ಗುಡ್ ಬೈ 2018: ದಿನವೂ ಏಕೆ ಪೆಟ್ರೋಲ್ ಸುದ್ದಿ?, ಮಾರುಕಟ್ಟೆಯಷ್ಟೇ ನಾವೂ ಜಿದ್ದಿ!

By nikhil vk  |  First Published Dec 25, 2018, 1:17 PM IST

2018 ರ ಅಂತ್ಯಕ್ಕೆ ತೈಲ ಬೆಲೆಗಳ ಪ್ರಾಮುಖ್ಯತೆಯ ಹಿನ್ನೋಟ| ಪೆಟ್ರೋಲ್, ಡೀಸೆಲ್ ಬೆಲೆಗಳ ಹಾವು ಏಣಿ ಆಟ ತಂದಿತ್ತು ಸಂಕಟ| ಏರಿಕೆಯತ್ತ ಮುಖ ಮಾಡಿದ್ದ ತೈಲ ಬೆಲೆ ಕಂಡು ದಂಗಾಗಿದ್ದ ಸಾಮಾನ್ಯ| ಅಂತಾರಾಷ್ಟ್ರೀಯ ವಿದ್ಯಮಾನಗಳ ಫಲವಾಗಿ ಏರಿಕೆ ಕಂಡಿದ್ದ ತೈಲ ಬೆಲೆ| ವರ್ಷಪೂರ್ತಿ ದೇಶದ ಗಮನ ಸೆಳೆದಿದ್ದ ತೈಲ ಬೆಲೆ ಏರಿಕೆ ಸುದ್ದಿ| ಜನತೆಯಲ್ಲಿ ಮತ್ತೆ ನಿರಾಳತೆ ತಂದ ತೈಲ ಬೆಲೆಯಲ್ಲಿನ ಸ್ಥಿತ್ಯಂತರ| 2019ಕ್ಕೆ ಹೊಸ ಭರವಸೆಯೊಂದಿಗೆ ಹೆಜ್ಜೆ ಹಾಕಲಿದೆ ದೇಶ


ಬೆಂಗಳೂರು(ಡಿ.25): 2018 ಇನ್ನೇನು ಮುಗಿಯುತ್ತಾ ಬಂದಿದೆ. ಭೂಮಿಯ ಆಯಸ್ಸಿಗೆ, ಮಾನವ ಜನಾಂಗದ ಇತಿಹಾಸಕ್ಕೆ ಮತ್ತೊಂದು ವರ್ಷ ಸೇರ್ಪಡೆಯಾಗಲಿದೆ. 2019ರ ರೂಪದಲ್ಲಿ ಮತ್ತೊಂದು ಹೊಸ ವರ್ಷ ನಮ್ಮ ಜೀವನದಲ್ಲಿ ಪ್ರವೇಶ ಪಡೆಯಲಿದೆ.

ವರ್ಷಾಂತ್ಯದಲ್ಲಿ ಪ್ರತಿಯೊಬ್ಬರೂ ತಮ್ಮ ಜೀವನವನ್ನೊಮ್ಮೆ ರಿವೈಂಡ್ ಮಾಡಿ ನೋಡುವುದುಂಟು. ಏನಾಯ್ತು?, ಏನಾಗಬೇಕಿತ್ತು?, ಸರಿ ಏನು?, ತಪ್ಪು ಮಾಡಿದ್ದೆಲ್ಲಿ?, ಹೀಗೆ ವರ್ಷದ ರಿಪೋರ್ಟ್ ಕಾರ್ಡ್ ಮನಸ್ಸಲ್ಲೇ ರೆಡಿ ಮಾಡಲಾಗುತ್ತದೆ.

Tap to resize

Latest Videos

ಇಂದಿನ ಪೆಟ್ರೋಲ್ ದರ: ಹಿಂದೆ ಕೇಳಿಲ್ಲ, ಮುಂದೆ ಕೇಳೊದೂ ಬೇಡ!

ಹಾಗೆ ದೇಶ ಕೂಡ ಒಂದು ವರ್ಷದ ಅವಧಿಯಲ್ಲಿ ತಾನು ಮುನ್ನಡೆದ ಹಾದಿಯ ಕುರಿತು ಒಮ್ಮೆ ಗ್ಲ್ಯಾನ್ಸ್ ಮಾಡುತ್ತದೆ. ಹೀಗೆ ದೇಶದ ವಾರ್ಷಿಕ ಆಗುಹೋಗುಗಳ ಬಗ್ಗೆ ಹಿಂತಿರುಗಿ ನೋಡಿದರೆ ಪ್ರಮುಖವಾಗಿ ಕಾಣ ಸಿಗುವುದು ತೈಲ ಬೆಲೆಯ ಹಾವು ಏಣಿ ಆಟ.

ಹೌದು, 2018ರಲ್ಲಿ ಬಹುಶಃ ಈ ದೇಶದ ನಾಗರಿಕ ಪೆಟ್ರೋಲ್, ಡೀಸೆಲ್ ಬೆಲೆಗಳ ಕುರಿತು ತಲೆ ಕೆಡಿಸಿಕೊಂಡಷ್ಟು ಬೇರಾವ ವಿಷಯಗಳತ್ತ ಗಮನ ಹರಿಸಿಲ್ಲ. ಅದರಲ್ಲೂ ಅಂತಾರಾಷ್ಟ್ರೀಯ ವಿದ್ಯಮಾನಗಳ ಪರಿಣಾಮದಿಂದಾಗಿ, ದೇಶದಲ್ಲಿ ತೈಲ ಬೆಲೆ ಹೆಚ್ಚಳವಾದಾಗ ಜನ ತುಸು ಗಲಿಬಿಲಿಗೊಂಡಿದ್ದು ನಿಜ.

ಅದರಂತೆ ಕೇಂದ್ರ ಸರ್ಕಾರ ಈ ಎಲ್ಲಾ ಅಂತಾರಾಷ್ಟ್ರೀಯ ಒತ್ತಡಗಳನ್ನು ಮೀರಿ ತೈಲ ಬೆಲೆಯಲ್ಲಿ ಹತೋಟಿ ತಂದಾಗ ಜನ ಅಷ್ಟೇ ಖುಷಿಯಾಗಿದ್ದು ಸುಳ್ಳಲ್ಲ. ಹೀಗಾಗಿ 2018ರಲ್ಲಿ ತೈಲ ಬೆಲೆಗಳ ಈ ಹಾವು ಏಣಿ ಆಟದತ್ತ ಒಮ್ಮೆ ಗಮನಹರಿಸುವುದಾದರೆ....

ಮೋದಿ ಗುಡುಗಿದ್ದರು, ದೇಶ ಕೇಳಿಸಿಕೊಂಡಿತ್ತು:

ಅದು 2014 ರ ಲೋಕಸಭೆ ಚುನಾವಣೆ ಸಂದರ್ಭ. ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ, ಕಾಲಿಗೆ ಚಕ್ರ ಕಟ್ಟಿಕೊಂಡಿರುವಂತೆ ದೇಶಾದ್ಯಂತ ಸಂಚರಿಸಿ ಅಂದಿನ ಯುಪಿಎ ಆಡಳಿತದ ಬೆಲೆ ಏರಿಕೆ ಮತ್ತು ಭ್ರಷ್ಟಾಚಾರದ ಕುರಿತು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದರು.

ಬೆಲೆ ಏರಿಕೆ ಕುರಿತು ಪ್ರಸ್ತಾವನೆ ಮಾಡುತ್ತಿದ್ದಾಗ ಮೋದಿ ಪ್ರಮುಖವಾಗಿ ತೈಲ ಬೆಲೆ ಏರಿಕೆಯನ್ನು ಪ್ರಸ್ತಾಪಿಸುತ್ತಿದ್ದರು. ಅಲ್ಲದೇ ಬಿಜೆಪಿ ಅಧಿಕಾರಕ್ಕೆ ಬಂದಾಗ ತೈಲ ಬೆಲೆ ಮೇಲೆ ನಿಯಂತ್ರಣ ಸಾಧಿಸುವುದಾಗಿ ಭರವಸೆ ನೀಡಿದ್ದರು. ಬಿಜೆಪಿ ಅಧಿಕಾರಕ್ಕೆ ಬಂದಿತು. ಮೋದಿ ಪ್ರಧಾನಿಯೂ ಆದರು.

ಅದರಂತೆ ಎನ್‌ಡಿಎ ಆಡಳಿತದ ಮೂರು ವರ್ಷಗಳ ಅವಧಿಯಲ್ಲಿ ದೇಶದಲ್ಲಿ ತೈಲ ಬೆಲೆಗಳ ಕುರಿತು ಅಷ್ಟಾಗಿ ಚರ್ಚೆಯಾಗಲಿಲ್ಲವಾದರೂ, 2018ರಲ್ಲಿ ನಡೆದ ಹಲವು ಅಂತಾರಾಷ್ಟ್ರೀಯ ವಿದ್ಯಮಾನಗಳು ಈ ಕುರಿತಾದ ಚರ್ಚೆಗೆ ಇಂಬು ನೀಡಿತು.

ಅದರಲ್ಲೂ 2018ರ ಮಧ್ಯದಲ್ಲಿ ತೈಲ ಬೆಲೆಗಳಲ್ಲಿ ಏಕಾಏಕಿ ಏರಿಕೆ ಕಾಣಲಾರಂಭಿಸಿತು. ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಲೀಟರ್ ಪೆಟ್ರೋಲ್ ಬೆಲೆ 90 ರೂ,. ಗಡಿ ದಾಟಿದ್ದು ನಿಜಕ್ಕೂ ಜನಸಾಮಾನ್ಯನ ನಿದ್ದೆ ಕಸಿದಿತ್ತು.

ಇರಾನ್ ಮೇಲಿನ ಅಮೆರಿಕ ನಿರ್ಬಂಧ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದರದಲ್ಲಿ ಏರಿಕೆ ಹಾಗೂ ಕೆಲವು ದೇಶೀಯ ವಿದ್ಯಮಾನಗಳ ಫಲವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಏರಿಕೆ ಕಾಣಲಾರಂಭಿಸಿತು.

ಪೆಟ್ರೋಲ್ ಮತ್ತು ರಾಜಕೀಯ:

ಇನ್ನು ತೈಲ ಬೆಲೆ ಏರಿಕೆ ಎಂದರೆ ರಾಜಕೀಯ ಸುಮ್ಮನಿರಲು ಹೇಗೆ ಸಾಧ್ಯ?. ತೈಲ ಬೆಲೆ ಇಳಿಕೆಯ ಭರವಸೆ ನೀಡಿ ಅಧಿಕಾರಕ್ಕೆ ಬಂದ ಪ್ರಧಾನಿ ಮೋದಿ ಇದೀಗ ಜನತೆಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿ ಪ್ರತಿಪಕ್ಷಗಳು ಮೋದಿ ವಿರುದ್ಧ ಹರಿಹಾಯ್ದವು. ಪ್ರತಿಭಟನೆಗಳೂ ನಡೆದವು.

ಇಂದು ಭಾರತ್ ಬಂದ್ : ಯಾವ ಸೇವೆ ವ್ಯತ್ಯಯ

ಅದರಂತೆ 2018 ರ ಮಧ್ಯಂತರ ಅವಧಿಯಲ್ಲಿ ತೈಲ ಬೆಲೆ ಏರಿಕೆ ಕುರಿತು ಸರ್ಕಾರದ ಬಳಿಯೂ ಸ್ಪಷ್ಟ ಸಮರ್ಥನೆ ಇರಲಿಲ್ಲವಾದರೂ, ಆ ನಂತರ ನಡೆದ ಹಲವು ಬೆಳವಣಿಗೆಗಳು ಮತ್ತು ಬೆಲೆಯಲ್ಲಿನ ಸ್ಥಿತ್ಯಂತರ ಪ್ರತಿಪಕ್ಷಗಳಿಗೆ ತಿರುಗೇಟು ನೀಡಲು ಅನವು ಮಾಡಿಕೊಟ್ಟವು.

