ಭಾರತದ ಆರ್ಥಿಕತೆ ಕುಸಿಯಲು ಮೊಘಲರು, ಬ್ರಿಟಿಷರೇ ಕಾರಣ| ಅದಕ್ಕೂ ಮುನ್ನ ಭಾರತ ಅತ್ಯಂತ ಬಲಿಷ್ಟ ಆರ್ಥಿಕತೆಯುಳ್ಳ ದೇಶವಾಗಿತ್ತು| ವೈರಲ್ ಆಯ್ತು ಉತ್ತರ ಪ್ರದೆಶ ಸಿಎಂ ಯೋಗಿ ಆದಿತ್ಯನಾಥ್ ವಿವರಣೆ
ಮುಂಬೈ[ಸೆ.28]: ಭಾರತದ ಆರ್ಥಿಕತೆ ದಿನೇ ದಿನೇ ಕುಸಿಯುತ್ತಿದ್ದು, ಅನೇಕ ಮಂದಿ ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಹೀಗಿರುವಾಗ ಭಾರತದ ಆರ್ಥಕತೆ ಕುಸಿಯಲು ಮೊಘಲರು ಹಾಗೂ ಬ್ರಿಟಿಷರೇ ಕಾರಣ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ದೂರಿದ್ದಾರೆ. ಭಾರತ ವಿಶ್ವದಲ್ಲೇ ಅತಿ ಶ್ರೀಮಂತ ರಾಷ್ಟ್ರವಾಗಿತ್ತು. ಅತ್ಯಂತ ಬಲಿಷ್ಟ ಆರ್ಥಿಕತೆ ಹೊಂದಿತ್ತು. ಆದರೆ ಮೊಘಲರ ಆಗಮನ ಹಾಗೂ ಬ್ರಿಟಿಷರ ನಿರ್ಗಮನದ ಬಳಿಕ ಭಾರತದ ಆರ್ಥಿಕತೆ ಮೇಲೆ ಕಪ್ಪು ನೆರಳು ಬಿತ್ತು ಎಂದಿದ್ದಾರೆ.
‘ಯೋಗಿ ಸಿಎಂ’ ಹಿಂದಿನ ಸೀಕ್ರೆಟ್ ಬಹಿರಂಗ!
undefined
ಮುಂಬೈನ ವಿಶ್ವ ಹಿಂದೂ ಆರ್ಥಿಕ ವೇದಿಕೆಯಲ್ಲಿ ಭಾರತದ ಆರ್ಥಿಕತೆ ಕುಸಿತದ ಬಗ್ಗೆ ವಿವರಣೆ ನೀಡಿದ ಸಿಎಂ ಯೋಗಿ ಆದಿತ್ಯನಾಥ್, 'ಮೊಘಲರು ಭಾರತದ ಮೇಲೆ ದಾಳಿ ನಡೆಸುವುದಕ್ಕೂ ಮೊದಲು ನಮ್ಮದು ವಿಶ್ವದ ಅತ್ಯಂತ ಬಲಿಷ್ಟ ಆರ್ಥಿಕತೆಯುಳ್ಳ ರಾಷ್ಟ್ರವಾಗಿತ್ತು. ಮೊಘಲರು ಭಾರತಕ್ಕೆ ಬಂದ ವೇಳೆ ವಿಶ್ವದ ಆರ್ಥಿಕತೆಯ ಮೂರನೇ ಒಂದು ಭಾಗದಷ್ಟು ಪಾಲನ್ನು ಅಂದರೆ 36% ಸಂಪತ್ತನ್ನು ಭಾರತ ಹೊಂದಿತ್ತು. ಆದರೆ ಬ್ರಿಟಿಷರು ಬರುವ ವೇಳೆಗೆ ಇದು 20%ಕ್ಕೆ ಇಳಿಯಿತು' ಎಂದಿದ್ದಾರೆ.
ಅಲ್ಲದೇ 'ಭಾರತದಲ್ಲಿ 200 ವರ್ಷ ಆಳ್ವಿಕೆ ನಡೆಸಿದ ಬ್ರಿಟಿಷರು ಭಾರತರ ಆರ್ಥಿಕತೆಯನ್ನು ಬಹಳಷ್ಟು ದುರ್ಬಲಗೊಳಿಸಿದರು. ಅವರು ದೇಶ ಬಿಟ್ಟು ತೆರಳುವಷ್ಟರಲ್ಲಿ ಇದನ್ನು ಕೇವಲ ಶೇ. 4% ಕ್ಕೆ ಇಳಿಸಿದರು' ಎಂದೂ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.
'ಬಡ' ಸಿಎಂ, ಸಚಿವರ ತೆರಿಗೆ ಸರ್ಕಾರವೇ ಕಟ್ಟುತ್ತೆ!
ಒಂದು ತಿಂಗಳ ಹಿಂದಷ್ಟೇ ಸಿಎಂ ಯೋಗಿ ಆದಿತ್ಯನಾಥ್ 'ಮುಂದಿನ ಕೆಲ ವರ್ಷಗಳಲ್ಲಿ ಉತ್ತರ ಪ್ರದೇಶವನ್ನು 1 ಟ್ರಿಲಿಯನ್ ಡಾಲರ್ ಆರ್ಥಿಕತೆಯ ರಾಜ್ಯವನ್ನಾಗಿ ಮಾಡುತ್ತೇನೆ' ಎಂದಿದ್ದರು.