SBI ಕ್ಯಾಶ್ ವಿತ್ ಡ್ರಾ ಲಿಮಿಟ್: ಒಂದೊಂದು ಕಾರ್ಡ್‌ಗೆ ಒಂದೊಂದು ಮೆರಿಟ್!

By Web Desk  |  First Published Sep 25, 2019, 6:48 PM IST

ದೇಶದ ಅತೀ ದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ SBI| ಗ್ರಾಹಕರಿಗೆ ವಿವಿಧ ರೀತಿಯ ಡೆಬಿಟ್ ಕಾರ್ಡ್ ಸೇವೆ ನೀಡುತ್ತಿರುವ SBI| ವಿವಿಧ ಡೆಬಿಟ್ ಕಾರ್ಡ್ ಹೊಂದಿರುವ ಗ್ರಾಹಕರಿಗೆ ವಿಭಿನ್ನ ವಿತ್ ಡ್ರಾ ಮಿತಿ| SBI ಮಿನಿಮಮ್ ಬ್ಯಾಲೆನ್ಸ್ ಸಂಪೂರ್ಣ ಮಾಹಿತಿ ಇಲ್ಲಿದೆ|  


ಬೆಂಗಳೂರು(ಸೆ.25): ದೇಶದ ಅತೀ ದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ SBI, ತನ್ನ ಗ್ರಾಹಕರಿಗೆ ವಿವಿಧ ರೀತಿಯ ಡೆಬಿಟ್ ಕಾರ್ಡ್ ಸೇವೆ ನೀಡುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ.

ಅದರಂತೆ ವಿವಿಧ ಡೆಬಿಟ್ ಕಾರ್ಡ್ ಹೊಂದಿರುವ ಗ್ರಾಹಕರಿಗೆ ವಿಭಿನ್ನ ವಿತ್ ಡ್ರಾ ಮಿತಿಯನ್ನು sbi ಹೇರಿದ್ದು, ಯಾವ ಕಾರ್ಡ್’ಗೆ ಎಷ್ಟು ವಿತ್ ಡ್ರಾ ಮಿತಿ ಇದೆ ಎಂಬುದನ್ನು ಗಮನಿಸೋಣ.

Tap to resize

Latest Videos

undefined

SBI ಗ್ಲೋಬಲ್ ಇಂಟರ್’ನ್ಯಾಶನಲ್ ಡೆಬಿಟ್ ಕಾರ್ಡ್:

ಈ ಕಾರ್ಡ್ ಹೊಂದಿರುವ ಗ್ರಾಹಕರು ವಿಶ್ವದ ಯಾವುದೇ ಭಾಗದಲ್ಲಿ ಎಟಿಎಂ ಮೂಲಕ ಹಣ ಪಡೆಯಬಹದಾಗಿದ್ದು, ಒಂದು ದಿನದ ವಿತ್ ಡ್ರಾ ಮಿತಿ 100 ರೂ. ದಿಂದ 40 ಸಾವಿರ ರೂ. ಇದೆ.

SBI ಗೋಲ್ಡ್ ಇಂಟರ್’ನ್ಯಾಶನಲ್ ಡೆಬಿಟ್ ಕಾರ್ಡ್:
ಈ ಕಾರ್ಡ್ ಹೊಂದಿರುವ ಗ್ರಾಹಕರು ವಸ್ತುಗಳ ಖರೀದಿ, ಆನ್’ಲೈನ್ ವ್ಯವಹಾರ ಸೇರಿದಂತೆ ಎಟಿಎಂ ವಿತ್ ಡ್ರಾ ಮಾಡಬಹುದಾಗಿದೆ. ಒಂದು ದಿನದ ವಿತ್ ಡ್ರಾ ಮಿತಿ 100 ರೂ.ದಿಂದ 50 ಸಾವಿರ ರೂ.

