ಅಪ್ಪನ ಮುದ್ದಿನ ಮಗಳು 'ದೊರೆಸಾನಿ' ರೂಪಿಕಾ ರಿಯಲ್ ಜೀವನದ ಕಥೆ!

By Suvarna News  |  First Published Mar 18, 2022, 5:05 PM IST

ಮನೆ ಹುಡುಗಿ ರೂಪಿಕಾ ದೊರೆಸಾನಿ ಧಾರಾವಾಹಿ ಮೂಲಕ ಕನ್ನಡ ಕಿರುತೆರೆ ವೀಕ್ಷಕರಿಗೆ ಹತ್ತಿರವಾಗಿದ್ದಾರೆ. ರೂಪಿಕಾ ದೀಪಿಕಾ ಆಗಿದ್ದು ಹೇಗೆ ಗೊತ್ತಾ?


ಬಾಲನಟಿಯಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಮುದ್ದು ಮುಖದ ಚೆಲುವೆ ರೂಪಿಕಾ ಇದೀಗ ದೀಪಿಕಾ ಆಗಿ ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ದೊರೆಸಾನಿ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ದೀಪಿಕಾ ನಮ್ಮ ಮನೆ ಮಗಳೇ ಎಂದು ಹೇಳುವ ಜನರಿಗೆ ಇಲ್ಲಿದೆ exclusive ಪರಿಚಯ. 

ದೊರೆಸಾನಿಗೆ ಸೆಲೆಕ್ಟ್ ಆಗಿದ್ದು ಹೇಗೆ? 
ನನಗೆ ಅಸಿಸ್ಟೆಂಟ್ ಡೈರೆಕ್ಟರಿಂದ ಕಾಲ್ ಬಂತು. ಒಂದು ಚಾನೆಲ್‌ಗೆ ಒಳ್ಳೆ ಬ್ಯಾನರ್‌ನಿಂದ ಸೀರಿಯಲ್‌ ಬರ್ತಿದೆ ಅದಕ್ಕೆ ಲುಕ್‌ ಟೆಸ್ಟ್‌ ಇದೆ ಅಂದ್ರು. ಆಫೀಸ್‌ಗೆ ಹೋದಾಗ ಸೀರಿಯಲ್‌ ಬಗ್ಗೆ ಕೇಳುವುದಕ್ಕಿಂತ ಮೊದಲು ಚಾನೆಲ್‌ ಮತ್ತು ಬ್ಯಾನರ್‌ ಬಗ್ಗೆ ತಿಳಿದುಕೊಂಡಾಗ ತುಂಬಾನೇ ಥ್ರಿಲ್ ಆಯ್ತು. ಜೈ ಮಠ ಕಂಬೈನ್ಸ್‌ನಿಂದ ಹಲವಾರು ಒಳ್ಳೆಯ ಸೀರಿಯಲ್‌ಗಳು ಬಂದಿದೆ. ಕಲರ್ಸ್‌ ಚಾನೆಲ್‌ ಎಂದು ಹೇಳಿದಾಗ ಆರ್ಟಿಸ್ಟ್‌ ಆಗಿ ಒಂದು Satisfaction ಇದೆ, ಕಲಾವಿದೆಯಾಗಿ ಖುಷಿ ಕೊಡುವ ಅವಕಾಶ.

