ಹಬ್ಬದ ಸಂಭ್ರಮದಲ್ಲಿದ್ದ ಗೃಹಿಣಿಯರಿಗೆ ಬರೆ ಎಳೆದ ಅಡುಗೆ ಎಣ್ಣೆ ದರ ಏರಿಕೆ

By Sathish Kumar KHFirst Published Sep 27, 2024, 2:07 PM IST
Highlights

ರಾಜ್ಯದಲ್ಲಿ ಹಬ್ಬಗಳ ಸಡಗರ ನಡುವೆಯೇ ಅಡುಗೆ ಎಣ್ಣೆಯ ಬೆಲೆ ಗಣನೀಯವಾಗಿ ಏರಿಕೆಯಾಗಿದೆ. ಕಳೆದ 10 ದಿನಗಳಲ್ಲಿ ಶೇ.20ರಷ್ಟು ದುಬಾರಿಯಾಗಿರುವ ಎಣ್ಣೆ, ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುತ್ತಿದೆ. ಹಬ್ಬದ ಸಮಯದಲ್ಲಿ ಈ ರೀತಿಯ ಬೆಲೆ ಏರಿಕೆ ಜನರ ಮೇಲೆ ಹೆಚ್ಚಿನ ಹೊರೆಯನ್ನುಂಟು ಮಾಡಿದೆ.

ಬೆಂಗಳೂರು (ಸೆ.27): ರಾಜ್ಯದಲ್ಲಿ ಸಾಲು ಸಾಲು ಹಬ್ಬಗಳು ಇರುವ ಹಿನ್ನೆಲೆಯಲ್ಲಿ ಅಡುಗೆ ಎಣ್ಣೆಯ ಬೆಲೆ ಗಗನಕ್ಕೇರುತ್ತಿದೆ. ಕಳೆದ 10 ದಿನಗಳಲ್ಲಿ ಬರೋಬ್ಬರಿ ಶೇ.20ರಷ್ಟು ಅಡುಗೆ ಎಣ್ಣೆಯ ಬೆಲೆಯಲ್ಲಿ ದುಬಾರಿಯಾಗಿದೆ. ಗ್ಯಾರಂಟಿ ಸರ್ಕಾರದಲ್ಲಿ ಗಂಡಸರ ಎಣ್ಣೆ ಮಾತ್ರವಲ್ಲ, ಮಹಿಳೆಯರ ಅಡುಗೆ ಎಣ್ಣೆಯೂ ದೂಬಾರಿಯಾಗಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಿಂದ ವ್ಯಂಗ್ಯಾತ್ಮಕವಾಗಿ ಕೇಳಿಬರುತ್ತಿವೆ.

ಹೌದು, ಕಳೆದ 10 ದಿನದಿಂದ  ಅಡುಗೆ ಎಣ್ಣೆಯ ದರದಲ್ಲಿ ಭಾರಿ ಪ್ರಮಾಣದಲ್ಲಿ ಏರಿಕೆ ಆಗುತ್ತಿರುವುದು ಕಂಡುಬಂದಿದೆ. ಈಗಾಗಲೇ, ರಾಜ್ಯದಲ್ಲಿ ಹಾಲು, ತೊಗರಿ ಬೇಳೆ ಸೇರಿದಂತೆ ಬೇಳೆ ಕಾಳುಗಳ ಬೆಲೆಯಲ್ಲಿ ಭಾರಿ ದೊಡ್ಡ ಪ್ರಮಾಣದಲ್ಲಿ ದುಬಾರಿ ಆಗಿದೆ. ಇನ್ನು ರಾಜ್ಯ ಸರ್ಕಾರದಿಂದ ಗ್ಯಾರಂಟಿಗಳಿಗೆ ಹಣದ ಹೊರೆಯಾಗುತ್ತಿದೆ ಎಂದು ಈಗಾಗಲೇ ಮದ್ಯದ ಮೇಲೆ ಮೂರು ಬಾರಿ ದರ ಏರಿಕೆಯನ್ನೂ ಮಾಡಲಾಗಿದೆ. ಇದೀಗ ಹಬ್ಬದ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳ ಬೆಲೆಯಲ್ಲಿ ಭಾರಿ ಪ್ರಮಾಣದಲ್ಲಿ ಏರಿಕೆ ಆಗುತ್ತಿದೆ. ಆದರೆ, ರಾಜ್ಯ ಸರ್ಕಾರದಿಂದ ಇದಕ್ಕೆ ಕಡಿವಾಣ ಹಾಕುವ ಬದಲು ರಾಜಕಾರಣದಲ್ಲಿಯೇ ತೊಡಗಿದೆ.

