆರೆ ಜರ್ನಿ ಶುರುವಾಗುವುದಕ್ಕೆ ಜೀ ವಾಹಿನಿಯೇ ಕಾರಣ.

ಆನುಶ್ರೀ ಜೊತೆಗಿರುವ ಫ್ರೆಂಡ್‌ಶಿಪ್‌ ಬಗ್ಗೆ... 
ನನ್ನ ಅನುಶ್ರೀ ಸ್ನೇಹ ಬೆಳೆದಿದ್ದು ಪ್ರೊಫೆಷನ್ ಮೂಲಕವೇ. ಈಗ ನಾವು ಒಂದು ಫ್ಯಾಮಿಲಿಯೇ ಆಗಿದ್ದೀವಿ. ಇಬ್ಬರ ಮನೆ ಬೇರೆ ಬೇರೆ ಇದೆ. ಆದರೆ ನಾವು ಒಂದೇ ಫ್ಯಾಮಿಲಿ. ಅವ್ರು ನಮ್ಮ ಮನೆಗೆ ಬಂದರೆ, ತುಂಬಾ ದಿನ ಇರುತ್ತಾರೆ. ನಾವು ಅವ್ರು ಮನೆಗೆ ಹೋದರೂ ಮೂರ್ನಾಲ್ಕು ದಿನಗಳು ಅಲ್ಲಿಯೇ ಇರ್ತಿವಿ. ನಮ್ಮಿಬ್ಬರು ಸಾಕು ನಾಯಿಯನ್ನು ಕರೆದುಕೊಂಡು, ಫ್ಯಾಮಿಲಿ ಟ್ರಿಪ್ ಮಾಡ್ತೀವಿ. ಅವರ ತಾಯಿ ಕೂಡ ನಮ್ಮ ಜೊತೆಗಿರುತ್ತಾರೆ. 

ಕೆಲಸ ಹೋಗಿತ್ತು, ಎದೆಗುಂದಲಿಲ್ಲ ಬ್ಯುಸಿನೆಸ್ ಆರಂಭಿಸಿ ಯಶಸ್ವಿಯಾದ Love Mocktail 2 ನಟಿ ಸುಶ್ಮಿತಾ ಗೌಡ!

ಸ್ಟಾರ್ಸ್ ಒಂದೆಡೆಯಾದರೆ, ಅನುಶ್ರೀ ಕೂಡ ಸ್ಟಾರ್ ಆ್ಯಂಕರ್, ಹೀಗಾಗಿ ಒಂದು ಸಲ ಹಾಕಿದ ಡ್ರೆಸ್ ಬೇರೆ ಯಾರೂ ಹಾಕಬಾರದು. ರಿಪೀಟ್ ಆಗದೇ ಇರೋಕೆ ಹೇಗೆ ಹೋಮ್‌ವರ್ಕ್ ಮಾಡ್ತಾರೆ?
ಇದಕ್ಕೆ ತುಂಬಾ ಹೋಮ್‌ವರ್ಕ್ ಮಾಡಬೇಕು. ವಾಹಿನಿ ಜೊತೆ ನಮಗೆ ಅಗ್ರೀಮೆಂಟ್ ಆಗಿರುತ್ತದೆ. ಅಲ್ಲಿ ಬಳಸುವ ಉಡುಪು ಬೇರೆ ಎಲ್ಲಿಯೂ ಬಳಸಬಾರದೆಂದು. ಹಾಗೆಯೇ ಯಾರಿಗೂ ಕೊಡಬಾರದು ಎಂದು. ಮೊದಲ ದಿನದಿಂದ ನಾನು ಅನುಶ್ರೀಗೆ ಡಿಸೈನ್ ಮಾಡಿರುವ ಉಡುಪುಗಳನ್ನು ಒಂಡು ಸಪರೇಟ್ ರೂಮ್ ಮಾಡಿ ಇಟ್ಟಿರುವೆ. ಒಬ್ಬರಿಗೂ ಕೊಟ್ಟಿಲ್ಲ. ತುಂಬಾ ಜನರು ಕೇಳುತ್ತಾರೆ, ಸ್ವಂತಕ್ಕೆ ಬಳಸುತ್ತೇನೆ ಎನ್ನುತ್ತಾರೆ. ಆದರೂ ನಾನು ಕೊಡುತ್ತಿಲ್ಲ. ಯಾರ ಜೊತೆಗೂ ಕೋಲಾಬೋರೆಟ್ ಮಾಡಿಕೊಳ್ಳುವುದಿಲ್ಲ.

ಗ್ರ್ಯಾಂಡ್ ಫಿನಾಲೆಗಳಲ್ಲಿ ಕೂಡ ಗ್ರ್ಯಾಂಡ್ ಆಗಿ ಕಾಣಿಸಿಕೊಳ್ಳಬೇಕಾಗುತ್ತದೆ, ಆಗ ಯಾವ ರೀತಿ ಪ್ಲ್ಯಾನ್ ಮಾಡ್ತೀರಾ?
ಸರಿಗಮಪ ರಿಯಾಲಿಟಿ ಶೋಗೆ ಸಂಪೂರ್ಣವಾಗಿ ನಾನೇ ಮಾಡುತ್ತಿರುವುದು. ಗ್ರ್ಯಾಂಡ್ ಫಿನಾಲೆಗೆ ಥೀಮ್‌ ಇರುತ್ತೆ. ಗ್ರ್ಯಾಂಡ್ ಫಿನಾಲೆ ಅಂತ ಗ್ರ್ಯಾಂಡ್ ಕೇಳುತ್ತಾರೆ. ಆಗ ಎಕ್ಸಟ್ರಾ ವರ್ಕ್ ಮಾಡಬೇಕು. ನನ್ನ ಡಿಸೈನ್‌ ಥೀಮ್‌ನ ಅವರಿಗೆ ಕೊಟ್ಟು, ಆನಂತರ ಎಲ್ಲಾ ಮ್ಯಾಚ್ ಆದ ಮೇಲೆ ಫೈನಲೈಸ್ ಆಗುತ್ತೆ. ನಾರ್ಮಲ್ ಎಪಿಸೋಡ್‌ಗೆ ನಾನೇ ಮಾಡಿಕೊಂಡು ಹೋಗುತ್ತೀನಿ. ಮುಖ್ಯವಾದ ದಿನ ಮಾತ್ರ ಥೀಮ್ ಇರುತ್ತದೆ. 

ಅನುಶ್ರೀ ಧರಿಸಿರುವ ಡ್ರೆಸ್ ನೋಡಿ ಸಾಮಾನ್ಯರಿಗೂ ಅದೇ ರೀತಿ ಬೇಕು ಅನಿಸುತ್ತದೆ. ಅವರಿಗೆ ಏನ್ ಸಜೆಕ್ಷನ್ ಕೊಡ್ತೀರಾ?
ತುಂಬಾ ಜನರು ಕೇಳುತ್ತಾರೆ. ಅದೇ ರೀತಿ ಡಿಸೈನ್ ಮಾಡುವುದಕ್ಕೆ. ಆದರೆ ನಾನು ಬಜೆಟ್ ನೋಡಿ ನಿರ್ಧಾರ ಮಾಡ್ತೀನಿ. ಕಡಿಮೆ ಕೇಳುತ್ತಾರೆ ಅಂತ ನಾನು ಕ್ವಾಲಿಟಿಯಲ್ಲಿ ಕಾಂಪ್ರೋಮೈಸ್ ಆಗುವುದಿಲ್ಲ. ಹೆಸರು ಹಾಳಾಗುತ್ತದೆ. ಪಬ್ಲಿಕ್‌ಗೆ ಇನ್ನೂ ಶುರು ಮಾಡಿಲ್ಲ, ಮಾಡಿದರೂ ಬೋಟಿಕ್‌ ಮಾಡಬೇಕು. ಬಟ್ಟೆ ಕ್ವಾಲಿಟಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತೀನಿ. 

ಸೆಲೆಬ್ರಿಟಿಗಳಿಗೆ ಮತ್ತು ಸೆಲೆಬ್ರಿಟಿ ಆ್ಯಂಕರ್ಸ್‌ಗೆ ಡಿಸೈನ್ ಮಾಡೋದು ಕಷ್ಟನಾ?
ಡಿಸೈನ್ ಮಾಡೋದು ಕಷ್ಟ ಇದೆ. ನಾವು ಹೇಗೆ ತೆಗೆದುಕೊಳ್ಳುತ್ತೀವೋ ಹಾಗೆ ಅನಿಸುತ್ತೆ. ಕಷ್ಟ ಅಂದ್ರೆ ಕಷ್ಟ, ಸುಲಭ ಅಂದ್ರೆ ಸುಲಭ. ನಾನು ತುಂಬಾ ಇಷ್ಟಪಟ್ಟು ಕೆಲಸ ಮಾಡ್ತೀನಿ. ಹಾಗೆ ನನ್ನ ಜೊತೆ ಎಲ್ಲರೂ ಚೆನ್ನಾಗಿರುತ್ತಾರೆ. ಜೀ ವಾಹಿನಿ ನನಗೆ ಕುಟುಂಬವೇ ಆಗಿದೆ. ನಾವು ಪ್ರತಿವಾರ ಒಂದು ಡಿಸೈನ್‌ ತೆಗೆದುಕೊಂಡು ಹೋಗ್ತೀವಿ. ಅದು ಅವರಿಗೆ ಇಷ್ಟ ಆಗಬೇಕು. ಏಕೆಂದರೆ ಟ್ರಯಲ್ ಇರುವುದಿಲ್ಲ. ಒಂದು ಡಿಸೈನ್ ಇಷ್ಟ ಆಗಿಲ್ಲ, ಅಂದ್ರೆ ನಾನು ಆಪ್ಷನ್ ಇಟ್ಟುಕೊಂಡಿರುತ್ತೀನಿ. ಸ್ವಲ್ಪ ಕಷ್ಟವೇ ಇದೆ. ಆದರೆ ಅವರ ಮೇಲೆ ಡಿಪೆಂಡ್ ಆಗುತ್ತದೆ, ನಾವು ಅವರಿಗೆ ಹೇಗೆ ಒಪ್ಪಿಸುತ್ತೀವಿ ಅನ್ನೋದು ಮುಖ್ಯ. ಉಡುಪಿಗೆ ತಕ್ಕಂತೆ accessories ಮ್ಯಾಚ್ ಮಾಡಬೇಕು. ಹೀಗಾಗಿ ಪ್ರತಿಯೊಂದೂ ನಾವು ಪ್ರಿಪೇರ್ ಮಾಡಿಕೊಳ್ಳಬೇಕು.

