ನನ್ನ ನಿರ್ದೇಶನದ ಚಿತ್ರದಲ್ಲಿ ನಾನು ನಟಿಸಲ್ಲ: ಶೀತಲ್‌ ಶೆಟ್ಟಿ

By Kannadaprabha News  |  First Published Jul 1, 2022, 10:46 AM IST

ಶೀತಲ್‌ ಶೆಟ್ಟಿನಿರ್ದೇಶನದ ‘ವಿಂಡೋ ಸೀಟ್‌’ ಚಿತ್ರ ಇಂದು ತೆರೆ ಕಾಣಲಿದೆ. ನಿರೂಪ್‌ ಭಂಡಾರಿ, ಸಂಜನಾ ಆನಂದ್‌, ಅಮೃತಾ ಅಯ್ಯಂಗಾರ್‌ ನಟನೆಯ ಈ ಚಿತ್ರವನ್ನು ಶಾಲಿನಿ ಮಂಜುನಾಥ್‌ ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾ ಬಗ್ಗೆ, ತನ್ನ ಸಿನಿಮಾ ಪ್ರೀತಿ ಬಗ್ಗೆ ಶೀತಲ್‌ ಮಾತನಾಡಿದ್ದಾರೆ.


ಪ್ರಿಯಾ ಕೆರ್ವಾಶೆ

ವಿಂಡೋ ಸೀಟ್‌ನಲ್ಲಿ ಕೂತ ಶೀತಲ್‌ ಶೆಟ್ಟಿಜರ್ನಿ ಹೇಗಿತ್ತು?

Latest Videos

undefined

ಬಹಳ ಚೆನ್ನಾಗಿತ್ತು. ಇದೊಂಥರ ನಿರೂಪಣೆ, ನಟನೆಯಿಂದ ನಿರ್ದೇಶನದತ್ತ ಹೊರಳಿದ ಜರ್ನಿಯೂ ಹೌದು. ನಾನೇ ಬರೆದು ನಿರ್ದೇಶಿಸಿದ ಸಿನಿಮಾ ಇದೀಗ ರಿಲೀಸ್‌ ಆಗ್ತಿದೆ ಅಂದರೆ ಜರ್ನಿ ಸಾರ್ಥಕ ಅನ್ನೋ ಭಾವನೆ ಇದೆ.

ಸುದೀಪ್‌ ಬೆಂಬಲವೂ ಇತ್ತಲ್ಲಾ?

ಆರಂಭದಿಂದಲೂ ಅವರು ನಮ್ಮ ತಂಡವನ್ನು ಬೆಂಬಲಿಸುತ್ತಲೇ ಬಂದಿದ್ದಾರೆ. ಜಾಕ್‌ ಮಂಜು ನಿರ್ಮಾಣ ಅಂದರೆ ಅವರದೇ ಸಂಸ್ಥೆಯ ನಿರ್ಮಾಣ ಇದ್ದಹಾಗೆ. ಸಿನಿಮಾ ಮಾಡೋ ಮುಂಚೆಯೇ ಕತೆ ಕೇಳಿದ್ದರು. ಸಿನಿಮಾ ನೋಡಿದ ಮೇಲೆ ಮೆಚ್ಚಿಕೊಂಡು ಇದನ್ನು ನೀವೆಲ್ಲ ಗೆಲ್ಲಿಸಬೇಕು ಅಂತ ಜನರಿಗೆ ಹೇಳಿದ್ದಾರೆ. ನಮ್ಮಂಥಾ ಹೊಸ ತಂಡಕ್ಕೆ ಸುದೀಪ್‌ ಸಪೋರ್ಚ್‌ ಸಿಕ್ಕರೆ ಅದಕ್ಕಿಂತ ಬೇರೇನು ಬೇಕು?

ನಿಮ್ಮ ವಿಂಡೋ ಸೀಟ್‌ ನೆನಪುಗಳು? ಅದನ್ನು ಸಿನಿಮಾಗೆ ಕನೆಕ್ಟ್ ಮಾಡಿದ ರೀತಿ?

ವಿಂಡೋ ಸೀಟ್‌ನಲ್ಲಿ ಕೂತಾಗ ಪ್ರತೀ ಸಲವೂ ಹೊಸ ಹೊಸ ಅನುಭವ. ಜಗಳ, ಮಾತು, ನಗು, ಅಳು, ಸಿಟ್ಟು ಜೊತೆಗೆ ಟ್ರಾಫಿಕ್‌ ಜಾಮ್‌, ಜೋರಾಗಿ ಸುರಿವ ಮಳೆ.. ಹೀಗೆ. ಸಿನಿಮಾದಲ್ಲೂ ಇಂಥಾ ಸನ್ನಿವೇಶ ಬರುತ್ತೆ. ಈ ಸಿನಿಮಾ ಹೀರೋ ರೈಲಿನ ವಿಂಡೋ ಸೀಟ್‌ನಲ್ಲಿ ಕೂತೇ ತಾಳಗುಪ್ಪದಿಂದ ಸಾಗರದವರೆಗೆ ಜರ್ನಿ ಮಾಡುತ್ತಿರುತ್ತಾನೆ, ನಡುವೆ ಯಾವುದೋ ಘಟನೆಯ ಭಾಗವಾಗುತ್ತಾನೆ. ನಮ್ಮ ಮನೆ ಪಕ್ಕ ರೈಲ್ವೇ ಟ್ರ್ಯಾಕ್‌ ಇದೆ. ಅದನ್ನು ನೋಡ್ತಿರುವಾಗ ಹುಟ್ಟಿದ ಕತೆಯಿದು.

ನೀವು ನಟಿಯೂ ಹೌದು, ಇದರಲ್ಲಿ ನಟನೆ ಮಾಡಬಹುದಿತ್ತಲ್ವಾ?

