Income Tax Return 2024:ಎಚ್ ಆರ್ ಎ ವಿನಾಯ್ತಿ ಕ್ಲೇಮ್ ಮಾಡೋ ಮುನ್ನ ಈ 5 ವಿಚಾರಗಳನ್ನು ಗಮನಿಸಿ

By Suvarna News  |  First Published Jan 17, 2024, 4:52 PM IST

ಐಟಿಆರ್ ಸಲ್ಲಿಕೆ ಮಾಡುವಾಗ ಎಚ್ ಆರ್ ಎ ಕ್ಲೇಮ್ ಮಾಡೋದಿದ್ರೆ ಆ ಬಗ್ಗೆ ಕೆಲವೊಂದು ವಿಚಾರಗಳನ್ನು ಗಮನಿಸೋದು ಅಗತ್ಯ. ಹಾಗಾದ್ರೆ ಎಚ್ ಆರ್ ಎ ಕ್ಲೇಮ್ ಮಾಡುವಾಗ ಯಾವೆಲ್ಲ ವಿಚಾರಗಳಿಗೆ ಮಹತ್ವ ನೀಡಬೇಕು? ಇಲ್ಲಿದೆ ಮಾಹಿತಿ. 
 


Business Desk: 2024ನೇ ಸಾಲಿನ ಐಟಿಆರ್ ರಿಟರ್ನ್ ಸಲ್ಲಿಕೆ ಮಾಡಲು ತೆರಿಗೆದಾರರು ಈಗಲೇ ಸಿದ್ಧತೆ ನಡೆಸೋದು ಉತ್ತಮ. ತೆರಿಗೆದಾರರಿಗೆ ಹಳೆಯ ಹಾಗೂ ಹೊಸ ತೆರಿಗೆ ಪದ್ಧತಿಗಳಲ್ಲಿ ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ. ಹೊಸ ತೆರಿಗೆ ಪದ್ಧತಿ ತೆರಿಗೆದಾರರಿಗೆ ಕೆಲವು ಕಡಿತಗಳನ್ನು ಹೊಂದಿದೆ. ಇನ್ನು ಹಳೆಯ ತೆರಿಗೆ ವ್ಯವಸ್ಥೆಯಲ್ಲಿ ಎಚ್ ಆರ್ ಎ, ಆರೋಗ್ಯ ವಿಮೆ, ಗೃಹ ವಿಮೆಗೆ ವಿನಾಯ್ತಿಗಳನ್ನು ಪಡೆಯಲು ಅವಕಾಶವಿದೆ. ಇನ್ನು ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80 ಸಿ ಅಡಿಯಲ್ಲಿ ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್), ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್), ವಿಮೆ ಹಾಗೂ ಈಕ್ವಿಟಿ ಲಿಂಕ್ಡ್ ಸೇವಿಂಗ್ ಸ್ಕೀಮ್ಸ್ (ಇಎಲ್ ಎಸ್ ಎಸ್) ಹೂಡಿಕೆಗೆ ಕಡಿತಗಳನ್ನು ಪಡೆಯಲು ಅವಕಾಶವಿದೆ. ಹೀಗಾಗಿ ನಿಮ್ಮ ಪರಿಸ್ಥಿತಿಗೆ ಅನುಗುಣವಾಗಿ ಯಾವ ತೆರಿಗೆ ಪದ್ಧತಿ ಆಯ್ಕೆ ಮಾಡಬೇಕು ಎಂಬುದನ್ನು ನಿರ್ಧರಿಸಿ. ಹಳೆಯ ತೆರಿಗೆ ಪದ್ಧತಿ ಅಡಿಯಲ್ಲಿ ತೆರಿಗೆದಾರರು ಎಚ್ ಆರ್ ಎ ಕ್ಲೇಮ್ ಮಾಡಬಹುದು. ಹೀಗಾಗಿ ತೆರಿಗೆ ವಿನಾಯ್ತಿ ಕ್ಲೇಮ್ ಮಾಡುವ ಮುನ್ನ ತೆರಿಗೆದಾರರು5 ವಿಚಾರಗಳನ್ನು ಗಮನಿಸಬೇಕು. ಹಾಗಾದ್ರೆ ಆ ವಿಚಾರಗಳು ಯಾವುವು?

1.ಎಚ್ ಆರ್ ಎ ಲೆಕ್ಕಾಚಾರ
ಎಚ್ ಆರ್ ಎ ಪೂರ್ಣ ಪ್ರಮಾಣದಲ್ಲಿ ತೆರಿಗೆಯಿಂದ ವಿನಾಯ್ತಿ ಪಡೆದಿಲ್ಲ. ಇದನ್ನು ಕಾಯ್ದೆಗೆ ಅನುಗುಣವಾಗಿ ಕ್ಲೇಮ್ ಮಾಡಬಹುದು. ಇನ್ನು ಈ ಕೆಳಗಿಳಿನ ವಿಚಾರಗಳಿಗೆ ವಿನಾಯ್ತಿ ಪಡೆಯಲು ಅವಕಾಶವಿದೆ.