Latest Videos

ಇದನ್ನೂ ಓದಿ: Bengaluru: ಓಣಂ ರಂಗೋಲಿ ಅಳಿಸಿದ್ದ ಮಹಿಳೆ ವಿರುದ್ಧ ಎಫ್‌ಐಆರ್

ರಾಜ್ಯದಲ್ಲಿ ಸಾಲು ಸಾಲು ಹಬ್ಬದ ಸಂಭ್ರಮದಲ್ಲಿರುವ ಜನತೆಗೆ ಮಾರುಕಟ್ಟೆಯಲ್ಲಿ ಎಲ್ಲ ತರಕಾರಿಗಳ ಬೆಲೆಗಳು ದುಬಾರಿ ಆಗಿವೆ. ಈರುಳ್ಳಿ, ಟೊಮೆಟೋ, ಬೆಳ್ಳುಳ್ಳಿ ಸೇರಿದಂತೆ ಅಗತ್ಯ ತರಕಾರಿಗಳು ಹಾಗೂ ಧವಸ ದಾನ್ಯಗಳ ಬೆಲೆ ಹೆಚ್ಚಾಗಿದೆ. ಇದೀಗ ಅಡುಗೆ ಎಣ್ಣೆ ದರವೂ ಹೆಚ್ಚಾಗುವ ಮೂಲಕ ಜನರಿಗೆ ದರ ಏರಿಕೆ  ಶಾಕ್ ನೀಡಲಾಗುತ್ತದೆ. ಎರಡು ವಾರದಲ್ಲಿ ಅಡುಗೆ ಎಣ್ಣೆಯ ಬೆಲೆಯಲ್ಲಿ ಶೇ.20 ರಷ್ಟು ದರ ಏರಿಕೆಯಾಗಿದೆ. ಒಂದೇ ದಿನದಲ್ಲಿ ವಿವಿಧ ಕಂಪನಿಗಳ ಅಡುಗೆ ಎಣ್ಣೆ ದರ ಪ್ರತಿ 1 ಲೀ. ಮೇಲೆ ಬರೋಬ್ಬರಿ 20 ರೂಪಾಯಿಗಳಷ್ಟು ದಿಢೀರ್ ಏರಿಕೆಯಾಗಿದೆ.

ಕಳೆದ ವಾರ ದಿನಸಿ ಅಂಗಡಿಗಳಲ್ಲಿ 15 ಲೀಟರ್ ಅಡುಗೆ ಎಣ್ಣೆ ದರ 1,550 ರೂಪಾಯಿಯಿಂದ 1,570 ರೂಪಾಯಿ ಇತ್ತು. ಆದರೆ, ಇದೀಗ ದರ ಏರಿಕೆ ನಂತರ 15 ಕೆಜಿ ಟಿನ್ ಅಡುಗೆ ಎಣ್ಣೆ ದರ 1,700 ರೂಪಾಯಿಗೆ ತಲುಪಿದೆ. ಕೇವಲ 10 ದಿನದಲ್ಲಿ ಹದಿನೈದು ಲೀಟರ್ ಎಣ್ಣೆಯ ಟಿನ್ ಡಬ್ಬಕ್ಕೆ 200 ರೂ. ಹೆಚ್ಚಳವಾದರೆ, ಒಂದು ಲೀಟರ್‌ಗೆ ಪ್ಯಾಕೆಟ್ ಅಥವಾ ಬಾಟಲಿಯ ಮೇಲೆ 20 ರೂ. ದರ ಹೆಚ್ಚಳ ಮಾಡಲಾಗಿದೆ. ಆದರೆ, ಇದಕ್ಕೆ ಹಬ್ಬದ ನೆಪವನ್ನು ಹೇಳದ ವ್ಯಾಪಾರಿಗಳು, ಆಮದು ಶುಲ್ಕ ಹೆಚ್ಚಾದ ಹಿನ್ನೆಲೆ ದರ ಏರಿಕೆ ಆಗಿದೆ ಎಂದು ಹೇಳುತ್ತಿದ್ದಾರೆ.

ನಿಮ್ಮ ಪತ್ನಿ ಗೃಹಿಣಿಯಾಗಿದ್ದಲ್ಲಿ, ಈ ಯೋಜನೆಯಿಂದ ಆಗಲಿದೆ ನಿಮಗೆ ದೊಡ್ಡ ಲಾಭ!

ಅಡುಗೆ ಎಣ್ಣೆ ಹಾಗೂ ಎಣ್ಣೆ ಕಾಳುಗಳ ಆಮದು ಮೇಲಿನ ಸುಂಕವು ಶೇ.25 ರಷ್ಟು ಹೆಚ್ಚಳವಾಗಿದೆ. ಜೊತೆಗೆ, ಕಳೆದೊಂದು ತಿಂಗಳಿಂದ ಹಬ್ಬಗಳ ಹಿನ್ನೆಲೆಯಲ್ಲಿ ಅಡುಗೆ ಎಣ್ಣೆಯ ಬೇಡಿಕೆ ಪ್ರಮಾಣವೂ ಹೆಚ್ಚಾಗುತ್ತಿದೆ. ಆದ್ದರಿಂದ ಸಹಜವಾಗಿಯೇ ಅಡುಗೆ ಎಣ್ಣೆಗಳ ಎಲ್ಲ ಬ್ರ್ಯಾಂಡ್‌ಗಳ ದರವೂ ಹೆಚ್ಚಾಗಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.

ಅಡುಗೆ ಎಣ್ಣೆ ಬ್ರ್ಯಾಂಡ್ - ಹಿಂದಿನ ದರ - ಈಗಿನ ದರ (ರೂ.ಗಳಲ್ಲಿ)
ಸನ್ ಪ್ಯೂರ್ ಆಯಿಲ್ -   105 -           126
ಗೋಲ್ಡ್ ವಿನ್ನರ್ -            102 -           126
ಫ್ರೀಡಂ ಆಯಿಲ್ -           115 -           124
ರುಚಿ ಗೋಲ್ಡ್ -                 98 -            112
ಜೆಮಿನಿ ಸನ್​ ಫ್ಲವರ್ -      110-            127
ಫಾರ್ಚುನ್​-                      115 -           126
ಧಾರಾ -                            115 -           130

click me!