80 ಪೋಷಕರು ನಿರ್ಮಿಸಿರುವ ಸಿನಿಮಾ ನಮ್ಮದು: ಮಧುಚಂದ್ರ

By Kannadaprabha News  |  First Published May 6, 2022, 8:51 AM IST

‘ವಾಸ್ಕೋಡಗಾಮ’, ‘ರವಿ ಹಿಸ್ಟರಿ’ ಚಿತ್ರ ನಿರ್ದೇಶಿಸಿದ್ದ ಮಧುಚಂದ್ರ ಅವರ ಹೊಸ ಸಿನಿಮಾ ‘ಸೆಲ್ಫಿ ಮಮ್ಮಿ ಗೂಗಲ್‌ ಡ್ಯಾಡಿ’. ಸೃಜನ್‌ ಲೋಕೇಶ್‌, ಮೇಘನಾ ರಾಜ್‌ ನಟನೆಯ ಈ ಚಿತ್ರ ಮೇ 13ಕ್ಕೆ ಚಿತ್ರಮಂದಿರಕ್ಕೆ ಬರುತ್ತಿದೆ. ಸಿನಿಮಾ ಬಗ್ಗೆ ನಿರ್ದೇಶಕರ ಮಾತು.


ಈ ಟೈಟಲ್‌ ಹಿಂದಿನ ಕತೆ ಏನು?

ಈ ಜನರೇಶನ್‌ ಪೇರೆಂಟ್ಸ್‌, ಮಕ್ಕಳ ಲೈಫ್‌ಸ್ಟೈಲ್‌ ಬಗ್ಗೆ ಇರುವ ಪ್ರಾಬ್ಲಮ್‌ ಮೇಲೆ ಇರುವ ಕತೆ ಈ ಸಿನಿಮಾದ್ದು. ಅದಕ್ಕೆ ತಕ್ಕಂಥಾ ಟೈಟಲ್‌ಗಾಗಿ ಸಾಕಷ್ಟುಹುಡುಕಿದ್ವಿ. ಕೊನೆಗೆ ಸಿಕ್ಕಿದ್ದು ಈ ಟೈಟಲ್‌. ಇದು ಕಾಮಿಡಿ ಎಂಟರ್‌ಟೈನ್‌ಮೆಂಟ್‌. ಮೂವಿ ಸಬ್ಜೆಕ್ಟ್ ಗಂಭೀರವಾಗಿದೆ. ಆದರೆ ಅದನ್ನು ನಾವು ಹೇಳಿರೋದು ಎಂಟರ್‌ಟೈನರ್‌ ಆಗಿದೆ.

Latest Videos

undefined

ಈ ಸಿನಿಮಾ ರೂಪುಗೊಂಡ ಬಗ್ಗೆ ಹೇಳೋದಾದ್ರೆ?

ಇದು ನಮ್ಮ ಮನೆ ಮಕ್ಕಳು ಹಾಗೂ ನಮ್ಮ ಅಪಾರ್ಚ್‌ಮೆಂಟ್‌ ಸುತ್ತಮುತ್ತಲ ಮಕ್ಕಳನ್ನು ಅಬ್‌ಸವ್‌ರ್‍ ಮಾಡ್ತಾ ಹುಟ್ಟುಕೊಂಡ ಕತೆ. ಈಗಿನ ಮಕ್ಕಳು ಮನೆಯಲ್ಲಿ ಒಬ್ಬರೇ ಇರ್ತಾರೆ. ಪೇರೆಂಟ್ಸ್‌ ಎಲ್ಲರಿಗೂ ಮೊಬೈಲ್‌ ಅಡಿಕ್ಷನ್‌. ಜೊತೆಗೆ ಕೆರಿಯರ್‌ ಬಗ್ಗೆಯೇ ಗಮನ. ಇದರಿಂದ ಮಕ್ಕಳ ಮೇಲೆ ಯಾವ ಪರಿಣಾಮ ಆಗುತ್ತೆ ಅನ್ನೋದನ್ನು ನೋಡ್ತಾ ನೋಡ್ತಾ ಈ ಸಿನಿಮಾ ಕತೆ ಹೊಳೆಯಿತು. ನನ್ನ ಮಗ ಓದುತ್ತಿರುವ ಆಲ್ಟರ್‌ನೇಟಿವ್‌ ಸ್ಕೂಲ್‌ನ ಇತರ ಪೋಷಕರಿಗೂ ಈ ಕತೆ ವಿವರಿಸಿದೆ. ಶುರುವಲ್ಲಿ 80 ಜನಕ್ಕೆ ಹೇಳಿದ್ದು, ಅವರ ಮೂಲಕ ಇನ್ನೊಂದಿಷ್ಟುಪೇರೆಂಟ್ಸ್‌ಗೂ ಹಬ್ಬಿ ಒಟ್ಟು 400 ಜನ ಪೋಷಕರಿಗೆ ಸಿನಿಮಾ ಕತೆ ನರೇಟ್‌ ಮಾಡಿದ್ದೆ. ಸುಮಾರು 80 ಜನ ತಾವೇ ಚಿತ್ರ ನಿರ್ಮಾಣಕ್ಕೆ ಮುಂದೆ ಬಂದರು. ಕನ್ನಡ ಸಿನಿಮಾ ರಂಗದಲ್ಲಿ ಇದೊಂದು ಹೊಸ ಬೆಳವಣಿಗೆ.

