ಒಂದು ತಿಂಗಳಲ್ಲಿ ಒಟ್ಟು 1,800 ರೂ. ಇಳಿದ ಬಂಗಾರದ ಬೆಲೆ!

By Web DeskFirst Published Oct 17, 2019, 1:24 PM IST
Highlights

ಚಿನ್ನ-ಬೆಳ್ಳಿ ದರದಲ್ಲಿ ಗಣನೀಯ ಇಳಿಕೆ| ಅಕ್ಟೋಬರ್ ತಿಂಗಳಲ್ಲಿ ನಿರಂತರ ಇಳಿಕೆ ಕಾಣುತ್ತಿರುವ ಚಿನ್ನದ ಬೆಲೆ| ಮಲ್ಟಿ ಕಮೋಡಿಟಿ ಎಕ್ಸಚೇಂಜ್’ನಲ್ಲಿ ಚಿನ್ನದ ಬೆಲೆ ಶೇ.0.3ರಷ್ಟು ಇಳಿಕೆ| ಮಲ್ಟಿ ಕಮೋಡಿಟಿ ಎಕ್ಸಚೇಂಜ್’ನಲ್ಲಿ ಬೆಳ್ಳಿ ಬೆಲೆಯಲ್ಲಿಶೇ.0.45ರಷ್ಟು ಇಳಿಕೆ| ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಏರಿಕೆ| 

ನವದೆಹಲಿ(ಅ.17): ಅಕ್ಟೋಬರ್ ತಿಂಗಳಲ್ಲಿ ನಿರಂತರವಾಗಿ ಇಳಿಕೆಯಾಗುತ್ತಿರುವ ಚಿನ್ನದ ದರ, ದೇಶೀಯ ಮಾರುಕಟ್ಟೆಯಲ್ಲಿ ಮತ್ತಷ್ಟು ಇಳಿಕೆ ಕಾಣುವ ಮೂಲಕ ಆಭರಣ ಪ್ರೀಯರಲ್ಲಿ ಸಂತಸ ಮೂಡಿಸಿದೆ.

ಮಲ್ಟಿ ಕಮೋಡಿಟಿ ಎಕ್ಸಚೇಂಜ್’ನಲ್ಲಿ ಚಿನ್ನದ ಬೆಲೆ ಶೇ.0.3ರಷ್ಟು ಇಳಿಕೆಯಾಗಿದ್ದು, 10 ಗ್ರಾಂ ಚಿನ್ನದ ಬೆಲೆ 38,170 ರೂ. ಆಗಿದೆ.

ನಿನ್ನೆಯಷ್ಟೇ ಶೇ.0.45ರಷ್ಟು ಏರಿಕೆ ಕಂಡಿದ್ದ ಬಂಗಾರದ ಬೆಲೆ, ಇಂದು ಏಕಾಏಕಿ ಇಳಿಕೆಯಾಗಿರುವುದು ಅಚ್ಚರಿಗೆ ಕಾರಣವಾಗಿದೆ.

ಅದರಂತೆ ಬೆಳ್ಳಿ ಬೆಲೆಯಲ್ಲೂ ಗಮನಾರ್ಹ ಇಳಿಕೆ ಕಂಡಿದ್ದು, ಶೇ.0.45ರಷ್ಟು ದರದಲ್ಲಿ ಇಳಿಕೆಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ 45,090 ರೂ. ಆಗಿದೆ.

ಇದಕ್ಕೆ ತದ್ವಿರುದ್ಧವಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ತುಸು ಏರಿಕೆಯಾಗಿದೆ. ಶೇ.0.01 ರಷ್ಟು ಏರಿಕೆಯಾಗಿರುವ ಚಿನ್ನದ ದರ,  ಒಂದು ಔನ್ಸ್’ಗೆ 1,490.37 ಡಾಲರ್ ಆಗಿದೆ.

click me!