ಬಿಗ್‌ಬಾಸ್ ಹೇಗೆ ಸ್ಪರ್ಧಿಗಳ ಬದುಕನ್ನು ಬದಲಾಯಿಸುತ್ತದೆ ಎನ್ನುವುದಕ್ಕೆ ದಿವ್ಯಾ ಸುರೇಶ್ ಉತ್ತಮ ಉದಾಹರಣೆ. ಕಲಾವಿದೆಯಾಗಿದ್ದರೂ ಹೆಚ್ಚು ಜನಪ್ರಿಯತೆ ಪಡೆದಿರದ ಈ ಸುಂದರಿ ಇದೀಗ ಸಿನಿಮಾರಂಗದಿಂದ ಹೊಸ ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾರೆ. ತಾರೆಯಾಗಲು ಹೊರಟ ಹುಡುಗಿಯ `ಬಿಗ್‌ಬಾಸ್’ ಅನುಭವಗಳು ಇಲ್ಲಿವೆ.
ಕಳೆದ ವರ್ಷ ಬಿಡುಗಡೆಯಾಗಿ ಒಂದಷ್ಟು ಸದ್ದು ಮಾಡಿದ ಚಿತ್ರಗಳಲ್ಲಿ ರೂಪಿಕಾ ನಟನೆಯ `ಥರ್ಡ್ ಕ್ಲಾಸ್’ ಸಿನಿಮಾ ಕೂಡ ಒಂದು. ಅದರಲ್ಲೊಂದು ಪಾತ್ರ ನಿರ್ವಹಿಸಿದ್ದ ದಿವ್ಯಾ ರಾವ್ ಅವರೇ ಬಿಗ್‌ಬಾಸ್‌ನಲ್ಲಿ ದಿವ್ಯಾ ಸುರೇಶ್ ಆಗಿ ಜನಪ್ರಿಯತೆ ಪಡೆದರು. ಕನ್ನಡದಲ್ಲಿ ಸುದೀಪ್, ದರ್ಶನ್ ಅವರಂಥ ಎತ್ತರದ ನಾಯಕರಿಗೆ ಎತ್ತರದ ನಿಲುವಿನ ನಾಯಕಿಯರೇ ಜೋಡಿಯಾಗಬೇಕಿರುತ್ತದೆ. ಐದಡಿ ಎಂಟು ಇಂಚು ಎತ್ತರದ ದಿವ್ಯಾ ಸುತೇಶ್ ಅವರಿಗೆ ಅಂಥ ಅವಕಾಶಗಳು ಸಿಕ್ಕರೆ ಅಚ್ಚರಿ ಏನಿಲ್ಲ. ಈಗಾಗಲೇ ಎರಡರಿಂದ ಮೂರು ಸಿನಿಮಾ ಆಫರ್‌ಗಳನ್ನು ಪಡೆದಿರುವ ಇವರ ಸಿನಿಮಾಗಳಲ್ಲಿ ಜನಪ್ರಿಯ ನಾಯಕರೇ ಇದ್ದಾರೆ ಎನ್ನುವುದು ಗಮನಾರ್ಹ.
- ಶಶಿಕರ ಪಾತೂರು
undefined
ಬಿಗ್ ಬಾಸ್ ಆಫರ್ ಒಪ್ಪಿಕೊಳ್ಳಬೇಕು ಎನ್ನುವ ನಿಮ್ಮ ನಿರ್ಧಾರಕ್ಕೆ ಕಾರಣವೇನಿತ್ತು?
ನಾನು ಬಿಗ್ ಬಾಸ್ ರಿಯಾಲಿಟಿ ಶೋಗೆ ಮೊದಲಿನಿಂದಲೂ ಫ್ಯಾನಾಗಿದ್ದೆ. ಫಾಲೋ ಮಾಡುತ್ತಿದ್ದೆ. ಪ್ರತಿ ಬಾರಿಯೂ ನಾನು ಹೋಗಿದ್ದರೆ ಹೇಗಿರುತ್ತಿದ್ದೆ ಎಂದು ಯೋಚಿಸುತ್ತಿದ್ದೆ. ಹಾಗಿರಬೇಕಾದರೆ ಈ ಬಾರಿ ತಾನಾಗೆ ನನಗೆ ಪೋನ್ ಬಂದಾಗಲಂತೂ ಈ ಅವಕಾಶ ಕಳೆದುಕೊಳ್ಳುವುದು ಬೇಡ ಎಂದು ತಕ್ಷಣವೇ ಒಪ್ಪಿಕೊಂಡೆ.
