760ರೂ. ವೇತನ ಪಡೆಯುತ್ತಿದ್ದ ವ್ಯಕ್ತಿ ಈಗ ಪ್ರತಿಷ್ಟಿತ ಕಂಪನಿ ಮುಖ್ಯಸ್ಥ; ಕೊಡುಗೈ ದಾನಿಯಾಗಿರುವ ಈತ ಯಾರು ಗೊತ್ತಾ?

By Suvarna News  |  First Published Nov 27, 2023, 3:58 PM IST

ಎಲ್ ಆಂಡ್ ಟಿ ಮುಖ್ಯಸ್ಥ ಎ.ಎಂ. ನಾಯ್ಕ 2016ರಲ್ಲಿ ತಮ್ಮ ಒಟ್ಟು ಆದಾಯದ ಶೇ.75ರಷ್ಟನ್ನು ದಾನ ಮಾಡಿದ್ದರು. 2022ರಲ್ಲಿ ಇವರು ಭಾರತದ ಟಾಪ್ 10 ದಾನಿಗಳಲ್ಲಿ ಒಬ್ಬರಾಗಿದ್ದು,142 ಕೋಟಿ ರೂ. ದಾನ ಮಾಡಿದ್ದರು. 
 


Business Desk: ಕೆಲವರ ಬಳಿ ಕೋಟಿಗಟ್ಟಲೆ ಸಂಪತ್ತಿದ್ದರೂ ಇನ್ನೊಬ್ಬರಿಗೆ ಅಲ್ಪ ನೆರವು ನೀಡಲು ಕೂಡ ಹಿಂದೆಮುಂದೆ ನೋಡುತ್ತಾರೆ. ಆದರೆ, ಬೆರಳೆಣಿಕೆಯಷ್ಟು ಮಂದಿ ಸಂಪತ್ತು ಇರೋದೆ ದಾನಕ್ಕೆ ಎಂಬಂತೆ ವರ್ತಿಸುತ್ತಾರೆ. ಇಂಥ ವಿರಳ ವ್ಯಕ್ತಿತ್ವದ ಶ್ರೀಮಂತರಲ್ಲಿ ಎಮಿರೇಟ್ಸ್ ಲಾರ್ಸೆನ್ ಹಾಗೂ ಟರ್ಬೋ ಮುಖ್ಯಸ್ಥ ಅನಿಲ್ ಮಣಿಭಾಯಿ ನಾಯ್ಕ ಕೂಡ ಒಬ್ಬರು. ಇವರು 2016ರಲ್ಲಿ ತಮ್ಮ ಒಟ್ಟು ಆದಾಯದ ಶೇ.75ರಷ್ಟು ಭಾಗವನ್ನು ದಾನ ಮಾಡಿದ್ದರು. 2022ರಲ್ಲಿ ಇವರು ಭಾರತದ ಟಾಪ್ 10 ದಾನಿಗಳಲ್ಲಿ ಒಬ್ಬರಾಗಿದ್ದು, 142 ಕೋಟಿ ರೂ. ದಾನ ಮಾಡಿದ್ದರು. ಎ.ಎಂ. ನಾಯ್ಕ ಎಂದೇ ಜನಪ್ರಿಯತೆ ಗಳಿಸಿರುವ ಇವರು, ಎಮಿರೇಟ್ಸ್ ಆಫ್ ಲಾರ್ಸೆನ್ ಆಂಡ್ ಟರ್ಬೋ ಮುಖ್ಯಸ್ಥರಾಗಿದ್ದು, ನಿರ್ಮಾಣ, ವಾಹನ, ಉತ್ಪಾದನೆ ಹಾಗೂ ಇತರ ಕ್ಷೇತ್ರಗಳಲ್ಲಿ ತೊಡಗಿದ್ದಾರೆ. ಲಾರ್ಸೆನ್ ಹಾಗೂ ಟರ್ಬೋ ಪ್ರಸ್ತುತ 4,19,000ರೂ. ಕೋಟಿಗಿಂತಲೂ ಅಧಿಕ ಮಾರುಕಟ್ಟೆ ಬಂಡವಾಳ ಹೊಂದಿದ್ದಾರೆ. ಇನ್ನು ಅನಿಲ್ ಮಣಿಭಾಯಿ ಸ್ವಾತಂತ್ರ್ಯ ಹೋರಾಟಗಾರ ಮಣಿಭಾಯಿ ನಿಚ್ಚಭಾಯಿ ನಾಯ್ಕ ಅವರ ಪುತ್ರ. 

