ನನ್ನೊಳಗಿನ ನಟನನ್ನು ಇಷ್ಟಪಡುವವರ ಸಿನಿಮಾ ಟ್ವೆಂಟಿ ಒನ್‌ ಅವರ್ಸ್‌: ಧನಂಜಯ್

By Kannadaprabha NewsFirst Published May 20, 2022, 9:18 AM IST
Highlights

ಧನಂಜಯ್‌ ಅಭಿನಯದ ‘ಟ್ವೆಂಟಿ ಒನ್‌ ಅವರ್ಸ್‌’ ಸಿನಿಮಾ ಇದೇ ಮೇ 20ಕ್ಕೆ ತೆರೆ ಮೇಲೆ ಮೂಡುತ್ತಿದೆ. ಜೈ ಶಂಕರ್‌ ಪಂಡಿತ್‌ ನಿರ್ದೇಶನದ ಈ ಚಿತ್ರದಲ್ಲಿ ಡಾಲಿ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಈ ಕುರಿತು ಮಾತುಕತೆ.

ಆರ್‌. ಕೇಶವಮೂರ್ತಿ

ಟ್ವೆಂಟಿ ಒನ್‌ ಅವರ್ಸ್‌ ಸಿನಿಮಾ ಬಿಡುಗಡೆ ಸಂಭ್ರಮ ಹೇಗಿದೆ?

ತುಂಬಾ ಚೆನ್ನಾಗಿದೆ. ಟ್ರೇಲರ್‌ ನೋಡಿದವರು ಮೆಚ್ಚಿಕೊಂಡಿದ್ದಾರೆ. ಸುದೀಪ್‌ ಅವರು ಮನೆಗೆ ಕರೆದು ಸಿನಿಮಾ ನೋಡಿ ನಮ್ಮ ಸಿನಿಮಾ ಬಗ್ಗೆ ತುಂಬಾ ಒಳ್ಳೆಯ ಮಾತುಗಳನ್ನು ಹೇಳಿದ್ದಾರೆ. ಇದೆಲ್ಲವೂ ಸಿನಿಮಾ ಬಿಡುಗಡೆ ಸಂಭ್ರಮ ಹೆಚ್ಚಿಸಿದೆ.

ಲಾಕ್‌ಡೌನ್‌ನಲ್ಲಿ ಮುಗಿಸಿದ ಚಿತ್ರ ಅಲ್ಲವೇ?

ಮೊದಲ ಲಾಕ್‌ಡೌನ್‌ ಮುಗಿದ ಮೇಲೆ ಶುರು ಮಾಡಿದ ಸಿನಿಮಾ. ಹಾಗಂತ ಲಾಕ್‌ಡೌನ್‌ನಲ್ಲಿ ಖಾಲಿ ಇದ್ವಿ, ಈ ಬಿಡುವಿನಲ್ಲಿ ಏನೋ ಒಂದು ಪ್ರಯೋಗ ಮಾಡಬೇಕು ಅಂತ ಸಿನಿಮಾ ಮಾಡಿದ್ದಲ್ಲ. ಈ ತಂಡ ನನ್ನ ಭೇಟಿ ಮಾಡಿ ಕತೆ ಹೇಳಿದಾಗ ಲಾಕ್‌ಡೌನ್‌ ಇತ್ತು. ಕತೆ ಕೇಳಿದ ಕೂಡಲೇ ನನಗೂ ಇಷ್ಟವಾಗಿ, ಸಿನಿಮಾ ಸೆಟ್ಟೇರಿತು. ಅಲ್ಲದೆ ಒಂದು ಒಳ್ಳೆಯ ಪ್ರಯೋಗಾತ್ಮಕ ಸಿನಿಮಾ ಮಾಡೋಣ ಎಂದುಕೊಂಡಾಗ ಹುಟ್ಟಿಕೊಂಡ ಸಿನಿಮಾ ‘ಟ್ವೆಂಟಿ ಒನ್‌ ಅವರ್ಸ್‌’.