ನಮ್ಮ ಸಿನಿಮಾದಲ್ಲಿ ನಾವು ನಟನೆಯನ್ನೂ ಮಾಡಿದ್ರೆ ಪಾತ್ರದ ಬಗ್ಗೆ ಮೋಹ ಬೆಳೆಸಿಕೊಳ್ತೀವಿ. ಅದಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡೋಣ ಅನಿಸುತ್ತೆ. ನನಗನಿಸೋದು ಆ ಟೆನ್ಶನ್ನೇ ಬೇಡ. ಇವತ್ತು ಅಂತಲ್ಲ ಯಾವತ್ತೂ ನನ್ನ ಸಿನಿಮಾದಲ್ಲಿ ನಾನು ಆ್ಯಕ್ಟ್ ಮಾಡಲ್ಲ.

ಈ ಸಿನಿಮಾದ ಗೆಲುವು, ಸೋಲು ನೀವು ಮುಂದೆ ನಿರ್ದೇಶನದ ಹಾದಿಯಲ್ಲಿ ಮುಂದುವರಿಯುತ್ತೀರಾ ಇಲ್ವಾ ಅನ್ನೋದನ್ನು ನಿರ್ಧರಿಸುತ್ತಾ?

ನಿರ್ದೇಶನ ಖಂಡಿತಾ ಮುಂದುವರಿಯುತ್ತೆ. ಆದರೆ ಎಂಥಾ ಸ್ಕೇಲ್‌ನ ಸಿನಿಮಾ ನಿರ್ದೇಶನ ಮಾಡ್ತೀನಿ ಅನ್ನೋದು ಈ ಸಿನಿಮಾದ ಸೋಲು, ಗೆಲುವಿನ ಮೇಲೆ ನಿರ್ಧಾರ ಆಗುತ್ತೆ. ಸದ್ಯಕ್ಕೆ ಸೋಲು ಅನ್ನೋ ಪ್ರಶ್ನೆನೇ ಇಲ್ಲ. ಆರ್ಥಿಕವಾಗಿ ಆಗಲೇ ಗೆದ್ದಿದ್ದೀವಿ. ಹಾಕಿದ ದುಡ್ಡು ವಾಪಾಸ್‌ ಬಂದಿದೆ.

ಓಟಿಟಿ, ಸ್ಯಾಟಲೈಟ್‌ ರೈಟ್ಸ್‌?

ಸದ್ಯಕ್ಕೆ ಜನ ಥಿಯೇಟರ್‌ಗೆÜ ಬಂದು ನಮ್ಮ ಸಿನಿಮಾ ನೋಡ್ಬೇಕು ಅನ್ನೋದಷ್ಟೇ ಇದೆ. ಓಟಿಟಿ, ಸ್ಯಾಟಲೈಟ್‌ ರೈಟ್ಸ್‌ ಬಗ್ಗೆ ಮುಂದೆ ಅಪ್‌ಡೇಟ್‌ ಮಾಡ್ತೀನಿ.

ಈ ಸಿನಿಮಾ ಮಾಡುವಾಗ ನಿಮ್ಮ ತಲೆಗೆ ಬಂದ ಒಂದು ಫಿಲಾಸಫಿ?

ಫಿಲಾಸಫಿ ಬಂದ್ಮೇಲೆ ಡೈರೆಕ್ಷನ್‌ಗೆ ಇಳಿದಿರೋದು. ಇಲ್ಲಿ ಕಲಿಕೆ, ಇಂಪ್ರೂವೈಸೇಶನ್‌ ನಿರಂತರ. ನಾನಿಲ್ಲಿ ಕಲಿತಾಯ್ತು ಅಂದುಕೊಂಡ್ರೆ ನಮ್‌ ಕತೆ ಮುಗಿದಂಗೆ.

ಸೆಲೆಬ್ರಿಟಿ ಶೋದ ಪ್ರತಿಕ್ರಿಯೆ ಖುಷಿ ಕೊಡ್ತಾ?

ಮ್ಮ ಸಿನಿಮಾವನ್ನು ಸುದೀಪ್‌, ರಕ್ಷಿತ್‌ ಶೆಟ್ಟಿ, ಪ್ರಮೋದ್‌ ಶೆಟ್ಟಿ, ಶ್ರೀನಗರ ಕಿಟ್ಟಿಮೊದಲಾದವರು ನೋಡಿದ್ದಾರೆ. ಹೆಚ್ಚಿನವರು ಇದು ಶೀತಲ್‌ ನಿರ್ದೇಶನದ ಮೊದಲ ಸಿನಿಮಾದ ಹಾಗಿಲ್ಲ ಅಂದಿದ್ದಾರೆ. ಮೆಚ್ಚುಗೆ ಸೂಚಿಸಿದ್ದಾರೆ, ಇದೆಲ್ಲ ಖುಷಿ ಆಗಿದೆ.

ನೀವು ನಿರ್ದೇಶಕರ ನಟಿ ಅಂತ ಹಿಂದೆ ಹೇಳಿದ್ರಿ, ಈಗ ನಿರ್ದೇಶಕಿಯಾಗಿ ಅಂದುಕೊಂಡ ನಟನೆ ತೆಗೆಸೋದಕ್ಕಾಯ್ತಾ?

ಸ್ಕಿ್ರಪ್‌್ಟಸ್ಪಷ್ಟವಾಗಿತ್ತು. ನಟ ನಟಿಯರು ಪಕ್ವವಾಗಿದ್ರು. ಅಂದುಕೊಂಡ ನಟನೆ ತೆಗೆಸೋದು ಕಷ್ಟಆಗಲಿಲ್ಲ.

click me!