
ಬೆಂಗಳೂರು (ಅ. 30): ಹೆಚ್ಚು ಗ್ರಾಹಕರ ಸೆಳೆಯಲು ಭರ್ಜರಿ ಕ್ಯಾಶ್‌ಬ್ಯಾಕ್ ಆಫರ್ ನೀಡುವ ಡಿಜಿಟಲ್ ಪಾವತಿ ಸೇವಾ ಸಂಸ್ಥೆ ಗೂಗಲ್‌ಪೇ, ಕ್ಯಾಶ್‌ಬ್ಯಾಕ್ ಆಫರ್‌ಗಾಗಿಯೇ 2019ರ ಮಾಚ್‌ರ್‍ನಲ್ಲಿ ಕೊನೆಗೊಂಡ ವಿತ್ತೀಯ ವರ್ಷದಲ್ಲಿ ಬರೋಬ್ಬರಿ 1028 ಕೋಟಿ ರು. ವ್ಯಯ ಮಾಡಿದೆ ಎಂಬ ವಿಚಾರ ತಿಳಿದುಬಂದಿದೆ.
ಆರ್ಥಿಕತೆಗೆ ಕೇಂದ್ರದ ಮತ್ತೊಂದು ಟಾನಿಕ್
ಗೂಗಲ್‌ಪೇ ಸಂಸ್ಥೆ ನಿಯಂತ್ರಣ ಪ್ರಾಧಿಕಾರಕ್ಕೆ ಸಲ್ಲಿಸಿದ ದಾಖಲೆಗಳ ಆಧರಿಸಿ ಆನ್‌ಲೈನ್ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ಸದ್ಯ ಭಾರತದಲ್ಲಿ 6.7 ಕೋಟಿ ಗ್ರಾಹಕರು ಗೂಗಲ್ ಪೇ ಆ್ಯಪ್ ಬಳಸುತ್ತಿದ್ದು, ಇದರಿಂದ ಸಂಸ್ಥೆ ವಾರ್ಷಿಕ 110 ಬಿಲಿಯನ್ ಡಾಲರ್ ವ್ಯವಹಾರ ನಡೆಸುವ ವೇದಿಕೆಯಾಗಿ ಮಾರ್ಪಟ್ಟಿದೆ ಎಂದು ಗೂಗಲ್‌ಪೇ ಸಂಸ್ಥೆ ತಿಳಿಸಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.