ರಮ್ಯಾ ಲೇಡಿ ಸೂಪರ್‌ಸ್ಟಾರ್, ಅವರ ಮೇಲೆ ಬೇಜಾರಿಲ್ಲ: 'ಹಾಸ್ಟಲ್ ಹುಡುಗರು ಬೇಕಾಗಿದ್ದಾರೆ' ನಿರ್ದೇಶಕ ನಿತಿನ್

By Kannadaprabha News  |  First Published Jul 21, 2023, 9:12 AM IST

ಸಾವಿರಾರು ತರಲೆ ಹುಡುಗರು, ಬಾಂಬ್‌ನಂತೆ ಬ್ಲಾಸ್‌ ಆಗ್ತಿದ್ದ ಕ್ರಿಯೇಟಿವ್ ಪ್ರೊಮೆಗಳು, ರಿಲೀಸ್‌ಗೂ ಮೊದಲೇ ವಿವಾದ ಇಂಥಾ ಹತ್ತಾರು ಸಂಗತಿಗಳಿಂದ ಸುದ್ದಿ ಮಾಡಿದ್ದು ಹಾಸ್ಟಲ್ ಹುಡುಗರು ಬೇಕಾಗಿದ್ದಾರೆ ಚಿತ್ರ. ರಕ್ಷತ್ ಶೆಟ್ಟಿ ಅಪರ್ಣೆ ಮಾಡುತ್ತಿರುವ ಸಿನಿಮಾ ಇಂದು ರಿಲೀಸ್ ಆಗುತ್ತಿದೆ. ಚಿತ್ರದ ಬಗ್ಗೆ ನಿರ್ದೇಕ ನಿತಿನ್ ಮಾತನಾಡಿದ್ದಾರೆ.


ಪ್ರಿಯಾ ಕೆರ್ವಾಶೆ

- ನಿಮ್ಮ ಸಿನಿಮಾದಾಚೆಗಿನ ಸಂಗತಿಗಳೇ ಸಿನಿಮಾ ಮಾಡೋ ಹಾಗಿದೆ, ನಿಜವಾಗಿ ನಡೆದದ್ದೇನು?

Latest Videos

undefined

ಅದೂ ಹೌದು. ನಿಜಕ್ಕೂ ಏನು ನಡೆಯಿತು ಅನ್ನೋದರ ಬಗ್ಗೆ ನಮಗೂ ಸ್ಪಷ್ಟತೆ ಇಲ್ಲ. ಆದರೆ ಕೊನೆಗೂ ಮುಖ್ಯ ಆಗೋದು ರಿಸಲ್ಟ್‌. ಕೋರ್ಟ್‌ ನಮ್ಮ ಪರವಾಗಿ ತೀರ್ಪು ಕೊಟ್ಟಿದೆ. ಸದ್ಯ ಖುಷಿ ಆಗಿದ್ದೀವಿ. ರಮ್ಯಾ ಮೇಡಂ ನಮ್ಮ ತಂಡವೇ ಅಂತ ನಾವು ಭಾವಿಸ್ತೀವಿ. ರಮ್ಯಾ ಈ ಸಿನಿಮಾ ರಿಲೀಸ್‌ ಮಾಡಬಾರದು ಅಂತ ಸ್ಟೇ ತಂದಿದ್ದರು. ಅವರ ಸೀನ್‌ ಹಾಕೋದಕ್ಕೆ ನಿರಾಕರಿಸಿದ್ರು. ಆದ್ರೆ ನಮ್ಮ ಹತ್ರ ಅಗ್ರಿಮೆಂಟ್‌ ಇತ್ತು. ನಾವು ಕಾನೂನು ಪ್ರಕಾರ ಹೋದ್ವಿ. ಅವರು ಲೇಡಿ ಸೂಪರ್‌ಸ್ಟಾರ್. ಅವರ ಮೇಲೆ ನಮಗೆ ಬೇಜಾರಿಲ್ಲ. ಆದರೆ ಸ್ಟೇ ತಂದಿದ್ದಕ್ಕೆ ಸ್ವಲ್ಪ ಬೇಜಾರಾಗಿತ್ತು.