Tap to resize

Latest Videos

ದೊರೆಸಾನಿ ಆರಂಭವಾದಾಗಿನಿಂದ ವೀಕ್ಷಕರ ರೆಸ್ಪಾನ್ಸ್ ಹೇಗಿದೆ? 
ವೀಕ್ಷಕರ ರೆಸ್ಪಾನ್ಸ್‌ ಬಗ್ಗೆ ನಾನು ಹೇಳಲೇ ಬೇಕು. ಎಷ್ಟು ಖುಷಿ ಆಗುತ್ತಿದೆ ಅಂದ್ರೆ ದೊರೆಸಾನಿ ಶುರುವಾಗಿ 2-3 ತಿಂಗಳು ಆಯ್ತು ಅಂದ್ರೆ 70 ಎಪಿಸೋಡ್‌ ಹತ್ರ ಇದ್ದೀವಿ. 100 ಎಪಿಸೋಡ್‌ ಮುಟ್ಟುವಷ್ಟರಲ್ಲಿ ನಮಗೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ನನ್ನ ಹೆಸರು ರೂಪಿಕಾ ಹೋಗಿ ಈಗ ದೀಪಿಕಾ ಆಗಿದೆ. ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಅಥವಾ ಅಕ್ಕಪಕ್ಕ ಅಂಗಡಿಗೆ ಹೋದರೂ ಎಲ್ಲರು ದೀಪು ದೀಪು ಎಂದು ಕರೆಯುತ್ತಿದ್ದಾರೆ. ನನ್ನನ್ನು ಅವರ ಮನೆ ಮಗಳಂತೆ ನೋಡುತ್ತಿದ್ದಾರೆ. ನಾನು ತುಂಬಾ ನ್ಯಾಚುರಲ್ ಆಕ್ಟ್‌ ಮಾಡ್ತೀನಿ ಅಂತಾರೆ ದಿನ ಮಿಸ್ ಮಾಡದೆ ನೋಡ್ತೀವಿ ಅಂತಾರೆ. ಸೀರಿಯಲ್ ಅಂದ್ರೆ ಹೆಣ್ಣು ಮಕ್ಕಳು ಮಾತ್ರ ನೋಡ್ತಾರೆ ಅಂತ ಇತ್ತು ಆದರೆ ಇಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ಐಟಿ ಕೆಲಸ ಮಾಡುವಂತ ಗಂಡಸರು ಕೂಡ ಸೀರಿಯಲ್ ನೋಡ್ತಿದ್ದಾರೆ. ಎಷ್ಟೊಂದು ಜನ ಅಂಕಲ್‌ಗಳು ಕೂಡ ಹೇಳ್ತಿದ್ದಾರೆ ತುಂಬಾ ಚೆನ್ನಾಗಿ ಮಾಡ್ತಿದ್ಯ ಅಂತಾರೆ.  ಮರೆಯಲಾಗ ಘಟನೆ ಏನೆಂದರೆ ಸತ್ಯವತಿ ಅವರು ನನಗೆ ಕಪಾಳಕ್ಕೆ ಹೊಡೆಯುತ್ತಾರೆ ಆ ಸೀನ್ ಆದ್ಮೇಲೆ ಎಷ್ಟು ಜನ ನನಗೆ ಫೋನ್ ಮಾಡಿ ಅಥವಾ ದಾರಿಯಲ್ಲಿ ಸಿಕ್ಕಾಗ ಏನಮ್ಮ ನೀನು ಅವರ ಹತ್ತರ ಈ ರೀತಿ ಹೊಡೆಸಿಕೊಂಡೆ ನೀನು ಸೈಲೆಂಟ್ ಆಗಿ ಇರ್ಬಾರದು ನೀನು ಮಾತನಾಡಬೇಕು ಅನ್ನುವ ರೀತಿಯಲ್ಲಿ ಹೇಳುತ್ತಾರೆ. ಆ ವಮ್ಮ ಸಿಗಲಿ ಮಾಡ್ತೀನಿ ನಾನು ಎಂದು ಹೇಳುತ್ತಾರೆ. ಫ್ಯಾನ್ ಬಿದ್ದಿರುವ ಘಟನೆ ಬಗ್ಗೆನೂ ಕೇಳಿದ್ದರು. ಸೀರಿಯಲ್ ಅನ್ನೋ ರೀತಿ ಅಲ್ಲದೆ ರಿಯಲ್ ಲೈಫ್‌ ಘಟನೆ ರೀತಿ ಕನೆಕ್ಟ್‌ ಆಗ್ತಿದ್ದಾರೆ ಜನರು. ಇಷ್ಟು ವರ್ಷ ಸಿನಿಮಾದಲ್ಲಿ ನೋಡಿ ನನ್ನ ಪ್ರೋತ್ಸಾಹ ಮಾಡಿ ಈಗ ದೊರೆಸಾನಿ ಮೂಲಕ ಹತ್ತಿರವಾಗುತ್ತಿದ್ದಾರೆ.

