ಆ್ಯಪಲ್‌ನಿಂದ ದೀಪಾವಳಿ ಡಿಸ್ಕೌಂಟ್ ಸೇಲ್: ಐಫೋನ್, ಏರ್‌ಪಾಡ್,ಮ್ಯಾಕ್‌ಬುಕ್‌ಗೆ ಭಾರಿ ರಿಯಾಯಿತಿ!

By Chethan Kumar  |  First Published Sep 27, 2024, 2:50 PM IST

ಭಾರತದಲ್ಲಿ ಆ್ಯಪಲ್ ದೀಪಾವಳಿ ಡಿಸ್ಕೌಂಟ್ ಸೇಲ್ ದಿನಾಂಕ ಘೋಷಿಸಿದೆ. ಐಫೋನ್, ಮ್ಯಾಕ್‌ಬುಕ್, ಏರ್‌ಪಾಡ್ ಸೇರಿದಂತೆ ಆ್ಯಪಲ್ ಉತ್ಪನ್ನಗಳಿಗೆ ಡಿಸ್ಕೌಂಟ್ ನೀಡುತ್ತಿದೆ.


ಬೆಂಗಳೂರು(ಸೆ.27) ಆ್ಯಪಲ್ ಅಧಿಕೃತವಾಗಿ ದೀಪಾವಳಿ ಹಬ್ಬದ ಡಿಸ್ಕೌಂಟ್ ಸೇಲ್ ದಿನಾಂಕ ಘೋಷಿಸಿದೆ. ಅಕ್ಟೋಬರ್ 3 ರಿಂದ ಆ್ಯಪಲ್ ತನ್ನ ಅಧಿಕೃತ ಸ್ಟೋರ್‌ಗಳಲ್ಲಿ ಡಿಸ್ಕೌಂಟ್ ಆಫರ್ ನೀಡುತ್ತಿದೆ. ಆ್ಯಪಲ್ ಉತ್ಪನ್ನಗಳ ಮೇಲೆ ಭರ್ಜರಿ ಡಿಸ್ಕೌಂಟ್ ನೀಡುತ್ತಿದೆ. ಈಗಾಗಲೇ ಐಫೋನ್ 16 ಬಿಡುಗಡೆಯಾಗಿರುವ ಬೆನ್ನಲ್ಲೇ ದೀಪಾವಳಿ ಹಬ್ಬದ ಡಿಸ್ಕೌಂಟ್ ಸೇಲ್ ಭಾರತೀಯ ಗ್ರಾಹಕರ ಸತಂಸ ಹೆಚ್ಚಿಸಿದೆ. ದೀಪಾವಳಿ ಹಬ್ಬದ ಪ್ರಯುಕ್ತ ಆ್ಯಪಲ್ ವಿಶೇಷವಾಗಿ ಭಾರತೀಯ ಗ್ರಾಹಕರಿಗೆ ಈ ಆಫರ್ ನೀಡುತ್ತಿದೆ.

ಆ್ಯಪಲ್ ಯಾವ ಉತ್ಪನ್ನಗಳಿಗೆ ಎಷ್ಟು ಡಿಸ್ಕೌಂಟ್ ನೀಡಲಾಗುತ್ತಿದೆ ಅನ್ನೋ ಮಾಹಿತಿ ಬಹಿರಂಗಪಡಿಸಿಲ್ಲ. ಸದ್ಯ ಐಫೋನ್ ಸೀರಿಸ್ ಫೋನ್, ಮ್ಯಾಕ್‌ಬುಕ್, ಏರ್‌ಪಾಡ್, ಆ್ಯಪಲ್ ವಾಚ್ ಸೇರಿದಂತೆ ಹಲವು ಉತನ್ನಗಳ ಮೇಲೆ ಉತ್ತಮ ಡಿಸ್ಕೌಂಟ್ ನೀಡುವ ನಿರೀಕ್ಷೆಯಿದೆ. ಈಗಾಗಲೇ ಆ್ಯಪಲ್ ಐಫೋನ್ 16 ಸೀರಿಸ್ ಖರೀದಿಗೆ ಜನರು ಮುಗಿಬಿದ್ದಿದ್ದಾರೆ. ಇದರ ನಡುವೆ ಆ್ಯಪಲ್ ಅಧಿಕೃತ ಡಿಸ್ಕೌಂಟ್ ಕೂಡ ಘೋಷಿಸಿರುವುದು ಮಾರಾಟದಲ್ಲಿ ಭಾರಿ ಏರಿಕೆ ಕಾಣುವ ಸಾಧ್ಯತೆ ಇದೆ.

Tap to resize

Latest Videos

undefined

ಭಾರತದಲ್ಲಿ ಐಫೋನ್‌ಗೆ ಬಂತು ಸಿನಿಮಾ ಕ್ರೇಜ್, ರಾತ್ರಿಯಿಂದಲೇ ಕ್ಯೂ ನಿಂತು ಐಫೋನ್ 16 ಖರೀದಿಸಿದ ಗಾಯಕ!