ಬಿಗ್‌ಬಾಸ್‌ನಿಂದ ಪಡೆದಿದ್ದೂ, ಕಳ್ಕೊಂಡಿದ್ದು ಎರಡೂ ಇವೆ: ಸಂಬರಗಿ
ಆ ಮನೆಯಿಂದ ಮರಳಿದ ಬಳಿಕ ನಿಮ್ಮ ನಿರ್ಧಾರ ಸರಿಯಾಗಿತ್ತು ಅನಿಸುತ್ತಾ?
ಖಂಡಿತವಾಗಿಯೂ. ಹೋಗಿ ಬಂದಿರುವ ಕಾರಣ ಒಂದೊಳ್ಳೆಯ ಅನುಭವವೇ ದೊರೆಯಿತು. ಅಲ್ಲಿಗೆ ಹೋಗಿ ಬಂದ ಬಳಿಕ ನನ್ನಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಬಿಗ್‌ಬಾಸ್‌ನಿಂದ ಸಾಕಷ್ಟು ಪಾಠಗಳನ್ನು ಕಲಿತಿದ್ದೀನಿ. ನನ್ನ ವೀಕ್ನೆಸ್ ಮತ್ತು ಸ್ಟ್ರೆಂತ್‌ಗಳ ಅರಿವು ನನಗಾಗಿದೆ. ಅದನ್ನು ಅರ್ಥಮಾಡಿಕೊಳ್ಳುವ ಅವಕಾಶ ಅಲ್ಲಿ ನನಗೆ ಬಿಗ್‌ಬಾಸ್ ಮಾಡಿಕೊಟ್ಟಿದೆ. ಸೂಕ್ಷ್ಮ ವಿಚಾರಗಳಾಗಲೀ ಅಥವಾ ಏನೇ ಇರಲಿ; ಎಲ್ಲವನ್ನೂ ಕಲಿಯುತ್ತಾ ಇರುತ್ತೇವೆ. ಈ ಒಂದು ಪಾಠವನ್ನು ಯಾವುದೇ ಸ್ಕೂಲು ಅಥವಾ ಯೂನಿವರ್ಸಿಟಿ ನಮಗೆ ಕಲಿಸಿಕೊಡುವುದಿಲ್ಲ. ಅದರಲ್ಲಿಯೂ ಸ್ಕೂಲ್, ಕಾಲೇಜ್‌ಗಳಿಗೆ ದುಡ್ಡು ಕೊಟ್ಟು ಪಾಠ ಕಲಿಯಬೇಕಾಗಿರುತ್ತದೆ. ಆದರೆ ಬಿಗ್‌ಬಾಸ್ ಮನೆಯಲ್ಲಿ ಅವರೇ ನಮಗೆ ದುಡ್ಡು ಕೊಟ್ಟು ಪಾಠ ಕಲಿಸುತ್ತಾರೆ.
ಲ್ಯಾಗ್ ಮಂಜನ್ನ ಕಂಡ್ರೆ ದಾರೀಲಿ ಹೋಗೋರೆಲ್ಲ ನಿಲ್ಸಿ ಮಾತಾಡಿಸ್ತಾರಂತೆ!
ನೀವು ಬಿಗ್ ಬಾಸ್ ಮನೆಯಲ್ಲಿ ಮುದ್ದಿನ ಹುಡುಗಿಯಾಗಿ ಇರಲು ಬಯಸಿದಂತಿತ್ತು?
ಹೌದು. ನನ್ನನ್ನು ನಮ್ಮ ಮನೆಯಲ್ಲಿ ಇದುವರೆಗೆ ಮುದ್ದಿನಿಂದಲೇ ಬೆಳೆಸಿದ್ದಾರೆ. ನಮ್ಮಮ್ಮ ನಾನು ಏನೇ ಬೇಕು ಅಂದಾಗಲೂ `ಇಲ್ಲ’ ಎನ್ನುವ ಮಾತನ್ನೇ ಹೇಳಿಲ್ಲ. ಅವರಿಗೆ ಕಷ್ಟವಾದರೂ ನನ್ನ ಆಸೆಗಳನ್ನು ಈಡೇರಿಸಿದ್ದಾರೆ. ಹಾಗೆ ಅಷ್ಟೊಂದು ಸೆನ್ಸಿಟಿವ್ ಆಗಿ ಬೆಳೆಸಿದ್ದಾರೆ ನನ್ನನ್ನು. ನನಗೆ ಸಣ್ಣ ಸಣ್ಣ ವಿಚಾರಗಳು ಖುಷಿ ಕೊಡುತ್ತವೆ, ಎಂಜಾಯ್ ಮಾಡುತ್ತೇನೆ. ಅದೇ ರೀತಿ ನೋವಾಗುವುದಕ್ಕೂ ಅಷ್ಟೇ ಸಣ್ಣ ಸಣ್ಣ ವಿಚಾರಗಳು ಸಾಕಾಗುತ್ತವೆ.
