ಅಪ್ಪಂದಿರ ದಿನಾಚರಣೆ ಹಿನ್ನೆಲೆಯಲ್ಲಿ ಬಾಲಿವುಡ್ ನ ಸೆಲೆಬ್ರಿಟಿ ತಂದೆಯಂದಿರು ಹಲವು ಸಂದರ್ಶನಗಳಲ್ಲಿ ತಮ್ಮ ಮಕ್ಕಳ ಬಗ್ಗೆ ಏನು ಹೇಳಿದ್ದಾರೆ ಎಂಬ ಬಗ್ಗೆ ಇಲ್ಲಿ ವಿವರಣೆ ನೀಡಲಾಗಿದೆ.
ಅಪ್ಪಂದಿರ ದಿನಾಚರಣೆ ಹಿನ್ನೆಲೆಯಲ್ಲಿ ಬಾಲಿವುಡ್ ನ ಸೆಲೆಬ್ರಿಟಿ ತಂದೆಯಂದಿರು ಹಲವು ಸಂದರ್ಶನಗಳಲ್ಲಿ ತಮ್ಮ ಮಕ್ಕಳ ಬಗ್ಗೆ ಏನು ಹೇಳಿದ್ದಾರೆ ಎಂಬ ಬಗ್ಗೆ ಇಲ್ಲಿ ವಿವರಣೆ ನೀಡಲಾಗಿದೆ.
ಸೈಫ್ ಅಲಿ ಖಾನ್
ಸೈಫ್ ಅಲಿ ಖಾನ್ ಅಂದರೆ ಯಾರಿಗೆ ಗೊತ್ತಿಲ್ಲಾ ಹೇಳಿ? ಇವರು ಸೋಷಿಯಲ್ ಮೀಡಿಯಾವನ್ನು ಬಳಸುವುದೇ ಇಲ್ಲ. ಜೂಮ್ ನಲ್ಲಿ ಸಂದರ್ಶನ ನೀಡಿದ ಅವರು ತಮ್ಮ ನಾಲ್ವರು ಮಕ್ಕಳಾದ ಸಾರಾ ಅಲಿ ಖಾನ್, ಇಬ್ರಾಹಿಂ, ತೈಮೂರ್ ಮತ್ತು ಜೆಹ್ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಮುಂದಿನ ಬಾಲಿವುಡ್ ಯೋಜನೆಗಳಿಗೆ ಇಬ್ರಾಹಿಂಗಾಗಿ ನಾನು ದಿನಾಲು ‘nervous prayer’ ಮಾಡುವುದಾಗಿ ಹೇಳಿಕೊಂಡಿದ್ದಾರೆ. ಪುತ್ರ ಇಬ್ರಾಹಿಂ 'ಯುವ ಸೈಫ್'ನಂತೆ ಕಾಣುತ್ತೇನೆ ಎಂದು ನನ್ನ ಜೊತೆ ಹೇಳುತ್ತಿರುತ್ತಾನೆ. ಪ್ರಸ್ತುತ ಇಬ್ರಾಹಿಂ “ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ”ಯಲ್ಲಿ ಕರಣ್ ಜೋಹರ್‌ಗೆ ಸಹಾಯ ಮಾಡುತ್ತಿದ್ದಾನೆ ಎಂದು ತಮ್ಮ ಮೊದಲ ಪುತ್ರನ ಬಗ್ಗೆ ಹೇಳಿಕೊಂಡಿದ್ದಾರೆ.
