ನಿರಂತರ ಇಳಿಕೆಯತ್ತ ಮುಖ ಮಾಡಿದ ಚಿನ್ನದ ದರ| ಕಳೆದ ಮೂರು ದಿನಗಳಿಂದ ಗಮನಾರ್ಹ ಇಳಿಕೆ ಕಂಡ ಚಿನ್ನದ ಬೆಲೆ| ವಿಜಯದಶಮಿಯ ಶುಭ ಘಳಿಗೆಯಲ್ಲಿ ಮತ್ತಷ್ಟು ಇಳಿದ ಚಿನ್ನ, ಬೆಳ್ಳಿ ದರ| ಮಲ್ಟಿ ಕಮೋಡಿಟಿ ಎಕ್ಸಚೇಂಜ್'ನಲ್ಲಿ 10 ಗ್ರಾಂ ಚಿನ್ನಕ್ಕೆ 38,060 ರೂ.| ಮಲ್ಟಿ ಕಮೋಡಿಟಿ ಎಕ್ಸಚೇಂಜ್'ನಲ್ಲಿ ಒಂದು ಕೆಜಿ ಬೆಳ್ಳಿಗೆ 45,160 ರೂ.| ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಚಿನ್ನದ ದರದಲ್ಲಿ ಗಮನಾರ್ಹ ಇಳಿಕೆ|
ನವದೆಹಲಿ(ಅ.08): ನಿರಂತರವಾಗಿ ಇಳಿಕೆಯತ್ತ ಮುಖ ಮಾಡಿರುವ ಚಿನ್ನದ ಬೆಲೆಯುಲ್ಲಿ ಇಂದೂ ಕೂಡ ಗಮನಾರ್ಹ ಇಳಿಕೆ ಕಂಡು ಬಂದಿದ್ದು, ಹಬ್ಬದ ಸಂಭ್ರಮದಲ್ಲಿದ್ದವರ ಸಂತಸವನ್ನು ಇಮ್ಮಡಿಗೊಳಿಸಿದೆ.
ಕಳೆದ ಮೂರು ದಿನಗಳಿಂದ ಗಮನಾರ್ಹ ಇಳಿಕೆ ಕಂಡಿದ್ದ ಚಿನ್ನದ ದರ, ವಿಜಯದಶಮಿಯ ಶುಭ ಘಳಿಗೆಯಲ್ಲಿ ಮತ್ತಷ್ಟು ಇಳಿಕೆ ಕಂಡಿದೆ. ಚಿನ್ನದ ದರದಲ್ಲಿ ಒಟ್ಟು ಶೇ.0.71ರಷ್ಟು ಇಳಿದಿದ್ದು, ಮಲ್ಟಿ ಕಮೋಡಿಟಿ ಎಕ್ಸಚೇಂಜ್'ನಲ್ಲಿ 10 ಗ್ರಾಂ ಚಿನ್ನಕ್ಕೆ 38,060 ರೂ. ಆಗಿದೆ.
undefined
ಅದರಂತೆ ಬೆಳ್ಳಿ ಬೆಲೆಯಲ್ಲೂ ಇಳಿಕೆಯಾಗಿದ್ದು, ಖರೀಧಿಯ ಭರಾಟೆ ಜೋರಾಗಿದೆ. ಬೆಳ್ಳಿ ದರದಲ್ಲಿ ಒಟ್ಟು ಶೇ.0.48ರಷ್ಟು ಇಳಿದಿದ್ದು, ಮಲ್ಟಿ ಕಮೋಡಿಟಿ ಎಕ್ಸಚೇಂಜ್'ನಲ್ಲಿ ಒಂದು ಕೆಜಿ ಬೆಳ್ಳಿಗೆ 45,160 ರೂ. ಆಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಚಿನ್ನದ ದರದಲ್ಲಿ ಗಮನಾರ್ಹ ಇಳಿಕೆ ಕಂಡಿದ್ದು, ಚಿನ್ನದ ದರದಲ್ಲಿ ಒಟ್ಟು ಶೇ.0.02ರಷ್ಟು ಇಳಿಕೆ ಕಂಡ ಪರಿಣಾಮ ಪ್ರತಿ ಔನ್ಸ್'ಗೆ 1,489.80 ಡಾಲರ್ ಆಗಿದೆ.
ಅಕ್ಟೋಬರ್ 8ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: