
ಆರ್. ಕೇಶವಮೂರ್ತಿ
ನಿಮ್ಮ ಚಿತ್ರಗಳು ಟಿಪಿಕಲ್ಲಾಗಿರುತ್ತವೆ. ಆದರೆ, ಇಲ್ಲಿ ಬೇರೆ ರೀತಿ ಕಾಣುತ್ತಿದ್ದೀರಲ್ಲ?
ಅದೇ ಹೋಮ್ ಮಿನಿಸ್ಟರ್ ಚಿತ್ರದ ಮಜಾ. ವಿಲಕ್ಷಣ, ಟಿಪಿಕಲ್ ಈ ಎಲ್ಲದರ ಆಚೆಗೆ ಇರುವ ಸಿನಿಮಾ ಇದು. ನೋಡಿ, ಖಂಡಿತ ನಿಮಗೆ ಇಷ್ಟಆಗುತ್ತದೆ.
ನಾಯಕನೇ ಹೋಮ್ ಮೇಕರ್ ಆಗಿರುವಂತೆ ಕಾಣುತ್ತದೆಯಲ್ಲ?
ತರಕಾರಿ ತರೋದು, ಪಾತ್ರ ತೊಳೆಯೋದು, ಮನೆ ಕ್ಲೀನ್ ಮಾಡೋದು ಸೇರಿದಂತೆ ಮನೆ ಕೆಲಸಗಳನ್ನು ಹೆಣ್ಣು ಮಕ್ಕಳೇ ಮಾಡಬೇಕು ಎಂದು ನಾವು ಸೀಮಿತ ಮಾಡಿಬಿಟ್ಟಿದ್ದೇವೆ. ಆ ಕೆಲಸಗಳಲ್ಲಿ ಗಂಡಸರಿಗೂ ಪಾಲಿದೆ, ನಮ್ಮ ಜವಾಬ್ದಾರಿ ಕೂಡ ಅನ್ನೋದು ತುಂಬಾ ಜನ ಮರೆತಿದ್ದೇವೆ. ಮರೆತಿರುವ ಅಂಥ ಹಲವು ವಿಷಯಗಳು ಈ ಚಿತ್ರದಲ್ಲಿ ಬರಲಿವೆ.
ನಿಮ್ಮ ಪ್ರಕಾರ ಹೋಮ್ ಮಿನಿಸ್ಟರ್ ಯಾರು?
ಹೋಮ್ ಮಿನಿಸ್ಟರ್ ಹೆಣ್ಣು ಮಕ್ಕಳೇ. ಯಾಕೆಂದರೆ ಅವರಿಗೆ ಆ ಶಕ್ತಿ ಇದೆ. ಇದರ ಜತೆಗೆ ಮನೆಯ ಆಚೆಗೂ ಅವರ ಸಾಧನೆ ದೊಡ್ಡದು. ಇಲ್ಲಿ ಗಂಡ ತನ್ನ ಪತ್ನಿಗೆ ಬೆಂಬಲವಾಗಿ ನಿಂತುಕೊಂಡು ಏನೆಲ್ಲ ಮಾಡುತ್ತಾನೆ ಎಂಬುದನ್ನು ಚಿತ್ರದಲ್ಲಿ ಹೇಳಲಾಗಿದೆ.
ಚಿತ್ರದ ಕತೆಯನ್ನು ಒಂದು ಸಾಲಿನಲ್ಲಿ ಹೇಳುವುದಾದರೆ?
ಒಬ್ಬ ಉತ್ತಮ ಸ್ಥಾನದಲ್ಲಿರುವ ವ್ಯಕ್ತಿ ಮನೆ ಕೆಲಸಗಳನ್ನು ಮಾಡಿಕೊಂಡು ಹೋಮ್ ಮೇಕರ್ ಆಗಿರುತ್ತಾನೆ. ಇವನು ಯಾಕೆ ಹಿಂಗೆ ಎನ್ನುವ ಪ್ರಶ್ನೆ ಹಾಗೂ ಗೊಂದಲಗಳು ಎಲ್ಲರಲ್ಲೂ ಮೂಡುತ್ತವೆ. ಕೊನೆಯಲ್ಲಿ ಅದಕ್ಕೊಂದು ತಿರುವು ಬರುತ್ತದೆ. ಅದೇ ಚಿತ್ರದ ಕತೆ. ಕೊನೆಯ ತನಕ ತುಂಬಾ ಕುತೂಹಲಕಾರಿಯಾಗಿ ಸಾಗುವ ಕತೆ ಇಲ್ಲಿದೆ. ಹೋಮ್ ಮೇಕರ್ ಆಗಿರುವ ಹೀರೋ ಕೊನೆಯಲ್ಲಿ ಎಲ್ಲರಿಗೂ ಸ್ಫೂರ್ತಿಯಾಗುತ್ತಾನೆ.
ಹೆಣ್ಣಿನ ಗೆಟಪ್‌ನಲ್ಲಿರುವ ನಿಮ್ಮ ಫೋಟೋ ಹಿಂದಿನ ಗುಟ್ಟೇನು?
ಕತೆಗೆ ತಿರುವು ಕೊಡುವ ಗೆಟಪ್ ಅದು. ಚಿತ್ರದಲ್ಲಿ ತುಂಬಾ ಕಡಿಮೆ ಸಮಯದಲ್ಲಿ ಆ ಗೆಟಪ್‌ನ ಪಾತ್ರ ಬರುತ್ತದೆ. ಅದೇ ಇಡೀ ಚಿತ್ರಕ್ಕೆ ತಿರುವು ಕೊಡುತ್ತದೆ.
ಸಾಮಾಜಿಕ ಸಂದೇಶ ಇರುವ ಕತೆಯನಾ?
ಮನರಂಜನೆ ಜತೆಗೆ ಮನಸ್ಸಿಗೆ ಹಿಡಿಸುವ ಸಂದೇಶಾತ್ಮಕ ಸಿನಿಮಾ ಇದು. ಯಾರಿಗೂ ಗೊತ್ತಿಲ್ಲದ ಒಂದು ವಿಷಯ ಇಲ್ಲಿದೆ. ಅದನ್ನು ಚಿತ್ರಮಂದಿರಗಳಲ್ಲೇ ನೋಡಬೇಕು. ನನಗೆ ಗೊತ್ತಿರುವಂತೆ ಇದು ನಿಜವಾದ ಫ್ಯಾಮಿಲಿ ಸಿನಿಮಾ.
"
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.