ಅಮೆರಿಕದಲ್ಲಿ ಭಾರತೀಯ ಮಹಿಳೆಯೊಬ್ಬರು ಉದ್ಯಮ ಸ್ಥಾಪಿಸಿ ಯಶಸ್ಸು ಕಾಣುವ ಜೊತೆಗೆ ಬಿಲಿಯನೇರ್ ಕೂಡ ಆಗಿದ್ದಾರೆ. ಅಮೆರಿಕದ ಶ್ರೀಮಂತ ಸೆಲ್ಫ್ ಮೇಡ್ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಇವರ ಯಶೋಗಾಥೆ ಇಲ್ಲಿದೆ.
Business Desk: ಅಮೆರಿಕದಲ್ಲಿ ಉದ್ಯಮ ಪ್ರಾರಂಭಿಸಿ ಯಶಸ್ಸು ಕಂಡ ಭಾರತೀಯರು ಹಲವರಿದ್ದಾರೆ. ಅಂಥವರಲ್ಲಿ ನೀರಜಾ ಸೇಥಿ ಕೂಡ ಒಬ್ಬರು. ಕೇವಲ 1.6ಲಕ್ಷ ರೂ. ಬಂಡವಾಳದೊಂದಿಗೆ ಅಮೆರಿಕದ ಮಿಚಿಗನ್ ಅಪಾರ್ಟ್ ಮೆಂಟ್ ವೊಂದರಲ್ಲಿ ಪತಿ ಭರತ್ ದೇಸಾಯಿ ಅವರೊಂದಿಗೆ ಸೇರಿ ಪ್ರಾರಂಭಿಸಿದ ಕಂಪನಿ ಬಹುಕೋಟಿ ಸಂಸ್ಥೆಯಾಗಿ ಬೆಳೆದು ನಿಂತಿದೆ. 2023ರಲ್ಲಿ ಫೋರ್ಬ್ಸ್ ಪ್ರಕಟಿಸಿದ್ದ 'ಅಮೆರಿಕದ 100 ಶ್ರೀಮಂತ ಸೆಲ್ಫ್ ಮೇಡ್ ಮಹಿಳೆಯರ' ಪಟ್ಟಿಯಲ್ಲಿ ನೀರಜಾ ಸೇಥಿ 25ನೇ ಸ್ಥಾನದಲ್ಲಿದ್ದಾರೆ. ಇದಕ್ಕೂ ಮುನ್ನ ಹಲವು ಬಾರಿ ಅವರು ಫೋರ್ಬ್ಸ್ ಶ್ರೀಮಂತ ಸೆಲ್ಫ್ ಮೇಡ್ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ದೆಹಲಿ ಮೂಲದ ನೀರಜಾ ಸೇಥಿ ಅಮೆರಿಕದ ಜನಪ್ರಿಯ ಮಹಿಳಾ ಉದ್ಯಮಿಗಳಲ್ಲಿ ಒಬ್ಬರಾಗಿದ್ದಾರೆ. ಇವರ ನಿವ್ವಳ ಸಂಪತ್ತು 8,228 ಕೋಟಿ ರೂ. ಎಂದು ಅಂದಾಜಿಸಲಾಗಿದೆ.
ದೆಹಲಿ ಮೂಲದ ಸೇಥಿ
ನೀರಜಾ ಸೇಥಿ ಅವರು ದೆಹಲಿ ಮೂಲದವರಾಗಿದ್ದಾರೆ. 1955ರಲ್ಲಿ ದೆಹಲಿಯಲ್ಲಿ ಜನಿಸಿದ ಇವರು, ದೆಹಲಿ ವಿಶ್ವವಿದ್ಯಾಲಯದಿಂದ ಗಣಿತಶಾಸ್ತ್ರದಲ್ಲಿ ತನ್ನ ಪದವಿ ಪೂರ್ಣಗೊಳಿಸಿದರು. ಹಾಗೆಯೇ ಓಕ್ಲಾಂಡ್ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್ ನಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದರು. ಹಾಗೆಯೇ ನೀರಜಾ ಅವರು ದೆಹಲಿ ವಿಶ್ವವಿದ್ಯಾಲಯದಿಂದ ಆಪರೇಷನ್ ರಿಸರ್ಚ್ ನಲ್ಲಿ ಎಂಬಿಎ ಪದವಿ ಕೂಡ ಪಡೆದಿದ್ದಾರೆ.