undefined
ಇನ್ನೊಂದು ಕಡೆ ಅನುಪಮಾ ಚೋಪ್ರಾ ಅವರೊಂದಿಗಿನ ಹಳೆಯ ಸಂದರ್ಶನದಲ್ಲಿ ಮಗಳು ಸಾರಾ ಬಗ್ಗೆ ಮಾತನಾಡಿ, ಚಲನಚಿತ್ರ “ಲವ್ ಆಜ್ ಕಲ್ 2" ಉತ್ತಮವಾಗಿ ಮೂಡಿಬರದ ಕಾರಣ ಕಮರ್ಷಿಯಲ್ ಆಗಿ ಹಿಟ್ ಆಗಲಿಲ್ಲ . ಇಂತಹ ಸಂದರ್ಭದಲ್ಲಿ ನಾನು ಯಾವಾಗಲೂ ಸಾರಾಳ ಜೊತೆಗೆ ಇರುತ್ತೇನೆ. ಅವಳು ಒಂಟಿಯಾಗಿ ಇದನ್ನೆಲ್ಲ ಎದುರಿಸುವ ಧೈರ್ಯ ತುಂಬುತ್ತೇನೆ. ಅವಳ ನೆನಪಾದಾಗ ನಾನು ಅವಳಿಗೆ ಮೆಸೇಸ್ ಮಾಡುವೆ ಎಂದಿದ್ದರು.
ಅಂಬಾರಿ ಅಲ್ಲ ಇದು ಸ್ಕೂಟರ್... ಕ್ರಿಯೇಟಿವಿಟಿಗೆ ಬೆರಗಾದ ಆನಂದ್ ಮಹೀಂದ್ರಾ
ಹೃತಿಕ್ ರೋಷನ್
ಬಾಲಿವುಡ್ ನಟ, ಟಾಪ್ ಡಾನ್ಸರ್ ಹೃತಿಕ್ ಮತ್ತು ಅವರ ಮಾಜಿ ಪತ್ನಿ ಸುಸೇನ್ ಖಾನ್ ಜೋಡಿಗೆ ಹೃದಾನ್ ಮತ್ತು ಹ್ರೇಹಾನ್ ಎಂಬ ಇಬ್ಬರು ಗಂಡು ಮಕ್ಕಳು. ಹೃತಿಕ್ ತನ್ನ ಮಕ್ಕಳೊಂದಿಗೆ ಯಾವಾಗಲೂ ತುಂಬಾ ಆತ್ಮೀಯರಾಗಿರುತ್ತಾರೆ ಮತ್ತು ಆಗಾಗ ಅವರೊಂದಿಗಿನ ಫೋಟೋವನ್ನು ಹಾಕುತ್ತಿರುತ್ತಾರೆ. ಅಪ್ಪಂದಿರ ದಿನದಂದು ಮಕ್ಕಳ ಬಗ್ಗೆ ಮಾತನಾಡಿರುವ ಹೃತಿಕ್ , ಮಕ್ಕಳು ನನ್ನ ಎಲ್ಲಾ ಚಲನಚಿತ್ರಗಳನ್ನು ರೇಟ್ ಮಾಡುತ್ತಾರೆ. ಅವರು 2011 ರಲ್ಲಿ ಬಿಡುಗಡೆಯಾದ ಚಲನಚಿತ್ರ “ಜಿಂದಗಿ ನಾ ಮಿಲೇಗಿ ದೊಬಾರಾ” ವನ್ನು ತುಂಬಾ ಇಷ್ಟಪಟ್ಟಿದ್ದಾರೆ. ಈ ಚಿತ್ರಕ್ಕೆ 10 ಕ್ಕೆ 11 ರೇಟಿಂಗ್ ಅನ್ನು ಕೊಟ್ಟಿದ್ದರು. ಜಿಂದಗಿ ನಾ ಮಿಲೇಗಿ ದೊಬಾರಾ ಚಿತ್ರವನ್ನು ವೀಕ್ಷಿಸಿದಾಗ, ನಾನು ಅವರು ಗುರುತಿಸುವುದನ್ನು ನಿಜವಾಗಿಯೂ ಗಮನಿಸಿದೆ. ನನಗಿದು ತುಂಬಾ ಆಶ್ಚರ್ಯಕರವಾಗಿತ್ತು, ಏಕೆಂದರೆ ಇದು ಮಕ್ಕಳ ಚಿತ್ರವಲ್ಲ, ಆದರೆ ವಯಸ್ಕರಲ್ಲಿ ಯಾವುದು ನಿಜವೋ ಅದು ಹದಿಹರೆಯದವರು ಅಥವಾ ಮಕ್ಕಳಲಲಿ ನಿಜವಾಗುತ್ತದೆ ಎಂದು ನಾನು ಭಾವಿಸುತ್ತೇನೆ" ಎಂದಿದ್ದಾರೆ ಹೃತಿಕ್ .