Tap to resize

Latest Videos

ನಿಮ್ಮ ವೇತನಕ್ಕೆ ಎಷ್ಟು ಆದಾಯ ತೆರಿಗೆ ಬೀಳುತ್ತೆ? ಲೆಕ್ಕಾಚಾರ ಹೇಗೆ? ಇಲ್ಲಿದೆ ಮಾಹಿತಿ

*ಉದ್ಯೋಗಿ ಸ್ವೀಕರಿಸಿರುವ ನೈಜ್ಯವಾದ ಎಚ್ ಆರ್ ಎ
*ಮೆಟ್ರೋ ಹೊರತುಪಡಿಸಿದ ನಗರಗಳಲ್ಲಿ ಮೂಲ ವೇತನದ ಶೇ.40 ಅಥವಾ ಮುಂಬೈ, ಬೆಂಗಳೂರು, ನವದೆಹಲಿ, ಕೋಲ್ಕತ್ತ ಹಾಗೂ ಚೆನ್ನೈ ಮುಂತಾದ ಮೆಟ್ರೋ ನಗರಗಳಲ್ಲಿ ಬಾಡಿಗೆ ಮನೆಯಲ್ಲಿದ್ದರೆ ಮೂಲ ವೇತನದ ಶೇ.50.

*ಮೂಲವೇತನದ ಶೇ.10ಕ್ಕಿಂತ ಕಡಿಮೆ ಬಾಡಿಗೆ ಪಾವತಿಸಿದ್ದರೆ
ವಾಸ್ತವ್ಯದ ಕಟ್ಟಡಗಳಿಗೆ ಬಾಡಿಗೆ ಪಾವತಿಸಿದ್ರೆ ಮಾತ್ರ ಎಚ್ ಆರ್ ಎ ಕಡಿತದ ಸೌಲಭ್ಯ ಪಡೆಯಬಹುದು. ಇದು ವಿದ್ಯುತ್, ಅಡುಗೆ ಅನಿಲ ಇತ್ಯಾದಿ ಸೌಲಭ್ಯಗಳ ವೆಚ್ಚವನ್ನು ಒಳಗೊಂಡಿಲ್ಲ.

2.ಎಚ್ ಆರ್ ಎಗೆ ಅಗತ್ಯವಿರುವ ದಾಖಲೆಗಳು
*ಎಚ್ ಆರ್ ಎ ವಿನಾಯ್ತಿಗಳನ್ನು ಕ್ಲೇಮ್ ಮಾಡುವ ಉದ್ಯೋಗಿಗಳು ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಕೆ ಮಾಡೋದು ಅಗತ್ಯ. ಇದರಲ್ಲಿ ಬಾಡಿಗೆ ಪಾವತಿ ದಾಖಲೆಗಳು, ಮನೆ ಮಾಲೀಕರ ಹೆಸರು ಹಾಗೂ ವಿಳಾಸ, ಅವರ ಪ್ಯಾನ್ ಮಾಹಿತಿಗಳು  (ಇದು ಒಟ್ಟು ತೆರಿಗೆ ಪಾವತಿ ಮೊತ್ತ 1ಲಕ್ಷ ರೂ. ದಾಟಿದ್ದರೆ ಮಾತ್ರ) ಇರಬೇಕು.
*ಒಂದು ವೇಳೆ ಮನೆ ಮಾಲೀಕ ಪ್ಯಾನ್ ಮಾಹಿತಿ ನೀಡದಿದ್ದರೆ ಉದ್ಯೋಗಿ ಅರ್ಜಿ ನಮೂನೆ 60ರಲ್ಲಿ ಮನೆ ಮಾಲೀಕನಿಂದ ಆದಾಯದ ಘೋಷಣೆ ಪಡೆಯಬೇಕು. 
*ಪೋಷಕರು ಅಥವಾ ಸಂಬಂಧಿಕರಿಗೆ ಪಾವತಿಸಿರುವ ಬಾಡಿಗೆ ಮೇಲೆ ಎಚ್ ಆರ್ ಎ ಕಡಿತಗಳನ್ನು ಕ್ಲೇಮ್ ಮಾಡಲು ಯಾವುದೇ ನಿರ್ಬಂಧವಿಲ್ಲ. ಆದರೂ ಈ ಬಗ್ಗೆ ದಾಖಲೆಗಳನ್ನು ನಿರ್ವಹಣೆ ಮಾಡೋದು ಉತ್ತಮ
*ತಿಂಗಳಿಗೆ 5,000ರೂ.ಗಿಂತ ಅಧಿಕ ಮೊತ್ತದ ಬಾಡಿಗೆ ಸ್ವೀಕೃತಿಯನ್ನು ಉದ್ಯೋಗದಾತ ಸಂಸ್ಥೆಗೆ ಸಲ್ಲಿಕೆ ಮಾಡಿದರೆ ಅದಕ್ಕೆ ಕಂದಾಯ ಸ್ಟ್ಯಾಂಪ್ ಹಚ್ಚೋದು ಅಗತ್ಯ.

