ಸಂಜಯ್ ಶರ್ಮಾ ನಿರ್ದೇಶನದ, ರಾಜೇಶ್ ಶರ್ಮಾ ನಿರ್ಮಾಣದ, ಅನಂತ್‌ನಾಗ್ ನಟನೆಯ ‘ತಿಮ್ಮಯ್ಯ ಆ್ಯಂಡ್ ತಿಮ್ಮಯ್ಯ’ ಸಿನಿಮಾ ಇಂದು ಬಿಡುಗಡೆಯಾಗುತ್ತಿದೆ. ಈ ಚಿತ್ರದ ಕುರಿತು ಅನಂತ್‌ನಾಗ್ ಮಾತುಗಳನ್ನು ಕೇಳುವುದೇ ಸೊಗಸು.
ಸಂಜಯ್ ಶರ್ಮಾ ನಿರ್ದೇಶನದ, ರಾಜೇಶ್ ಶರ್ಮಾ ನಿರ್ಮಾಣದ, ಅನಂತ್‌ನಾಗ್ ನಟನೆಯ ‘ತಿಮ್ಮಯ್ಯ ಆ್ಯಂಡ್ ತಿಮ್ಮಯ್ಯ’ ಸಿನಿಮಾ ಇಂದು ಬಿಡುಗಡೆಯಾಗುತ್ತಿದೆ. ಈ ಚಿತ್ರದ ಕುರಿತು ಅನಂತ್‌ನಾಗ್ ಮಾತುಗಳನ್ನು ಕೇಳುವುದೇ ಸೊಗಸು.
‘85 ವರ್ಷದ ಘಾಟಿ ಮುದುಕ ತಿಮ್ಮಯ್ಯ. ಮಗನ ಹೆಂಡತಿ ತೀರಿಕೊಂಡ ದಿನ ಮಗ, ಮೊಮ್ಮಗನ ಜವಾಬ್ದಾರಿ ಎಲ್ಲಿ ತನ್ನ ಮೇಲೆ ಬರುತ್ತದೋ ಎಂದು ಹೆದರಿ ವಿದೇಶಕ್ಕೆ ಹೊರಟ ಸ್ವಾರ್ಥಿ ಮುದುಕ. ಜೀವನವನ್ನು ಪೂರ್ತಿಯಾಗಿ ಅನುಭವಿಸಬೇಕು ಅನ್ನುವುದು ಅವನ ಆಸೆ. ನನಗೂ ಅವನ ಥರಾನೇ ಬದುಕಬೇಕಿತ್ತು ಅಂತ ಅನ್ನಿಸಿದ ಪಾತ್ರ ಅದು. ಹಾಗಾಗಿ ತುಂಬಾ ಇಷ್ಟಪಟ್ಟು ಆ ಪಾತ್ರವೇ ಆಗಿದ್ದೆ.’
undefined
ಅನಂತ್‌ನಾಗ್ ಅವರು ಇಷ್ಟುಹೇಳಿ ಬಾಯಿ ತುಂಬಾ ನಕ್ಕರು. ಅನಂತ್‌ನಾಗ್ ಅವರಿಗೆ ಸ್ಕಿ್ರಪ್‌್ಟಮೇಲೆ ಬಲವಾದ ನಂಬಿಕೆ. ಪೂರ್ತಿ ಸ್ಕಿ್ರಪ್‌್ಟಓದದೇ ಅವರು ಸಿನಿಮಾ ಒಪ್ಪುವುದಿಲ್ಲ. ಎಷ್ಟೋ ಸ್ಕಿ್ರಪ್‌್ಟಓದಿದ ಮೇಲೆ ನಿರ್ಮಾಪಕರನ್ನು ಬಚಾವ್ ಮಾಡಿದ್ದು ಕೂಡ ಇದೆ. ಒಂದು ವೇಳೆ ಸ್ಕಿ್ರಪ್‌್ಟಓದಿ ಅವರು ತುಂಬಾ ಎಕ್ಸೈಟ್ ಆಗಿದ್ದಾರೆ ಎಂದರೆ ಆ ಪಾತ್ರ ಅವರಿಗೆ ತುಂಬಾ ಹತ್ತಿರವಾಗಿದೆ ಎಂದೇ ಅರ್ಥ. ಆಮೇಲೆ ಅವರು ಆ ಪಾತ್ರವನ್ನು ಕೈ ಹಿಡಿದು ನಡೆಸುತ್ತಾರೆ. ತುಂಬಾ ಜನರಿಗೆ ಆ ಪಾತ್ರದ ಕುರಿತು ಪ್ರೀತಿಯಿಂದ ಹೇಳುತ್ತಾರೆ. ಅಂಥದ್ದೇ ಒಂದು ಪಾತ್ರ ತಿಮ್ಮಯ್ಯ ಆ್ಯಂಡ್ ತಿಮ್ಮಯ್ಯ ಸಿನಿಮಾದ ಸೀನಿಯರ್ ತಿಮ್ಮಯ್ಯ.
