ಯಶಸ್ಸು ಬೇಕಂದ್ರೆ ವಾರಕ್ಕೆ 70 ಗಂಟೆ ಕೆಲಸ ಮಾಡಿ; ಮೂರ್ತಿ ಹೇಳಿಕೆ ಬೆಂಬಲಿಸಿದ ನೌಕ್ರಿ ಡಾಟ್ ಕಾಮ್ ಬಾಸ್!

By Suvarna NewsFirst Published Jan 17, 2024, 3:05 PM IST
Highlights

ಭಾರತೀಯರು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎಂಬ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಹೇಳಿಕೆ ಚರ್ಚೆ ಹುಟ್ಟು ಹಾಕಿತ್ತು. ಈಗ ನೌಕ್ರಿ ಡಾಟ್ ಕಾಮ್ ಬಾಸ್ ಸಂಜೀವ್ ಬಿಖ್ಚಂದಾನಿ ಕೂಡಾ ಇದೇ ಮಾತನ್ನು ಹೇಳಿದ್ದಾರೆ. ಹಾಗಿದ್ರೆ ಇದು ನಿಜವಾಗಿಯೂ ಯಶಸ್ಸಿನ ಗುಟ್ಟಾ?

ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರು 'ವಾರಕ್ಕೆ 70-ಗಂಟೆಗಳ ಕೆಲಸ' ಕುರಿತು ಮಾತನಾಡಿದಾಗಿನಿಂದ, ಭಾರತದಲ್ಲಿ ಇದರ ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಲೇ ಇದೆ. ಇದೀಗ 
ಭಾರತದಲ್ಲಿನ ಪ್ರಮುಖ ಉದ್ಯೋಗ ಹುಡುಕಾಟ ವೇದಿಕೆಯಾದ Naukri.com ನ ಅಧ್ಯಕ್ಷರಾದ ಸಂಜೀವ್ ಬಿಖ್ಚಂದಾನಿ ಕೂಡಾ ಮೂರ್ತಿಯವರ ಮಾತನ್ನು ಬೆಂಬಲಿಸಿದ್ದಾರೆ. ಭಾರತದಲ್ಲಿ, ನೀವು ಯಶಸ್ವಿಯಾಗಬೇಕಾದರೆ ನೀವು ವಾರಕ್ಕೆ 70 ಗಂಟೆಗಳನ್ನು ಹಾಕಬೇಕಾಗುತ್ತದೆ ಎಂದು ಬಿಖ್ಚಂದಾನಿ ಒತ್ತಿ ಹೇಳಿದ್ದಾರೆ.

'ನೀವು ಸಂಜೆ 5 ಗಂಟೆಗೆ ಮುಗಿಯಿತೆಂದು ಎದ್ದು ಹೋಗಬಾರದು. ನೀವು ಶನಿವಾರ, ಭಾನುವಾರ ನೆಪ ಹೇಳಿ ವಾರಾಂತ್ಯದಲ್ಲಿ ಕೆಲಸ ಮಾಡೋಲ್ಲ ಎನ್ನಕೂಡದು. ನೀವು ಯಶಸ್ವಿಯಾಗಲು ಬಯಸಿದರೆ ಅದಕ್ಕಾಗಿ ಕೆಲಸ ಮಾಡಲೇಬೇಕು' ಎಂದು ಬಿಖ್ಚಂದಾನಿ ಇಂಡಿಯನ್ ಸಿಲಿಕಾನ್ ವ್ಯಾಲಿ ಪಾಡ್‌ಕ್ಯಾಸ್ಟ್‌ನಲ್ಲಿ ಹೇಳಿದ್ದಾರೆ.

