ಹಿಮಪಾತಕ್ಕೆ ಶೋ ಪೀಸ್‌ನಂತಾದ ಕಾರ್ ವಾಶಿಂಗ್ ಸೆಂಟರ್: ವಿಡಿಯೋ ವೈರಲ್

By Anusha Kb  |  First Published Jan 3, 2023, 1:07 PM IST

ಈಗ ಹಿಮಪಾತದಿಂದ ಕಾರು ತೊಳೆಯುವ  ವಾಷಿಂಗ್ ರೂಮ್ ಒಂದು ಸಂಪೂರ್ಣ ಹಿಮದ ಗುಹೆಯಂತೆ ಆಗಿದ್ದು, ಶೋ ಪೀಸ್‌ನಂತೆ ಕಾಣಿಸುತ್ತಿದೆ ಇದರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.


ಅಮೆರಿಕಾದಲ್ಲಿ ಈ ಬಾರಿಯ ಭಾರಿ ಹಿಮಪಾತಕ್ಕೆ ಜನರು ಪ್ರಾಣಿಗಳು ಹಾಗೂ ಪ್ರಕೃತಿ ಕೂಡ ಅಕ್ಷರಶಃ ನಲುಗಿ ಹೋಗಿದೆ. ಭಾರಿ ಹಿಮಪಾತದಿಂದ ಅಲ್ಲಿನ ವಿಶ್ವ ವಿಖ್ಯಾತ ಜಲಾಶಯ ನಯಾಗಾರ ಫಾಲ್ಸ್ ಕೂಡ ಭಾಗಶಃ ಮಂಜುಗಡ್ಡೆಯಾಗಿದೆ. ಹಿಮ ಮಾರುತವೂ ವಿಶ್ವದ ಅದ್ಭುತವೆನಿಸಿದ ನಯಾಗಾರ ಫಾಲ್ಸ್‌  ಸೌಂದರ್ಯಕ್ಕೆ ಮತ್ತಷ್ಟು ಕಳೆ ನೀಡಿ ಸ್ವರ್ಗವನ್ನೆ ಧರೆಗಿಳಿಸಿದಂತೆ ಕಾಣಿಸುತ್ತಿತ್ತು. ಇದರ  ಫೋಟೋ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಅದೇ ರೀತಿ ಈಗ ಹಿಮಪಾತದಿಂದ ಕಾರು ತೊಳೆಯುವ  ವಾಷಿಂಗ್ ರೂಮ್ ಒಂದು ಸಂಪೂರ್ಣ ಹಿಮದ ಗುಹೆಯಂತೆ ಆಗಿದ್ದು, ಶೋ ಪೀಸ್‌ನಂತೆ ಕಾಣಿಸುತ್ತಿದೆ ಇದರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.

snowyxmasworld ಎಂಬ ಇನ್ಸ್ಟಾಗ್ರಾಮ್ (Instagram Page) ಪೇಜ್‌ ಹೊಂದಿರುವ att Guthrie ಎಂಬುವವರು ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಇದು ಟೆಕ್ಸಾಸ್‌ನ ಕಾರು ವಾಶ್ ಮಾಡುವ ಕೇಂದ್ರವಾಗಿದ್ದು, ಹಿಮದ ಗುಹೆಯಂತೆ ಕಾಣಿಸುತ್ತಿದೆ. ಮುಂಜಾನೆ ಮಂಜನ್ನರಸಿ ಹೋಗುತ್ತಿದೆ, ಈ ವೇಳೆ ಒಂದು @heb ಬಳಿ ತುಂಬಾ ಸುಂದರವಾಗಿದ್ದು ಕಾಣ ಸಿಕ್ಕಿತ್ತು ಎಂದು ಬರೆದುಕೊಂಡು ಅವರು ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋವನ್ನು ಟೆಕ್ಸಾಸ್‌ನ ಲೇಕ್‌ವೇಯಲ್ಲಿ ಡಿಸೆಂಬರ್ 24 ರಂದು ಮಾಡಿದ್ದಾರೆ ಎನ್ನಲಾಗಿದ್ದು, ಆ ಸಂದರ್ಭ ಮೈನಸ್ 10 ರಿಂದ 12 ಡಿಗ್ರಿಗಳಿಗೆ ವಾತಾವರಣ ಇಳಿಕೆಯಾಗಿತ್ತು ಎಂದು ತಿಳಿದು ಬಂದಿದೆ.