- ಇದರಿಂದ ಸಿನಿಮಾಕ್ಕೆ ಬೆಂಬಲ ಇನ್ನಷ್ಟು ಹೆಚ್ಚಾಯ್ತಲ್ವಾ?

ಈ ವಿಚಾರವನ್ನು ನಾವು ಪ್ರಮೋಶನ್‌ಗೆ ಅಂತ ಖಂಡಿತಾ ಮಾಡಿದ್ದಲ್ಲ. ನಮಗದರ ಅವಶ್ಯಕತೆ ಇರಲಿಲ್ಲ. ಆದರೆ ಈ ಥರ ತೊಂದರೆ ಆದಾಗ ಇಡೀ ಇಂಡಸ್ಟ್ರಿ ಸಪೋರ್ಟ್‌ ಮಾಡಿತು. ಜನ ಬೆಂಬಲಕ್ಕೆ ನಿಂತರು. ಹೊಸ ತಂಡಕ್ಕೆ ಇಂಥದ್ದೊಂದು ಸಪೋರ್ಟ್‌ ಸಿಕ್ಕಿರೋದಕ್ಕೆ ಸಿಕ್ಕಾಪಟ್ಟೆ ಖುಷಿ ಇದೆ.

- ಆರಂಭದಲ್ಲಿ ಅಪ್ಪು ಅವರಿಂದ ಹಿಡಿದು ಈಗ ರಕ್ಷಿತ್‌ವರೆಗೆ ಸಾಕಷ್ಟು ಜನ ನಿಮ್ಮ ಬೆಂಬಲಕ್ಕೆ ನಿಂತರು. ಏನ್‌ ಮ್ಯಾಜಿಕ್‌ ಮಾಡಿದ್ರಿ?

ಇಂಡಸ್ಟ್ರಿಯನ್ನು ಒಂದು ಹಾಸ್ಟೆಲ್‌ ಅಂದುಕೊಂಡರೆ ಸೀನಿಯರ್ಸ್‌ ಜ್ಯೂನಿಯರ್ಸ್‌ನ ಕರೆಸಿಕೊಂಡು ರೂಲ್ಸ್‌ ತಿಳಿಸಿ ಅಕ್ಕರೆಯಿಂದ ಟೀಮೊಳಗೆ ಸೇರಿಸಿಕೊಳ್ಳೋದೇ ಚಂದ. ಅಂಥ ಅನುಭವ ನಮಗಾಗಿದೆ. ನಮ್ಮ ಚಿತ್ರರಂಗದವರು ಸಹೃದಯರು. ಪ್ರೀತಿಯಿಟ್ಟು ನಮ್ಮಂಥಾ ಕಿರಿಯರನ್ನು ಬೆಂಬಲಿಸಿದ್ದಾರೆ.

ರಮ್ಯಾಗೆ ತಪ್ಪು ದಾರಿ ತೋರಿಸಿದ್ಯಾರು? ರಾಜ್ ಬಿ ಶೆಟ್ಟಿ ಎಲ್ಲಿ ಬೆಂಕಿ ಬೀಳತ್ತೋ ನೋಡ್ಕೋಳೋಣ ಎಂದಿದ್ಯಾಕೆ?

- ಶುರುವಲ್ಲಿ ಪುನೀತ್‌ ಪ್ರೋಮೊ ವೈರಲ್‌ ಆಯ್ತು. ಆಮೇಲೆ ಸಖತ್‌ ಕ್ರಿಯೇಟಿವ್‌ ಪ್ರೋಮೋ ಮೂಲಕ ಸುದ್ದಿಯಾದ್ರಿ. ಈ ಥಾಟ್‌ಗಳ ಹಿಂದಿನ ಮಾಸ್ಟರ್‌ ಮೈಂಡ್‌ ಯಾರು?