ಸೆಪ್ಟೆಂಬರ್ 2018:

ವಾಣಿಜ್ಯ ರಾಜಧಾನಿ ಮುಂಬೈ ಮತ್ತು ಮಹಾರಾಷ್ಟ್ರದ ಹಲವು ನಗರಗಳಲ್ಲಿ ಪೆಟ್ರೋಲ್ ಬೆಲೆ 91 ರ ಗಡಿ ದಾಟುವ ಮೂಲಕ ಇಡೀ ದೇಶವನ್ನು ಆತಂಕಕ್ಕೆ ತಳ್ಳಿತ್ತು. ಇನ್ನೇನು ಪೆಟ್ರೋಲ್ ಬೆಲೆ 100 ರೂ. ದಾಟಲಿದೆ ಎಂದೇ ಜನ ಆಗ ಮಾತನಾಡಿಕೊಳ್ಳುತ್ತಿದ್ದರು.

ನವೆಂಬರ್ 2018: ಇನ್ನು ಕೇವಲ 2 ತಿಂಗಳ ಅವಧಿಯಲ್ಲಿ ಇದೇ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಪೆಟ್ರೋಲ್ ಬೆಲೆ 75ರ ಗಡಿಗೆ ಮರಳಿ ತಲುಪುವ ಮೂಲಕ, ದೇಶದ ಜನರಲ್ಲಿ ಮೂಡಿದ್ದ ಆತಂಕವನ್ನು ದೂರ ಮಾಡಿತು.

ಅಂತಾರಾಷ್ಟ್ರೀಯ ವಿದ್ಯಮಾನಗಳು:

ಅದರಲ್ಲೂ ಇರಾನ್ ಮೇಲೆ ಅಮೆರಿಕ ಆರ್ಥಿ ದಿಗ್ಬಂಧನ ಹೇರಿದ ಬಳಿಕ, ಇರಾನ್‌ನಿಂದ ಭಾರತಕ್ಕೆ ಆಮದಾಗುತ್ತಿದ್ದ ಕಚ್ಚಾತೈಲದ ಮೇಲೆ ಕಾರ್ಮೋಡ ಕವಿದಿತ್ತು. ಇನ್ನು ಮುಂದೆ ಇರಾನ್‌ನಿಂದ ಭಾರತಕ್ಕೆ ಅಗತ್ಯವಿರುವಷ್ಟು ಕಚ್ಚಾತೈಲ ಆಮದಾಗುವುದಿಲ್ಲ ಎಂದು ಜನ ಕೂಡ ಕೊಂಚ ಆತಂಕಗೊಂಡಿದ್ದರು.

ನವೆಂಬರ್ 4ರ ನಿರ್ಬಂಧ ಭೀತಿ: ನಮಗೆ ಇರಾನ್ ತೈಲದ ಗತಿ?

ಆದರೆ ಇರಾನ್ ಕಚ್ಚಾತೈಲದ ಅಗತ್ಯತೆ ಕುರಿತು ಅಮೆರಿಕಕ್ಕೆ ಮನವರಿಕೆ ಮಾಡಿಕೊಟ್ಟ ಪ್ರಧಾನಿ ನರೇಂದ್ರ ಮೋದಿ, ಅಮೆರಿಕದ ದಿಗ್ಬಂಧನದಲ್ಲಿ ಭಾರತಕ್ಕೆ ಕೆಲವು ಸಡಿಲಿಕೆ ಪಡೆಯುವಲಲಿ ಯಶಸ್ವಿಯಾದರು. ಅಲ್ಲದೇ ಇರಾನ್‌ ಕಚ್ಚಾತೈಲದ ಕೊರತೆಯನ್ನು ನೀಗಿಸಲು ಸೌದಿ ಅರೇಬಿಯಾದೊಂದಿಗೆ ಮಾಡಿಕೊಂಡ ಒಪ್ಪಂದವೂ ದೇಶದ ಜನರ ಪ್ರಶಂಸಗೆ ಪಾತ್ರವಾದವು.

ಹೊಡಿ ಒಂಬತ್: ಇಂಡಿಯಾಗೆ ಇರಾನ್ ಆಯಿಲ್ ಎಂದ ಟ್ರಂಪ್!

ಇರಾನ್ ಕೊಡಲಾರದ್ದು ಸೌದಿ ಕೊಡತ್ತೆ: ನೀವು ಬಿಟ್ಬಿಡಿ ಚಿಂತೆ!