Exclusive Interview ಈವರೆಗೆ ಇಂಥಾ ಪಾತ್ರ ಮಾಡಿಲ್ಲ: ಅನಂತ್‌ನಾಗ್
‘ಈ ಸಿನಿಮಾದ ನಿರ್ದೇಶಕ ಸಂಜಯ್ ಶರ್ಮ ಆ್ಯಡ್ ಫಿಲಂ ಮಾಡುತ್ತಿದ್ದವರು. ಮುಂಬೈಯಲ್ಲಿದ್ದಾಗ ಅನೇಕ ಹಳೆಯ ಕೆಫೆಗಳ ಡಾಕ್ಯುಮೆಂಟರಿ ಮಾಡಿದ್ದರು. ಆ ಕೆಫೆಗಳ ಕತೆಗಳನ್ನೆಲ್ಲಾ ಕೇಳಿ ಕೇಳಿ ಮೊದಲ ಬಾರಿಗೆ ಆಪ್ತ ಅನ್ನಿಸುವ ಸಿನಿಮಾ ಕತೆ ಬರೆದಿದ್ದಾರೆ. ಅವರು ಮೊದಲು ಬಂದು ನಿಮ್ಮನ್ನೇ ಗಮನದಲ್ಲಿಟ್ಟುಕೊಂಡು ಪಾತ್ರ ಬರೆದಿದ್ದೇನೆ, ನೀವೇ ಮಾಡಬೇಕು ಎಂದು ಕೇಳಿಕೊಂಡಿದ್ದರು. ನಾನು ಸ್ಕಿ್ರಪ್‌್ಟಕೇಳಿ ತರಿಸಿಕೊಂಡು ಓದಿದೆ. ಕತೆ ತುಂಬಾ ಚೆನ್ನಾಗಿ ಮಾಡಿದ್ದಾರೆ. ಒಂದು ಕೆಫೆಯ ಕತೆ. ತಾತ ಮೊಮ್ಮಗನ ಮಧ್ಯದ ಘರ್ಷಣೆ, ಬಾಂಧವ್ಯದ ಕತೆ. ಸಿನಿಮಾದಲ್ಲಿ ಆತ ಟ್ರಂಪೆಟ್ ನುಡಿಸುತ್ತಾನೆ. ರಾತ್ರೋರಾತ್ರಿ ಎದ್ದು ಕೂತು ಟ್ರಂಪೆಟ್ ನುಡಿಸಿ ಕಾಟ ಕೊಡುತ್ತಾನೆ. ಅಂಥಾ ದುಷ್ಟತಿಮ್ಮಯ್ಯ. ನಾನು ಎರಡು ದಿನ ಟ್ರಂಪೆಟ್ ಕಲಿತು ಟ್ರಂಪೆಟ್ ನುಡಿಸುವ ನಟನೆ ಮಾಡಿದೆ. ಇಡೀ ಸಿನಿಮಾವನ್ನು ತುಂಬಾ ವಿಶಿಷ್ಟವಾಗಿ ಚಿತ್ರಿಸಿದ್ದಾರೆ’ ಎನ್ನುತ್ತಾರೆ ಅನಂತ್‌ನಾಗ್.