Tap to resize

Latest Videos

undefined

ಅಮೆರಿಕಾದಲ್ಲಿ ಹಿಮಪಾತಕ್ಕೆ ತತ್ತರಿಸಿದ ಪ್ರಾಣಿಗಳು: ವಿಡಿಯೋ ವೈರಲ್

ಈ ಚಿಕ್ಕ ವಿಡಿಯೋದಲ್ಲಿ ಹಿಮಪದರಗಳು ಮೇಲಿನಿಂದ ಕೆಳಗೆ ನೇತಾಡುವಂತೆ ಕಾಣಿಸುತ್ತಿದೆ. ಹಿಮದ ಕೋಲುಗಳನ್ನು ಅಂಕರಿಕ ವಸ್ತುಗಳಂತೆ ನೇತು ಬಿಟ್ಟಂತೆ ಈ ವಿಡಿಯೋ ಕಾಣಿಸುತ್ತಿದ್ದು, ಮತ್ತೆ ಕೆಲವು ಹಿಮದ ಗಟ್ಟಿಗಳು ಕೆಳಗೆ ಬಿದ್ದಂತೆ ಕಾಣಿಸುತ್ತಿದೆ. ಈ ವಿಡಿಯೋ ಪೋಸ್ಟ್ ಆದಾಗಿನಿಂದಲೂ 35 ಸಾವಿರಕ್ಕೂ ಹೆಚ್ಚು ಜನ ಈ ವಿಡಿಯೋ ವೀಕ್ಷಿಸಿದ್ದಾರೆ. ಅನೇಕರು ಈ ವಿಡಿಯೋ ನೋಡಿ ಕಾಮೆಂಟ್ ಮಾಡಿದ್ದಾರೆ.

ಅಮೆರಿಕಾದಲ್ಲಿ (America) ಕಾಣಿಸಿಕೊಂಡ ಈ ಶತಮಾನದ ಅತ್ಯಂತ ತೀವ್ರವಾದ ಹಿಮ ಚಂಡಮಾರುತದಿಂದ ಈಗಾಗಲೇ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ.  ಉತ್ತರ ಅಮೆರಿಕಾದಾದ್ಯಂತ ಈ ಹಿಮಪಾತದ ಈ ಚಂಡಮಾರುತ ಎಡೆಬಿಡದೇ ಬಾಧಿಸುತ್ತಿರುವುದರಿಂದ ಅಮೆರಿಕಾ ಹಾಗೂ ಕೆನಡಾದ (Canada) ಮಿಲಿಯನ್‌ಗೂ ಹೆಚ್ಚು ಜನರ ಜೀವನ ಅಸ್ತವ್ಯಸ್ತವಾಗಿದೆ. ಪ್ರಕೃತಿಯ ಈ ಕ್ರೋಧಕ್ಕೆ ಮನುಷ್ಯರಷ್ಟೇ ಅಲ್ಲದೇ, ಪ್ರಾಣಿಗಳೂ ಸಹ ನರಳುತ್ತಿವೆ. ಇತ್ತೀಚೆಗೆ ಪ್ರಾಣಿಯೊಂದು ಹಿಮಪಾತಕ್ಕೆ ಸಿಲುಕಿ ನರಳುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತೀವ್ರವಾದ ಹಿಮಪಾತದಿಂದಾಗಿ ಜಿಂಕೆಯೊಂದರ ಕಣ್ಣು ಮತ್ತು ಕಿವಿಗಳು ಸಂಪೂರ್ಣವಾಗಿ ಹೆಪ್ಪುಗಟ್ಟಿದ ಸ್ಥಿತಿಯಲ್ಲಿ ಕಂಡು ಬಂದಿದೆ. ಅದೃಷ್ಟವಶಾತ್, ಇಬ್ಬರು ಹೈಕರ್‌ಗಳು(ಚಾರಣಿಗರು) ಅದರ ರಕ್ಷಣೆ ಮಾಡಿದ್ದಾರೆ. ಆದರೆ ಈ ವಿಡಿಯೋ ಯಾವ ಪ್ರದೇಶದ್ದು ಎಂಬ ಉಲ್ಲೇಖವಿಲ್ಲ. 