3.ಎಚ್ ಆರ್ ಎ ಹಾಗೂ ಗೃಹಸಾಲದ ಪ್ರಯೋಜನಗಳು
*ಒಂದೇ ವರ್ಷದಲ್ಲಿಎಚ್ ಆರ್ ಎ ಹಾಗೂ ಗೃಹಸಾಲಕ್ಕೆ ತೆರಿಗೆ ಪ್ರಯೋಜನಗಳನ್ನು ಒಂದೇ ಬಾರಿಗೆ ಕ್ಲೇಮ್ ಮಾಡಲು ಯಾವುದೇ ನಿರ್ಬಂಧವಿಲ್ಲ. ಆದರೆ, ಇದು ನಿಗದಿತ ತೆರಿಗೆ ಕಾನೂನಿಗೆ ಅನುಗುಣವಾಗಿರಬೇಕು ಅಷ್ಟೇ.
*ಎಚ್ ಆರ್ ಎ ಕ್ಲೇಮ್ ಮಾಡಲು ತೆರಿಗೆದಾರ ಬಾಡಿಗೆ ಮನೆಯಲ್ಲಿ ವಾಸ್ತವ್ಯವಿರಬೇಕು. ಹಾಗೆಯೇ ಆತ ವಾಸವಿರುವ ಮನೆ ಆತನ ಮಾಲೀಕತ್ವದಲ್ಲಿರಬಾರದು.
*ಎಚ್ ಆರ್ ಎ ಪ್ರಯೋಜನಗಳನ್ನು ಬಾಡಿಗೆ ಪಾವತಿಸಿದ ನಿಜವಾದ ಅವಧಿಗೆ ಮಾತ್ರ ಲೆಕ್ಕ ಹಾಕಲಾಗುತ್ತದೆಯೇ ವಿನಾ: ಇಡೀ ವರ್ಷಕ್ಕಲ್ಲ.
*ಗೃಹಸಾಲದ ಬಡ್ಡಿದರದ ಮೇಲಿನ ತೆರಿಗೆ ಪ್ರಯೋಜನಗಳನ್ನು ನೀವು ಇಡೀ ವರ್ಷಕ್ಕೆ ಪಡೆಯಬಹುದು. ಒಂದು ವೇಳೆ ನೀವು ಹಣಕಾಸು ವರ್ಷದಕೊನೆಯ ದಿನ ಸ್ವಂತ ಮನೆಯನ್ನು ಹೊಂದಿದರೂ ಈ ಪ್ರಯೋಜನ ಪಡೆಯಬಹುದು. 

ಕ್ರೆಡಿಟ್ ಕಾರ್ಡ್ ಬಳಕೆ ಮೇಲೂ ತೆರಿಗೆ ಬೀಳುತ್ತಾ? ಯಾವಾಗ ಆದಾಯ ತೆರಿಗೆ ಇಲಾಖೆ ಇಂಥ ವೆಚ್ಚಗಳ ಪರಿಶೀಲನೆ ನಡೆಸುತ್ತೆ?

4.ವಾರ್ಷಿಕ 50,000ರೂ. ಮೀರಿದ ಬಾಡಿಗೆ
ವೇತನ ಪಡೆಯೋ ಉದ್ಯೋಗಿಗಳು ಪಾವತಿಸುತ್ತಿರುವ ಬಾಡಿಗೆ ತಿಂಗಳಿಗೆ 50,000ರೂ. ಮೀರಿದ್ದರೆ ಶೇ.5ರಷ್ಟು ಟಿಡಿಎಸ್ ಕಡಿತವಾಗಿ ಅದನ್ನು ಸೆಕ್ಷನ್ 194IB ಅನ್ವಯ ಠೇವಣಿಯಿಡಬೇಕು. ಫಾರ್ಮ್ 26QC ಠೇವಣಿ ಮಾಹಿತಿ ನೀಡಬೇಕು.

5.ಬೋಗಸ್ ಕಡಿತಗಳು ಹಾಗೂ ಕ್ಲೇಮ್ ಗಳು
ನಿಮಗೆ ಅನ್ವಯಿಸದ ಕಡಿತಗಳನ್ನು ಕ್ಲೇಮ್ ಮಾಡಬೇಡಿ. ನಿಮ್ಮ ಫಾರ್ಮ್ 16ನಲ್ಲಿ ಎಚ್ ಆರ್ ಎ ಅನ್ನು ಸರಿಯಾಗಿ ನಮೂದಿಸದಿದ್ರೆ ಅದು ಆದಾಯ ತೆರಿಗೆ ಇಲಾಖೆಯ ಗಮನ ಸೆಳೆಯುವ ಸಾಧ್ಯತೆಯಿದೆ. 

click me!