ಆ್ಯಪಲ್ ದೀಪಾವಳಿ ಆಫರ್ ಅಕ್ಟೋಬರ್ 3ರಿಂದ ಆರಂಭಗೊಳ್ಳಲಿದೆ. ಆದರೆ ಸದ್ಯ ಆ್ಯಪಲ್ ಸ್ಟೋರ್‌ನಲ್ಲಿ ಕೆಲ ಆಫರ್ ಲಭ್ಯವಿದೆ. ಈ ಆಫರ್ ಕುರಿತು ಮಾಹಿತಿ ಇಲ್ಲಿದೆ.

ಆ್ಯಪಲ್ ಸ್ಟೋರ್‌ನಿಂದ ಫೋನ್ ಸೇರಿದಂತೆ ಉತ್ಪನ್ನ ಖರೀದಿ ಮೇಲೆ ಅಧಿಕೃತ ಸ್ಟೋರ್‌ನಲ್ಲಿ 6 ತಿಂಗಳ ವರೆಗೆ ನೋ ಕಾಸ್ಟ್ ಇಎಂಐ ನೀಡುತ್ತಿದೆ. ಇದರಿಂದ ಕಂತುಗಳ ರೂಪದಲ್ಲಿ ಖರೀದಿಯಲ್ಲಿ ಇಎಂಐನಲ್ಲಿ ಹೆಚ್ಚುವರಿ ಶುಲ್ಕವಿರುವುದಿಲ್ಲ.

ಆ್ಯಪಲ್ ಉತನ್ನ ಖರೀದಿಸಲು ಬಯಸುವ ಗ್ರಾಹಕರು ತಮ್ಮ ಹಳೇ ಫೋನ್ ಎಕ್ಸ್‌ಚೇಂಜ್ ಮಾಡಿಕೊಂಡು ಕ್ರೆಡಿಟ್ ಸೇರಿದಂತೆ ಇತರ ಪ್ರಯೋಜನ ಪಡೆಯಲು ಸಾಧ್ಯವಿದೆ.

ಆಯ್ದ ಆ್ಯಪಲ್ ಉತ್ಪನ್ನಗಳ ಖರೀದಿಯಲ್ಲಿ ಗ್ರಾಹಕರಿಗೆ 3 ತಿಂಗಳ ಕಾಲ ಆ್ಯಪಲ್ ಮ್ಯೂಸಿಕ್ ಉಚಿತವಾಗಿ ಸಿಗಲಿದೆ. ಈ ಆಫರ್ ಜೊತೆ ಇತರ ಕೆಲ ಇನ್‌ಸ್ಟಾಂಟ್ ಆಫರ್‌ಗಳನ್ನು ಆ್ಯಪಲ್ ಸ್ಟೋರ್ ನೀಡುತ್ತಿದೆ.

ಅಕ್ಟೋಬರ್ 3 ರಿಂದ ಪ್ರಸ್ತುತ ಚಾಲ್ತಿಯಲ್ಲಿರುವ ಆಫರ್ ಜೊತೆಗೆ ಆ್ಯಪಲ್ ಉತ್ಪನ್ನಗಳ ಮೇಲೆ ದೀಪಾವಳಿ ಡಿಸ್ಕೌಂಟ್ ಸೇಲ್ ಅನ್ವಯಿಸಲಿದೆ. ಹೀಗಾಗಿ ಆ್ಯಪಲ್ ಉತ್ಪನ್ನಗಳು ಕಡಿಮೆ ಬೆಲೆಯಲ್ಲಿ ಲಭ್ಯವಾಗಲಿದೆ.

ನಕಲಿ ಐಫೋನ್ 16 ಬಗ್ಗೆ ಇರಲಿ ಎಚ್ಚರ, ಆರ್ಡರ್ ಮಾಡುವಾಗ ಇದನ್ನೂ ಚೆಕ್ ಮಾಡಿ!

ಐಫೋನ್ ಸೇರಿದಂತೆ ಆ್ಯಪಲ್ ಉತ್ಪನ್ನಗಳು ಅಮೇಜಾನ್ ಹಾಗೂ ಫ್ಲಿಪ್‌ಕಾರ್ಟ್ ಫೆಸ್ಟಿವಲ್ ಸೇಲ್‌ನಲ್ಲಿ ಕಡಿಮೆ ಬೆಲೆಯಲ್ಲಿ ಲಭ್ಯವಿದೆ. ಸದ್ಯ ಪ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್‌ನಲ್ಲಿ ಐಫೋನ್ 54,999 ರೂಪಾಯಿಗೆ ಲಭ್ಯವಿದೆ. ಅಮೇಜಾನ್ ಸೇಲ್‌ನಲ್ಲೂ ಇದೇ ರೀತಿ ಕಡಿಮೆ ಬೆಲೆಗೆ ಫೋನ್ ಲಭ್ಯವಿದೆ.
 

click me!