ಶಾರುಖ್ ಖಾನ್
ಹಳೆಯ ಸಂದರ್ಶನವೊಂದರಲ್ಲಿ, ಶಾರುಖ್ ಖಾನ್ ಮಕ್ಕಳ ಬಗ್ಗೆ ಮಾತನಾಡಿ ತಮ್ಮ ಮಕ್ಕಳಿಗೆ ಪದೇ ಪದೇ ಓರ್ವ ಪೋಷಕನಾಗಿ ಹೇಳುವ ಪಾಠಗಳನ್ನು ಕೈಬಿಟ್ಟಿದ್ದೇನೆ ಎಂದಿದ್ದಾರೆ. ಬಾಲಿವುಡ್‌ನ ಬಾದ್‌ಶಾಹ್ ತನ್ನ ಮೂವರು ಮಕ್ಕಳಾದ ಆರ್ಯನ್, ಸುಹಾನಾ ಮತ್ತು ಅಬ್ರಾಮ್‌ನೊಂದಿಗಿನ ತನ್ನ ಬಾಂಧವ್ಯ ಗೆಳೆಯರ ತರ ಇದೆ ಎಂದು ಹೇಳಿದ್ದಾರೆ, “ನಾನು ನನ್ನ ಮಕ್ಕಳನ್ನು ಪ್ರೀತಿಸುತ್ತೇನೆ ಅವರು ನನ್ನ ಮಕ್ಕಳು ಎಂಬ ಕಾರಣದಿಂದಲ್ಲ, ಆದರೆ ನಾನು ಅವರೊಂದಿಗೆ ಸ್ನೇಹವನ್ನು ಗಳಿಸಿದ್ದರಿಂದ. ನಾನು ಇದನ್ನು ಅರಿತುಕೊಳ್ಳುತ್ತಿದ್ದೇನೆ. ಏಕೆಂದರೆ ನನ್ನ ಮಕ್ಕಳು ವಯಸ್ಸಾಗುತ್ತಿದ್ದಂತೆ, ಅವರು ನನ್ನ ದೊಡ್ಡ ಸ್ನೇಹಿತರಾಗುತ್ತಾರೆ. ನನ್ನ ಮಾನಸಿಕ ವಯಸ್ಸು 12 ರಿಂದ 14 ರ ನಡುವೆ ಇದೆ ಎಂದು ನಾನು ಭಾವಿಸುತ್ತೇನೆ, ಹಾಗಾಗಿ ನಾನು ಅವರ ಜೊತೆ ಸ್ನೇಹಿತನಾಗಿರಲು ತುಂಬಾ ಇಷ್ಟ ಪಡುತ್ತೇನೆ ಎಂದಿದ್ದರು.
