ಮಹಿಳಾ ನಿರ್ದೇಶಕರಿಗೆ ಆದ್ಯತೆ ನೀಡುತ್ತೇವೆ: ಅಶ್ವಿನಿ ಪುನೀತ್‌ ರಾಜ್‌ಕುಮಾರ್

By Kannadaprabha News  |  First Published Jul 26, 2023, 11:30 AM IST

‘ಆಚಾರ್‌ ಆ್ಯಂಡ್‌ ಕೋ ಚಿತ್ರದ ನಿರ್ದೇಶಕಿ ಸಿಂಧೂ ಸ್ಕ್ರಿಪ್ಟ್‌ ಜೊತೆ ಬಂದಾಗ ಇಷ್ಟು ಚಿಕ್ಕ ಹುಡುಗಿ ಕೈಲಿ ಈ ಸಿನಿಮಾ ಮಾಡೋದಕ್ಕಾಗುತ್ತಾ ಅಂತ ಡೌಟ್‌ ಬಂದಿತ್ತು. ಆದರೆ ಆಮೇಲೆ ತಾನು ಸಮರ್ಥೆ ಅಂತ ಆಕೆ ತೋರಿಸಿಕೊಟ್ಟಳು. ಹೀಗೆ ಒಳ್ಳೆಯ ಕಂಟೆಂಟ್‌ ಜೊತೆ ನಿರ್ದೇಶಕಿಯರು ಬಂದರೆ ಅವರ ಸಿನಿಮಾ ನಿರ್ಮಾಣ ಮಾಡುತ್ತೇವೆ. ಇದಕ್ಕೆಂದೇ ಟೀಮ್‌ ಇದೆ. ಆಸಕ್ತರು ಇಮೇಲ್‌ ಮೂಲಕ ಸಂಪರ್ಕಿಸಬಹುದು’ ಎಂದು ನಿರ್ಮಾಪಕಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಹೇಳಿದ್ದಾರೆ.


ಅವರು ನಿರ್ಮಿಸಿರುವ ‘ಆಚಾರ್‌ ಆ್ಯಂಡ್‌ ಕೋ’ ಸಿನಿಮಾ ಜು.28ರಂದು ತೆರೆ ಕಾಣಲಿದೆ. ಈ ಹಿನ್ನೆಲೆಯಲ್ಲಿ ಪುನೀತ್‌ ರಾಜ್‌ಕುಮಾರ್‌ ನಿವಾಸದಲ್ಲಿ ಅಶ್ವಿನಿ ಹೇಳಿದೆ ಮಾತುಗಳು ಇವಿಷ್ಟು-

- ‘ಆಚಾರ್‌ ಆ್ಯಂಡ್‌ ಕೋ’ ಸಿಂಪಲ್‌ ಕಥೆ, ಉತ್ತಮ ಕಂಟೆಂಟ್‌ ಹೊಂದಿದೆ. ಪುನೀತ್‌ ಇದ್ದಾಗಲೇ ಈ ಸಿನಿಮಾ ಫೈನಲ್‌ ಆಗಿತ್ತು. ಆಗ ಸ್ಕ್ರೀನ್‌ ಪ್ಲೇ ಓದಿದ್ದೆ. ಇಷ್ಟ ಆಗಿತ್ತು. ಈ ಸಿನಿಮಾ ನೋಡುತ್ತಾ ನಮ್ಮ ಅಜ್ಜ ಅಜ್ಜಿ ಹೇಳ್ತಿದ್ದ ಆ ಕಾಲದ ಕಥೆಯನ್ನು ಕಣ್ಣಾರೆ ಕಾಣುವ ಅನುಭವ ಆಗಬಹುದು.