ಕೇವಲ1.6ಲಕ್ಷ ರೂ. ಹೂಡಿಕೆಯೊಂದಿಗೆ ಅಮೆರಿಕದಲ್ಲಿ ಉದ್ಯಮ ಪ್ರಾರಂಭಿಸಿದ ಭಾರತೀಯ ಮಹಿಳೆ ಈಗ ಬಿಲಿಯನೇರ್

ಒಬ್ಬ ವಾಣಿಜ್ಯೋದ್ಯಮಿಯು ತನ್ನ ಸ್ಟಾರ್ಟಪ್ ಅನ್ನು ನಿರ್ಮಿಸುತ್ತಿರುವ ಆರಂಭಿಕ ವರ್ಷಗಳಲ್ಲಿ ಆ ಹೆಚ್ಚುವರಿ ಪ್ರಯತ್ನವನ್ನು ಸಂಪೂರ್ಣವಾಗಿ ಹಾಕಬೇಕಾಗುತ್ತದೆ ಎಂದು ಅವರು ಒತ್ತಿ ಹೇಳಿದ್ದಾರೆ.

'ಮೊದಲ 5-10 ವರ್ಷಗಳಲ್ಲಿ ಈ ಕೆಲಸದ ನೀತಿಯನ್ನು ಹೊಂದದೆಯೇ ಯಶಸ್ವಿಯಾದ ಒಬ್ಬೇ ಒಬ್ಬ ವ್ಯಕ್ತಿಯನ್ನು ತೋರಿಸಿ. ಅದು ಸಾಧ್ಯವೇ ಇಲ್ಲ. ವಾರಕ್ಕೆ 70 ಗಂಟೆ ಮಾಡಲೇಬೇಕೆಂದಲ್ಲ, ಮಾಡಬೇಕಾದ ಸಂದರ್ಭಕ್ಕೆ ಸದಾ ಸಿದ್ಧರಿರಬೇಕು ಎಂಬುದು ನನ್ನ ಮಾತಿನ ಅರ್ಥ' ಎಂದು ಬಿಖ್ಚಂದಾನಿ ಹೇಳಿದ್ದಾರೆ. 

ಉದ್ಯಮದಲ್ಲಿ ಅಪ್ಪನನ್ನೇ ಮೀರಿಸ್ತಾಳ ಮಗಳು! ಜರ್ಮನ್ ಬ್ಯೂಟಿ ಬ್ರಾಂಡ್‌ ಜೊತೆ ಒಪ್ಪಂದ ಮಾಡ್ಕೊಂಡ ಇಶಾ ಅಂಬಾನಿ

ಯಶಸ್ವಿ ವ್ಯಕ್ತಿಗಳ ಗುಟ್ಟು
'ನೀವು ಇದೀಗ ಭಾರತದಲ್ಲಿ ಯಶಸ್ವಿಯಾಗಿರುವ ಯಾವುದೇ ಉದ್ಯಮಿಗಳನ್ನು ನೋಡಿ, ನೀವು ಎಷ್ಟು ಶ್ರಮಿಸಿದ್ದೀರಿ ಎಂದು ಕೇಳಿ. ನಾನು ತುಂಬಾ ಕಷ್ಟಪಟ್ಟಿದ್ದೇನೆ ಎಂದೇ ಅವರು ಹೇಳುತ್ತಾರೆ. ಏಕೆಂದರೆ, ಏನಾದರೂ ಸಾಧನೆ ಮಾಡಲು ಬೇರೆ ಮಾರ್ಗವಿಲ್ಲ. ಭಾರತದಲ್ಲಿ ಏನನ್ನಾದರೂ ಮಾಡಲು ನೀವು ಗಂಟೆಗಳಲ್ಲಿ ಕೆಲಸ ಮಾಡಬೇಕಾಗಿದೆ. ನೀವು ಸ್ಟಾರ್ಟ್ಅಪ್ ಮಾಡುತ್ತಿದ್ದರೆ, ಜೀವನ- ಕೆಲಸ ಬೇರೆ ಬೇರೆ ಎಂದು ನೋಡಬೇಡಿ ಎಂದು ಕಿವಿಮಾತು ಹೇಳಿದ್ದಾರೆ.

click me!