Exclusive Interview ಧರಣಿ ಮಂಡಲ ವಿಶಿಷ್ಟಕ್ರೈಮ್‌ ಡ್ರಾಮಾ: ನವೀನ್‌ ಶಂಕರ್‌

Published : Dec 02, 2022, 09:11 AM IST
Exclusive Interview ಧರಣಿ ಮಂಡಲ ವಿಶಿಷ್ಟಕ್ರೈಮ್‌ ಡ್ರಾಮಾ: ನವೀನ್‌ ಶಂಕರ್‌

ಸಾರಾಂಶ

ಉತ್ತರ ಕರ್ನಾಟಕದ ಯುವ ಪ್ರತಿಭೆ ನವೀನ್‌ ಶಂಕರ್‌ ನಟನೆಯ ‘ಧರಣಿ ಮಂಡಲ ಮಧ್ಯಗೊಳಗೆ’ ಚಿತ್ರ ಇಂದು ತೆರೆಗೆ ಬರುತ್ತಿದೆ. ‘ಗುಳ್ಟು’ ಚಿತ್ರದ ನಂತರ ಪ್ರೇಕ್ಷಕರ ಮುಂದೆ ಬರುತ್ತಿರುವ ನವೀನ್‌ ಶಂಕರ್‌ ಮಾತುಗಳು ಇಲ್ಲಿವೆ

ಆರ್‌. ಕೇಶವಮೂರ್ತಿ

ತುಂಬಾ ದಿನಗಳ ನಂತರ ಮತ್ತೆ ಸ್ಕ್ರೀನ್‌ ಮೇಲೆ ಬರುತ್ತಿದ್ದೀರಲ್ಲ?

‘ಗುಳ್ಟು’ ಸಿನಿಮಾ ಮೂಲಕ ಪ್ರೇಕ್ಷಕರು ನನ್ನ ಒಪ್ಪಿಕೊಂಡರು. ನನಗೂ ಚಿತ್ರರಂಗದಲ್ಲಿ ನಿಲ್ಲುವ ಭರವಸೆ ಮೂಡಿಸಿದರು. ಆ ನಂತರ ನಾನು ಒಪ್ಪಿಕೊಂಡ ಸಿನಿಮಾಗಳು ಶೂಟಿಂಗ್‌ ಮುಗಿಸಿ ತೆರೆಗೆ ಬರುವುದು ತಡವಾಯಿತು. ‘ಧರಣಿ ಮಂಡಲ ಮಧ್ಯದೊಳಗೆ’ ಚಿತ್ರದ ಮೂಲಕ ಮತ್ತೆ ಬರುತ್ತಿದ್ದೇನೆ.

ಈ ಚಿತ್ರದಲ್ಲಿ ನಿಮ್ಮ ಪಾತ್ರ ಏನು?

ದೈಹಿಕ ಶಿಕ್ಷಕನ ಮಗನೊಬ್ಬ ಬಾಕ್ಸಿಂಗ್‌ ಕ್ಷೇತ್ರದಲ್ಲಿ ಏನಾದರೂ ಸಾಧನೆ ಮಾಡಬೇಕು ಎನ್ನುವ ಕನಸು ಕಟ್ಟಿಕೊಂಡು ಬೆಂಗಳೂರಿಗೆ ಬರುವ ಪಾತ್ರ. ಬೆಂಗಳೂರಿಗೆ ಬಂದ ಮೇಲೆ ಎದುರಾಗುವ ಒಂದು ಘಟನೆ ನನ್ನ ಜೀವನಕ್ಕೆ ಯಾವ ರೀತಿ ತಿರುವು ಕೊಡುತ್ತದೆಂಬುದನ್ನು ತೆರೆ ಮೇಲೆ ನೋಡಬೇಕು.

ANANT NAG ಅನಂತ್‌ನಾಗ್‌ ಮೆಚ್ಚಿದ ತಿಮ್ಮಯ್ಯ ಆ್ಯಂಡ್‌ ತಿಮ್ಮಯ್ಯ

ಬಾಕ್ಸರ್‌ ಪಾತ್ರ ಮಾಡುತ್ತಿದ್ದೀರಾ?

ನನ್ನ ಪಾತ್ರಕ್ಕೆ ಬಾಕ್ಸಿಂಗ್‌ ಹಿನ್ನೆಲೆ ಇರುತ್ತದೆ. ಬಾಕ್ಸಿಂಗ್‌ ಕಲಿತಿರುತ್ತೇನೆ. ರಾಜ್ಯ ಮಟ್ಟದಲ್ಲಿ ಆಡುವ ತಯಾರಿ ಮಾಡಿಕೊಂಡಿರುತ್ತೇನೆ. ಆದರೆ, ಆಕಸ್ಮಿಕವಾಗಿ ಎದುರಾಗುವ ಸನ್ನಿವೇಶವೊಂದು ಬಾಕ್ಸಿಂಗ್‌ ಕನಸು ಏನಾಗುತ್ತದೆ ಎಂಬುದರ ನನ್ನ ಪಾತ್ರ ಸಾಗುತ್ತದೆ.

ಇಷ್ಟಕ್ಕೂ ಚಿತ್ರದ ಕತೆ ಏನು?