ಅಮೀರ್ ಖಾನ್
ಅಮೀರ್ ತನ್ನ ಮೊದಲ ಪತ್ನಿ ರೀನಾ ದತ್ತಾ ಅವರಿಂದ ಜುನೈದ್ ಮತ್ತು ಇರಾ ಎಂಬ ಇಬ್ಬರು ಮಕ್ಕಳನ್ನು ಹೊಂದಿದ್ದಾರೆ. ಎರಡನೇ ಸಂಗಾತಿಯಾದ ಕಿರಣ್ ರಾವ್ ಮತ್ತು ಅಮೀರ್ ಗೆ ಅಜಾದ್ ಎಂಬ ಮಗನಿದ್ದಾನೆ. 2017 ರಲ್ಲಿ ಫಿಲ್ಮ್‌ಫೇರ್‌ಗೆ ನೀಡಿದ ಸಂದರ್ಶನವೊಂದರಲ್ಲಿ ನಡೆದ ಘಟನೆ ಮೆಲುಕು ಹಾಕಿದ ಅಮೀರ್, ಜುನೈದ್ ಮಗುವಾಗಿದ್ದಾಗ ಅವನೊಂದಿಗೆ ಎಷ್ಟು ಸಮಯ ಕಳೆದರು ಎಂಬುದನ್ನು ಹೇಳಿದರು, “ಜುನೈದ್ 1993 ರಲ್ಲಿ ಜನಿಸಿದಾಗ ನಾನು ಆ ವರ್ಷ ಕೇವಲ 36 ದಿನ ಮಾತ್ರ ಶೂಟ್ ಮಾಡಿದ್ದೆ. 328 ದಿನಗಳ ಕಾಲ ನಾನು ಅವರೊಂದಿಗೆ ಇದ್ದೆ. ತನ್ನ ಕಿರಿಯ ಮಗ ಆಜಾದ್‌ಗೆ ಟೆನಿಸ್ ಎಂದರೆ ತುಂಬಾ ಇಷ್ಟ. ಅವನು ಆಡಿ ಬಂದ ನಂತರ ಮುಂಬೈನಲ್ಲಿರುವಾಗಲೆಲ್ಲಾ ಅವನೊಂದಿಗೆ ರಾತ್ರಿಯ ಊಟಕ್ಕೆ ಕರೆದುಕೊಂಡು ಹೋಗಲು ಇಷ್ಟಪಟ್ಟಿದ್ದೇನೆ ಎಂದು ಅಮೀರ್ ಹಂಚಿಕೊಂಡಿದ್ದಾರೆ.
ಅಮೀರ್ ಅವರಿಗೆ ಮಗಳು ಇರಾ ತುಂಬಾ ಹತ್ತಿರವಾಗಿದ್ದಾರೆ ಮತ್ತು ಅಮೀರ್ ಆಗಾಗ ಮಗಳ ಇನ್‌ಸ್ಟಾಗ್ರಾಮ್ ಪೋಸ್ಟ ನಲ್ಲಿ ಕಾಣಿಸಿಕೊಳ್ಳುತ್ತಾರೆ. ಇರಾ ವೃತ್ತಿಯಲ್ಲಿ ಮಾನಸಿಕ ಯೋಗಕ್ಷೇಮದ ವಕೀಲೆ ಮತ್ತು 2020 ರಲ್ಲಿ ಆಕೆ ಖಿನ್ನತೆಯಿಂದ ಬಳಲುತ್ತಿದ್ದಳು ಎಂದು ಬೇಸರ ವ್ಯಕ್ತ ಪಡಿಸಿದರು. ಖಾಸಗಿ ವಾಹಿನಿಯೊಂದರ ಸಂದರ್ಶನದಲ್ಲಿ ಮಾತನಾಡಿದ ಅಮೀರ್, ತನ್ನ ಮಗಳು ಜೀವನದಲ್ಲಿ ಅನೇಕ ಸವಾಲುಗಳನ್ನು ಎದುರಿಸಿದ್ದಾಳೆ ಮತ್ತು ಅವಳು ಧೈರ್ಯದಿಂದ ಹೋರಾಡುತ್ತಿದ್ದಾಳೆ. ಈ ಬಗ್ಗೆ ಹೆಮ್ಮೆಯಿಂದ ಎಂದು ಹೇಳಿಕೊಂಡಿದ್ದಾರೆ.
