35,000 ಕೋಟಿ ಆಸ್ತಿ ಇದ್ರೂ ಸರಳ ಜೀವನ ನಡೆಸ್ತಿದ್ದಾರೆ ಈ ಭಾರತೀಯ ಮಹಿಳೆ!

By Suvarna News  |  First Published Nov 27, 2023, 2:53 PM IST

ತುಂಬಿದ ಕೊಡ ಥುಳುಕುವುದಿಲ್ಲ ಎನ್ನುವ ಮಾತಿದೆ. ಇದಕ್ಕೆ ಅನೇಕ ಭಾರತೀಯರು ಸಾಕ್ಷ್ಯ. ಎಷ್ಟೇ ಹಣ, ಆಸ್ತಿ ಇದ್ರೂ ತಮ್ಮ ಸಿರಿವಂತಿಕೆಯನ್ನು ತೋರಿಸಿಕೊಳ್ಳದೆ ಸಾಮಾನ್ಯರಂತೆ ಜೀವನ ನಡೆಸುತ್ತಿರುವ ಕೆಲವರಲ್ಲಿ ಈ ಮಹಿಳೆ ಕೂಡ ಸೇರಿದ್ದಾರೆ. ಅವರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. 
 


ಭಾರತದಲ್ಲಿ ಹಲವಾರು ವರ್ಷಗಳಿಂದಲೂ ಅನೇಕ ಮಹಿಳೆಯರು ತಮ್ಮ ತಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡುತ್ತ ಬಂದಿದ್ದಾರೆ. ಮಹಿಳೆಯರು ತಮ್ಮ ಪರಿಶ್ರಮದ ಮೂಲಕ ಉನ್ನತ ಸ್ಥಾನವನ್ನು ಅಲಂಕರಿಸಿ ಅನೇಕ ಮಂದಿಗೆ ಸ್ಪೂರ್ತಿಯಾಗಿದ್ದಾರೆ. ಇಂತಹ ಮಹಿಳೆಯರು ಯುವ ಜನತೆಗೆ ಉತ್ತಮ ಮಾರ್ಗದರ್ಶಕರೂ ಆಗಿದ್ದಾರೆ.

ಚೆನ್ನೈ (Chennai)  ಮೂಲದ ಬಹುರಾಷ್ಟ್ರೀಯ ಕಂಪನಿ ಜೊಹೊ ಕಾರ್ಪೊರೇಶನ್ ನ ಸಹ - ಸಂಸ್ಥಾಪಕರಾದ ರಾಧಾ ವೆಂಬು (Radha Vembu) ಅವರು ಕೂಡ ಸಾಧನೆಯ ಮೆಟ್ಟಿಲೇರಿದ ಮಹಿಳೆಯರಲ್ಲಿ ಒಬ್ಬರಾಗಿದ್ದಾರೆ. ಯಶಸ್ವಿ ಉದ್ಯಮಿಯಾಗಿರುವ ರಾಧಾ ವೆಂಬು ಅವರು ಈಗ 34, 900 ಕೋಟಿ ಆಸ್ತಿಗೆ ಒಡತಿಯಾಗಿದ್ದಾರೆ. ಇವರ ಸಾಧನೆ ಲಕ್ಷಾಂತರ ಯುವ ಉದ್ಯಮಿಗಳಿಗೆ ದಾರಿದೀಪವಾಗಿದೆ. ಒನ್ ಹೆಲ್ತ್ ಹುರುನ್ ಇಂಡಿಯಾ ರಿಚ್ ಲಿಸ್ಟ್ ಸಂಸ್ಥೆ, ರಾಧಾ ವೆಂಬು ಅವರನ್ನು 2023 ನೇ ಸಾಲಿನ ಶ್ರೀಮಂತ ಸ್ವಯಂ ನಿರ್ಮಿತ ಭಾರತೀಯ ಮಹಿಳೆ ಎಂದು ಗುರುತಿಸಿದೆ. ಈ ಮೂಲಕ ಅವರು ಭಾರತದ ಶ್ರೀಮಂತರ ಪಟ್ಟಿಯಲ್ಲಿ 49 ನೇ ಸ್ಥಾನದಲ್ಲಿದ್ದಾರೆ. ಉದ್ಯಮದ ಹೊರತಾಗಿ ಇವರು ಜಾನಕಿ ಹೈಟೆಕ್ ಅಗ್ರೋ, ಕೃಷಿ ಎನ್ ಜಿ ಒ ಮತ್ತು ಹೈಲ್ಯಾಂಡ್ ವ್ಯಾಲಿ ಎಂಬ ರಿಯಲ್ ಎಸ್ಟೇಟ್ ಕಂಪನಿಯ ನಿರ್ದೇಶಕರೂ ಹೌದು.

Tap to resize

Latest Videos

ನೀತಾ ಅಂಬಾನಿ ಬಳಿಯಿದೆ ಪ್ರಪಂಚದ ಅತೀ ಕಾಸ್ಟ್ಲೀ ವಾಚ್‌, ಅಬ್ಬಬ್ಬಾ ಬೆಲೆ ಕೇಳಿದ್ರೆ ತಲೆ ಸುತ್ತುತ್ತೆ!

ಸಾಧನೆ ಮೆರೆದ ಅಣ್ಣ – ತಂಗಿ : ಮಧ್ಯಮ ವರ್ಗದ ಕುಟುಂಬದಿಂದ ಬಂದ ರಾಧಾ ವೆಂಬು ಅವರು ತಮ್ಮ ಸಹೋದರನೊಂದಿಗೆ ಸೇರಿ ಉದ್ಯಮ ವಲಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ರಾಧಾ ವೆಂಬು ಅವರ ತಂದೆ ಮದ್ರಾಸ್ ಹೈ ಕೋರ್ಟ್ ನಲ್ಲಿ ಸ್ಟೆನೋಗ್ರಾಫರ್ ಆಗಿದ್ದರು. ಮದ್ರಾಸಿನ ಐಐಟಿಯಲ್ಲಿ ಇಂಡಸ್ಟ್ರಿಯಲ್ ಮ್ಯಾನೇಜ್ ಮೆಂಟ್ ಪದವಿ ಪಡೆದ ರಾಧಾ ವೆಂಬು ಅವರು ನಂತರ 1997ರಲ್ಲಿ ಜೋಹೋ ಗೆ ಸೇರಿದರು. ಟೆಕ್ನೋಲಜಿ ಮತ್ತು ಇನೋವೇಶನ್ ಕಡೆಗೆ ಇವರಿಗಿದ್ದ ಒಲವಿನಿಂದ ಅವರು ಕಂಪನಿಯಲ್ಲಿ ಕ್ರಮೇಣ ಪ್ರಗತಿ ಸಾಧಿಸಿದರು.

ಚೆನ್ನೈ ಮೂಲದ ಬಹುರಾಷ್ಟ್ರೀಯ ತಂತ್ರಜ್ಞಾನ ಕಂಪನಿಯಾದ ಜೋಹೋ ಕಾರ್ಪೊರೇಷನ್ ನ ಪ್ರತಿಶತ 47ರಷ್ಟು ಭಾಗ ಆದಾಯ ರಾಧಾ ವೆಂಬು ಅವರಿಗೆ ಸೇರುತ್ತದೆ. ರಾಧಾ ವೆಂಬು ಅವರ ಸಹೋದರ ಹಾಗೂ ಜೋಹೋ ಸಿಇಒ ಆಗಿರುವ ಶ್ರೀಧರ್ ವೆಂಬು ಅವರಿಗೆ ಜೋಹೋದ ಪ್ರತಿಶತ 5 ರಷ್ಟು ಆದಾಯ ದೊರೆಯುತ್ತದೆ. ರಾಧಾ ವೆಂಬು ಮತ್ತು ಶ್ರೀಧರ ವೆಂಬು ಅವರು ಹೋರಾಟ, ಯಶಸ್ಸು ಮತ್ತು ಸರಳ ಜೀವನಕ್ಕೆ ಹೆಸರುವಾಸಿಯಾಗಿದ್ದಾರೆ.