ಈ ಸಿನಿಮಾ ಒಪ್ಪುವುದಕ್ಕೆ ಮುಖ್ಯ ಕಾರಣ?

ನನ್ನೊಳಗಿನ ನಟನೆಗೆ ಸವಾಲು ಹಾಕುವ ಕತೆ ಬೇಕು ಎಂದುಕೊಂಡಾಗ ಈ ಕತೆ ಕೇಳಿದೆ. ಕತೆಗೆ ನಾನು ಕನೆಕ್ಟ್ ಆದೆ. ರಾಷ್ಟ್ರ ಪ್ರಶಸ್ತಿ ವಿಜೇತರ ತಂತ್ರಜ್ಞರ ತಂಡ ಇಲ್ಲಿತ್ತು. ಈ ತಂಡದವ ಭಾಗವಾಗುವ ಮೂಲಕ ನಟನಾಗಿಯೂ ನಾನೂ ಕಲಿಯುವುದು ಇದೆ ಅನಿಸಿತು. ಹೀಗಾಗಿ ಸಿನಿಮಾ ಒಪ್ಪಿದೆ. ಇದು ರೆಗ್ಯೂಲರ್‌ ಫಾಮ್ರ್ಯಾಟ್‌ ಸಿನಿಮಾ ಅಲ್ಲ.

ಡಾಲಿ ಇಮೇಜ್‌ನಲ್ಲಿ ಈ ಸಿನಿಮಾ ನೋಡಲು ಬರುವವರಿಗೆ ಏನು ಹೇಳುತ್ತೀರಿ?

‘ಟಗರು’, ‘ರತ್ನನ್‌ ಪ್ರಪಂಚ’, ‘ಬಡವ ರಾಸ್ಕಲ್‌’ ಸಿನಿಮಾಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಬರಬೇಡಿ. ಇದೊಂದು ಫ್ರೆಶ್‌ ಸಿನಿಮಾ. ಒಳ್ಳೆಯ ಕತೆ, ಥ್ರಿಲ್ಲಿಂಗ್‌ ಅನುಭವಕ್ಕಾಗಿ ಈ ಸಿನಿಮಾ ನೋಡಿ. ಜತೆಗೆ ನನ್ನ ನಟನೆ ಇಷ್ಟಪಡುವವರಿಗೂ ಈ ಸಿನಿಮಾ ಮತ್ತಷ್ಟುಹತ್ತಿರವಾಗುತ್ತದೆ.

Dolly Dhananjay: ಧನಂಜಯ 25ನೇ ಚಿತ್ರ 'ಹೊಯ್ಸಳ': ಪೊಲೀಸ್ ಪಾತ್ರದಲ್ಲಿ ಡಾಲಿ

ಈ ಚಿತ್ರದಲ್ಲಿ ನಿಮ್ಮ ಪಾತ್ರವೇನು, ಚಿತ್ರದ ಕತೆ ಏನು?

ಅಂಡರ್‌ ಕವರ್‌ ಪೊಲೀಸ್‌ ಪಾತ್ರದಲ್ಲಿ ನಾನು ನಟಿಸಿದ್ದೇನೆ. ಬೆಂಗಳೂರಿನಲ್ಲಿ ನೆಲೆಸಿರುವ ಮಲಯಾಳಿ ಹುಡುಗಿಯೊಬ್ಬಳು ಕಾಣೆಯಾಗುತ್ತಾಳೆ. ಆಕೆಯ ನಾಪತ್ತೆಯ ಹಿಂದೆ ಹೊರಟಾಗ ಹತ್ತಾರು ತಿರುವುಗಳು ತೆರೆದುಕೊಳ್ಳುತ್ತವೆ. ಆ ನಾಪತ್ತೆ ಪ್ರಕರಣವನ್ನು ತನಿಖೆ ಮಾಡುವ ಪೊಲೀಸ್‌ ಪಾತ್ರ.