ಈಕೆ ಸಂಪತ್ತಿನಲ್ಲಿ ಮಾತ್ರವಲ್ಲ,ಮಾನವೀಯತೆಯಲ್ಲೂ ಶ್ರೀಮಂತೆ ; ಬಿಲಿಯನೇರ್ ಆದ್ರೂ ಈಕೆ ಬಗ್ಗೆ ತಿಳಿದಿರೋರು ಕಡಿಮೆ
ಟಾಟಾ ಸಂಸ್ಥೆಯಲ್ಲಿ ವೃತ್ತಿ
ನೀರಜಾ ಸೇಥಿ ಭಾರತದ ಜನಪ್ರಿಯ ಉದ್ಯಮಿ ರತನ್ ಟಾಟಾ ಅವರ ಕಂಪನಿಯಲ್ಲಿ ಕೆಲವು ಕಾಲ ಕಾರ್ಯನಿರ್ವಹಿಸಿದ್ದರು. ವಿಶೇಷ ಅಂದ್ರೆ ಅವರ ಪತಿ ಭರತ್ ದೇಸಾಯಿ ಕೂಡ ಇದೇ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದರು. ಮುಂದೆ ಇವರಿಬ್ಬರು ಜೀವನ ಸಂಗಾತಿಗಳಾಗುವ ಜೊತೆಗೆ ಉದ್ಯಮದಲ್ಲಿ ಕೂಡ ಪಾಲುದಾರರಾಗುತ್ತಾರೆ. ಟಾಟಾ ಕನ್ಸಲ್ಟೆನ್ಸಿಯಲ್ಲಿ (ಟಿಸಿಎಸ್) ಕಾರ್ಯನಿರ್ವಹಿಸಿದ ಇವರು ಟಾಟಾ ಅವರಿಂದ ಸಾಕಷ್ಟು ಪ್ರೇರಣೆ ಪಡೆದರು. ಅವರಂತೆ ಉದ್ಯಮ ರಂಗದಲ್ಲಿ ಏನಾದರೂ ಸಾಧನೆ ಮಾಡುವ ಕನಸು ಕಂಡರು. ಪರಿಣಾಮ ಉತ್ತಮ ವೇತನದ ಉದ್ಯೋಗಕ್ಕೆ ರಾಜೀನಾಮೆ ನೀಡಿ, ಸ್ವಂತ ಉದ್ಯಮ ಪ್ರಾರಂಭಿಸಲು ಸಿದ್ಧರಾದರು.
ಅಪಾರ್ಟ್ಮೆಂಟ್ ನಲ್ಲಿ ಕಂಪನಿ
ನೀರಜಾ ಸೇಥಿ ಅವರಿಗೆ ಸ್ವಂತ ಉದ್ಯಮ ಸ್ಥಾಪಿಸಬೇಕೆಂಬ ಬಯಕೆಯಿತ್ತು. ಹೀಗಾಗಿ ಪತಿ ಭರತ್ ದೇಸಾಯಿ ಅವರೊಂದಿಗೆ ಸೇರಿ 1980ರಲ್ಲಿ ಐಟಿ ಕನ್ಸಲ್ಟಿಂಗ್ ಹಾಗೂ ಹೊರಗುತ್ತಿಗೆ ಸಂಸ್ಥೆ ಸಿಂಟೆಲ್ ಅನ್ನು ತಮ್ಮ ಅಪಾರ್ಟ್ಮೆಂಟ್ ನಲ್ಲೇ ಪ್ರಾರಂಭಿಸಿದರು. ಈ ಕಂಪನಿ ಸ್ಥಾಪಿಸಲು ಅವರು ಮಾಡಿದ ಹೂಡಿಕೆ ಕೇವಲ 1,66,227 ರೂ. (USD 2000).ಕಂಪನಿ ಸ್ಥಾಪನೆಯಾದ ಕ್ಷಣದಿಂದ ನೀರಜಾ ಅದರ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸಿದರೆ, ಅವರ ಪತಿ ಭರತ್ ದೇಸಾಯಿ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದಾರೆ.
ಯಶಸ್ಸಿನ ಹಾದಿಯಲ್ಲಿ ಸಾಗಿದ ಉದ್ಯಮ
ನೀರಜಾ ಸೇಥಿ ಅವರ ಸಿಂಟೆಲ್ ಸಂಸ್ಥೆ ಕೆಲವೇ ಸಮಯದಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿತು. ಎಲ್ಲರ ನಿರೀಕ್ಷೆಗಳನ್ನು ಮೀರಿ ಬೆಳವಣಿಗೆ ದಾಖಲಿಸಿತು. ಆ ಮೂಲಕ ಐಟಿ ವಲಯದಲ್ಲಿ ಜಾಗತಿಕ ನಾಯಕನ ಸ್ಥಾನವನ್ನು ಅಲಂಕರಿಸಿತು. ಅಲ್ಲದೆ, ನೀರಜಾ ಸೇಥಿ ಅಮೆರಿಕದ ಜನಪ್ರಿಯ ಮಹಿಳಾ ಉದ್ಯಮಿಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡರು ಕೂಡ.
ಕೇವಲ ಆರು ತಿಂಗಳು ಕೆಲಸ ಮಾಡಿ ಕೋಟಿ ಗಳಿಸ್ತಾಳೆ ಈಕೆ! ಮಾಡೋದೇನು?
ಕಂಪನಿ 3.4 ಬಿಲಿಯನ್ ಡಾಲರ್ ಗೆ ಮಾರಾಟ
ನೀರಜಾ ಸೇಥಿ ಸಿಂಟೆಲ್ ಕಂಪನಿಯನ್ನು 2018ರ ಅಕ್ಟೋಬರ್ ನಲ್ಲಿ ಫ್ರೆಂಚ್ ಐಟಿ ಸಂಸ್ಥೆ ಅಟೋಸ್ ಎಸ್ ಇ ಸೆಂಟೆಲ್ ಸಂಸ್ಥೆಗೆ 3.4 ಬಿಲಿಯನ್ ಡಾಲರ್ ಗೆ ಮಾರಾಟ ಮಾಡಿದ್ದರು. ಈ ಸಂದರ್ಭದಲ್ಲಿ ಸೇಥಿ ತಮ್ಮ ಷೇರುಗಳಿಗೆ 510 ಮಿಲಿಯನ್ ಡಾಲರ್ (42,38,47,48,500ರೂ.) ಗಳಿಸಿದ್ದರು. ಪ್ರಸ್ತುತ ನೀರಜಾ ಸೇಥಿ ಅವರ ಸಂಪತ್ತು 8,228 ಕೋಟಿ ರೂ. ಇದೆ.