ರಾಮಸೇತು ಥಿಯೇಟರ್‌ಗಳಲ್ಲೇ ರಿಲೀಸ್ ಆಗಲಿದೆ : ಒಟಿಟಿ ವದಂತಿ ನಿರಾಕರಿಸಿದ ನಿರ್ಮಾಪಕ
ಅಕ್ಷಯ್ ಕುಮಾರ್
ಅಕ್ಷಯ್ ಕುಮಾರ್ ಅವರ ಇನ್‌ಸ್ಟಾಗ್ರಾಮ್ನ ಇತ್ತೀಚಿನ ಪೋಸ್ಟ್‌ನಲ್ಲಿ ನೋಡಿದಾಗ ಅವರು ತಮ್ಮ ಮಕ್ಕಳಾದ ಆರವ್ ಮತ್ತು ನಿತಾರಾ ಅವರನ್ನು ತುಂಬಾ ಪ್ರೀತಿಸುತ್ತಾರೆ ಎಂದು ತಿಳಿಯುತ್ತದೆ. ಅಕ್ಷಯ್ ಕುಮಾರ್ ತಮ್ಮ ವೃತ್ತಿಯ ಬೇಡಿಕೆಗಿಂತ ಹೆಚ್ಚಿನದನ್ನು ಪೋಸ್ಟ್ ಮಾಡದಿದ್ದರೂ ಅವರು ನಿತಾರಾ ಜೊತೆಗಿನ ಚೆನ್ನಾಗಿರುವ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಕಳೆದ ವರ್ಷ ಹಿಂದೂಸ್ತಾನ್ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ, ಅಕ್ಷಯ್ ತನ್ನ ಮಕ್ಕಳು ಪಾಪರಾಜಿ ಮತ್ತು ಟ್ರೋಲಿಂಗ್ ಸಂಸ್ಕೃತಿಯಿಂದ ಪ್ರಭಾವಿತರಾಗುವುದನ್ನು ನೋಡುವುದು ತಂದೆಯಾಗಿ ತನಗೆ ಹೇಗೆ ನೋವುಂಟುಮಾಡುತ್ತದೆ ಎಂಬುದನ್ನು ವಿವರಿಸಿದ್ದಾರೆ. ಆರವ್ ತನ್ನ ತರಬೇತಿಯ ನಂತರ ಬೆವರುತ್ತಿರುತ್ತಾನೆ ಆದ ಕಾರಣ ಇನ್‌ಸ್ಟಾಗ್ರಾಮ್‌ನಲ್ಲಿ ಟ್ರೋಲ್ ಆಗುವ ಭಯದಿಂದ ನಮ್ಮೊಂದಿಗೆ ಹೊರಗೆ ಬರಲು ಬಯಸುವುದಿಲ್ಲ ಎಂದು ಅಕ್ಷಯ್ ಹಾಸ್ಯಾಸ್ಪದವಾಗಿ ಹೇಳಿ ನಕ್ಕರು. ಆರು ವರ್ಷದ ಮಗಳು ನಿತಾರಾ ಅವರು ಪಾಪರಾಜಿಗಳ ಹೊಳಪನ್ನು ಇಷ್ಟಪಡದ ಕಾರಣ ಕುಟುಂಬ ಭೋಜನಕ್ಕೆ ಹೋಗುವುದನ್ನು ಇಷ್ಟಪಡುವುದಿಲ್ಲ ಎಂದು ಅವರು ಹೇಳಿದರು. “ಸ್ಟಾರ್ ಮಕ್ಕಳು ಜೀವನದಲ್ಲಿ ಸಾಕಷ್ಟು ಒತ್ತಡವನ್ನು ಹೊಂದಿರುತ್ತಾರೆ.