ನಿಮ್ಮ ಕುಟುಂಬ, ಓದು, ಕಲೆಯಲ್ಲಿ ಆಸಕ್ತಿ ಬಂದಿದ್ದು ಹೇಗೆ?
ನನ್ನ ಕುಟುಂಬ ನಾನು ಅಪ್ಪ ಅಮ್ಮ ಅಣ್ಣ ಮತ್ತು ಅತ್ತಿಗೆ. ತಾಯಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು, ತಂದೆ ವಿಧಾನಸೌಧದಲ್ಲಿ ಕೆಲಸ ಮಾಡುತ್ತಿದ್ದಾರೆ. ಅಣ್ಣ ಮತ್ತು ಅತ್ತಿಗೆ ಇಬ್ಬರೂ ಪ್ರೈವೇಟ್‌ ಫರ್ಮ್‌ನಲ್ಲಿ ಕೆಲಸ ಮಾಡ್ತಿದ್ದಾರೆ. ಈ ನಾಲ್ಕು ಜನ ನನಗೆ ನಾಲ್ಕು ಪಿಲ್ಲರ್ ರೀತಿ. ನಮ್ಮ ಇಡೀ ಕುಟುಂಬ ಕಲಾವಿದರ ಕುಟುಂಬ, ಇತ್ತೀಚಿಗೆ ನನ್ನ ತಾತ ಕಳೆದುಕೊಂಡೆ ಅವರಿಗೆ 97 ವರ್ಷ ಆಗಿತ್ತು ಅವ್ರು ಪೇಂಟರ್‌ ಆಗಿದ್ದರು, ಅಜ್ಜಿ ಮತ್ತು ಮಾವಂದಿರು ಗಾಯಕರು, ಚಿಕ್ಕಮ್ಮ ಎಲ್ಲಾ ಡ್ಯಾನ್ಸರ್‌. ನನ್ನ ಅಣ್ಣ ಥಿಯೇಟರ್‌ನಲ್ಲಿ ಕೆಲಸ ಮಾಡುತ್ತಿದ್ದ. ನಾನು ಓದಿದ್ದು ಸುರಾನಾ ಕಾಲೇಜ್‌ನಲ್ಲಿ. ನನ್ನ ಬಾಲ್ಯ ದಿನಗಳು ತುಂಬಾನೇ ಮೆಮೊರಬಲ್ ಅಗಿತ್ತು. ಚಿಕ್ಕ ವಯಸ್ಸಿನಲ್ಲಿ ಎಲ್ಲರೂ ಮಾಲ್‌ ಪಾರ್ಕ್ ಸುತ್ತುತ್ತಿದ್ದರು ಆದರೆ ನಾನು ರವೀಂದ್ರ ಕಲಾಕ್ಷೇತ್ರ ರಂಗಮಂದಿರ ಟೌನ್‌ ಹಾಲ್ ಈ ರೀತಿ ಸುತ್ತುತ್ತಿದ್ದೆವು.. ನಾನು ಅಷ್ಟು ಕಾಂಪಿಟೇಶನಲ್ಲಿ ಭಾಗವಹಿಸುತ್ತಿದ್ದೆ. ನಮ್ಮ ಬಳಿ ಒಂದು ಚೇತಕ್‌ ಸ್ಕೂಟರ್‌ ಇತ್ತು ಅಪ್ಪ ಅದರಲ್ಲಿ ಹೋಗಿ ಎಲ್ಲಿ ಎಲ್ಲಿ ಸ್ಪರ್ಧೆಗಳು ಇದೆ ಅಂತ ಚೆಕ್ ಮಾಡುತ್ತಿದ್ದರು ನನ್ನ ತಾಯಿ ಆ ಸ್ಪರ್ಧೆಗೆ ಏನು ಬೇಕು ಎಂದು ರೆಡಿ ಮಾಡುತ್ತಿದ್ದರು. ನಾವು ನಾಲ್ಕು ಜನ ಚೇತಕ್‌ನಲ್ಲಿ ಸುತ್ತಿ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದೀನಿ. ನಾನು ಸೆಲೆಬ್ರಿಟಿಗಳ ಜೊತೆ ಫೋಟೋ ತೆಗೆದುಕೊಳ್ಳುತ್ತಿದ್ದೆ ಈಗ ಯಾರಾದರೂ ಬಂದು ಸೆಲ್ಫಿ ಅಂದ್ರೆ ಖುಷಿಯಾಗುತ್ತದೆ. ಏಕೆಂದೆ ನಾನು ಹಂತ ಹಂತವಾಗಿ ಜರ್ನಿ ಶುರು ಮಾಡಿದ್ದೀನಿ. ಇದುವರೆಗೂ ಮೂರು ಸಾವಿರ ಅವಾರ್ಡ್ ಬಂದಿವೆ, 5 ಸಾವಿರ ಸ್ಟೇಜ್‌ ಶೋ ಕೊಟ್ಟಿದ್ದೀನಿ ಕರ್ನಾಕಟ ಮಾತ್ರವಲ್ಲದೆ ಇಡೀ ಇಂಡಿಯಾದಲ್ಲಿ ಸ್ಪರ್ಧಿಸಿದ್ದೀನಿ. ಕೆಂಪೇಗೌಡ ಪ್ರಶಸ್ತಿ ಕೊಟ್ಟಿದ್ದಾರೆ, ಕರ್ನಾಟಕ ಸರ್ಕಾರ ನನಗೆ ಬಹುಮುಖ ಪ್ರತಿಭೆ ಅವಾರ್ಡ್‌ ಕೊಟ್ಟಿದೆ. ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿ ಕೊಟ್ಟಿದ್ದಾರೆ. ಹಾಡುವುದು, ಡ್ಯಾನ್ಸಿಂಗ್, ಪೇಂಟಿಂಗ್ ತುಂಬಾ ಇಷ್ಟ ಇದಕ್ಕೆ ನನ್ನ ತಾಯಿನೇ ಸ್ಪೂರ್ತಿ. 