ಅನಿಲ್ ಮಣಿಭಾಯಿ ತಮ್ಮ ನಿರ್ವಹಣಾ ಕೌಶಲ್ಯ, ದೂರದೃಷ್ಟಿ ಹಾಗೂ ಸಮಾಜಮುಖಿ ಕಾರ್ಯಗಳಿಂದ ಜನಪ್ರಿಯತೆ ಗಳಿಸಿದ್ದಾರೆ. ಗ್ರಾಮೀಣ ಭಾರತಕ್ಕೆ ಕೊಡುಗೆ ನೀಡಲು ಇವರ ತಂದೆ ಉದ್ಯೋಗ ತ್ಯಜಿಸಿದ್ದರು.  ಅನಿಲ್ ಮಣಿಭಾಯಿ ಕೂಡ ವೃತ್ತಿಯಲ್ಲಿ ಯಶಸ್ಸು ಸಾಧಿಸಿದ ಬಳಿಕ ತಂದೆಯ ಹಾದಿಯನ್ನೆ ಅನುಸರಿಸಿದ್ದರು. 

Tap to resize

Latest Videos

ಸ್ವಂತ ಉದ್ಯಮ ಸ್ಥಾಪಿಸಿದ ಐಐಟಿ, ಐಐಎಂ ಪದವೀಧರ ಈಗ ಜೈಲುಪಾಲು; ವಂಚನೆ ಆರೋಪದಲ್ಲಿ 20 ವರ್ಷ ಸೆರೆವಾಸ

ಗುಜರಾತ್ ನಲ್ಲಿ 1942ರಲ್ಲಿ ಜನಿಸಿದ ಎ.ಎಂ.ನಾಯ್ಕ 1965ರಲ್ಲಿ ಕಂಪನಿಗೆ ಸಹಾಯಕ ಇಂಜಿನಿಯರ್ ಆಗಿ ಸೇರ್ಪಡೆಗೊಂಡರು. ಇವರ ಮೊದಲ ವೇತನ ಕೇವಲ  760ರೂ. ಬಿರ್ಲಾ ವಿಶ್ವಕರ್ಮ ಮಹಾವಿದ್ಯಾಲಯ ಇಂಜಿನಿಯರಿಂಗ್ ಕಾಲೇಜಿನಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದಿರುವ ನಾಯ್ಕ ಅವರಿಗೆ ಎಲ್ ಆಂಡ್ ಟಿಯಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳೋದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ಏಕೆಂದರೆ ಎಲ್ ಆಂಡ್ ಟಿಯಲ್ಲಿ ಐಐಟಿ ಪದವೀಧರರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿತ್ತು. ಹೀಗಾಗಿ ಎಲ್ ಆಂಡ್ ಟಿಯಲ್ಲಿ ಉದ್ಯೋಗ ಸಿಗದ ಹಿನ್ನೆಲೆಯಲ್ಲಿ ನೆಸ್ಟರ್ ಬಾಯ್ಲರ್ ಕಂಪನಿ ಸೇರಿದ ಅನಿಲ್, ಅಲ್ಲಿ ಕೆಲವು ಕಾಲ ಕಾರ್ಯನಿರ್ವಹಿಸುತ್ತಾರೆ. ನೆಸ್ಟರ್ ಬಾಯ್ಲರ್ ನಲ್ಲಿ ಕೆಲವು ಕಾಲ ಕಾರ್ಯನಿರ್ವಹಿಸಿದ ಬಳಿಕ ಮತ್ತೆ ಎಲ್ ಆಂಡ್ ಟಿಯಲ್ಲಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿದರು. ಅನುಭವದ ಹಿನ್ನೆಲೆಯಲ್ಲಿ ಅವರಿಗೆ ಉದ್ಯೋಗ ದೊರಕಿತು.

