ನನಗೆ ಹೈಟ್‌ ಫೋಬಿಯಾ ಇದೆ, ಸಿನಿಮಾ ಬಿಟ್ಟು ದೂರ ಇರಲ್ಲ: ಶುಭಾ ಪೂಂಜಾ

Published : Jul 14, 2023, 07:38 AM IST
ನನಗೆ ಹೈಟ್‌ ಫೋಬಿಯಾ ಇದೆ, ಸಿನಿಮಾ ಬಿಟ್ಟು ದೂರ ಇರಲ್ಲ: ಶುಭಾ ಪೂಂಜಾ

ಸಾರಾಂಶ

ಬಹಳ ಸಮಯದ ನಂತರ ಶುಭಾ ಪೂಂಜಾ ಪ್ರಧಾನ ಪಾತ್ರದಲ್ಲಿ ನಟಿಸಿರುವ ಮಹಿಳಾ ಪ್ರಧಾನ ಚಿತ್ರ ‘ಅಂಬುಜ’ ಜು.21ರಂದು ಬಿಡುಗಡೆಯಾಗುತ್ತಿದೆ. ಶ್ರೀನಿ ಹನುಮಂತರಾಜು ನಿರ್ದೇಶನದ, ಕಾಶಿನಾಥ್ ಡಿ ಮಡಿವಾಳರ್ ನಿರ್ಮಾಣದ ಈ ಸಿನಿಮಾ ಜೊತೆಗೆ ಚಿತ್ರರಂಗದ ಸವಾಲಿನ ಕುರಿತ ಅವರ ಮಾತುಗಳು ಇಲ್ಲಿವೆ.

ಬಹಳ ಸಮಯದ ನಂತರ ಶುಭಾ ಪೂಂಜಾ ಪ್ರಧಾನ ಪಾತ್ರದಲ್ಲಿ ನಟಿಸಿರುವ ಮಹಿಳಾ ಪ್ರಧಾನ ಚಿತ್ರ ‘ಅಂಬುಜ’ ಜು.21ರಂದು ಬಿಡುಗಡೆಯಾಗುತ್ತಿದೆ. ಶ್ರೀನಿ ಹನುಮಂತರಾಜು ನಿರ್ದೇಶನದ, ಕಾಶಿನಾಥ್ ಡಿ ಮಡಿವಾಳರ್ ನಿರ್ಮಾಣದ ಈ ಸಿನಿಮಾ ಜೊತೆಗೆ ಚಿತ್ರರಂಗದ ಸವಾಲಿನ ಕುರಿತ ಅವರ ಮಾತುಗಳು ಇಲ್ಲಿವೆ.

- ಬಿಗ್‌ಬಾಸ್‌ನಿಂದ ಬಂದ ನಂತರ ನಾನು ನಟಿಸಿದ ಸಿನಿಮಾ ಅಂಬುಜ. ಶ್ರೀನಿಯವರ ಜೊತೆ ನಾನು ಈ ಮೊದಲು ಒಂದು ಸಿನಿಮಾ ಮಾಡಿದ್ದೆ. ಈ ಸಿನಿಮಾದ ಕತೆ ಚೆನ್ನಾಗಿದ್ದರಿಂದ ಮತ್ತು ಅ‍ವರ ಜೊತೆ ಕೆಲಸ ಮಾಡಿದ ಅನುಭವ ಇದ್ದಿದ್ದರಿಂದ, ಮಹಿಳಾ ಪ್ರಧಾನ ಸಿನಿಮಾ ಆದ್ದರಿಂದ ಒಪ್ಪಿಕೊಂಡೆ.

ಹೀಗೆ ಮಾಡಿ ಮಾಡಿ 10 ಕೆಜಿ ಸಣ್ಣಗಾಗಿರುವೆ; ವೇಟ್‌ಲಾಸ್‌ ಸೀಕ್ರೆಟ್‌ ಬಿಚ್ಚಿಟ್ಟ ಶುಭಾ ಪೂಂಜಾ

- ವಿಶಿಷ್ಟವಾದ ಕತೆ ಹೊಂದಿರುವ ಸಿನಿಮಾ ಇದು. ಇದರಲ್ಲಿ ನಾನು ಕ್ರೈಂ ರಿಪೋರ್ಟರ್ ಪಾತ್ರ ನಿರ್ವಹಿಸಿದ್ದೇನೆ. ಹಾರರ್, ಥ್ರಿಲ್ಲರ್‌, ಕಾಮಿಡಿ ಎಲ್ಲಾ ಅಂಶಗಳೂ ಇವೆ. ನನ್ನ ಪಾತ್ರಕ್ಕೆ ವಿವಿಧ ಶೇಡ್‌ಗ‍‍ಳಿವೆ. ತನಿಖೆ ಮಾಡುತ್ತಲೇ ನಾನೂ ಆ ಪ್ರಕರಣದ ಭಾಗವಾಗುವ ಕತೆ ಇದು.