ಶಾಹಿದ್ ಕಪೂರ್
ಶಾಹಿದ್ ಕಪೂರ್ ಮತ್ತು ಮೀರಾ ರಜಪೂತ್ ಅವರ ಇಬ್ಬರು ಅದ್ಭುತ ಮಕ್ಕಳಾದ ಮಿಶಾ ಮತ್ತು ಜಾಯಿನ್‌ಗೆ ಪೋಷಕರು. ಶಾಹಿದ್ ಅವರು ತಮ್ಮ ಮಕ್ಕಳ ಹೆಚ್ಚಿನ ಫೋಟೋಗಳನ್ನು ಸಾಮಾಜಿಕ ಜಾಲತಾನದಲ್ಲಿ ಹಾಕಲು ಇಷ್ಟಪಡುವುದಿಲ್ಲ ಏಕೆಂದರೆ ಅವರನ್ನು ಪ್ರೋಟೆಕ್ಟ್ ಮಾಡುತ್ತೀನಿ ಎಂದು ಸಂದರ್ಶನದಲ್ಲಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಸಿದ್ಧಾರ್ಥ್ ಕಣ್ಣನ್ ಅವರೊಂದಿಗಿನ ಇತ್ತೀಚಿನ ಸಂದರ್ಶನದಲ್ಲಿ ಶಾಹಿದ್ ಅವರು ತಂದೆಯಾದ ಮೇಲೆ ಹೇಗೆ ಬದಲಾಗಿದ್ದೀರಿ ಎಂದು ಕೇಳಲಾಯಿತು. “ನನಗೆ ಖಚಿತವಾಗಿದೆ, ಕಾಫಿ ಕುಚ್. ಉಸ್ಕೋ ಮೇ ದಾಲನಾ ಬಡಾ ಮುಷ್ಕಿಲ್ ಹೈಂ ಎಂದು ಅವರು ಉತ್ತರಿಸಿದರು. ಈಗ ನಾನು ಪೋಷಕನಾಗಿದ್ದೇನೆ ಎಂಬ ಬದಲಾವಣೆಯನ್ನು ನಾನು ದಿನಾಲೂ ಅನುಭವಿಸುತ್ತಿದ್ದೇನೆ. ಹೌದು, ಅದು ನಮ್ಮನ್ನು ಮನುಷ್ಯನನ್ನಾಗಿ ಮಾಡುತ್ತದೆ ಮತ್ತು ಇದು ಅದ್ಭುತವಾಗಿದೆ. ಏಕೆಂದರೆ ತುಂಬಾ ಬದಲಾವಣೆಗಳು ಆಗಿವೆ ಎಂದು ಹೇಳಲು ಬಯಸುತ್ತೇನೆ. ಸಂಪೂರ್ಣ ಹೊಸ ಜೀವನ, ಸಂಪೂರ್ಣ ಹೊಸ ದೃಷ್ಟಿಕೋನ ಎಂದಿದ್ದಾರೆ.
ಅಜಯ್ ದೇವಗನ್
ಸೂಪರ್ ಸ್ಟಾರ್ ತಂದೆಯರ ಬಗ್ಗೆ ಮಾತನಾಡುತ್ತಾ, ಅಜಯ್ ದೇವಗನ್ ಈ ಪಟ್ಟಿಯಲ್ಲಿ ಸ್ಥಾನ ಪಡೆಯುವ ಮತ್ತೊಂದು ಹೆಸರು. ನೈಸಾ ಮತ್ತು ಯುಗ್ ಎಂಬ ಇಬ್ಬರು ಮುದ್ದು ಮಕ್ಕಳ ತಂದೆ ಅಜಯ್. ಇತ್ತೀಚೆಗೆ ಖಾಸಗಿ ವಾಹಿನಿಯ ಜೊತೆ ಮಾತನಾಡಿದ ಅಜಯ್ ಅವರು ಕಾಜೋಲ್ ಮತ್ತು ನಾನು ಮಕ್ಕಳನ್ನು ದೊಡ್ಡ ಮಟ್ಟದಲ್ಲಿ ಬೆಳೆಸಲು ಬಯಸುತ್ತೇನೆ ಎಂದಿದ್ದಾರೆ. “ನಾನು ಮತ್ತು ಕಾಜೋಲ್ ಮಕ್ಕಳಿಗೆ ಯಾವುದು ಸರಿ ಮತ್ತು ತಪ್ಪು ಎಂಬುದನ್ನು ತಿಳಿ ಹೇಳುತ್ತೇವೆ. ಅವರಿಗೆ ವಿಷಯಗಳನ್ನು ಅರ್ಥ ಮಾಡಿಕೊಳ್ಳಲು ಅವಕಾಶ ಮಾಡಿಕೊಡುತ್ತೇವೆ.