ಎಲ್ ಆಂಡ್ ಟಿಯಲ್ಲಿ ಉದ್ಯೋಗ ದೊರೆತ ಆರು ತಿಂಗಳಲ್ಲಿ ಅವರನ್ನು ಸೂಪರ್ ವೈಸರ್ ಹುದ್ದೆಗೆ ಬಡ್ತಿ ನೀಡಲಾಯಿತು. 18 ತಿಂಗಳಲ್ಲಿ 800 ಮಂದಿಗೆ ಅವರು ಮುಖ್ಯಸ್ಥರಾಗಿದ್ದರು. ಆ ಸಮಯದಲ್ಲಿ ಅವರ ವಯಸ್ಸು 25 ಕೂಡ ತುಂಬಿರಲಿಲ್ಲ. ವೃತ್ತಿರಂಗದಲ್ಲಿ ಇಷ್ಟು ಎತ್ತರಕ್ಕೆ ಬೆಳೆಯುತ್ತೇನೆ ಎಂದು ಭಾವಿಸಿರಲಿಲ್ಲ ಎಂದು ಅನೇಕ ಸಂದರ್ಶನಗಳಲ್ಲಿ ಎ.ಎಂ. ನಾಯ್ಕ ಹೇಳಿದ್ದಾರೆ. 10 ಸಾವಿರ ರೂ. ವೇತನದೊಂದಿಗೆ ನಿವೃತ್ತಿಯಾಗಬಹುದೆಂದು ಅವರು ಯೋಚಿಸಿದ್ದರಂತೆ.

ಮಗನಿಗೆ ಆಸ್ತಿ ಕೊಟ್ಟು ಕೆಟ್ಟೆ; ನಾನು ರಸ್ತೆಯಲ್ಲಿದ್ರೇನೆ ಅವನಿಗೆ ಖುಷಿ: ರೇಮಂಡ್ಸ್‌ ಸಂಸ್ಥಾಪಕ ಬೇಸರ

1999ರಲ್ಲಿ ಅವರು ಕಂಪನಿಯ ಸಿಇಒ ಹುದ್ದೆಗೆ ಬಡ್ಡಿ ಪಡೆದರು. 2017ರಲ್ಲಿ ಅವರು ಆ ಗ್ರೂಪ್ನ ಮುಖ್ಯಸ್ಥರ ಹುದ್ದೆಗೇರಿದರು. ಅವರ ನಾಯಕತ್ವದಲ್ಲಿ ಕಂಪನಿ ಆಸ್ತಿಯಲ್ಲಿ 870 ಕೋಟಿ ಡಾಲರ್ ಹೆಚ್ಚಳವಾಗಿದೆ. ಇವೆಲ್ಲದರ ಹೊರತಾಗಿ ಅವರೊಬ್ಬ ಉತ್ತಮ ವೇತನ ಪಡೆಯುತ್ತಿರುವ ಕಾರ್ಪೋರೇಟ್ ನಾಯಕ. 2017-2018ನೇ ಸಾಲಿನಲ್ಲಿ ಕಂಪನಿ ಅವರಿಗೆ 137 ಕೋಟಿ ರೂ. ಪಾವತಿಸಿತ್ತು. ಅವರ ರಜೆ ನಗದೀಕರಣದ ಮೊತ್ತವೇ 19 ಕೋಟಿ ರೂ. ಆಗಿತ್ತು. 2016ರಲ್ಲಿ ಅವರ ನಿವ್ವಳ ಸಂಪತ್ತು ಅಂದಾಜು 400 ಕೋಟಿ ರೂ. ಇತ್ತು.

ಅನಿಲ್ ಮಣಿಭಾಯಿ ಭಾರತದ ಅತೀದೊಡ್ಡ ದಾನಿಗಳಲ್ಲಿ ಒಬ್ಬರು. 2016ರಲ್ಲಿ ಅವರು ತಮ್ಮ ಒಟ್ಟು ಆದಾಯದ ಶೇ.75ರಷ್ಟನ್ನು ದಾನ ಮಾಡಿದ್ದರು. 2022ರಲ್ಲಿ ಅವರು ಭಾರತದ ಟಾಪ್ 10 ದಾನಿಗಳಲ್ಲಿ ಒಬ್ಬರಾಗಿದ್ದರು. ಅವರು 142 ಕೋಟಿ ರೂ. ದಾನ ಮಾಡಿದ್ದರು. 171.3 ಕೋಟಿ ರೂ. ಮೊತ್ತದ 9 ಷೇರುಗಳನ್ನು ಎ.ಎಂ.ನಾಯ್ಕ ಹೊಂದಿದ್ದಾರೆ. ಇವರಿಗೆ ಭಾರತದ ಮೂರನೇ ಅತೀದೊಡ್ಡ ನಾಗರಿಕ ಪ್ರಶಸ್ತಿ ಪದ್ಮ ಭೂಷಣವನ್ನು ನೀಡಿ ಗೌರವಿಸಲಾಗಿದೆ. 

click me!