- ಚಿಕ್ಕಮಗಳೂರಿನಲ್ಲಿ ಒಂದು ಬೆಟ್ಟದಲ್ಲಿ ಚಿತ್ರೀಕರಣ ಮಾಡಿದ್ದು ಈ ಸಿನಿಮಾದ ಮರೆಯಲಾಗದ ಅನುಭವ. ನನಗೆ ಹೈಟ್‌ ಫೋಬಿಯಾ ಇದೆ. ಅಲ್ಲದೆ ಮಳೆಗಾಲ ಬೇರೆ. ಸಂಜೆ 5 ಗಂಟೆಗೆ ಶೂಟಿಂಗ್. ಆ ಬೆಟ್ಟದಲ್ಲಿ ಇದುವರೆಗೆ ಯಾರೂ ಚಿತ್ರೀಕರಣ ಮಾಡಿಲ್ಲ ಎಂದು ಹೇಳಿದ್ದಕ್ಕೆ ಕಷ್ಟಪಟ್ಟು ಹೋಗಿ ನಟಿಸಿ ಬಂದೆ.

- ಬಹಳ ಸಮಯದ ನಂತರ ನನ್ನ ಸಿನಿಮಾ ಬರುತ್ತಿದೆ. ಪ್ರೇಕ್ಷಕರ ನಿರೀಕ್ಷೆ ಕುರಿತು ಕುತೂಹಲ ಇದೆ. ಈಗ ಚಿತ್ರತಂಡಗಳು ತಮ್ಮ ಪ್ರಯತ್ನ ಮಾಡುತ್ತಲೇ ಇವೆ. ಆದರೆ ಪ್ರೇಕ್ಷಕರು ಮೊಬೈಲ್ ದೂರ ಇಟ್ಟು ಚಿತ್ರಮಂದಿರಕ್ಕೆ ಬರುವ ಅಗತ್ಯ ಇದೆ. ಅದು ಸಾಧ್ಯವಾದಾಗ ಮಾತ್ರ ಸಿನಿಮಾಗಳಿಗೆ ಒಳ್ಳೆಯದಾಗುತ್ತದೆ.

- ನಾನು ಸಿನಿಮಾ ಪ್ರೀತಿ ಉಳ್ಳವಳು. ಸಿನಿಮಾದಿಂದ ದೂರ ಇರಲು ಸಾಧ್ಯವಿಲ್ಲ. 17 ವರ್ಷದಿಂದ ಚಿತ್ರರಂಗದಲ್ಲಿ ಇದ್ದೇನೆ. 50 ಸಿನಿಮಾ ಆಗಿದೆ. ಮೊದಲೆಲ್ಲಾ ಸಿನಿಮಾಗಳು 100 ದಿನ, 50 ದಿನ ಓಡುತ್ತಿತ್ತು. ಈಗ ದಿನಗಳ ಲೆಕ್ಕ ಹಾಕಬೇಕಾಗಿ ಬಂದಿದೆ. ಇಂಥಾ ಸಂದರ್ಭದಲ್ಲಿ ನಮ್ಮ ಸಿನಿಮಾ ಬರುತ್ತಿದೆ. ಪ್ರತೀ ಶುಕ್ರವಾರ ನಾವು ಕಲಾವಿದರೆ ನಮ್ಮ ಸಿನಿಮಾಗೆ ಪ್ರೇಕ್ಷಕರು ಬರುತ್ತಾರೆ ಎಂಬ ಭರವಸೆ ಇರುತ್ತದೆ. ಆ ಭರವಸೆ ನಮ್ಮನ್ನು ಪೊರೆಯುತ್ತದೆ.

ಅಂಬುಜ ಚಿತ್ರದ ಟ್ರೇಲರ್ ಬಿಡುಗಡೆ: ಶುಭಾ ಪೂಂಜ ಮತ್ತು ಅಮೃತವರ್ಷಿಣಿ ಧಾರಾವಾಹಿ ಖ್ಯಾತಿಯ ರಜನಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಮಹಿಳಾ ಪ್ರಧಾನ ‘ಅಂಬುಜ’ ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ. ಜುಲೈ 21ರಂದು ಸಿನಿಮಾ ಕೂಡ ಬಿಡುಗಡೆಯಾಗಲಿದೆ. ಕಾರ್ಯಕ್ರಮದಲ್ಲಿ ಚಿತ್ರದ ನಿರ್ದೇಶಕ ಶ್ರೀನಿ ಹನುಮಂತರಾಜು, ‘ಈ ಚಿತ್ರದ ಕತೆ ನೀವೆಲ್ಲೂ ನೋಡಿರಲ್ಲ, ಕೇಳಿರಲ್ಲ. ಅಷ್ಟು ಭರವಸೆ ನೀಡಬಲ್ಲೆ’ ಎಂದರು. 

