ನನ್ನೂರಿನ ನೆಲದ ಕತೆಯಲ್ಲಿ ನಟಿಸುತ್ತಿರುವ ಹೆಮ್ಮೆ ಇದೆ: ಪ್ರಕಾಶ್‌ ರೈ

By Kannadaprabha News  |  First Published Jun 20, 2022, 9:05 AM IST

ನಟ ಪ್ರಕಾಶ್‌ ರೈ ಅವರು ತುಂಬಾ ದಿನಗಳ ನಂತರ ಕನ್ನಡ ಸಿನಿಮಾ ಶೂಟಿಂಗ್‌ ಸೆಟ್‌ನಲ್ಲಿ ಎದುರಾದರು. ಅದೇ ನಗು, ಅದೇ ಮಾತು. ಲಾಯರ್‌ ಪಾತ್ರದ ವೇಷದಲ್ಲೇ ಸಿಕ್ಕವರು ಸಿನಿಮಾ, ದೇಶ ಪ್ರಯಾಣ, ತೋಟ ಇತ್ಯಾದಿಗಳ ನಡುವೆ ಅವರ ಮಾತು ‘ವೀರ ಕಂಬಳ’ ಚಿತ್ರದತ್ತ ಹೊರಳಿತು.


ನಟ ಪ್ರಕಾಶ್‌ ರೈ ಅವರು ತುಂಬಾ ದಿನಗಳ ನಂತರ ಕನ್ನಡ ಸಿನಿಮಾ ಶೂಟಿಂಗ್‌ ಸೆಟ್‌ನಲ್ಲಿ ಎದುರಾದರು. ಅದೇ ನಗು, ಅದೇ ಮಾತು. ಲಾಯರ್‌ ಪಾತ್ರದ ವೇಷದಲ್ಲೇ ಸಿಕ್ಕವರು ಸಿನಿಮಾ, ದೇಶ ಪ್ರಯಾಣ, ತೋಟ ಇತ್ಯಾದಿಗಳ ನಡುವೆ ಅವರ ಮಾತು ‘ವೀರ ಕಂಬಳ’ ಚಿತ್ರದತ್ತ ಹೊರಳಿತು.

ತುಂಬಾ ದಿನಗಳ ನಂತರ ಕನ್ನಡ ಚಿತ್ರದ ಶೂಟಿಂಗ್‌ ಸೆಟ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದೀರಲ್ಲ?

Latest Videos

undefined

ತುಂಬಾ ಒಳ್ಳೆಯ ಕತೆ ಮಾಡಿಕೊಂಡಿದ್ದಾರೆ. ಕತೆ ಹಾಗೂ ನಿರ್ದೇಶಕ ರಾಜೇಂದ್ರಸಿಂಗ್‌ ಬಾಬು ಅವರಿಗಾಗಿ ಒಂದು ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದೇನೆ. ಇನ್ನೂ ತುಂಬಾ ದಿನಗಳ ನಂತರ ಅಂತೇನು ಇಲ್ಲ. ನಾನು ಕಲಾವಿದ. ಕತೆಗಳಿಗೆ ನನ್ನ ಅಗತ್ಯ ಇದ್ದರೆ ಖಂಡಿತ ಅಂಥ ಚಿತ್ರಗಳ ಜತೆ ನಾನಿರುತ್ತೇನೆ.

ನಿಮಗೆ ಕತೆ ಹಿಡಿಸುವುದಕ್ಕೆ ಕಾರಣ ಏನು?

ಇದು ಕಂಬಳದ ಕತೆ. ನನ್ನೂರಿನ ನೆಲದ ಕತೆ. ನಾನು ಬೆಂಗಳೂರಿನಲ್ಲಿ ಹುಟ್ಟಿಬೆಳೆದರೂ ನನ್ನ ಮೂಲ ದಕ್ಷಿಣ ಕನ್ನಡ. ಅಲ್ಲಿನ ಬಹು ದೊಡ್ಡ ಆಚರಣೆ, ಸಂಭ್ರಮ ಮತ್ತು ಪರಂಪರೆ ಎಂದರೆ ಅದು ಕಂಬಳ. ಇಂಥ ಆಚರಣೆಯ ಕತೆಯನ್ನು ಹೇಳುವ ಚಿತ್ರದ ಭಾಗವಾಗಿರುವುದಕ್ಕೆ ನನಗೆ ಹೆಮ್ಮೆ ಆಗುತ್ತಿದೆ.