ಅನುಶ್ರೀ ಹೆಚ್ಚಿಗೆ ಯಾವ ರೀತಿ ಕಾಸ್ಟ್ಯೂಮ್ ಇಷ್ಟ ಪಡುತ್ತಾರೆ?
ಅನುಶ್ರೀ ಮಾಡುವ ಬಹುತೇಕ ಕಾರ್ಯಕ್ರಮಗಳು ಫ್ಯಾಮಿಲಿ ಶೋ ಅವರಿಗೆ ಸ್ಲೀವ್‌ಲೆಸ್‌ ಇಷ್ಟ ಆಗುವುದಿಲ್ಲ, ಡೀಪ್ ನೆಕ್ ಇರ್ಬಾರದು. ತುಂಬಾ ಹೋಮ್ಲಿ ಹುಡುಗಿ ಅವರು. ಅದಕ್ಕೆ ಫುಲ್ ಕವರ್ ಆಗಿರಬೇಕು. ಎಥ್ನಿಕ್ ಅವರಿಗೆ ತುಂಬಾ ಸೂಟ್ ಆಗುತ್ತೆ. ಡಿಸೈನರ್ ಆಗಿ ಅನುಶ್ರೀಗೆ ನಾನು ಎಥ್ನಿಕ್ ಮಾಡೋಕೆ ಇಷ್ಟ. ಅನು ಯಾವತ್ತೂ ಏನೂ ಡಿಮ್ಯಾಂಡ್ ಮಾಡುವುದಿಲ್ಲ. ತುಂಬಾ ಫ್ರೆಂಡ್ಲಿ. ಯಾವ ರಿಸ್ಟ್ರಿಕ್ಷನ್ಸ್ ಸಹ ಇಲ್ಲ. ಫ್ರೆಂಡ್‌ಶಿಪ್‌ ಬೇರೆ. ಕೆಲಸನೇ ಬೇರೆ. ಯಾವುದೂ ಮಿಕ್ಸ್ ಮಾಡುವುದಿಲ್ಲ. ಕೆಲಸ ಅಂತ ಬಂದಾಗ ಅವರು ಫ್ರೀ ಇರುತ್ತಾರೆ. ಜೊತೆ ಜೊತೆಯಲಿ ನಟಿ ಮೇಘಾ ಶೆಟ್ಟಿ ನನಗೆ ಫ್ಯಾಮಿಲಿ ಫ್ರೆಂಡ್. ಅವರ ಅಕ್ಕ ಕೂಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವವರು. ಅವರಿಗೂ ನಾನು ಡಿಸೈನ್ ಮಾಡ್ತೀನಿ. 

ಸೆಲೆಬ್ರಿಟಿಗಳು ಕಾಸ್ಟ್ಯೂಮ್ ಹಾಕೋಳೋಕೆ ಇಷ್ಟ ಪಡ್ತಾರೆ. ಅದರೆ ಟ್ರೈಲರ್ ಮಾಡೋಕೆ ಇಷ್ಟ ಪಡೋಲ್ಲ ಅಂತ Myth ಇದೆ, ಇದು ನಿಜಾನಾ?
No way. ಎಲ್ಲರಿಗೂ ತಪ್ಪದೇ ಟ್ರಯಲ್ ಮಾಡುತ್ತಾರೆ. ಬೇರೆಯವರು ಕೊಡ್ತಾರೋ, ಇಲ್ವೊ ಗೊತ್ತಿಲ್ಲ. ಆದರೆ ನನ್ನ ಸಮಾಧಾನಕ್ಕೆ ನಾನು ಕೊಡ್ತೀನಿ. ಎಲ್ಲಾ ಟ್ರಯಲ್ ಮಾಡಿಸಿ, ಚೆಕ್ ಮಾಡಿಯೇ ಕೆಲಸ ಶುರು ಮಾಡುವುದು. ಅನುಶ್ರೀ ಅವರಿಗೆ ಪ್ರತಿವಾರ ಟ್ರಯಲ್ ಇರುತ್ತದೆ. ಜಡ್ಜ್‌ಗಳ ಜೊತೆ ಟೈಮ್ ಅಡ್ಜೆಸ್ಟ್ ಆಗದೇ ಇರುವ ಕಾರಣ ಟ್ರಯಲ್ ಆಗುವುದಿಲ್ಲ. ಅರ್ಜುನ್ ಸರ್ ಮೈಸೂರಿನಲ್ಲಿ ಇರುತ್ತಾರೆ, ವಿಜಯ್ ಸರ್ ಬಾಂಬೆಯಲ್ಲಿ ಇರುತ್ತಾರೆ. ಹಂಸಲೇಖ ಸರ್ ಕೂಡ ಬ್ಯುಸಿಯಾಗಿರುತ್ತಾರೆ. ಹೀಗಾಗಿ ಅವರಿಗೆ ಎಕ್ಸಟ್ರಾ ಉಡುಪು ಇರುತ್ತದೆ. 6 ವರ್ಷಗಳಿಂದ ಅವರ ಜೊತೆ ಕೆಲಸ ಮಾಡುತ್ತಿರುವ ಕಾರಣ ಅವರ ಟೇಸ್ಟ್‌ ನನಗೆ ಅರ್ಥ ಆಗಿದೆ. ಯಾವ ಕಲರ್ ಇಷ್ಟ, ಯಾವ ಪ್ಯಾಟ್ರನ್ ಬೇಕು ಎಂದು. 

