ಚಿನ್ನದ ಬೆಲೆಯಲ್ಲಿ ಇಳಿಕೆ: ಕನಸಲ್ಲೂ ಖರೀದಿಯ ಕನವರಿಕೆ!

By Web Desk  |  First Published Sep 28, 2019, 8:10 PM IST

ಮತ್ತೆ ಚಿನ್ನ-ಬೆಳ್ಳಿ ದರದಲ್ಲಿ ಭಾರೀ ಇಳಿಕೆ| 10 ಗ್ರಾಂ ಚಿನ್ನದ ದರದಲ್ಲಿ ಗಮನಾರ್ಹ ಇಳಿಕೆ| ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆ ಪರಿಣಾಮ| ಗಮನಾರ್ಹ ಇಳಿಕೆ ಕಂಡ ಬೆಳ್ಳಿ ಬೆಲೆ| ರೂಪಾಯಿ ಬಲವರ್ಧನೆ ಹಿನ್ನೆಲೆಯಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆ|


ನವದೆಹಲಿ(ಸೆ.28): ನಿರಂತರವಾಗಿ ಏರಿಕೆ ಕಂಡಿದ್ದ ಚಿನ್ನದ ದರದಲ್ಲಿ ಕೊಂಚ ಇಳಿಕೆ ಕಂಡು ಬಂದಿದ್ದು, ಆಭರಣ ಪ್ರಿಯರು ಮತ್ತಷ್ಟು ಇಳಿಕೆಯ ನಿರೀಕ್ಷೆಯಲ್ಲಿದ್ದಾರೆ. 

ರೂಪಾಯಿ ಪ್ರಾಬಲ್ಯ ಹಾಗೂ  ದುರ್ಬಲ ಅಂತರರಾಷ್ಟ್ರೀಯ ವಹಿವಾಟಿನ ಕಾರಣದಿಂದಾಗಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ.

Tap to resize

Latest Videos

undefined

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಇಂದು 121 ರೂ. ಇಳಿಕೆಯಾಗಿದ್ದು,  10 ಗ್ರಾಂ ಚಿನ್ನದ ಬೆಲೆ 38,564 ರೂ. ಆಗಿದೆ. ಅದರಂತೆ ಬೆಳ್ಳಿ ಬೆಲೆ ಬರೋಬ್ಬರಿ 851 ರೂ. ಇಳಿಕೆ ಕಂಡು ಬಂದಿದ್ದು,  ಒಂದು ಕೆಜಿಗೆ  46,384 ರೂ. ಆಗಿದೆ. 

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ  ಪ್ರತಿ ಔನ್ಸ್’ಗೆ 1,497 ಯುಎಸ್ ಡಾಲರ್ ಆಗಿದ್ದು, ಮತ್ತಷ್ಟು ಕುಸಿತದ ನಿರೀಕ್ಷೆ ಇದೆ ಎಂದು ತಜ್ಞರು ತಿಳಿಸಿದ್ದಾರೆ.

click me!