ಸಹಜವಾಗಿ ಮಕ್ಕಳು ತಪ್ಪುಗಳನ್ನು ಮಾಡುತ್ತಾರೆ. ಸಹಜವಾಗಿ ಅವರು ಸಂದರ್ಭಕ್ಕೆ ಅವಿಧೇಯರಾಗುತ್ತಾರೆ. ಅದು ಸಂಭವಿಸಿದಾಗ ಹೆಚ್ಚಿನ ಸಂಭಾಷಣೆಗಳಾಗುತ್ತವೆ ಆದರೆ ಬೈದು ಬುದ್ದಿ ಹೇಳುವುದಕ್ಕಿಂತ ತಿದ್ದಿ ಬುದ್ದಿ ಹೇಳುವುದು ಉತ್ತಮ ಎಂಬುವುದು ನನ್ನ ಹಾಗೂ ಕಾಜೋಲ್‌ನ ನಂಬಿಕೆಯಾಗಿದೆ. ನಮ್ಮ ಸೆಲೆಬ್ರಿಟಿ ಸ್ಥಾನಮಾನದ ಹೊರತಾಗಿಯೂ ನಾನು ಮತ್ತು ಕಾಜೋಲ್ ಇಬ್ಬರೂ ಜನರಂತೆ ನೆಲೆಗೊಂಡಿದ್ದೇವೆ. ನಮ್ಮ ಮಕ್ಕಳು ಕೂಡ ಇದೇ ತರ ಇರಬೇಕು ಅಂತಾ ಬಯಸುತ್ತೇವೆ, ”ಎಂದು ಹೇಳಿದ್ದಾರೆ.
ಅಭಿಷೇಕ್ ಬಚ್ಚನ್
ಅಭಿಷೇಕ್ ಬಚ್ಚನ್ ಕೂಡ ಆರಾಧ್ಯಗೆ ಪ್ರೀತಿಯ ತಂದೆಯಾಗಿದ್ದು, ಅಭಿಷೇಕ್ ತನ್ನ ಮಗಳ ಬಗ್ಗೆ ಮಾತನಾಡಿದ್ದಾರೆ. ಇತ್ತೀಚಿನ ಚಾಟ್‌ನಲ್ಲಿ, ಆರಾಧ್ಯಳನ್ನು ಮನಸ್ಸಿನಲ್ಲಿಟ್ಟುಕೊಂಡು ನಟನಾಗಿ ಅವರ ಸೃಜನಶೀಲ ಆಯ್ಕೆಗಳು ಹೇಗೆ ಬದಲಾಗಿವೆ ಎಂಬುದನ್ನು ಬಹಿರಂಗಪಡಿಸಿದರು. “ಯಾವುದೇ ಪೋಷಕರು ನಮಗೆ ಹೇಳುವಂತೆ, ಪ್ರತಿಯೊಂದು ಮಗು ನಿಮ್ಮ ಮನಸ್ಥಿತಿಯನ್ನು ಬಹಳಷ್ಟು ರೂಪಿಸುತ್ತದೆ. ನಿಮ್ಮ ವೃತ್ತಿಪರ ಜೀವನದಲ್ಲಿ ಮಾತ್ರವಲ್ಲ, ಇದು ಪ್ರತಿದಿನವೂ ನಡೆಯುತ್ತಿರುತ್ತದೆ. ನಾನು ಯಾವಾಗಲೂ ಕುಟುಂಬಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ವ್ಯಕ್ತಿ. ಆದ್ದರಿಂದ, ನಾನು ಭಿನ್ನವಾಗಿಲ್ಲ. ನನ್ನ ಕುಟುಂಬ, ನನ್ನ ಮಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುತ್ತದೆ, ”ಎಂದು ಹೇಳಿದ್ದಾರೆ.