ಇದಕ್ಕೂ ಮೊದಲು ಹಿಮದಿಂದ ಹೆಪ್ಪುಗಟ್ಟಿದ ಸರೋವರದ ಮೇಲೆ ನಡೆಯಲು ಹೋಗಿ ಮೂವರು ಭಾರತೀಯರು ಪ್ರಾಣ ಕಳೆದುಕೊಂಡಿದ್ದರು. ಹೆಪ್ಪುಗಟ್ಟಿದ ಸರೋವರದ (frozen lake) ಮೇಲೆ ನಡೆದಾಡಲು ಹೋದಾಗ ಪದರ ಬಾಯ್ತೆರೆದು ಇಂಡೋ ಅಮೆರಿಕನ್ ದಂಪತಿ ಸಾವನ್ನಪ್ಪಿದ್ದರು. ಕ್ರಿಸ್‌ಮಸ್‌ನ (Christmas) ಮಾರನೇ ದಿನ ಈ ದುರಂತ ನಡೆದಿತ್ತು. 49 ವರ್ಷದ ನಾರಾಯಣ ಮುದ್ದಣ (Narayana Muddana) ಹಾಗೂ ಅವರ ಪತ್ನಿ ಹರಿತಾ ಮುದ್ದಣ್ಣ (Haritha Muddana) ಹಾಗೂ ಅವರ 47 ವರ್ಷದ ಸ್ನೇಹಿತ ಗೋಕುಲ್ ಮಡಿಸೆಟಿ (Gokul Mediseti) ಎಂಬುವವರು ಅರಿಜೋನಾದ ಕೊಕೊನಿನೊ ಕೌಂಟಿ ವೂಡ್ಸ್ ಕ್ಯಾನನ್ ಸರೋವರದಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಐಸ್ ಮೇಲೆ ನಡೆದಾಡುತ್ತಿದ್ದಾಗ ಅದು ಬಾಯ್ತೆರೆದ ಪರಿಣಾಮ ಅವರು ಮುಳುಗಿ ಸಾವನ್ನಪ್ಪಿದ್ದರು. ಇದರಿಂದ ಇವರ ಎರಡು ಮಕ್ಕಳು ಅಪ್ಪ ಅಮ್ಮನನ್ನು ಕಳೆದುಕೊಂಡು ಅನಾಥರಾಗಿದ್ದಾರೆ.

ಮಂಜುಗಡ್ಡೆಯಾಗಿ ಬದಲಾದ ನಯಾಗಾರ ಫಾಲ್ಸ್: ಫೋಟೋಸ್ ವೈರಲ್

ಸ್ಮಸ್ ಹಬ್ಬದ ಸಂದರ್ಭದಲ್ಲಿ ಪಶ್ಚಿಮ ನ್ಯೂಯಾರ್ಕ್‌ಗೆ (western New York) ಅಪ್ಪಳಿಸಿದ ಹಿಮಪಾತದ ಚಂಡಮಾರುತದಿಂದ ಇಡೀ ನಗರ ಪಾರ್ಶ್ವವಾಯುವಿಗೆ ಒಳಗಾದಂತಾಗಿದೆ. ಅಮೆರಿಕಾದ ಭೌಗೋಳಿಕ ತಜ್ಞರು ಇದನ್ನು ಶತಮಾನದ ಅತ್ಯಂತ ದೊಡ್ಡ ಹಿಮಪಾತ (blizzard) ಎಂದು ಕರೆದಿದ್ದಾರೆ. ಈ ಹಿಮಪಾತದಿಂದಾಗಿ ಅಮೆರಿಕಾದಲ್ಲಿ ವಿದ್ಯುತ್ ಕಡಿತದ ಜೊತೆಗೆ ಜನಜೀವನ ವ್ಯತ್ಯಯಗೊಂಡಿದ್ದಲ್ಲದೇ ಹಲವಾರು ಸಾವು ನೋವುಗಳಿಗೆ ಕಾರಣವಾಯ್ತು. ಸಾಮಾಜಿಕ ಜಾಲತಾಣದಲ್ಲಿ(social media) ವೈರಲ್ ಆಗಿರುವ ಹಲವು ಫೋಟೋಗಳು ಅಲ್ಲಿನ ವಾಸ್ತವ ಚಿತ್ರಣವನ್ನು ತೆರೆದಿಡುತ್ತಿವೆ. ಭೀಕರ ಹಿಮಪಾತದ ಪರಿಣಾಮ ಅಮೆರಿಕಾದ ಬಫಲೋದಲ್ಲಿ(Buffalo) ವಾಹನಗಳ ಒಳಗೆ ಹಾಗೂ ಹಿಮದಡಿಯಲ್ಲಿ ಅನೇಕರು ಶವ ಪತ್ತೆಯಾಗಿದೆ.  


 

click me!