ಅಶ್ವಿನಿ ಪುನೀತ್ ರಾಜ್‌ಕುಮಾರ್ ನೇತೃತ್ವದ ಪಿಆರ್‌ಕೆ ಸಂಸ್ಥೆ ನಿರ್ಮಿಸಿರುವ 'ಆಚಾರ್ ಆಂಡ್ ಕೋ' ಸಿನಿಮಾ ಇಂದು ಬಿಡುಗಡೆ ಅಗುತ್ತಿದೆ. ಈ ಸಿನಿಮಾ ಮೂಲಕ ಸಿಂಧೂ ಶ್ರೀನಿವಾಸಮೂರ್ತಿ ಎಂದು ಹೊಸ ನಿರ್ದೇಶಕಿ ಕನ್ನಡ ಚಿತ್ರರಂಗಕ್ಕೆ ಬಂದಿದ್ದಾರೆ. ಈ ಸಿನಿಮಾದ ಪ್ರಧಾನ ಪಾತ್ರದಲ್ಲಿಯೂ ನಟಿಸಿರುವ ಅವರ ಮಾತುಗಳು ಇಲ್ಲಿವೆ.
- ನಾನು ರಂಗಭೂಮಿಯ ಹುಡುಗಿ. ರಂಗಭೂಮಿಯಲ್ಲಿ ನಟನೆ ಮಾಡುತ್ತಲೇ ವಿದ್ಯಾಭ್ಯಾಸ ಮಾಡಿದೆ. ಬಿಕಾಂ, ಸಿಎಸ್ ಓದಿ ಮುಂಬೈಯಲ್ಲಿ ನಟನೆಯಲ್ಲಿ ತೊಡಗಿಕೊಂಡಿದ್ದೆ. ಆಚಾರ್ ಆ್ಯಂಡ್ ಕೋ ನಾನು ಬರೆದ ಮೊದಲ ಸ್ಕ್ರಿಪ್ಟ್.
- ನಾನು ನಿರ್ದೇಶನ ಮಾಡಬಹುದು ಎಂದು ಮೊದಲು ಹೇಳಿದ್ದು ಮುಂಬೈನ ತುಳಸಿ ಮೀಡಿಯಾದ ಚೈತನ್ಯ ಹೆಗ್ಡೆ. ಅವರ ಒತ್ತಾಸೆಯಿಂದಾಗಿ ಮೊದಲು 6 ನಿಮಿಷಗಳ ಪಿಚ್ ಫಿಲ್ಮ್ ಸಿದ್ಧ ಮಾಡಿದೆ. ಅದನ್ನು ಪುನೀತ್ ಸರ್‌ಗೆ ಕಳುಹಿಸಿದೆ. ನಿಮಗೆ ಇಷ್ಟವಾದರೆ ಹೇಳಿ ಸರ್, ಬಂದು ಭೇಟಿ ಮಾಡುತ್ತೇನೆ ಎಂದಿದ್ದೆ. ಅವರು ತುಂಬಾ ಇಷ್ಟ ಪಟ್ಟರು. ಅಶ್ವಿನಿ ಮೇಡಮ್‌ಗೂ ಹೇಳಿದರು. ಮೇಡಮ್‌ಗೂ ಇಷ್ಟವಾಯಿತು.
undefined
ಮಹಿಳಾ ನಿರ್ದೇಶಕರಿಗೆ ಆದ್ಯತೆ ನೀಡುತ್ತೇವೆ: ಅಶ್ವಿನಿ ಪುನೀತ್ ರಾಜ್‌ಕುಮಾರ್
- ಪುನೀತ್ ಸರ್ ಭೇಟಿ ಮರೆಯಲಾಗದ್ದು. ಅವರು ಡೈಲಾಗ್ ವರ್ಷನ್ ರೆಡಿ ಮಾಡಿ ನರೇಷನ್ ಕೊಡಲು ಹೇಳಿದರು. ಅದೇ ಥರ ಮಾಡಿದೆ. ನನ್ನ ಅದೃಷ್ಟ ಅವರು ಒಪ್ಪಿಕೊಂಡರು. ಪಿಆರ್‌ಕೆ ಬೆನ್ನಿಗೆ ನಿಂತಿತು. ಛಾಯಾಗ್ರಾಹಕ ಅಭಿಮನ್ಯು ಸರ್, ಸಂಗೀತ ನಿರ್ದೇಶಕಿ ಬಿಂದುಮಾಲಿನಿ ಸೇರಿ ಒಂದು ಅನುಭವಿ ತಂಡ ನನಗೆ ದೊರಕಿತು.
- 60ರ ದಶಕ ತುಂಬಾ ಮುಖ್ಯವಾದದ್ದು. ಅದು ಬದಲಾವಣೆಯ ದಶಕ. ಹೆಣ್ಣು ಮಕ್ಕಳು ಕೆಲಸಕ್ಕೆ ಹೋಗಲು ಆರಂಭಿಸಿದ್ದು ಕೂಡ ಆ ಸಮಯದಲ್ಲಿಯೇ. ಅವತ್ತು ನಡೆದ ಬದಲಾವಣೆ ಕ್ರಾಂತಿಯ ಫಲವನ್ನು ನಾವು ಈ ಕಾಲದ ಹೆಣ್ಮಕ್ಕಳು ಅನುಭವಿಸುತ್ತಿದ್ದೇವೆ. ಹಾಗಾಗಿ ಆ ಕಾಲದ 10 ಮಕ್ಕಳು ಇರುವ ಒಂದು ಕುಟುಂಬದ ಕತೆ ನನ್ನ ಸಿನಿಮಾ.
ಗಾಜನೂರಿನಿಂದ ಸಾಂಬರ್ ಪೌಡರ್ ಬರುತ್ತೆ, ಅಕ್ಕಿ ರೊಟ್ಟಿ- ಕಡುಬು ಮಾಡೋದು ಕಲಿತೆ: ಅಶ್ವಿನಿ ಪುನೀತ್ ರಾಜ್‌ಕುಮಾರ್
- ನಾನು ಫಿಲ್ಮ್ ಸ್ಕೂಲ್ ಹೋದವಳಲ್ಲ. ಯಾವ ಚಿತ್ರತಂಡದಲ್ಲೂ ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡಿಲ್ಲ. ಸಿನಿಮಾ ಮಾಡೋ ಆಸೆ ಇತ್ತು. ಪಿಚ್ ಫಿಲ್ಮ್ ಮಾಡಿದೆ. ಅದರಿಂದ ಸಿನಿಮಾ ಅವಕಾಶ ಸಿಕ್ಕಿತು. ಸಿನಿಮಾ ಮಾಡುವ ಆಸೆ ಇರುವ ಎಲ್ಲರಿಗೂ ನಾನು ಮೊದಲು ಕೆಲವು ನಿಮಿಷಗಳ ಪಿಚ್ ಸಿನಿಮಾ ಮಾಡಿ ಎಂದೇ ಹೇಳುತ್ತೇನೆ.
- ಸಿನಿಮಾ ಬಿಡುಗಡೆ ಆಗಿದೆ. ಸ್ವಲ್ಪ ನರ್ವಸ್‌ನೆಸ್ ಮತ್ತು ತುಂಬಾ ಎಕ್ಸೈಟ್‌ಮೆಂಟ್ ಇದೆ. ಇನ್ನೆಲ್ಲವೂ ಪ್ರೇಕ್ಷಕರಿಗೆ ಬಿಟ್ಟಿದ್ದು.