Come Back: ದೊರೆಸಾನಿ ಮೂಲಕ ಮತ್ತೆ ಕನ್ನಡ ಕಿರುತೆರೆಗೆ ರೂಪಿಕಾ!

 
 ಸಿನಿಮಾದಿಂದ ಸೀರಿಯಲ್‌ ಕಡೆ ಪಯಣ ಹೇಗೆ?
ನನಗೆ ಸಿನಿಮಾ ಮತ್ತು ಸೀರಿಯಲ್‌ ನಡುವೆ ಅಷ್ಟು ವ್ಯತ್ಯಾಸ ಅನಿಸೋಲ್ಲ. ಈಗ ಎರಡು ಮಾಧ್ಯಮಗಳು ಚೆನ್ನಾಗಿ ಆಗುತ್ತಿದೆ ಒಳ್ಳೆಯ ಕ್ವಾಲಿಟಿ ಇದ. ಜನರು ಎರಡಕ್ಕೂ ಅಷ್ಟೇ ಪ್ರೀತಿ ಕೊಡ್ತಿದ್ದಾರೆ. ನಾನು ಬಾಲಕಲಾವಿದೆಯಾಗಿ ಮೊದಲು ಶುರು ಮಾಡಿದ್ದು ಸೀರಿಯಲ್‌ನಿಂದ. ನಾಗತಿಹಳ್ಳಿ ಚಂದ್ರಶೇಖರ್‌ ಅವರ ಬೆಳ್ಳಿ ಚುಕ್ಕಿ ನನ್ನ ಮೊದಲ ಸೀರಿಯಲ್. ಒಟ್ಟು 15-20 ಸೀರಿಯಲ್ ಮಾಡಿ ಆನಂತರ ನಾನು ಸಿನಿಮಾ ಕಡೆ ಬಂದಿದ್ದು ಆಮೇಲೆ ಹೀರೋಯಿನ್ ಆಗಿದ್ದು. ಸೀರಿಯಲ್ ಲೋಕ ನನಗೆ ಹೊಸದಲ್ಲ ಆದರೆ ಈಗಿನ ಸೀರಿಯಲ್ ವಿಭಿನ್ನವಾಗಿದೆ ಅನುಭವ ಚೆನ್ನಾಗಿದೆ. ದೊರೆಸಾನಿ ಮೇಕಿಂಗ್ ಅದ್ಭುತವಾಗಿದೆ, ಟೈಟಲ್ ಸಾಂಗ್ ಎಲ್ಲರಿಗೂ ಇಷ್ಟ ಆಯ್ತು. ನಿನ್ನ ಸನಿಹಕ ಸಿನಿಮಾ ತಂಡ ನಮ್ಮ ಜೊತೆ ಎರಡು ದಿನ ಚಿತ್ರೀಕರಣ ಮಾಡಿದ್ದರು. ಚಿಕ್ಕಮಗಳೂರಿನಲ್ಲಿ ನಾನು ಟೈಟಲ್ ಕಾರ್ಡ್ ಚಿತ್ರೀಕರಣ ಮಾಡುವ ಅವಕಾಶ ಸಿಕ್ತು. ಒಂದೊಂದು ಎಪಿಸೋಡ್‌ಗೂ, ಡ್ರೆಸ್‌ಗೂ ಪ್ರಾಮುಖ್ಯನೆ ನೀಡುತ್ತಿದ್ದಾರೆ. ಸೀರಿಯಲ್ ಅಂದ್ರೆ ದಿನ ಜನರಿಗೆ ಕಾಣಿಸಿಕೊಳ್ಳುತ್ತೀವಿ ಸಿನಿಮಾ ಅಂದ್ರೆ ದೊಡ್ಡ ಪರದೆ. ಎರಡನ್ನೂ ನಾನು ಬ್ಯಾಲೆನ್ಸ್‌ ಮಾಡ್ತಿದ್ದೀನಿ ನನ್ನ ತೆಲುಗು ಸಿನಿಮಾ ರಿಲೀಸ್ ಇದೆ. ಸಿನಿಮಾ ಮಾಡಿ ಸೀರಿಯಲ್ ಮಾಡಿದ್ದರೆ ಹೀಗಾಗುತ್ತೆ ಅಂತ ಇತ್ತು ಆದರೆ ಹಾಗೆಲ್ಲಾ ಏನೂ ಇಲ್ಲ ಅದು ತಪ್ಪು ಕಲ್ಪನೆ.