ಏನು ಹೇಳಕ್ಕೆ ಹೊರಟಿದ್ದೀರಿ ಈ ಚಿತ್ರದ ಮೂಲಕ?

ಬೆಂಗಳೂರಿನಂತಹ ನಗರಗಳಲ್ಲಿ ಹುಡುಗಿಯೊಬ್ಬಳು ತಾನು ಊಹೆಯೇ ಮಾಡದ ಹಾಗೆ ಸಂಕಷ್ಟಕ್ಕೆ ಸಿಕ್ಕಿಕೊಂಡಾಗ ಆಕೆಯ ಸುತ್ತ ಇರುವವರ ಅಭಿಪ್ರಾಯಗಳು, ವರ್ತನೆಗಳನ್ನು ಹೇಳುತ್ತದೆ ಸಿನಿಮಾ. ಜತೆಗೆ ಆ ಹುಡುಗಿ ತನಗೇ ಅರಿವೇ ಇಲ್ಲದೆ ಒಂದು ಕತ್ತಲ ಜಗತ್ತಿಗೆ ಹೇಗೆ ಪ್ರವೇಶ ಮಾಡಿರುತ್ತಾಳೆ ಎಂಬುದು ಕುತೂಹಲಕಾರಿಯಾಗಿ ಚಿತ್ರದಲ್ಲಿ ಹೇಳಿದ್ದೇವೆ. ಹೆಣ್ಣು ಮಕ್ಕಳು ಇರುವ ಕುಟುಂಬಗಳು ನೋಡಲೇಬೇಕಾದ ಸಿನಿಮಾ ಇದು.

ಕನ್ನಡದ ಚಿತ್ರರಂಗದ 'ಡಾಲಿ' ಧನಂಜಯ್ ಜೀವನದ ಮರೆಯಲಾಗದ ಘಟನೆಗಳಿವು...

 

ಈ ತಂಡದ ಜತೆಗಿನ ನಿಮ್ಮ ಕೆಲಸದ ಅನುಭವ ಹೇಗಿತ್ತು?

ಅದ್ಭುತವಾದ ತಂತ್ರಜ್ಞರ ತಂಡ ಇಲ್ಲಿದೆ. ಜೈಶಂಕರ್‌ ಪಂಡಿತ್‌ ಹತ್ತಾರು ಜಾಹೀರಾತು ನಿರ್ದೇಶನ ಮಾಡಿದ್ದಾರೆ. ಛಾಯಾಗ್ರಹಣ ಮಾಡಿರುವ ಎಸ್‌ ತಿರುನಾವುಕರಸು, ಪ್ರೊಡಕ್ಷನ್‌ ಡಿಸೈನರ್‌ ರಾಜೀವನ್‌ ನಂಬಿಯಾರ್‌, ಸಂಗೀತ ನಿರ್ದೇಶಕ ರೂಪರ್ಚ್‌ ಫೆರ್ನಾಂಡಿಸ್‌, ಸ್ಟೈಲಿಸ್ಟ್‌ ಉತ್ತರಾ ಮೆನನ್‌ ಹೀಗೆ ಎಲ್ಲರ ಶ್ರಮ ಈ ಚಿತ್ರ.

ಪ್ರಯೋಗ, ಕಮರ್ಷಿಯಲ್‌ ಸಿನಿಮಾ, ಹೀರೋ, ವಿಲನ್‌ ಇದನ್ನು ಹೇಗೆ ಬ್ಯಾಲೆನ್ಸ್‌ ಮಾಡುತ್ತಿದ್ದೀರಿ?