ತಮಗೆ ಮತ್ತು ಸಿನಿಮಾ ನಿರ್ದೇಶಕರಿಗೂ ಇರುವ ಬಾಂಧವ್ಯವನ್ನೂ ಅವರು ಖುಷಿಯಿಂದಲೇ ವಿವರಿಸುತ್ತಾರೆ. ‘ನಿರ್ದೇಶಕ ಸಂಜಯ್ ಶರ್ಮಾ ಅವರಿಗೆ ಸತ್ಯದೇವ್ ದುಬೆ ಅವರು ನೀನಿನ್ನು ಆ್ಯಡ್ ಫಿಲಂ ಮಾಡಿದ್ದು ಸಾಕು, ಸಿನಿಮಾ ಮಾಡು ಎಂದು ಹೇಳಿದ್ದರಂತೆ. ದುಬೆ ಅವರು ನನ್ನ ರಂಗಭೂಮಿ ಸಮಯದ ಗುರುಗಳು. ನಾನು ಚಿತ್ರರಂಗಕ್ಕೆ ಬರುವುದಕ್ಕೂ ಪ್ರಮುಖ ಪಾತ್ರ ವಹಿಸಿದವರು. ನನಗೂ ಸಂಜಯ್ ಶರ್ಮಾರಿಗೂ ಈ ನಂಟು ಇರುವುದು ಮಾತ್ರ ಕಾಕತಾಳೀಯ’ ಎನ್ನುತ್ತಾರೆ ಅನಂತ್‌ನಾಗ್.
Anant Nag Interview ಏನೆಂದು ಹೇಳಲಿ ಆನಂದ ಸಂಭ್ರಮ ಇನ್ನೇನಿನ್ನೇನು
ಅನಂತ್‌ನಾಗ್ ಅವರು ಈ ಚಿತ್ರವನ್ನು ಎಷ್ಟುಪ್ರೀತಿಸಿದ್ದರು ಎಂದರೆ ಈ ಚಿತ್ರದ ಶೂಟಿಂಗ್ ಸಮಯದಲ್ಲಿ ಹುಷಾರಿಲ್ಲದೆ ಇದ್ದರೂ ಬೆಂಗಳೂರಿನಿಂದ ಕುಣಿಗಲ್‌ಗೆ ದಿನಾ ಪ್ರಯಾಣಿಸುತ್ತಿದ್ದರು. ಒಂದು ದಿನವೂ ಸೆಟ್‌ಗೆ ಹೋಗದೇ ಇರಲಿಲ್ಲ. ವೈದ್ಯರು ಸ್ವಲ್ಪ ರೆಸ್ಟ್ ತೆಗೆದುಕೊಳ್ಳಿ ಎಂದು ಹೇಳಿದ್ದರೂ ಅವರು ಮಾತ್ರ ಚಿತ್ರತಂಡಕ್ಕೆ ತೊಂದರೆಯಾಗುತ್ತದೆ ಎಂಬ ಕಾರಣ ನೀಡಿ ಶೂಟಿಂಗ್ ಹೋಗುವುದನ್ನು ತಪ್ಪಿಸಲಿಲ್ಲ.
ಹೀಗೆ ಅನಂತ್‌ನಾಗ್ ಬಹುವಾಗಿ ಮೆಚ್ಚಿಕೊಂಡ ತಿಮ್ಮಯ್ಯ ಆ್ಯಂಡ್ ತಿಮ್ಮಯ್ಯ ಇವತ್ತು ಬಿಡುಗಡೆ ಆಗುತ್ತಿದೆ. ಅನಂತ್‌ನಾಗ್ ಅವರ ತಿಮ್ಮಯ್ಯ ಪಾತ್ರ ಎಷ್ಟುಅಗಾಧವಾಗಿದೆ ಅನ್ನುವುದೇ ಸದ್ಯದ ಕುತೂಹಲ.