ನಟನೆ ಹೊರತುಪಡಿಸಿ, ಮತ್ತೇನು ನಿಮ್ಮ ಹವ್ಯಾಸ?
ನಟನೆ ಹೊರತು ಪಡಿಸಿದರೆ ನನಗೆ ಡ್ಯಾನ್ಸ್‌ ಅಂದ್ರೆ ಪ್ರಾಣ. ಡ್ಯಾನ್ಸರ್‌ ಆಗಿ ನಾನು ಹಲವಾರು ಕಾರ್ಯಕ್ರಮಗಳನ್ನು ಕೊಟ್ಟು ಆಗ ನನ್ನ ವಿಸಿಟಿಂಗ್ ಕಾರ್ಡ್‌ ಕೊಡುತ್ತಿದ್ದರು.. ನಾನು ಡ್ಯಾನ್ಸ್ ಮೂಲಕವೇ ಗುರುತಿಸಿಕೊಂಡಿರುವೆ. ಗೆಜ್ಜೆ ಹೆಸರಿನಲ್ಲಿ ನಾನು ಸ್ಟುಡಿಯೋ ಆರಂಭಿಸಿದ್ದೀನಿ ಮಕ್ಕಳಿಗೆ ಫ್ರೀ ಸ್ಟೈಲ್ ಡ್ಯಾನ್ಸ್ ಕೇಳಿ ಕೊಡುತ್ತಿರುವೆ. ನಾಟಕ, ಮನೆಯಲ್ಲಿದ್ದರೆ ಕೆಲಸ ಮಾಡುವುದು. ನನ್ನದು ಸಿಂಪಲ್ ಲೈಫ್ ಆಂಡ್ ಐ ಆಮ್ ಲವಿಂಗ್ ಇಟ್.

ವಯಸ್ಸಿನ್ನೂ 24, ನಟಿಯರ ಫೇವರೆಟ್‌ ಫ್ಯಾಷನ್ ಡಿಸೈನರ್, ನಿಧಿ ಗೌಡ ಸಕ್ಸಸ್ ಸ್ಟೋರಿ!

ಓದಿದ ದಿನಗಳನ್ನು ನೆನಪಿಸಿಕೊಳ್ಳಬಹುದಾದರೆ...
ನನಗೆ ಇದು ವಂಡರ್‌ಫುಲ್‌ ಜರ್ನಿ. ಸ್ಕೂಲ್ ಮತ್ತು ಕಾಲೇಜ್‌ನಲ್ಲಿ ಒಳ್ಳೆಯ ಸಪೋರ್ಟ್‌ ಸಿಕ್ಕಿದೆ. ಈಗಲ್ಲೂ ನೆನಪಿದೆ ಫ್ಯಾಷನ್ ಶೋ, ಡಿಬೇಟ್, ಏಕಪಾತ್ರ ಅಭಿನಯ, ಕುಕ್ಕಿಂಗ್, ಡ್ಯಾನ್ಸ್‌ ಎಲ್ಲಾ ಸ್ಪರ್ಧೆಗಳಲ್ಲಿ ಮುಂದೆ ಇರುತ್ತಿದ್ದೆ. ಸ್ಕೂಲ್‌ನಲ್ಲಿ ನಾಟಕೋತ್ಸವ ಮಾಡುತ್ತಾರೆ ಅದರಲ್ಲಿ ಮಕ್ಕಳೇ ನಾಟಕ ನಡೆಸಬೇಕು ಆಗ ನಾನು ಡ್ರಾಮಾ ಡೈರೆಕ್ಟ್‌ ಮಾಡಿ ಆಕ್ಟ್‌ ಮಾಡಿದ್ದೆ. ತುಂಬಾ ಕಲಿಯುವುದಕ್ಕೆ ಅವಕಾಶ ಸಿಕ್ತು. ಪಿಯುಸಿನಲ್ಲಿ Miss Fresher Award ಬಂದಿತ್ತು. ಸಿನಿಮಾ ಚಿತ್ರೀಕರಣ ಮಾಡುವಾಗ ಅವರು ಅಟೆಂಡೆನ್ಸ್ ಕೊಡ್ತಿದ್ದು, ನನ್ನ ಸ್ನೇಹಿತೆ ಸುಶುಮ್ನಾ ನೆನಪಿಸಿಕೊಳ್ಳಬೇಕು ಎಲ್ಲಾ ರೆಕಾರ್ಡ್‌ ಬರೆಯುವುದು ಮತ್ತು ಪರೀಕ್ಷೆ ಸಮಯದಲ್ಲಿ ಹೇಳಿ ಕೊಡುತ್ತಿದ್ದಳು.10ನೇ ತರಗತಿಯಲ್ಲಿ ನಾನು ಸ್ಕೂಲ್‌ಗೆ ಹೋಗೋಕೆ ಆಗಿಲ್ಲ ಆದರೆ ಆ ಸಮಯದಲ್ಲಿ ನನ್ನ ಡಿವಿಎನ್ ಸರ್ ತುಂಬಾನೇ ಪ್ರಿಪೇರ್ ಮಾಡಿದ್ದರು. ಓದ್ಕೊಂಡು ಆಕ್ಟಿಂಗ್ ಮಾಡ್ಕೊಂಡು ಬ್ಯಾಲೆನ್ಸ್ ಮಾಡುತ್ತಿದ್ದೆ.  