ಹಿಂದಿಯಲ್ಲಿ ಮಾತನಾಡಿದವನಿಗೆ ಕಪಾಳಮೋಕ್ಷ ಮಾಡಿದ ನಟ ಪ್ರಕಾಶ್ ರೈ; ವಿಡಿಯೋ ವೈರಲ್!

ತುಂಬಾ ಬ್ಯುಸಿ ಇದ್ದರೂ ಒಂದೆರಡು ದಿನಗಳ ಪಾತ್ರಕ್ಕಾಗಿ ಬಂದಿದ್ದೀರಲ್ಲ?

ನಾವು ಏನೇ ಬೆಳೆದರೂ ಆಗ ಜತೆಗೆ ನಿಂತವರು, ಸಂಬಂಧಗಳು, ಸ್ನೇಹ, ಊರಿನ ಬೇರು ಯಾವತ್ತೂ ಮರೆಯಕ್ಕೆ ಆಗಲ್ಲ. ನಾನು ಪಾತ್ರಗಳಿಗಾಗಿ ಹುಡುಕಾಡುತ್ತಿದ್ದಾಗ ಬಂಧನ, ಮುತ್ತಿನಹಾರ, ಅಂತ... ಹೀಗೆ ಭಾರೀ ಚಿತ್ರಗಳನ್ನು ನಿರ್ದೇಶನ ಮಾಡಿ, ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು ರಾಜೇಂದ್ರಸಿಂಗ್‌ ಬಾಬು ಅವರು. ನಮ್ಮಗೆಲ್ಲ ಸ್ಫೂರ್ತಿಯಾದ ಬೇರುಗಳು ಕರೆದಾಗ ಇಲ್ಲ ಎನ್ನಲಾಗಲಿಲ್ಲ.

ಆದರೆ, ನಿಮ್ಮಂಥ ಕಾಸ್ಟಿ$್ಲ ನಟರನ್ನು ಸಾಕುವುದಕ್ಕೆ ಕಷ್ಟವಾಗುವ ಚಿತ್ರಗಳಿಗೆ ನೀವು ಏನು ಹೇಳುತ್ತೀರಿ?

ನಾನು ದುಬಾರಿ ನಟ ಎಂಬುದು ನಿಜ. ಹಾಗಂತ ಎಲ್ಲ ಚಿತ್ರಗಳ ವಿಚಾರದಲ್ಲೂ ಹಾಗೆ ಇದ್ದರೆ ಹೇಗೆ? ನನಗಾಗಿ ಪಾತ್ರ ಮಾಡಿಕೊಂಡಾಗ, ಪ್ರೀತಿಯಿಂದ ಕರೆದಾಗ, ಸ್ನೇಹ, ಸಂಬಂಧಕ್ಕೆ ಬೆಲೆ ಕೊಟ್ಟು ಬರಬೇಕಾಗುತ್ತದೆ. ಕತೆಗಾಗಿ, ಪಾತ್ರಕ್ಕಾಗಿ ಕಾಸ್ಟಿ$್ಲ ಚೇರ್‌ನಿಂದ ಇಳಿದು ಬರಬೇಕಾಗುತ್ತದೆ. ಅದು ಒಬ್ಬ ಕಲಾವಿದನ ಬದ್ಧತೆ ಕೂಡ. ನನಗೆ ಅಂಥ ಬದ್ಧತೆ ಇದೆ. ಖಂಡಿತ ನನ್ನ ವಿಚಾದರಲ್ಲಿ ಎಲ್ಲದಕ್ಕೂ ಹಣವೇ ಮುಖ್ಯ ಆಗಲ್ಲ.