ಅಪ್ಪು ಸಾರ್‌ ನಮ್ಮನ್ನು ಬೆಂಬಲಿಸಿದ ಮೊದಲಿಗರು. ಅವರಿಂದಲೇ ನಮ್ಮ ಸಿನಿಮಾ ಜರ್ನಿ ಶುರು ಆಯ್ತು. ‘ಅಯ್ಯೋ, ನಾನ್ಯಾರಿಗೂ ಬೈಯ್ಯಲ್ಲ, ಹಾಗೆಲ್ಲ ಮಾಡೋಕೆ ಇಷ್ಟ ಪಡಲ್ಲ’ ಅಂತ ಶುರುವಲ್ಲಿ ಹೇಳಿದರು. ಅವರನ್ನು ಕನ್ವಿನ್ಸ್‌ ಮಾಡೋಕೆ ಬಹಳ ಕಷ್ಟ ಆಯ್ತು. ಕೊನೆಗೂ ನಮ್ಮ ಮೇಲಿನ ಪ್ರೀತಿಯಿಂದ ಪ್ರೋಮೋದಲ್ಲಿ ಬೈಯ್ಯೋ ಥರ ಕಾಣಿಸಿಕೊಂಡರು. ಅವರೇ ಮಿಕ್ಕವರಿಗೂ ಸ್ಫೂರ್ತಿ ಆದರು. ನಮ್ಮದು ಸಾವಿರಾರು ಜನರಿರೋ ದೊಡ್ಡ ಟೀಮ್‌. ಟೀಮ್‌ ದೊಡ್ಡದಾಗಿರೋದ್ರಿಂದ ಎಲ್ಲ ಐಡಿಯಾಸ್‌ ದೊಡ್ಡ ದೊಡ್ಡದಾಗೇ ಬರುತ್ತೆ.

- ಸಿನಿಮಾದ ಶೀರ್ಷಿಕೆಯೇ ಸೌಂಡ್‌ ಮಾಡಿತು. ಶೀರ್ಷಿಕೆ ಹಿಂದಿನ ಅರ್ಥ?

ಇದನ್ನು ಬೇರೆಲ್ಲೂ ಹೇಳಿಲ್ಲ. ನಿಮಗೆ ಹೇಳ್ತೀನಿ. ವಾಂಟೆಡ್‌ ಅನ್ನೋದು ಕ್ರೈಮ್‌. ಅದನ್ನು ಕನ್ನಡದಲ್ಲಿ ಬೇಕಾಗಿದ್ದಾರೆ ಅನ್ನಬಹುದು. ಅಂದರೆ ಅಲ್ಲಿ ಏನೋ ಒಂದು ಕ್ರೈಮ್‌ ಆಗಿದೆ ಅಂತ. ಟೈಟಲ್‌ ಆರ್ಗ್ಯಾನಿಕ್‌ ಆಗಿ ಬಂತು.

- ಸಿನಿಮಾದಲ್ಲಿ ಹುಡುಗೀರಿಲ್ವಾ?

ರಮ್ಯಾ ಮೇಡಮ್ಮೇ ಇದ್ದಾರಲ್ವಾ! ಹುಡುಗೀರಿಲ್ದೇ ಸಿನಿಮಾನ, ನೋ ಚಾನ್ಸ್‌. ರಮ್ಯಾ ಅವರದು ಬ್ರೀಫ್‌ ಕ್ಯಾಮಿಯೊ ಅಪಿಯರೆನ್ಸ್‌. ಕಂ ಬ್ಯಾಕ್‌ ಅಲ್ಲ. ನೀವು ನೋಡಿರೋ ಟೀಚರ್‌ ಲುಕ್‌ ಅಲ್ಲದೇ ಇನ್ನೂ ಒಂದೆರಡು ಕಡೆ ಬರ್ತಾರೆ.

ಹಾಸ್ಟಲ್ ಹುಡುಗರಿಗೆ ಜಯ; ರಮ್ಯಾ ಹಾಕಿದ್ದ ಕೇಸ್ ತೆರವುಗೊಳಿಸಿದ ಕೋರ್ಟ್, ನಾಳೆ ರಿಲೀಸ್!

ವೆರಿಟೆ ಸ್ಟೈಲ್‌ ಆಫ್‌ ಮೇಕಿಂಗ್‌ ಅಂದ್ರಿ?