SBI ಪ್ಲಾಟಿನಂ ಇಂಟರ್’ನ್ಯಾಶನಲ್ ಡೆಬಿಟ್ ಕಾರ್ಡ್:

ಈ ಕಾರ್ಡ್ ಹೊಂದಿರುವ ಗ್ರಾಹಕರು ಆನ್’ಲೈನ್ ವ್ಯವಹಾರ, ಕ್ಯಾಶ್ ವಿತ್ ಡ್ರಾ ಸೇರಿದಂತೆ ವಿವಿಧ ರೀತಿಯ ವ್ಯವಹಾರ ಮಾಡಬಹುದಾಗಿದೆ. ಇದು ಅಂತಾರಾಷ್ಟ್ರೀಯ ಡೆಬಿಟ್ ಕಾರ್ಡ್ ಆಗಿದ್ದು, ಒಂದು ದಿನದ ವಿತ್ ಡ್ರಾ ಮಿತಿ 100 ರೂ.ದಿಂದ 1 ಲಕ್ಷ ರೂ.

SBI ಮಿನಿಮಮ್ ಬ್ಯಾಲೆನ್ಸ್:
ಇನ್ನು SBI ತನ್ನ ಸಾಮಾನ್ಯ ಖಾತೆ ಗ್ರಾಹಕರಿಗೆ ಮಿನಿಮಮ್ ಬ್ಯಾಲೆನ್ಸ್ ನೀತಿ ರೂಪಿಸಿದ್ದು, ನಗರ, ಅರೆನಗರ ಹಾಗೂ ಗ್ರಾಮೀಣ ಭಾಗದ ಗ್ರಾಹಕರಿಗೆ ವಿವಿಧ ರೀತಿಯ ಕನಿಷ್ಠ ಠೇವಣಿ ನಿಗದಿಪಡಿಸಲಾಗಿದೆ.

ಗ್ರಾಹಕ ತನ್ನ ಖಾತೆಯಲ್ಲಿ 25 ಸಾವಿರ ರೂ. ಹೊಂದಿದ್ದರೆ ತಿಂಗಳಿಗೆ ಕನಿಷ್ಠ 2  ವಿತ್ ಡ್ರಾ ಮಾಡಿಕೊಳ್ಳಲು ಅವಕಾಶ ಪಡೆದಿರುತ್ತಾನೆ.

ಗ್ರಾಹಕ ತನ್ನ ಖಾತೆಯಲ್ಲಿ 25 ಸಾವಿರ ರೂ.ದಿಂದ 50 ಸಾವಿರ ರೂ. ಹೊಂದಿದ್ದರೆ ತಿಂಗಳಿಗೆ ಕನಿಷ್ಠ 10  ವಿತ್ ಡ್ರಾ ಮಾಡಿಕೊಳ್ಳಲು ಅವಕಾಶ ಪಡೆದಿರುತ್ತಾನೆ.

ಅದರಂತೆ ಗ್ರಾಹಕ ತನ್ನ ಖಾತೆಯಲ್ಲಿ 50 ಸಾವಿರ ರೂ.ದಿಂದ 1 ಲಕ್ಷ ರೂ. ಹೊಂದಿದ್ದರೆ ತಿಂಗಳಿಗೆ ಕನಿಷ್ಠ 15  ವಿತ್ ಡ್ರಾ ಮಾಡಿಕೊಳ್ಳಲು ಅವಕಾಶ ಪಡೆದಿರುತ್ತಾನೆ.

ಇನ್ನು ಗ್ರಾಹಕ ತನ್ನ ಖಾತೆಯಲ್ಲಿ 1 ಲಕ್ಷ ರೂ. ಹೊಂದಿದ್ದರೆ ತಿಂಗಳಿಗೆ ಅನಿಯಮಿತ  ವಿತ್ ಡ್ರಾ ಮಾಡಿಕೊಳ್ಳಲು ಅವಕಾಶ ಪಡೆದಿರುತ್ತಾನೆ. ಮತ್ತು ಬೇರೆ ಬ್ರ್ಯಾಂಚ್’ನಲ್ಲಿ 50 ಸಾವಿರ ರೂ.ವೆರೆಗೆ ವಿತ್ ಡ್ರಾ ಮಾಡಿಕೊಳ್ಳಲು ಅವಕಾಶವಿದೆ.

click me!