ಶುಭ ದೀಪಾವಳಿ: ಏರಿಕೆಯ ಡ್ಯಾನ್ಸ್ ಮಾಡ್ತಿದೆ ಸೆನ್ಸೆಕ್ಸ್ ಗೂಳಿ!

By Web DeskFirst Published Oct 30, 2019, 1:16 PM IST
Highlights

ಶುಭ ದೀಪಾವಳಿ ಸಮಯದಲ್ಲಿ ಷೇರು ಮಾರುಕಟ್ಟೆ ನಿರಾಳ| ಷೇರು ಮಾರುಕಟ್ಟೆಯಲ್ಲಿ ಸೆನ್ಸೆಕ್ಸ್ 250 ಅಂಕಗಳಷ್ಟು ಏರಿಕೆ| ವಿದೇಶಿ ನಿಧಿಗಳ ಒಳಹರಿವು ಹೆಚ್ಚಾಗಲು ಕಾರಣವಾದ ಸೆನ್ಸೆಕ್ಸ್ ಏರಿಕೆ| ಸೆನ್ಸೆಕ್ಸ್ 39,960.32 ಅಂಕಗಳಿಗೆ ಏರಿಕೆ| 11,823 ಅಂಕಗಳಲ್ಲಿ ವಹಿವಾಟು ನಡೆಸಸುತ್ತಿರುವ ನಿಫ್ಟಿ| ದೀಪಾವಳಿ ಸಂದರ್ಭದಲ್ಲಿ ಷೇರು ಮಾರುಕಟ್ಟೆಯಲ್ಲಿ ಸಕಾರಾತ್ಮಕ ಬೆಳವಣಿಗೆ|

ಮುಂಬೈ(ಅ.30): ದೀಪಾವಳಿಯ ಶುಭ ಸಂದರ್ಭದಲ್ಲಿ ಷೇರು ಮಾರುಕಟ್ಟೆಯಲ್ಲಿ ಸೆನ್ಸೆಕ್ಸ್ 250 ಅಂಕಗಳಷ್ಟು ಏರಿಕೆ ಕಂಡುಬಂದಿದ್ದು, ವಿದೇಶಿ ನಿಧಿಗಳ ಒಳಹರಿವು ಹೆಚ್ಚಾಗಿದೆ.

ಅದೊಂದು ಘೋಷಣೆಯ ಪರಿಣಾಮ: ಸೆನ್ಸೆಕ್ಸ್ ಏರಿಕೆಯ ಕುಣಿತ ನೋಡಮ್ಮ!

ಹೂಡಿಕೆದಾರರ ಮೇಲೆ ತೆರಿಗೆ ಭಾರ ಕಡಿಮೆಯಾಗಿರುವುದು ಸೆನ್ಸೆಕ್ಸ್ ಏರಿಕೆಗೆ ಪ್ರಮುಖ ಕಾರಣ ಎನ್ನಲಾಗಿದೆ. ಷೇರು ಮಾರುಕಟ್ಟೆಯಲ್ಲಿ ಸಂವೇದಿ ಸೂಚ್ಯಂಕ ಏರಿಕೆ ಕಂಡುಬಂದ ಬಳಿಕ, 30 ಷೇರುಗಳ ಸೂಚ್ಯಂಕ 128.48 ಅಂಕಗಳಷ್ಟು ಏರಿಕೆಯಾಗಿ 39,960.32 ಅಂಕಗಳಲ್ಲಿ ವಹಿವಾಟು ನಡೆಸುತ್ತಿದೆ.

Sensex crosses 40,000 mark; currently at 40,066.07, up by 234.23 points. pic.twitter.com/0feeqp5SZr

— ANI (@ANI)

ಅದರಂತೆ ನಿಫ್ಟಿ 38.85 ಅಂಕಗಳಷ್ಟು ಏರಿಕೆಯಾಗಿ 11,823 ಅಂಕಗಳಲ್ಲಿ ವಹಿವಾಟು ನಡೆಸುತ್ತಿದ್ದು, ದೀಪಾವಳಿ ಸಂದರ್ಭದಲ್ಲಿ ಷೇರು ಮಾರುಕಟ್ಟೆಯಲ್ಲಿ ಸಕಾರಾತ್ಮಕ ಬೆಳವಣಿಗೆ ಕಂಡು ಬರುತ್ತಿದೆ.

ಸೆನ್ಸೆಕ್ಸ್‌ 792 ಅಂಕ ಜಿಗಿತ: ಹೂಡಿಕೆದಾರರ ಸಂಪತ್ತು ಭರ್ಜರಿ ಏರಿಕೆ!

ಇಂದಿನ ವಹಿವಾಟಿನಲ್ಲಿ ಭಾರ್ತಿ ಏರ್‌ಟೆಲ್, ಐಟಿಸಿ, ವೇದಾಂತ, ಹೆಚ್'ಡಿಎಫ್'ಸಿ ಬ್ಯಾಂಕ್, ಕೊಟಾಕ್ ಬ್ಯಾಂಕ್, ಎಲ್&ಟಿ, ಸನ್ ಫಾರ್ಮಾ, ಬಜಾಜ್ ಆಟೊ ಹಾಹೂ ಇನ್ಫೊಸಿಸ್ ಕಂಪನಿಗಳ ಷೇರುಗಳ ಸೂಚ್ಯಂಕ ಶೇ. 2ರಷ್ಟು ಹೆಚ್ಚಾಗಿವೆ.

ಮೋದಿ ಮತ್ತೆ ಪ್ರಧಾನಿ: ಸೆನ್ಸೆಕ್ಸ್ ದಾಖಲೆಯ ಏರಿಕೆ!

ಆದರೆ ಟಾಟಾ ಮೋಟಾರ್ಸ್, ಟಾಟಾ ಸ್ಟೀಲ್, ಟಿಸಿಎಸ್ , ಇಂಡಸ್ ಇಂಡ್ ಬ್ಯಾಂಕ್, ಎಸ್ ಬ್ಯಾಂಕ್ ಹಾಗೂ ಐಸಿಐಸಿಐ ಬ್ಯಾಂಕ್ ಷೇರುಗಳ ವಹಿವಾಟಿನಲ್ಲಿ ಶೇ.3ರಷ್ಟು ಕುಸಿತ ಕಂಡು ಬಂದಿದೆ.

click me!