ವಯಸ್ಸಿನ್ನೂ 24, ನಟಿಯರ ಫೇವರೆಟ್‌ ಫ್ಯಾಷನ್ ಡಿಸೈನರ್, ನಿಧಿ ಗೌಡ ಸಕ್ಸಸ್ ಸ್ಟೋರಿ!

ಮಹಿಳಾ ಉದ್ಯಮಿ ಆಗಿ ಮುಂಬರುವ ಹೆಣ್ಣು ಮಕ್ಕಳಿಗೆ ನಿಮ್ಮ ಸಜೆಷನ್?
ನಾವು ಫ್ರೊಫೆಷನಲ್ ಆಗಿಯೂ ಇರಬೇಕು. ಹಾಗೇ ಸ್ನೇಹಿತರಾಗಿಯೂ ಇರಬೇಕು. ಕೆಲವರು ಟೆನಆಷನ್‌ ತೆಗೆದುಕೊಳ್ಳುತ್ತಾರೆ ಸೆಲೆಬ್ರಿಟಿಗಳ ಹತ್ತಿರ ಹೋಗುವುದಕ್ಕೆ ಭಯ ಪಡುತ್ತಾರೆ. ಯಾರೋ ಒಬ್ಬರು ಸ್ಟ್ರೈಟ್ ಇರುತ್ತಾರೆ ಅಂತ ಎಲ್ಲರೂ ಹಾಗೆ ಇರುವುದಿಲ್ಲ. ರಕ್ಷಿತ್ ಪ್ರೇಮ್, ರಚಿತಾ ರಾಮ್ ಸೇರಿದಂತೆ ಅನೇಕರ ಜೊತೆ ಕೆಲಸ ಮಾಡಿದ್ದೀವಿ ಯಾರ ಜೊತೆನೂ ನನಗೆ ಕೆಟ್ಟ ಅನುಭವ ಆಗಿಲ್ಲ. ಜೀ ಕುಟುಂಬ ನನಗೆ ಫ್ಯಾಮಿಲಿ ಆಗಿದೆ. ರಾಘವೇಂದ್ರ ಹುಣಸೂರು ಸರ್‌ ಮತ್ತು ಟೀಂಗೆ ಧನ್ಯವಾದ ಹೇಳಬೇಕು.

ಸಿನಿಮಾಗಳಿಗೆ ಈಗಲೂ ಕೆಲಸ ಮಾಡುತ್ತಿದ್ದೀರಾ?
ನಾನು ಇದುವರೆಗೂ 25 ಸಿನಿಮಾಗಳಲ್ಲಿ ಕೆಲಸ ಮಾಡಿದ್ದೀನಿ ಕೆಲವೊಂದು ಹಾಡುಗಳಿಗೂ ಮಾಡಿದ್ದೀನಿ. ಈಗ ಅನುಶ್ರೀ ನಟನೆಯ ಸೈತಾನ ಮತ್ತು ರಂಗನಾಯಕ ಸಿನಿಮಾಗೆ ಡಿಸೈನ್ ಮಾಡುತ್ತಿದ್ದೀನಿ.

click me!