ಸರಳ ಜೀವನ ಹಾಗೂ ಸಾಮಾಜಿಕ ಕಳಕಳಿ : ರಾಧಾ ವೆಂಬು ಅವರ ನಾಯಕತ್ವದಲ್ಲಿ ಜೋಹೋ ಕಂಪನಿ, ತನ್ನ ಉತ್ಪನ್ನದ ಪೋರ್ಟ್ ಫೋಲಿಯೋದಲ್ಲಿ ಪ್ರಚಂಡ ಬೆಳವಣಿಗೆಯನ್ನು ಕಂಡಿತು. ಪ್ರಸ್ತುತ ಜೋಹೋ ಕಂಪನಿ 180 ದೇಶಗಳಲ್ಲಿ ತನ್ನ ಸೇವೆ ಸಲ್ಲಿಸುತ್ತಿದೆ. ಈ ಎಲ್ಲ ದೇಶಗಳಿಗೆ ವಿವಿಧ ವ್ಯಾಪಾರ ಅಗತ್ಯತೆ ಪೂರೈಸುವಲ್ಲಿ ಜೋಹೋ ಕಂಪನಿ ಸಫಲವಾಗಿದೆ. ಇದಕ್ಕೆಲ್ಲ ಮುಖ್ಯ ಕಾರಣ ಯಶಸ್ವಿ ಉದ್ಯಮಿ ರಾಧಾ ವೆಂಬು ಅವರೇ ಆಗಿದ್ದಾರೆ. ಇವರು ಉದ್ಯಮದಲ್ಲಷ್ಟೇ ಅಲ್ಲದೇ ಸಾಮಾಜಿಕ ಕಾರ್ಯಗಳಲ್ಲಿಯೂ ತಮ್ಮ ಸೇವೆ ಸಲ್ಲಿಸುತ್ತಿದ್ದಾರೆ. ಯುವಕರನ್ನು ಸಬಲೀಕರಣಗೊಳಿಸಲು ಇವರು ಶಿಕ್ಷಣ, ಶೈಕ್ಷಣಿಕ ಕಾರ್ಯಕ್ರಮ ಹಾಗೂ ವಿದ್ಯಾರ್ಥಿ ವೇತನಗಳ ಬಗ್ಗೆ ಸಾಕಷ್ಟು ಕ್ರಮ ಕೈಗೊಂಡಿದ್ದಾರೆ.

ದರೋಡೆಕೋರರ ಕಾಟ –ದಾಂಪತ್ಯದಲ್ಲಿ ಬಿರುಕು, ಕಷ್ಟ ಮೆಟ್ಟಿನಿಂತ ಟ್ರಕ್ ಚಾಲಕಿಗೊಂದು ಸಲಾಂ!

ಯಾವುದೇ ಪಿತ್ರಾರ್ಜಿತ ಆಸ್ತಿಯನ್ನು ಅವಲಂಬಿಸದೇ ಸ್ವಂತ ಪರಿಶ್ರಮದಿಂದ ಉದ್ಯಮದಲ್ಲಿ ಯಶಸ್ಸು ಗಳಿಸಿದ ಕೀರ್ತಿ ರಾಧಾ ವೆಂಬು ಅವರಿಗೆ ಸಲ್ಲುತ್ತದೆ. ಈ ಮೂಲಕ ಅವರು ಮಹಿಳೆಯರು ಕೂಡ ಉದ್ಯಮದಲ್ಲಿ ಸಕ್ಸೆಸ್ ಆಗಬಹುದು ಎನ್ನುವುದನ್ನು ನಿರೂಪಿಸಿದ್ದಾರೆ. ಜೋಹೋ ಕಂಪನಿ ಜಾಗತಿಗೆ ಮಟ್ಟದಲ್ಲಿ ಹೆಸರುವಾಸಿಯಾಗುವಂತೆ ಮಾಡುವಲ್ಲಿ ಕೀರ್ತಿ ರಾಧಾ ವೆಂಬು ಅವರ ಪಾಲು ದೊಡ್ಡದಿದೆ.

click me!