Tap to resize

Latest Videos

undefined

- ಇದು ಕುಟುಂಬದವರೆಲ್ಲ ಹೋಗಿ ನೋಡುವ ಸಿನಿಮಾ. ಇದರಲ್ಲಿ ಮುಖ್ಯ ಪಾತ್ರದಲ್ಲಿ ಮಹಿಳೆಯರು ಇದ್ದರೂ ಇದು ಮಹಿಳಾ ಪ್ರಧಾನ ಸಿನಿಮಾ ಏನಲ್ಲ.

- ಸದ್ಯಕ್ಕೆ ಕಡಿಮೆ ಬಜೆಟ್‌ನ ವೈವಿಧ್ಯಮಯ ಜಾನರ್‌ನ ಸಿನಿಮಾ ನಿರ್ಮಾಣ ಮಾಡುತ್ತಿದ್ದೇವೆ. ಹೊಸಬರ ಸಿನಿಮಾಗಳಿಗೆ ಸಪೋರ್ಟ್‌ ಮಾಡಬೇಕು ಎಂಬ ಪುನೀತ್‌ ಅವರ ನಿಲುವಿಗೆ ಇಂದೂ ಬದ್ಧರಾಗಿದ್ದೇವೆ.

ಗಾಜನೂರಿನಿಂದ ಸಾಂಬರ್ ಪೌಡರ್ ಬರುತ್ತೆ, ಅಕ್ಕಿ ರೊಟ್ಟಿ- ಕಡುಬು ಮಾಡೋದು ಕಲಿತೆ: ಅಶ್ವಿನಿ ಪುನೀತ್ ರಾಜ್‌ಕುಮಾರ್

- ಬಿಗ್‌ ಬಜೆಟ್‌ ಸಿನಿಮಾ ನಿರ್ಮಾಣದ ಬಗ್ಗೆ ಈಗಲೇ ಏನೂ ಹೇಳಲಾರೆ. ಅದರಲ್ಲಿ ರಿಸ್ಕ್‌ ಜಾಸ್ತಿ. ಈವರೆಗೆ ಓಟಿಟಿಗೆ ಸಿನಿಮಾ ಮಾಡಿದ್ದೆವು. ಈಗ ನಮ್ಮ ಸಿನಿಮಾ ಥಿಯೇಟರ್‌ನಲ್ಲಿ ಬಿಡುಗಡೆ ಆಗುತ್ತಿದೆ.

- ಎಕ್ಸಾಂ ಹಿಂದಿನ ದಿನದ ಭಯ, ಆತಂಕ, ಎಕ್ಸೈಟ್‌ಮೆಂಟ್‌ ಎಲ್ಲ ಇದೆ. ಈಗ ಮೊದಲಿನ ಹಾಗೆ ಓಟಿಟಿಗೆ ಅಂತಲೇ ಸಿನಿಮಾ ಮಾಡಲು ಸಾಧ್ಯವಿಲ್ಲ. ಸಿನಿಮಾ ಥಿಯೇಟರ್‌ನಲ್ಲಿ ಉತ್ತಮ ಪ್ರದರ್ಶನ ಕಂಡರಷ್ಟೇ ಓಟಿಟಿಗಳು ಸಿನಿಮಾ ಖರೀದಿ ಮಾಡುತ್ತವೆ.

- ಕನ್ನಡ ಸಿನಿಮಾಗಳಿಗೆ ವ್ಯೂಸ್‌ ಸಿಗೋದಿಲ್ಲ ಅನ್ನೋದು ಓಟಿಟಿಯವರು ಹೇಳುವ ಮಾತು. ಇದನ್ನು ಕನ್ನಡಿಗರೇ ಬಗೆಹರಿಸಬೇಕಿದೆ.