ಒಂದು ಘಟನೆ ಅಥವಾ ಸನ್ನಿವೇಶದ ಸುತ್ತ ನಾಲ್ಕು ಕತೆಗಳು ಸಾಗುತ್ತದೆ. ನಾಲ್ಕೂ ಕತೆಗಳು ಬೇರೆ ಬೇರೆ ಸಂದರ್ಭಗಳಲ್ಲಿ, ಬೇರೆ ಬೇರೆ ಜಾಗಗಳಲ್ಲಿ ನಡೆಯುತ್ತವೆ. ಆದರೆ, ಈ ನಾಲ್ಕೂ ಕತೆಗಳು ಒಂದೇ ಘಟನೆಗೆ ಇಂಟರ್‌ ಲಿಂಕ್‌ ಆಗಿರುತ್ತವೆ. ಆ ಘಟನೆ- ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಯಾರು ಒಳ್ಳೆಯವರು, ಯಾರು ಕೆಟ್ಟವರು, ಯಾರು ಆರೋಪಿಗಳು ಎಂಬುದನ್ನು ನಿರೂಪಿಸುತ್ತಾ ಹೋಗುವುದೇ ಚಿತ್ರದ ಕತೆ.

ಯಾವ ಜಾನರ್‌ ಸಿನಿಮಾ ಇದು?

ಕ್ರೈಮ್‌ ಡ್ರಾಮಾ ಕತೆ. ಒಂದು ನಗರ ಪ್ರದೇಶದಲ್ಲಿ ಹಲವಾರು ಪಾತ್ರಧಾರಿಗಳು, ಆ ಎಲ್ಲ ಪಾತ್ರಗಳು ಒಂದೇ ಘಟನೆಗೆ ಸಂಬಂಧಿಸಿರುವುದು, ಅದು ಎಲ್ಲರನ್ನು ಒಂದು ಕತೆ ಸೇರಿಸುವುದು ಕೊನೆಗೆ ಏನಾಗುತ್ತದೆ ಎಂಬುದು ಥ್ರಿಲ್ಲಿಂಗ್‌.

ನೀವು ಈ ಚಿತ್ರವನ್ನು ಒಪ್ಪಿಕೊಳ್ಳಲು ಮುಖ್ಯ ಕಾರಣ?

ಪಾತ್ರಗಳು ಹೆಚ್ಚು ಇದ್ದರೂ ಎಲ್ಲ ಪಾತ್ರಗಳಿಗೂ ಕತೆಯಲ್ಲಿ ಜಾಗ ಇದೆ. ನಟನೆಗೆ ಸ್ಕೋಪ್‌ ಇದೆ. ಜತೆಗೆ ಸ್ಕಿ್ರಪ್‌್ಟಹೊಸದಾಗಿದೆ.

Exclusive Interview: ಕನ್ನಡ ನಾಯಕಿಯರಿಗೆ ಬೇಡಿಕೆ ಹೆಚ್ಚಾಗ್ತಿದೆ: ಖುಷಿ ರವಿ

ನಿಮಗೆ ನಿಮ್ಮ ಕನಸಿನಂತೆ ಚಿತ್ರರಂಗದಲ್ಲಿ ಅವಕಾಶಗಳು ಸಿಗುತ್ತಿವೆಯೇ?

ಸಿಗುತ್ತಿಲ್ಲ ಎನ್ನುವುದಾದರೆ ನಟ ರಾಕ್ಷಸ ಎನಿಸಿಕೊಂಡಿರುವ ಡಾಲಿ ಧನಂಜಯ್‌ ಚಿತ್ರದಲ್ಲಿ ನನಗೆ ನಟಿಸುವ ಅವಕಾಶ ಸಿಗುತ್ತಿರಲಿಲ್ಲ. ಡಾಲಿ ನಾಯಕನಾಗಿ ನಟಿಸುತ್ತಿರುವ ‘ಹೊಯ್ಸಳ’ ಚಿತ್ರದಲ್ಲಿ ನಾನು ವಿಲನ್‌.

ಹೀರೋ ಆಗಿ ನಿಮ್ಮನ್ನು ಗುರುತಿಸಿಲ್ಲ ಅನಿಸುತ್ತಿದೆಯೇ?

‘ಗುಳ್ಟು’ ನಂತರ ಈಗ ‘ಧರಣಿ ಮಂಡಲ ಮಧ್ಯದೊಳಗೆ’ ತೆರೆಗೆ ಬರುತ್ತಿದೆ. ಇದರ ನಂತರ ‘ಹೊಂದಿಸಿ ಬರೆಯಿರಿ’, ‘ಕ್ಷೇತ್ರಪತಿ’ ಹಾಗೂ ‘ನೋಡಿದವರು ಏನಂತಾರೆ’ ಚಿತ್ರಗಳಲ್ಲಿ ನಟಿಸಿದ್ದೇನೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

GST ಸಿನಿಮಾದಲ್ಲಿ ಪ್ರೇಕ್ಷಕರು ಏನನ್ನು ನೋಡಬಹುದು? ಕಂಟೆಂಟ್‌ ಮುಖ್ಯ ಎಂದಿದ್ಯಾಕೆ ಸೃಜನ್‌ ಲೋಕೇಶ್‌?
ಸುದೀಪ್‌ 12 ದಿನ ಕೂತು ಸಿನಿಮಾ ಎಡಿಟ್‌ ಮಾಡಿಸಿದ್ರು: ‘ಫ್ಲರ್ಟ್’ ಕುರಿತು ಚಂದನ್ ಕುಮಾರ್ ನೇರ ಮಾತು