ನಿರ್ಮಾಪಕ ಕಾಶಿನಾಥ್ ಡಿ ಮಡಿವಾಳರ್, ‘ನಾನು ಕತೆ ಬರೆಯುವಾಗ ಇಷ್ಟೊಂದು ಚೆನ್ನಾಗಿ ಬರಬಹುದು ಎಂಬ ನಿರೀಕ್ಷೆ ಇರಲಿಲ್ಲ. ಇಡೀ ತಂಡ ಶ್ರಮಪಟ್ಟು ಸಿನಿಮಾ ರೂಪಿಸಿದೆ.  ಈ ಸಿನಿಮಾ ಎಲ್ಲರಿಗೂ ಇಷ್ಟವಾಗುವ ನಂಬಿಕೆ ಇದೆ’ ಎಂದರು. ಶುಭಾ ಪೂಂಜ, ‘ನನ್ನದು ಕ್ರೈಮ್ ರಿಪೋರ್ಟರ್ ಪಾತ್ರ. ನಾನು ಈ ಸಿನಿಮಾ ನೋಡಿದ್ದೇನೆ. ಅದ್ಭುತವಾಗಿ ಮೂಡಿಬಂದಿದೆ’ ಎಂದರು. 

800 ವರ್ಷದ ಹಳೆ ಮನೆಗೆ ಪೇಂಟ್ ಮಾಡಿದ ಪತಿ; ಶುಭಾ ಪೂಂಜಾ Low ಬಜೆಟ್‌ ಮದುವೆ ಕಥೆ ಲೀಕ್

ಚಿತ್ರದ ನಾಯಕ ದೀಪಕ್ ಸುಬ್ರಹ್ಮಣ್ಯ, ರಜನಿ, ಪದ್ಮಜಾ ರಾವ್, ಜಗದೀಶ್ ಹಲ್ಕುಡೆ, ಶರಣಯ್ಯ, ಗೋವಿಂದೇ ಗೌಡ, ಸಂದೇಶ್ ಶೆಟ್ಟಿ, ನಿಶಾ ಹೆಗಡೆ, ಆಶಾರಾಣಿ, ಗುರುದೇವ ನಾಗಾರಾಜ, ಬೇಬಿ ಆಕಾಂಕ್ಷ, ಮೋಹನ್ ಮಾಸ್ಟರ್, ಕ್ಯಾಮೆರಾಮನ್ ಮುರಳೀಧರ್, ಎಡಿಟರ್ ವಿಜಯ್ ಎಂ.ಕುಮಾರ್, ಹಿನ್ನೆಲೆ ಸಂಗೀತ ನಿರ್ದೇಶಕ ತ್ಯಾಗರಾಜ್ ಎಂ.ಎಸ್ ಇದ್ದರು. ಕಾಶಿನಾಥ್ ಡಿ ಮಡಿವಾಳರ್ ನಿರ್ಮಾಣದ ಜೊತೆಗೆ ಚಿತ್ರಕ್ಕೆ ಕಥೆ, ಸಾಹಿತ್ಯ ಬರೆದಿದ್ದಾರೆ. ಪ್ರಸನ್ನ ಕುಮಾರ್ ಎಂ ಎಸ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಚಿತ್ರದ ಲಾಲಿ ಹಾಡನ್ನು ನಿರ್ಮಾಪಕ ಕಾಶಿನಾಥ್ ಪುತ್ರಿ ಆಕಾಂಕ್ಷ ಹಾಡಿದ್ದಾರೆ. ಲೋಕೇಶ್ ಭೈರವ, ಶಿವಪ್ರಕಾಶ್ ಸಹ ನಿರ್ಮಾಪಕರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

GST ಸಿನಿಮಾದಲ್ಲಿ ಪ್ರೇಕ್ಷಕರು ಏನನ್ನು ನೋಡಬಹುದು? ಕಂಟೆಂಟ್‌ ಮುಖ್ಯ ಎಂದಿದ್ಯಾಕೆ ಸೃಜನ್‌ ಲೋಕೇಶ್‌?
ಸುದೀಪ್‌ 12 ದಿನ ಕೂತು ಸಿನಿಮಾ ಎಡಿಟ್‌ ಮಾಡಿಸಿದ್ರು: ‘ಫ್ಲರ್ಟ್’ ಕುರಿತು ಚಂದನ್ ಕುಮಾರ್ ನೇರ ಮಾತು