ನಿಮ್ಮ ಡ್ರೆಸ್ ಸೆನ್ಸ್, ಎಸ್ಪೆಷಲಿ ನೀವು ಹಾಕಿಕೊಳ್ಳುವ ಇಯರ್ ರಿಂಗ್ಸ್ ಅಟ್ರಾಕ್ಟಿವ್ ಆಗಿರುತ್ತೆ. ನಿಮ್ಮ ಫ್ಯಾಷನ್ ಸ್ಟೇಟ್‌ಮೆಂಟ್ ಬಗ್ಗೆ ಹೇಳಿ.
ದೊರೆಸಾನಿಯಲ್ಲಿ ದೀಪಿಕಾ ನನ್ನ ಕ್ಯಾರೆಕ್ಟರ್ ಅಂತ ಹೇಳಿದಾಗ ಆ ಪಾತ್ರಕ್ಕೆ ಡ್ರೆಸ್‌, ಇಯರ್‌ ರಿಂಗ್, ಹೇರ್‌ಸ್ಟೈಲ್‌ ನಮ್ಮ ಇಪಿ ಚರಿಷ್ಮಾ ಅವರು ತುಂಬಾನೇ ವರ್ಕ್ ಮಾಡಿದ್ದಾರೆ. ದೀಪಿಕಾ ಕ್ಯಾರೆಕ್ಟರ್‌ ಬಿಲ್ಡ್‌ ಮಾಡುವಾಗಲೇ ಇಕ್ಕತ್ ಕುರ್ತಾ ಹಾಕಬೇಕು, Oxidized ಇಯರ್‌ ರಿಂಗ್ಸ್‌ ಮತ್ತು ಸಿಗರ್ ಪ್ಯಾಂಟ್ ಹಾಕಬೇಕು ಅಂತ ನಿರ್ಧಾರ ಆಗಿದ್ದು. ದೀಪಿಕಾ ಒಂದು ಜವಾಬ್ದಾರಿ ಇರುವಂತ ಹುಡುಗಿ ಅಪ್ಪನ ಮುದ್ದಿನ ಮಗಳು  ಸಿಎ ಮಾಡುತ್ತಿರುತ್ತಾಳೆ ತುಂಬಾ ಮೆಚ್ಯೂರ್ ಪಾತ್ರ ಆಗಿರುವ ಕಾರಣ ಡ್ರೆಸ್‌ ಸೆನ್ಸ್‌ ಮುಖ್ಯವಾಗುತ್ತದೆ. ನನ್ನ ಫ್ಯಾಷನ್‌ ಸ್ಟೇಟ್‌ಮೆಂಟ್‌ ಏನೆಂದರೆ ನಾನು ಸಿಂಪಲ್ ಆಗಿರುವುದಕ್ಕೆ ಇಷ್ಟ ಪಡ್ತೀನಿ. ರಿಯಲಿಸ್ಟಿಕ್ ಆಗಿದಷ್ಟು ಜನರು ಕನೆಕ್ಟ್ ಆಗುತ್ತಾರೆ.

click me!