ಶೂಟಿಂಗ್‌ ಸೆಟ್‌ನಲ್ಲಿ ಎಷ್ಟು ಕೂಲ್ ಆಗಿರುತ್ತಾರೆ ಮೇಘನಾ ರಾಜ್‌ ನೋಡಿ!

ನಿಮ್‌ ಪ್ರಕಾರ ಈ ಚಿತ್ರ ಜನರಿಗೆ ಯಾಕೆ ಇಷ್ಟಆಗಬಹುದು?

ಇದು ಇವತ್ತಿನ ಕತೆ, ನೋಡಲು ಬರುವ ಪ್ರೇಕ್ಷಕರದೇ ಕತೆ. ಮೊಬೈಲ್‌ ಅಡಿಕ್ಷನ್‌ನಿಂದ ಹೊರ ಬರುವ ಸಣ್ಣದೊಂದು ಮಾರ್ಗವೂ ಇದರಲ್ಲಿದೆ. ಜನರಿಗೆ ಎಂಟರ್‌ಟೈನ್‌ಮೆಂಟ್‌ ಜೊತೆಗೆ ಅವರ ಸಮಸ್ಯೆಯಿಂದ ಹೊರಬರಲು ಸಣ್ಣ ದಾರಿಯೂ ಕಾಣಬಹುದು. ಕನ್ನಡದಲ್ಲಿ ಮನರಂಜನೆ ನೀಡುವ ಮಕ್ಕಳ ಚಿತ್ರ ಬರುತ್ತಿಲ್ಲ ಅನ್ನೋ ಕೊರತೆಯನ್ನು ಈ ಸಿನಿಮಾ ನೀಗಿಸುತ್ತೆ.

ನಿಮ್ಮ ಸಿನಿಮಾ ಪ್ರೀತಿ?

ಸಿನಿಮಾ ನನ್ನೊಳಗಿನ ಮಾತನ್ನು ಜಗತ್ತಿಗೆ ದಾಟಿಸುವ ಭಾಷೆ, ನನ್ನ ತುಡಿತವನ್ನು ಸಮರ್ಥವಾಗಿ ಅಭಿವ್ಯಕ್ತಿಗೊಳಿಸುವ ಮಾಧ್ಯಮ ಅಂತ ಶುರುವಿಂದಲೂ ನಂಬಿದವನು ನಾನು. 2012ರಿಂದ ಇಲ್ಲಿಯವರೆಗೆ ಕೆಲವೊಂದಿಷ್ಟುಸಿನಿಮಾ ಮಾಡಿದ್ದೇನೆ. ಕೆಲವು ಜನರಿಗೆ ಇಷ್ಟವಾಗಿದೆ. ಮತ್ತೆ ಕೆಲವು ಅಷ್ಟಿಷ್ಟಆದಂತಿಲ್ಲ. ಆದರೆ ಸಿನಿಮಾ ಮಾಡುವುದು ನನ್ನ ಪ್ರೀತಿ, ಅಭಿವ್ಯಕ್ತಿ. ಹೀಗಾಗಿ ಈ ಕಾರ್ಯ ನಿರಂತರವಾಗಿರುತ್ತದೆ.

click me!