ಅದೇ ಕಷ್ಟವಾಗುತ್ತಿದೆ. ಈಗ ನಟನಾಗಿಯೇ ಕತೆ ಕೇಳಿ ಆಯ್ಕೆ ಮಾಡಿಕೊಳ್ಳುವುದಕ್ಕೆ ಆಗುತ್ತಿಲ್ಲ. ಬ್ಯುಸಿನೆಸ್‌ ಕೂಡ ನೋಡಬೇಕಿದೆ. ಚಿತ್ರರಂಗದಲ್ಲಿ ಬೇರೆ ರೀತಿಯ ನಂಬರ್‌ ಗೇಮ್‌ ಇದೆ, ಸ್ಪರ್ಧೆ ಇದೆ. ಈ ಕಾರಣಕ್ಕೆ ನಾನು ‘ಹೊಯ್ಸಳ’ ಬಿಟ್ಟರೆ ಬೇರೆ ಒಪ್ಪಿಕೊಂಡಿಲ್ಲ. ಈಗಾಗಲೇ ಒಪ್ಪಿರುವ ಸಿನಿಮಾಗಳು ತೆರೆ ಮೇಲೆ ಬರಲಿ ಅಂತ ಕಾಯುತ್ತಿದ್ದೇನೆ.

ಸರ್ಕಾರಿ ಶಾಲಾ ಮಕ್ಕಳ ಶಿಕ್ಷಣ ಪ್ರೊಜೆಕ್ಟರ್ ನೀಡುವ ಮೂಲಕ ನೆರವಾದ ಧನಂಜಯ್!

ನೀವು ಇತ್ತೀಚೆಗೆ ದುಬಾರಿ ಹೀರೋ ಆಗಿದ್ದೀರಿ ಅನ್ನೋ ಮಾತುಗಳು ಇವೆಯಲ್ಲ?

ಹೌದು, ನಾನು ಕಾಸ್ಟಿ$್ಲ ಹೀರೋ. ನನ್ನ ಸಂಭಾವನೆ ಹೆಚ್ಚಾಗಿದೆ. ನನ್ನ ಸಿನಿಮಾಗಳಿಗೆ ಬ್ಯುಸಿನೆಸ್‌ ಇಲ್ಲ ಅಂದಾಗ ನಾನು ಸಂಭಾವನೆ ಜಾಸ್ತಿ ಮಾಡಿಕೊಂಡರೆ ತಪ್ಪು. ಆದರೆ, ನನ್ನ ಚಿತ್ರಗಳಿಂದ ಬ್ಯುಸಿನೆಸ್‌ ಆಗುತ್ತಿದೆ. ಹೀಗಾಗಿ ನಾನು ದುಬಾರಿ ಹೀರೋ ಆಗುವುದರಲ್ಲಿ ತಪ್ಪಿಲ್ಲ. ಹಾಗೆ ನೋಡಿದರೆ ಲಾಕ್‌ಡೌನ್‌ ಹಿಂದೆ ನಟಿಸಿದ ಒಂದಿಷ್ಟುಚಿತ್ರಗಳಿಂದ ಸಂಭಾವನೆಯೇ ಬಂದಿಲ್ಲ. ಆದರೆ, ಲಾಕ್‌ಡೌನ್‌ ಸಂಕಷ್ಟಹಾಗೂ ನಾನೇ ನಿರ್ಮಾಣಕ್ಕಿಳಿದಾಗ ಸಿನಿಮಾ ಎಕಾನಾಮಿಕ್ಸ್‌ ಅರ್ಥವಾಯಿತು. ಸಂಭಾವನೆಯನ್ನು ಕೇಳಿ ತೆಗೆದುಕೊಳ್ಳಬೇಕು, ಹಣದ ಅಗತ್ಯ ಇದೆ ಅನಿಸಿತು. ಜತೆಗೆ ನನ್ನ ನಂಬಿರುವವರು ಇದ್ದಾರೆ, ನಾನು ಹೀರೋ ಅಂದಮೇಲೆ ಒಂದಿಷ್ಟುಜನ ನನ್ನವರೆಗೂ ನೆರವು ಬಯಸಿ ಬರುತ್ತಾರೆ. ಇದೆಲ್ಲವನ್ನೂ ನನ್ನ ದುಡಿಮೆಯಿಂದಲೇ ನಿಭಾಯಿಸಬೇಕಲ್ಲವೇ?

click me!