ರೈತಿರಿಗೆ ಅನುಕೂಲವಾಗುತ್ತಿರುವ ಪಿಎಂ ಕಿಸಾನ್ ಯೋಜನೆಗೆ ನೋಂದಣಿ ಮಾಡೋದು ಹೇಗೆ?
business Aug 22 2024
Author: Suvarna News Image Credits:others
Kannada
ರೈತರಿಗೆ ನೆರವಾಗುವ ಪಿಎಂ ಕಿಸಾನ್ ಯೋಜನೆ
ಉತ್ತರ ಭಾರತದ ರೈತರಲು ಹೆಚ್ಚು ಲಾಭ ಪಡೆಯೋ ಈ ಯೋಜನೆಗೆ ನೋಂದಣಿ ಹೇಗೆ?
Kannada
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ
ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಬಹಳ ಜನಪ್ರಿಯವಾಗಿದ್ದು, ರೈತರಿಗೆ ಪ್ರತಿ ವರ್ಷ 6 ಸಾವಿರ ರೂ. ನೀಡಲಾಗುತ್ತದೆ. ಈ ಮೊತ್ತವನ್ನು ರೈತರ ಖಾತೆಗೆ ನೇರವಾಗಿ 3 ಕಂತಿನಲ್ಲಿ ನೀಡಲಾಗುತ್ತದೆ.
Kannada
ಉತ್ತರ ಭಾರತೀಯ ರೈತರಿಗೆ ಲಾಭ!
ದೇಶದಾದ್ಯಂತದ ಸಣ್ಣ ರೈತರಿಗೆ ಕೇಂದ್ರದಿಂದ ಯೋಜನೆಯ ಲಾಭ ಸಿಗುತ್ತದೆ. ಆದರೆ ಮಧ್ಯಪ್ರದೇಶದಲ್ಲಿ 4 ಸಾವಿರ, ರಾಜಸ್ಥಾನದಲ್ಲಿ 2 ಸಾವಿರ ರೂಪಾಯಿ ಹೆಚ್ಚುವರಿಯಾಗಿ ನೀಡಲಾಗುತ್ತದೆ.
Kannada
9.26 ಕೋಟಿ ರೈತರಿಗೆ ಲಾಭ
ಪಿಎಂ ಕಿಸಾನ್ ಸಮ್ಮಾನ್ ನಿಧಿಯಡಿ 9.26 ಕೋಟಿ ರೈತರ ಖಾತೆಗೆ 20 ಸಾವಿರ ಕೋಟಿ ರೂ. ವರ್ಗಾಯಿಸಲಾಗಿದೆ. ನೀವೂ ಈ ಯೋಜನೆ ಲಾಭ ಪಡೆಯಲು ಬಯಸಿದರೆ, ಈ ಹಂತಗಳನ್ನು ಅನುಸರಿಸಿ,
Kannada
ಹಂತ-1
ಮೊದಲು ಯೋಜನೆಯ ಅಧಿಕೃತ ವೆಬ್‌ಸೈಟ್ pmkisan.gov.in ಗೆ ಭೇಟಿ ನೀಡಿ.
Kannada
ಹಂತ-2
New Farmer Registration Formಗೆ ಹೋಗಿ ಗ್ರಾಮೀಣಅಥವಾ ನಗರ ರೈತ ನೋಂದಣಿಯಲ್ಲಿ ಒಂದು ಆಯ್ಕೆ ಮಾಡಿಕೊಳ್ಳಿ. ನಂತರ ಆಧಾರ್, ಮೊಬೈಲ್ ಸಂಖ್ಯೆ ನಮೂದಿಸಿ.
Kannada
ಹಂತ-3
ರಾಜ್ಯವನ್ನು ಆಯ್ಕೆ ಮಾಡಿದ ನಂತರ ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ. ನಂತರ OTP ಪಡೆಯಿರಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ನಂತರ OTP ನಮೂದಿಸಿ. ನಂತರ ನೋಂದಣಿ ಪ್ರಕ್ರಿಯೆ ಆಯ್ಕೆಯ ಮೇಲೆ ಕ್ಲಿಕ್ಕಿಸಿ.
Kannada
ಹಂತ-4
ಅದರ ನಂತರ ನಿಮ್ಮ ಜಿಲ್ಲೆ, ಬ್ಯಾಂಕ್ ಮತ್ತು ಆಧಾರ್ ಮಾಹಿತಿಯನ್ನು ಭರ್ತಿ ಮಾಡಿ. ಮತ್ತು ಕೇಳಿದ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
Kannada
ಹಂತ-5
ಕೊನೆಯಲ್ಲಿ ಉಳಿಸು ಬಟನ್ ಮೇಲೆ ಕ್ಲಿಕ್ ಮಾಡಿ. ನಂತರ ನಿಮ್ಮ ಅರ್ಜಿ ಪೂರ್ಣಗೊಳ್ಳುತ್ತದೆ.
Kannada
ಪಿಎಂ ಕಿಸಾನ್ ಸಮ್ಮಾನ್ ನಿಧಿಯ ಅರ್ಹತೆ
ರೈತರಿಗೆ ಯಾವುದೇ ಸರ್ಕಾರಿ ಕೆಲಸ ಇರಬಾರದು. 2 ಹೆಕ್ಟೇರ್‌ಗಿಂತ ಕಡಿಮೆ ಜಮೀನು ಇರಬೇಕು. ರೈತರು ಬ್ಯಾಂಕ್ ಖಾತೆಯನ್ನು ಹೊಂದಿರಬೇಕು.
Kannada
ಇವು ಅಗತ್ಯ ದಾಖಲೆಗಳು
ಕಿಸಾನ್ ಸಮ್ಮಾನ್ ನಿಧಿಗೆ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಭೂ ದಾಖಲೆಗಳು (ಖಾಸ್ರಾ ಖತೌನಿ), ಬ್ಯಾಂಕ್ ಖಾತೆಯ ಪಾಸ್‌ಬುಕ್, ಜಮೀನಿನ ವಿವರ, ಮೊಬೈಲ್ ಸಂಖ್ಯೆ, ಪಾಸ್‌ಪೋರ್ಟ್ ಗಾತ್ರದ ಫೋಟೋ.