ಮಂಜು ಪಾವಗಡ ಬಿಗ್ ಬಾಸ್.. ಅರವಿಂದ್ ರನ್ನರ್.. ಬಿದ್ದಿದ್ದು ಹತ್ತಿಪ್ಪತ್ತು ಲಕ್ಷ ಮತಗಳಲ್ಲ!
ಆದರೆ ನಿಮ್ಮ ಈ ಗುಣವೇ ನಿಮಗೆ ಶತ್ರುವಿನಂತೆ ಅನಿಸಿಲ್ಲವೇ?
ಅದನ್ನು ಹಾಗೆ ಪೂರ್ತಿಯಾಗಿ ಶತ್ರುವೆಂದು ತಳ್ಳಿಹಾಕಲು ಸಾದ್ಯವಿಲ್ಲ. ಹಾಗೆ ಖುಷಿ ಅನುಭವಿಸುವುದರಿಂದ ಪ್ಲಸ್ ಪಾಯಿಂಟ್ಸ್ ಇರುತ್ತವೆ; ಅದೇ ರೀತಿ ತುಂಬ ಎಮೋಶನಲ್ ಆಗುವುದರಿಂದ ಮೈನಸ್ ಕೂಡ ಆಗುತ್ತದೆ. ಎಲ್ಲವೂ ಡಿಪೆಂಡ್ಸ್ ಎಂದೇ ಹೇಳಬಹುದು. ಯಾಕೆಂದರೆ ಹೆಚ್ಚಾಗಿ ನಾನು ಯಾವುದನ್ನೂ ಹಾಗೆಯೇ ಕ್ಯಾರಿ ಫಾರ್ವರ್ಡ್ ಮಾಡುವುದಿಲ್ಲ. ಹಾಗಾಗಿ ಒಂದು ರೀತಿಯಲ್ಲಿ `ಫಿಫ್ಟಿ ಫಿಫ್ಟಿ’ ಎನ್ನಬಹುದು. ಕೊರಗನ್ನೇ ನಾನು ಮನಸ್ಸಲ್ಲಿಟ್ಟು, ಅದರಿಂದ ಪ್ರಭಾವಿತಗೊಂಡು ಮುಂದುವರಿಯುವುದಿಲ್ಲ. ಅದೇನಿದ್ದರೂ ಆ ಕ್ಷಣಕ್ಕಷ್ಟೇ ಸೀಮಿತವಾಗಿರುತ್ತದೆ.
ಬಿಗ್‌ಬಾಸ್ ಮನೆಯಿಂದ ಹೊರಗೆ ಬಂದ ಮೇಲೆ ಕೂಡ ನಿಮಗೆ ಆತ್ಮೀಯರಾಗಿ ಉಳಿದುಕೊಂಡವರು ಯಾರೆಲ್ಲ?
ಮಂಜು ಪಾವಗಡ ಮತ್ತು ಪ್ರಿಯಾಂಕಾ ತಿಮ್ಮೇಶ್ ಇಬ್ಬರೂ ನನಗೆ ಆ ಮನೆಯಲ್ಲಿ ಕ್ಲೋಸ್, ಕ್ಲೋಸ್ ಫ್ರೆಂಡಾಗಿದ್ದರು. ಅವರಿಬ್ಬರೂ ನನ್ನ ಪಾಲಿಗೆ ಬಿಗ್‌ಬಾಸ್‌ನಿಂದ ಸಿಕ್ಕಿರುವಂಥ ಎರಡು ಮುತ್ತುಗಳು. ಮನೆಯ ಒಳಗಡೆ ಎಷ್ಟು ಆತ್ಮಿಯರಾಗಿದ್ದೆವೋ ಅಷ್ಟೇ ಆತ್ಮಿಯತೆ ಹೊರಗಡೆಯೂ ಉಳಿದುಕೊಂಡಿದೆ. ಭೇಟಿಯಾಗುತ್ತಲೂ ಇದ್ದೇವೆ.