ಮರಳಿ ಮಣ್ಣಿಗೆ: ಪ್ರಕಾಶ್‌ ರೈ ಲಾಕ್‌ಡೌನ್‌ ದಿನಗಳನ್ನು ಹೀಗೆ ಕಳೆಯುತ್ತಿದ್ದಾರೆ ನೋಡಿ!

ಚಿತ್ರದಲ್ಲಿ ನಿಮ್ಮ ಪಾತ್ರ ಏನು?

ಈ ನೆಲದ ಸಂಸ್ಕೃತಿ, ಭಾವನೆ ಆಗಿರುವ ಕಂಬಳದ ಪರವಾಗಿ ವಾದ ಮಾಡುವ ಲಾಯರ್‌ ಪಾತ್ರ. ತುಂಬಾ ಚೆನ್ನಾಗಿ. ಪವರ್‌ಫುಲ್‌ ಡೈಲಾಗ್‌ಗಳ ಜತೆಗೆ ನನ್ನ ಪಾತ್ರವನ್ನು ರೂಪಿಸಿದ್ದಾರೆ. ಅಲ್ಲದೆ ಇದು ನನ್ನ ಮೊದಲ ತುಳು ಚಿತ್ರವಿದು. ನನ್ನ ಪಾತ್ರಕ್ಕೆ ನಾನೇ ತುಳುವಿನಲ್ಲಿ ಡಬ್‌ ಕೂಡ ಮಾಡುತ್ತಿದ್ದೇನೆ.

ರಾಜೇಂದ್ರಸಿಂಗ್‌ ಬಾಬು ಅವರ ಜತೆಗೆ ಕೆಲಸ ಈಗ ಹೇಗಿದೆ?

ಅದೇ ರಾಜೇಂದ್ರಸಿಂಗ್‌ ಬಾಬು. ಆ ದಿನಗಳ ಉತ್ಸಾಹ, ಸಿನಿಮಾ ಪ್ರೀತಿ ಕಡಿಮೆ ಆಗಿಲ್ಲ. ಪ್ರತಿಯೊಂದನ್ನು ಡೀಟೈಲಿಂಗ್‌ ಮಾಡಿಕೊಳ್ಳುವ ಅವರ ಕೆಲಸದ ವೈಖರಿ ನನಗೆ ಇಷ್ಟ.

ಕಂಬಳ, ಜಲ್ಲಿಕಟ್ಟು ವಿನಂತಹ ಕ್ರೀಡೆಗಳಿಂದ ಪ್ರಾಣಿ ಹಿಂಸೆ ಆಗುತ್ತಿದೆ ಎನ್ನುವವರಿಗೆ ಏನು ಹೇಳುತ್ತೀರಿ?

ನಿಜಕ್ಕೂ ಹಿಂಸೆ ಆಗಿದ್ದರೆ ಹತ್ತಾರು ವರ್ಷಗಳಿಂದ ಈ ಆಚರಣೆ ನಡೆದುಕೊಂಡು ಬರುತ್ತಿರಲಿಲ್ಲ. ಕಂಬಳ ಓಡಿಸುವ ಗದ್ದೆಗಳು ಕೆಲವರಿಗೆ ಕೆಸರು ನೀರು, ನಮಗೆ ಅದೇ ತೀರ್ಥ. ನಾವು ಬಾಕ್ಸಿಂಗ್‌ ಆಡುತ್ತೇವೆ ನೋವು ಆಗಲ್ಲವೇ, ಹಸುಗಳಿಗೆ ಮೂಗುದಾರ ಹಾಕುತ್ತೇವೆ ಆಗ ನೋವು ಆಗಲ್ಲವೇ. ಜನರ ಭಾವನೆ, ಹಬ್ಬ, ಸಂಭ್ರಮಗಳನ್ನು ನೋಡುವ ರೀತಿ ಬದಲಾಗಬೇಕು ಎಂಬುದು ನನ್ನ ಅಭಿಪ್ರಾಯ.

click me!