ಇದೊಂದು ವಿಶಿಷ್ಟ ಪ್ರಯೋಗ. ಡಾಕ್ಯುಮೆಂಟರಿಗಳನ್ನು ಸಾಮಾನ್ಯವಾಗಿ ಹೀಗೆ ಕರೀತಾರೆ. ನಮ್ಮ ವಿಭಿನ್ನ ಜಾನರ್‌ಗಳ ಹದ ಮಿಶ್ರಣ. 90 ಪರ್ಸೆಂಟ್‌ ಸಿನಿಮಾ ವೆರಿಟೆ ಸ್ಟೈಲ್‌ನಲ್ಲಿದೆ. ಇಲ್ಲಿ ಸಹಜತೆಗೆ ಒತ್ತು. ಹ್ಯಾಂಡಿಕ್ಯಾಮ್‌ ಮೂಮೆಂಟ್‌ನಂತೆ ಇಡೀ ಸಿನಿಮಾ ಚಲಿಸುತ್ತೆ. ಇಂಟರ್‌ ಕಟ್‌ ಇರಲ್ಲ. ಈ ಥರ ಪ್ರಯೋಗ ಹಿಂದೆ ಆಗಿಲ್ಲ. ರಕ್ಷಿತ್‌ ಶೆಟ್ಟಿ ಅವರೂ ಈ ಪ್ರಯೋಗದ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ.

- ಪ್ರೇಕ್ಷಕ ನಿರೀಕ್ಷೆ ಇಟ್ಕೊಂಡು ಬರಬೇಕಾ?

ಪ್ರೇಕ್ಷಕ ಬಂದ್ರೆ ಸಾಕು. ಯಾರೂ ಯಾರ ಬಗ್ಗೆಯೂ ನಿರೀಕ್ಷೆ ಇಟ್ಕೊಬಾರ್ದು. ಆಗಲೇ ರಿಯಲ್‌ ಫೀಲ್‌ ಆಗೋದು. ಜನ ವಾಪಾಸ್‌ ಹೋಗುವಾಗ ನಗ್ತಾ ಹೋಗ್ತಾರೆ ಅಂದ್ಕೊಂಡಿದ್ದೀನಿ. ತಲೆನೋವು ಅನ್ನದಿದ್ರೆ ಸಾಕು ಅಷ್ಟೇ. 100 ರಿಂದ 120 ಸ್ಕ್ರೀನ್‌ಗಳಲ್ಲಿ ಸಿನಿಮಾ ಪ್ರದರ್ಶನ ಆಗುತ್ತೆ.

ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ ಚಿತ್ರದ ಮೇಲಿದ್ದ ತಡೆ ತೆರವು

ರಮ್ಯಾ ಅವರು ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ ಚಿತ್ರದ ಬಿಡುಗಡೆಗೆ ತಂದಿದ್ದ ಸ್ಟೇ ತೆರವಾಗಿದೆ. ಈ ಸಿನಿಮಾ ಇಂದು ಬಿಡುಗಡೆಯಾಗಿದೆ. ತಡೆ ತೆರವು ಕುರಿತಂತೆ ಮಾತನಾಡಿದ ನಿರ್ಮಾಪಕ ವರುಣ್ ಗೌಡ, ‘ಸಣ್ಣ ಅಪಾರ್ಥದಿಂದಾಗಿ ಈ ರೀತಿ ಆಗಿತ್ತು. ರಮ್ಯಾ ಮೇಡಂ ಬಗ್ಗೆ ನಮಗೆ ಬೇಸರವಿಲ್ಲ’ ಎಂದು ಹೇಳಿದ್ದಾರೆ. ಕೋರ್ಟಿನಲ್ಲಿ ತಂಡಕ್ಕೆ ಜಯ ಸಿಗುತ್ತಿದ್ದಂತೆ ತಂಡ ಬೆಂಗಳೂರಿನ ನರ್ತಕಿ ಥಿಯೇಟರ್ ಮುಂದೆ ಪಟಾಕಿ ಸಿಡಿಸಿ ಸಂಭ್ರಮಿಸಿತು.

click me!