ಕಚ್ಚಾತೈಲ ಪೂರೈಕೆಯ ಅಂತಾರಾಷ್ಟ್ರೀಯ ವೇದಿಕೆಯಾದ ಓಪೆಕ್ ನಲ್ಲೂ ಸದಸ್ಯ ರಾಷ್ಟ್ರವಾಗಿ ಭಾರತ ತನ್ನ ಬೇಡಿಕೆಯನ್ನು ಸಮರ್ಥವಾಗಿ ಮಂಡಿಸಿದ್ದು ವಿಶ್ವದ ಗಮನ ಸೆಳೆದಿದೆ ಎಂದರೆ ಅತಿಶೋಕ್ತಿಯಲ್ಲ.

ಹೊಸ ಭರವಸೆಯತ್ತ:

ಇಷ್ಟೆಲ್ಲಾ ಬೆಳವಣಿಗೆಗೆಳ ಮಧ್ಯ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ತುಸು ಸ್ಥಿತ್ಯಂತರ ಕಂಡು ಬಂದಿದೆ ಎಂದರೆ ತಪ್ಪಲ್ಲ. ವಾಣಿಜ್ಯ ರಾಜಧಾನಿ ಮುಂಬೈನಲ್ಲಿ 90 ರ ಗಡಿ ದಾಟಿದ್ದ ಪೆಟ್ರೋಲ್ ಬೆಲೆ, ಇದೀಗ 70 ರ ಆಸುಪಾಸಿನಲ್ಲಿ ಇದೆ. ಕಳೆದ ಆಗಸ್ಟ್‌ನಿಂದ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಇಳಿಕೆಯಾಗುತ್ತಿದ್ದು, ಇದು 2019ಕ್ಕೆ ಹೊಸ ಭರವಸೆಯನ್ನು ಮೂಡಿಸಿದೆ.

ವರ್ಷಾಂತ್ಯಕ್ಕೆ ಸಿಹಿ ಸುದ್ದಿ: ಡಿಸೆಂಬರ್‌ನಲ್ಲಿ ಪೆಟ್ರೋಲ್ ದರ ಪಾತಾಳಕ್ಕೆ!

ನಿರಂತರವಾಗಿ ಏರಿಕೆಯತ್ತಲೇ ಮುಖ ಮಾಡಿದ್ದ ತೈಲ ಬೆಲೆಗಳು ಇದೀಗ ನಿರಂತರ ಇಳಿಕೆಯತ್ತ ಮುಖ ಮಾಡಿರುವುದು ಜನ ನಿರಾಳರಾಗಿರುವುದಕ್ಕೆ ಸಾಕ್ಷಿ.

ತೈಲ ಬೆಲೆ ಮತ್ತು ಮಾಧ್ಯಮಗಳು:

ಇನ್ನು ತೈಲ ಬೆಲೆ ಏರಿಕೆ ಮತ್ತು ಇಳಿಕೆಯ ಕುರಿತು ನಿಮ್ಮ ಸುವರ್ಣನ್ಯೂಸ್, ಸುವರ್ಣನ್ಯೂಸ್.ಕಾಂ ಸೇರಿದಂತೆ ರಾಜ್ಯದ ಮತ್ತು ದೇಶದ ಪ್ರಮುಖ ರಾಷ್ಟ್ರೀಯ ಮತ್ತು ಪ್ರಾದೇಶಿಕ ಸುದ್ದಿ ವಾಹಿನಿಗಳು, ಇ-ಪತ್ರಿಕೆಗಳು, ದಿನಪತ್ರಿಕೆಗಳು ನಿರಂತರ ಸುದ್ದಿ ಪ್ರಕಟ ಮಾಡುತ್ತಾ, ದೇಶದ ಜನತೆಗೆ ತೈಲ ಬೆಲೆ ಕುರಿತಾದ ಮಾಹಿತಿಯನ್ನು ವರ್ಷಪೂರ್ತಿ ನೀಡಿದ್ದನ್ನು ಇಲ್ಲಿ ಸ್ಮರಿಸಲೇಬೇಕು.

click me!