- ಕಾದಂಬರಿ ಆಧರಿಸಿ ಸಿನಿಮಾ ಮಾಡುವ ಒಲವಿದೆ. ಈಗಾಗಲೇ ಎರಡು ಕಾದಂಬರಿ ಓದುತ್ತಿದ್ದೇನೆ. ಅದರಲ್ಲೊಂದು ಕಥೆ ಮಹಿಳಾ ನಿರ್ದೇಶಕರದು. ಮುಂದಿನ ಪ್ರಾಜೆಕ್ಟ್‌ ಓ2. ಇದೊಂದು ಮೆಡಿಕಲ್‌ ಥ್ರಿಲ್ಲರ್‌. ಜರ್ನಲಿಸ್ಟ್‌ ಮುಖ್ಯಪಾತ್ರದಲ್ಲಿರುವ ಮತ್ತೊಂದು ಸಿನಿಮಾ ಆ ಬಳಿಕದ ಪ್ರಾಜೆಕ್ಟ್‌. ಹೀಗೆ ವರ್ಷಕ್ಕೆ ಕನಿಷ್ಟ ಎರಡಾದರೂ ಸಿನಿಮಾ ಮಾಡಬೇಕು ಅಂತಿದೆ.

ಅಂಗಾಂಗ ದಾನ ದಿನಾಚರಣೆಗೆ ರಾಯಭಾರಿಯಾಗಿ ಅಶ್ವಿನಿ ಪುನೀತ್ ರಾಜಕುಮಾರ್‌ಗೆ ಸಚಿವ ಗುಂಡೂರಾವ್ ಆಹ್ವಾನ

ಮಕ್ಕಳಿಗೆ ಆಸಕ್ತಿ

‘ಈ ಸಿನಿಮಾವನ್ನು ದೊಡ್ಡ ಮಗಳು ನೋಡಿದ್ದಾಳೆ. ಅವಳಿಗೆ ಇಷ್ಟವಾದಂತಿದೆ. ಚಿಕ್ಕಮಗಳು ನೋಡಿಲ್ಲ. ಮಕ್ಕಳ ಪೈಕಿ ದೊಡ್ಡವಳು ಆರ್ಟ್‌ ಅನ್ನು ಮುಖ್ಯ ವಿಷಯವಾಗಿ ತಗೊಂಡು ಓದುತ್ತಿದ್ದಾಳೆ. ಅವಳಿಗೆ ಸಿನಿಮಾ ಬಗ್ಗೆ ಅಂಥಾ ಆಸಕ್ತಿ ಇಲ್ಲ. ಆದರೆ ಚಿಕ್ಕವಳಿಗೆ ಸಿನಿಮಾಗಳ ಟೆಕ್ನಿಕಲ್‌ ಪಾರ್ಟ್‌ ಬಗ್ಗೆ ಒಲವು ಇದ್ದ ಹಾಗಿದೆ. ಇನ್ನೂ ಸೆಕೆಂಡ್‌ ಪಿಯುಸಿ ಓದುತ್ತಿರುವ ಅವಳ ಭವಿಷ್ಯದ ಬಗ್ಗೆ ಈಗಲೇ ಹೇಳೋದು ಕಷ್ಟ’ ಎಂದರು ಅಶ್ವಿನಿ.

ಅಂಗಾಗ ದಾನ ರಾಯಭಾರಿಯಾಗಲು ಆಹ್ವಾನ ಬಂದಿಲ್ಲ

‘ಅಂಗಾಗ ದಾನ ಜಾಗೃತಿ ಕುರಿತಂತೆ ನನ್ನನ್ನು ರಾಯಭಾರಿಯಾಗಿ ಮಾಡಲು ಸರ್ಕಾರ ಮುಂದಾಗಿರುವ ವಿಚಾರ ನನಗೆ ನ್ಯೂಸ್‌ ನೋಡಿ ತಿಳಿಯಿತು. ಈ ಬಗ್ಗೆ ಅಧಿಕೃತ ಆಹ್ವಾನ ಬಂದಿಲ್ಲ. ಆದರೆ ಇದೊಂದು ಉತ್ತಮ ಕೆಲಸ’ ಎಂದು ಅಶ್ವಿನಿ ಹೇಳಿದ್ದಾರೆ.

click me!